Friday, October 8, 2021

KPSC Group C non-technical Questionnaire -01 | ಗ್ರೂಪ್‌ ಸಿ ತಾಂತ್ರಿಕೇತರ ಪ್ರಶ್ನೋತ್ತರ - 01

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, October 8, 2021
Non-technical posts in Group C Labor Inspector,Hostel Warden,Numeric prospectors, first class revenue seekers, handicappers These are in the General Knowledge section for competitive examination for the post Here are the questions on Rural Development and Panchayat Raj Institutions and Rural Cooperation as well as questions on land reform and social change after independence. 

 Rural Development and Panchayati Raj Institutions are multiple choice questions related to this issue | ಗ್ರಾಮೀಣಾಭಿವೃದ್ಧಿ ಮತ್ತು ಪಂಜಾಯತ್ ರಾಜ್ ಸಂಸ್ಥೆಗಳು ಈ ವಿಷಯಕ್ಕೆ ಸಂಬಂಧಿಸಿದ ಬಹು ಆಯ್ಕೆ ಪ್ರಶ್ನೆಗಳು

1➤ 1. 'ದಿ ಕರ್ನಾಟಕ ಜಿಲ್ಲಾ ಪರಿಷತ್‌, ತಾಲ್ಲೂಕು ಪಂಚಾಯತ್ ಸಮಿತಿಸ್, ಮಂಡಳ ಪಂಚಾಯತ್‌ ಆಯಂಡ್ ನ್ಯಾಯ ಪಂಚಾಯತ್ಸ್ ಆಯಕ್ಟ್ 1983' ಪ್ರಕಾರ ಕೊಡಗು ಜಿಲ್ಲೆಯಲ್ಲಿ ಎಷ್ಟು ಜನರಿಗೆ ಒಬ್ಬ ಜಿಲ್ಲಾ ಪರಿಷತ್ ಸದಸ್ಯ ಇರಲು ಸಾಧ್ಯವಿತ್ತು?

ⓐ ಎ. 45 ಸಾವಿರ
ⓑ ಬಿ. 15 ಸಾವಿರ
ⓒ ಸಿ. 30 ಸಾವಿರ
ⓓ ಡಿ. 25 ಸಾವಿರ

2➤ 2. ರಾಜ್ಯದಲ್ಲಿ ಈ ಸಂಸ್ಥೆಗಳ ಉತ್ತಮ ಆಡಳಿತ ಹಾಗೂ ಕಾರ್ಯನಿರ್ವಹಣೆಗಾಗಿ ಸಲಹೆಗಳನ್ನು ನೀಡುವ ಉದ್ದೇಶದಿಂದ ಪಿ. ಆರ್. ನಾಯಕ್ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಲಾಗಿತ್ತು. ಅದು ನೀಡಿದ ವರದಿಯನ್ನು ರಾಜ್ಯಸರ್ಕಾರ ... ಮಾರ್ಚ್‌ನಲ್ಲಿ ಒಪ್ಪಿಕೊಂಡು ಜಾರಿಗೆ ತಂದಿತು.

ⓐ ಎ. 1996
ⓑ ಬಿ. 2002
ⓒ ಸಿ. 1999
ⓓ ಡಿ. 2017

3➤ 3. 'ದಿ ಕರ್ನಾಟಕ ಜಿಲ್ಲಾ ಪರಿಷತ್ಸ್, ತಾಲ್ಲೂಕು ಪಂಚಾಯತ್ ಸಮಿತಿಸ್, ಮಂಡಳ ಪಂಚಾಯತ್ಸ್ ಆಯಂಡ್ ನ್ಯಾಯ ಪಂಚಾಯತ್ಸ್ ಆಯಕ್ಟ್ 1983' ಪ್ರಕಾರ ಎಷ್ಟು ಜನರನ್ನು ಒಬ್ಬ ಜಿಲ್ಲಾ ಪರಿಷತ್ ಸದಸ್ಯ ಪ್ರತಿನಿಧಿಸುತ್ತಿದ್ದ?

ⓐ ಎ. 35 ಸಾವಿರ
ⓑ ಬಿ. 15 ಸಾವಿರ
ⓒ ಸಿ. 50 ಸಾವಿರ
ⓓ ಡಿ. 25 ಸಾವಿರ

4➤ 4. 'ದಿ ಕರ್ನಾಟಕ ಜಿಲ್ಲಾ ಪರಿಷತ್ಸ್, ತಾಲ್ಲೂಕು ಪಂಚಾಯತ್ ಸಮಿತಿಸ್, ಮಂಡಳ ಪಂಚಾಯತ್ಸ್ ಆಯಂಡ್ ನ್ಯಾಯ ಪಂಚಾಯತ್ಸ್ ಆಯಕ್ಟ್ 1983' ಪ್ರಕಾರ ಮಹಿಳೆಯರಿಗೆ ಎಷ್ಟು ಸ್ಥಾನಗಳನ್ನು ಮೀಸಲಾಗಿ ಇಟ್ಟಿದ್ದರು?

ⓐ ಎ) ಶೇ 35
ⓑ ಬಿ) ಶೇ 33
ⓒ ಸಿ) ಶೇ. 22
ⓓ ಡಿ) ಶೇ 25

5➤ 5. ರಾಜೀವ್ ಗಾಂಧಿಯವರ ಕನಸಿನ ಕೂಸಾದ 73 ಮತ್ತು 74ನೇ ತಿದ್ದುಪಡಿಯು ಭಾರತ ಸಂವಿಧಾನಕ್ಕೆ ಆದ ಬಳಿಕ ಹೊಸ ಶಾಸನವೊಂದನ್ನು ಜಾರಿಗೆ ತರುವ ಮೂಲಕ ಪಂಚಾಯಿತಿ ರಾಜ್ ವ್ಯವಸ್ಥೆಗೆ ನಾಂದಿ ಹಾಡಿದ ಮೊದಲ ರಾಜ್ಯ ಯಾವುದು?

ⓐ ಎ. ಮಧ್ಯ ಪ್ರದೇಶ
ⓑ ಬಿ. ಪಶ್ಚಿಮ ಬಂಗಾಳ
ⓒ ಸಿ. ಕರ್ನಾಟಕ
ⓓ ಡಿ. ತಮಿಳುನಾಡು

6➤ 6) 'ಕರ್ನಾಟಕ ಪಂಚಾಯತ್ ಆಯಕ್ಟ್ 1993' ರ ಪ್ರಕಾರ ಯಾವೆಲ್ಲಾ ಅಂಶಗಳ ಆಧಾರದ ಮೇಲೆ ಜಿಲ್ಲಾ ಪಂಚಾಯತಿ ಸದಸ್ಯನನ್ನು ಅನರ್ಹಗೊಳಿಸಬಹುದು?1) ಜಿಲ್ಲಾ ಪಂಚಾಯತಿ ಪರವಾಗಿ ವಕೀಲನಾಗಿ ನೇಮಕಗೊಂಡರೆ ಅಥವಾ ಜಿಲ್ಲಾ ಪಂಚಾಯತಿ ವಿರುದ್ಧ ಕೇಸುಗಳಿಗಾಗಿ ವಕೀಲನಾಗಿ ನೇಮಕವಾದರೆ 2) ಜಿಲ್ಲಾ ಪಂಚಾಯತಿ ಸದಸ್ಯನ ಮನೆಯಲ್ಲಿ ಕಕ್ಕಸ್ಸು (ಸ್ಯಾನಿಟರಿ ಲ್ಯಾಟರಿನ್) ಇಲ್ಲದಿದ್ದರೆ 3) ರಾಜ್ಯ ಅಥವಾ ಕೇಂದ್ರ ಸರಕಾರದ ಲಾಭದಾಯಕ ಹುದ್ದೆಯಲ್ಲಿ ಕುಳಿತರೆ 4)ಸದಸ್ಯನೊಬ್ಬ ವೈದ್ಯ/ವಕೀಲ/ ಚಾರ್ಟೆಡ್ ಅಕೌಂಟೆಂಟ್ ಆಗಿದ್ದು ತಮ್ಮ ವೃತ್ತಿಯನ್ನು ಸರಿಯಾಗಿ ನಿರ್ವಹಿಸದೇ ಆತನ ವೃತ್ತಿ ಪರವಾನಿಗೆಯನ್ನು ಸಂಬಂಧಿತ ಪ್ರಾಧಿಕಾರವು ಹಿಂದಕ್ಕೆ ಪಡೆದರೆ

ⓐ ಎ) 3 ಮತ್ತು 4 ಬಳಸಿ ಅನರ್ಹಗೊಳಿಸಬಹುದು.
ⓑ ಬಿ) 1, 3 ಮತ್ತು 4 ಬಳಸಿ ಅನರ್ಹಗೊಳಿಸಬಹುದು
ⓒ ಸಿ) 1 ಮತ್ತು 4 ಬಳಸಿ ಅನರ್ಹಗೊಳಿಸಬಹುದು
ⓓ ಡಿ) 1, 2, 3 ಮತ್ತು 4 ಬಳಸಿ ಅನರ್ಹಗೊಳಿಸಬಹುದು

7➤ 7) 'ಕರ್ನಾಟಕ ಪಂಚಾಯತ್ ಆಯಕ್ಟ್ 1993'ರ ಪ್ರಕಾರ ಜಿಲ್ಲಾ ಪಂಚಾಯತಿ ಸದಸ್ಯನಾಗಲು ಇರಬೇಕಾದ ಅರ್ಹತೆಗಳೇನು?

ⓐ ಎ) ತಾನು ಚುನಾವಣೆಗೆ ಸ್ಪರ್ಧಿಸುವ ಜಿಲ್ಲಾ ಪಂಚಾಯತಿಯ ವ್ಯಾಪ್ತಿಯಲ್ಲಿರುವ ಮತದಾರರ ಪಟ್ಟಿಯಲ್ಲಿ ಹೆಸರಿರಬೇಕು.
ⓑ ಬಿ) 21 ವರ್ಷ ತುಂಬಿರಬೇಕು.
ⓒ ಸಿ) ರಾಜ್ಯ ಅಥವಾ ಕೇಂದ್ರ ಸರಕಾರದ ಲಾಭದಾಯಕ ಹುದ್ದೆಯಲ್ಲಿರಬಾರದು.
ⓓ ಡಿ) ಮೇಲಿನ ಎಲ್ಲವೂ

8➤ 8) ಈ ಕೆಳಗಿನ ಅಂಶಗಳನ್ನು ಗಮನವಿಟ್ಟು ಓದಿ 1) ಜಿಲ್ಲಾ ಪಂಚಾಯತಿ ಪ್ರಥಮ ಸಭೆ ಆರಂಭವಾದ ದಿನದಿಂದ 5 ವರ್ಷಗಳವರೆಗೆ ಸದಸ್ಯರು ತಮ್ಮ ಅಧಿಕಾರವನ್ನು ಹೊಂದಿರುತ್ತಾರೆ. 2) ಒಬ್ಬನೇ ಸದಸ್ಯ 2 ಕ್ಷೇತ್ರಗಳಲ್ಲಿ ಆಯ್ಕೆಯಾದರೆ ನಿಗದಿತ ಸಮಯದಲ್ಲಿ ತನಗಿಷ್ಟವಾದ ಒಂದು ಕ್ಷೇತ್ರವನ್ನು ಉಳಿಸಿಕೊಂಡು ಮತ್ತೊಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕು. ಹಾಗೆ ಮಾಡದಿದ್ದರೆ ಜಿಲ್ಲಾಧಿಕಾರಿ ಅಥವಾ ಸಂಬಂಧಿತ ಅಧಿಕಾರಿ ಲಾಟರಿ ಎತ್ತುವ ಮೂಲಕ ಒಂದು ಕ್ಷೇತ್ರಕ್ಕೆ ಮರು ಚುನಾವಣೆಯಾಗುವಂತೆ ನೋಡಿಕೊಳ್ಳುವರು. 3) ಸತತವಾಗಿ 4 ಜಿಲ್ಲಾ ಪಂಚಾಯತಿ ಸದಸ್ಯರ ಸಭೆಗಳಿಗೆ (ಮೀಟಿಂಗ್‌) ಸದಸ್ಯನೊಬ್ಬ ರಜೆಯನ್ನು ಹಾಕದೇ ಅನುಪಸ್ಥಿತ (ಗೈರು ಹಾಜರಾದರೆ)ನಾದರೆ ಅಂತಹ ಸದಸ್ಯನ ಸದಸ್ಯತ್ವ ರದ್ದಾಗುವುದು. 4) ತಾನು ಷೇರು ಮಾರುಕಟ್ಟೆಯಲ್ಲಿ ಹಾಕಿದ ಬಂಡವಾಳ ನಾಶವಾದರೆ ಜಿಲ್ಲಾ ಪಂಚಾಯತಿ ಸದಸ್ಯನೊಬ್ಬ ರಾಜಿನಾಮೆ ನೀಡಬೇಕಾಗುತ್ತದೆ

ⓐ ಎ) 3 ಮತ್ತು 4 ತಪ್ಪಾಗಿದೆ, ಉಳಿದವು ಸರಿ.
ⓑ ಬಿ) 1, 2 ಮತ್ತು 3 ಮಾತ್ರ ಸರಿಯಾಗಿವೆ
ⓒ ಸಿ) 1 ಮತ್ತು 4 ತಪ್ಪು. 2 ಮತ್ತು 3 ಸರಿ.
ⓓ ಡಿ) 1, 2, 3 ಮತ್ತು 4 ಎಲ್ಲವೂ ಸರಿಯಾಗಿವೆ

9➤ 9) ಜಿಲ್ಲಾ ಪಂಚಾಯತಿಯು ಈ ಕೆಳಗಿನ ಯಾರನ್ನೆಲ್ಲಾ ಒಳಗೊಂಡಿದೆ ('ಕರ್ನಾಟಕ ಪಂಚಾಯತ್ ಆಯಕ್ಟ್ 1993'ರ ಪ್ರಕಾರ) ?

ⓐ ಎ) ಎಲ್ಲಾ ಜಿಲ್ಲಾ ಪಂಚಾಯತಿ ಸದಸ್ಯರು
ⓑ ಬಿ) ಆಯಾ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕು ಪಂಚಾಯತಿ ಅಧ್ಯಕ್ಷರು
ⓒ ಸಿ) ಆಯಾ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಶಾಸನ ಸಭೆಯ ಸದಸ್ಯರು(ಶಾಸಕರು)
ⓓ ಡಿ) ಮೇಲಿನ ಎಲ್ಲರೂ

10➤ 1. ಕರ್ನಾಟಕದ ಎಕಾನಾಮಿಕ್ ಸರ್ವೆಯಲ್ಲಿ ದಾಖಲಾದ ಅಂಶಗಳನ್ನು ಆಧರಿಸಿದ ಕೆಳಗಿನ ಹೇಳಿಕೆಗಳನ್ನು ಗಮನಿಸಿ

ⓐ ಎ. ಕೋವಿಡ್-19ರ ಕಾರಣಕ್ಕಾಗಿ ನಮ್ಮ ರಾಜ್ಯದಲ್ಲಿ ಪ್ರಗತಿ ಕುಂಠಿತವಾಗಿತ್ತು. ಆದರೂ 2020-21ರಲ್ಲಿ ಕೃಷಿ ಕ್ಷೇತ್ರವು ಶೇ 6.4ರಷ್ಟು ಬೆಳವಣಿಗೆ ದಾಖಲಿಸಿತ್ತು. ಆದರೆ ಕೈಗಾರಿಕಾ ಕ್ಷೇತ್ರವು ಶೇ (-) 5.1 ಮತ್ತು ಸೇವಾ ಕ್ಷೇತ್ರವು ಶೇ (-) 3.1 ದಾಖಲಿಸಿತು. ಅಂದರೆ ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳು ಋಣಾತ್ಮಕ ಅಭಿವೃದ್ಧಿ ದರವನ್ನು ದಾಖಲಿಸಿದ್ದವು
ⓑ ಬಿ. ಕರ್ನಾಟಕದಲ್ಲಿ 2020-21ರಲ್ಲಿ ತಲಾ ವರ ಮಾನ (ಪರ್‌ ಕ್ಯಾಪಿಟಾ ಇನ್‌ಕಮ್) ₹ 2 ಲಕ್ಷ 26 ಸಾವಿರ ಇದೆ, 2019-20ರಕ್ಕೆ ಹೋಲಿಸಿದರೆ (₹ 2 ಲಕ್ಷ 23 ಸಾವಿರ ಇತ್ತು) ತುಸು ಹೆಚ್ಚಾಗಿದೆ.
ⓒ A & B
ⓓ A

11➤ 1. ಜನವರಿ 1957ರಲ್ಲಿ ಪ್ರಜಾಸತ್ತೆಯ ವಿಕೇಂದ್ರೀಕರಣಕ್ಕೆ ಪೂರಕವಾಗುವಂತೆ ಭಾರತ ಸರ್ಕಾರವು ಒಂದು ಸಮಿತಿಯನ್ನು ಸ್ಥಾಪಿಸಿ ನಂತರದಲ್ಲಿ ವರದಿಯೊಂದನ್ನು ಪಡೆಯಿತು. ಆ ವರದಿಯ ಹೆಸರೇನು?

ⓐ ಎ. ಅಶೋಕ್‌ ಮೆಹ್ತಾ ವರದಿ
ⓑ ಬಿ. ಬಲವಂತರಾಯ್ ಮೆಹ್ತಾ ವರದಿ
ⓒ ಸಿ. ಕೊಂಡಜ್ಜಿ ಬಸಪ್ಪ ವರದಿ
ⓓ ಡಿ. ಯಾವುದೂ ಅಲ್ಲ

12➤ 2. 1959ರಲ್ಲಿ ......... ಎಂಬಲ್ಲಿ ಜರುಗಿದ ಸ್ಥಳೀಯ ಸ್ವಯಮಾಡಳಿತ ಕೇಂದ್ರೀಯ ಸಮಿತಿಯ ಸಮಾವೇಶವು ಬಲವಂತರಾಯ್ ಮೆಹ್ತಾ ವರದಿಯ ಅನ್ವಯ ಪಂಚಾಯತ್‌ ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸುವ ಕರ್ತವ್ಯವು ರಾಜ್ಯ ಸರ್ಕಾರಗಳದ್ದೆಂದು ಘೋಷಿಸಿತು.

ⓐ ಬೆಂಗಳೂರು
ⓑ ನವದೆಹಲಿ
ⓒ ಚೆನೈ
ⓓ ಹೈದರಾಬಾದ್

13➤ 3. ಮೂರು ಹಂತಗಳ (ತ್ರಿ ಟೈಯರ್ ಸಿಸ್ಟಮ್) ಪಂಚಾಯತ್‌ ರಾಜ್ ವ್ಯವಸ್ಥೆಯನ್ನು ಪ್ರತಿಪಾದಿಸಿದ ಮೊದಲ ವರದಿ ಯಾವುದು?

ⓐ ಎ. ಅಶೋಕ್‌ ಮೆಹ್ತಾ ವರದಿ
ⓑ ಬಿ. ಬಲವಂತರಾಯ್ ಮೆಹ್ತಾ ವರದಿ
ⓒ ಸಿ. ಕೊಂಡಜ್ಜಿ ಬಸಪ್ಪ ವರದಿ
ⓓ ಡಿ. ಯಾವುದೂ ಅಲ್ಲ

14➤ 4. ಈ ಕೆಳಗಿನ ಯಾವ ಕಾಯ್ದೆ ಗ್ರಾಮ ಪಂಚಾಯತಿಗಳ ಪುನರುಜ್ಜೀವನಕ್ಕೆ ಅವಕಾಶವನ್ನು ಕಲ್ಪಿಸಿತು?

ⓐ ಎ. 1919ರ ಮಾಂಟೆಗೋ ಚೆಮ್ಸ್ ಫರ್ಡ್ ಸುಧಾರಣೆ
ⓑ ಬಿ. 1858ರ ಬ್ರಿಟಿಷ್ ಇಂಡಿಯಾ ಕಾಯ್ದೆ
ⓒ ಸಿ. 1901ರ ವಿಶೇಷ ಶಾಸನ
ⓓ ಡಿ. 1909ರ ವಿಶೇಷ ಶಾಸನ

15➤ 5. ಈ ಕೆಳಗಿನ ಯಾವ ಸಮಿತಿಯ ವರದಿಯು 2 ಟೈಯರ್ ಸಿಸ್ಟಮ್ ಅಥವಾ 2 ಹಂತದ ಪಂಚಾಯತ್‌ ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸಲು ಶಿಫಾರಸು ಮಾಡಿತ್ತು?

ⓐ ಎ. ಅಶೋಕ್‌ ಮೆಹ್ತಾ ವರದಿ
ⓑ ಬಿ. ಬಲವಂತರಾಯ್ ಮೆಹ್ತಾ ವರದಿ
ⓒ ಸಿ. ಕೊಂಡಜ್ಜಿ ಬಸಪ್ಪ ವರದಿ
ⓓ ಡಿ. ಯಾವುದೂ ಅಲ್ಲ.

16➤ 6. ಕರ್ನಾಟಕದ ಸ್ಥಳೀಯ ಆಡಳಿತಕ್ಕೆ ಸಂಬಂಧಿಸಿದಂತೆ ವರದಿ ನೀಡಿದ ಸಮಿತಿಯನ್ನು ಹೆಸರಿಸಿ

ⓐ ಎ. ಹಾರನಹಳ್ಳಿ ರಾಮಸ್ವಾಮಿ ವರದಿ
ⓑ ಬಿ. ಬಲವಂತರಾಯ್ ಮೆಹ್ತಾ ವರದಿ
ⓒ ಸಿ. ಕೊಂಡಜ್ಜಿ ಬಸಪ್ಪ ವರದಿ
ⓓ ಡಿ. ಡಾ. ನಂಜುಂಡಪ್ಪ ವರದಿ

17➤ 7. ಈ ಕೆಳಗಿನ ಯಾವ ರಾಜಮನೆತನವು ಸ್ಥಳೀಯ ಆಡಳಿತಕ್ಕೆ ಹೆಸರುವಾಸಿ?

ⓐ ಎ. ಕದಂಬ
ⓑ ಬಿ. ಗಂಗ
ⓒ ಸಿ. ರಾಷ್ಟ್ರಕೂಟ
ⓓ ಡಿ. ಚೋಳ

18➤ 8. ಮೈಸೂರು ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಪ್ರಾಯೋಗಿಕವಾಗಿ ಮೈಸೂರು ಮತ್ತು ...... ನಗರದಲ್ಲಿ 1862ರಲ್ಲಿ ಪುರಸಭೆಗಳನ್ನು ರಚಿಸಲಾಯಿತು.

ⓐ ಎ. ಚಾಮರಾಜನಗರ
ⓑ ಬಿ. ಶ್ರೀರಂಗಪಟ್ಟಣ
ⓒ ಸಿ. ಶಿವಮೊಗ್ಗ
ⓓ ಡಿ. ಬೆಂಗಳೂರು

19➤ 1. ಸ್ವಾತಂತ್ರ್ಯಾ ನಂತರ ಭೂ ಸುಧಾರಣೆಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರವು ಈ ಕೆಳಗಿನ ಯಾವೆಲ್ಲಾ ಉದ್ದೇಶಗಳನ್ನು ಹೊಂದಿತ್ತು? 1. ಜಮೀನ್ದಾರಿ ಪದ್ಧತಿಯನ್ನು ರದ್ದುಗೊಳಿಸುವುದು 2. ಗೇಣಿ ಪದ್ಧತಿಯ ನಿರ್ಮೂಲನೆ 3. ಕೃಷಿ ಕುಟುಂಬಗಳು ಹೊಂದಿರಬಹುದಾದ ಭೂಮಿಯ ಗರಿಷ್ಠಮಿತಿ 4. ಇನಾಮ್‌ದಾರಿ ಪದ್ಧತಿಯನ್ನು ತೆಗೆದುಹಾಕುವುದು.

ⓐ ಎ. 1, 2 ಮತ್ತು 3 ಮಾತ್ರ ಸರಿ
ⓑ ಬಿ. 1, 2, 3 ಮತ್ತು 4 ಮಾತ್ರ ಸರಿ
ⓒ ಸಿ. 1, 2 ಮತ್ತು 4 ಮಾತ್ರ ಸರಿ
ⓓ ಡಿ. ಮೇಲಿನ ಯಾವುದೂ ಸರಿಯಾಗಿಲ್ಲ

20➤ 2. ಭೂ ಸುಧಾರಣೆಗೆ ಸಂಬಂಧಿಸಿದಂತೆ ಬಿ.ಡಿ. ಜತ್ತಿ ಸಮಿತಿಯು ಯಾವ ವರ್ಷ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

ⓐ ಎ. 1954
ⓑ ಬಿ. 1959
ⓒ ಸಿ. 1960
ⓓ ಡಿ. 1957

21➤ 3. ಕರ್ನಾಟಕ ಭೂ ಸುಧಾರಣಾ ಕಾನೂನು ಯಾವ ವರ್ಷ ಮೊಟ್ಟಮೊದಲು ಜಾರಿಗೆ ಬಂತು?

ⓐ ಎ. 1961
ⓑ ಬಿ. 1958
ⓒ ಸಿ. 1966
ⓓ ಡಿ. 1969

22➤ 4. ಕೆಳಗಿನ ಹೇಳಿಕೆಗಳನ್ನು ಗಮನಿಸಿ 1. ನಮ್ಮ ರಾಜ್ಯದಲ್ಲಿ ಎಲ್ಲಾ ಕಡೆಗಳಲ್ಲಿ ರೈತುವಾರಿ ಹಿಡುವಳಿ ವ್ಯವಸ್ಥೆಯನ್ನು ನೋಡಬಹುದು. ಅಂದರೆ ಪ್ರತಿ ಭೂ ಮಾಲೀಕನು ಸರ್ಕಾರದೊಂದಿಗೆ ನೇರವಾಗಿ ವ್ಯವಹರಿಸುವ ಪ್ರಕ್ರಿಯೆ. 2. ಭೂ ಆಡಳಿತಕ್ಕೆ ಸಂಬಂಧಿಸಿದಂತೆ ಜಿಲ್ಲೆಯೇ ಪ್ರಮುಖ ಘಟ್ಟವಾಗಿದ್ದು, ಭೂ ಕಂದಾಯ ಮತ್ತು ಹಿಡುವಳಿಯ ಆಡಳಿತಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮುಖ್ಯ ಆಡಳಿತಾಧಿಕಾರಿಯಾಗಿರುತ್ತಾರೆ. 3. ತಾಲ್ಲೂಕು ಕಚೇರಿಗಳಲ್ಲಿ ಗ್ರಾಮಗಳ ಕುರಿತು ಕಾರ್ಯನಿರ್ವಹಿಸುವ ಅಧಿಕಾರಿಯನ್ನು ಕಂದಾಯ ನಿರೀಕ್ಷಕ (ರೆವೆನ್ಯೂ ಇನ್‌ಸ್ಪೆಕ್ಟರ್) ಎಂದು ಕರೆಯುತ್ತಾರೆ. ಇವರ ಆಡಳಿತ ವ್ಯಾಪ್ತಿಯ ಪ್ರದೇಶವನ್ನು ಹೋಬಳಿ ಎಂದು ಕರೆಯುತ್ತಾರೆ. 4. ಭೂ ಆಡಳಿತಕ್ಕೆ ಸಂಬಂಧಿಸಿದಂತೆ ತಾಲ್ಲೂಕುಗಳ ಸಮೂಹವನ್ನು ಉಪವಿಭಾಗಾಧಿಕಾರಿ (ಅಸಿಸ್ಟೆಂಟ್ ಕಮಿಷನರ್) ವ್ಯಾಪ್ತಿಗೆ ಸೇರಿಸಲಾಗಿದೆ.

ⓐ ಎ. 1, 2 ಮತ್ತು 4 ಮಾತ್ರ ಸರಿ
ⓑ ಬಿ. 1, 2, ಮತ್ತು 3 ಮಾತ್ರ ಸರಿ
ⓒ ಸಿ. 2, 3 ಮತ್ತು 4 ಮಾತ್ರ ಸರಿ
ⓓ ಡಿ. 1 ರಿಂದ 4ರ ತನಕ ಎಲ್ಲವೂ ಸರಿ

23➤ 5. 750 ಗ್ರಾಮ ಪಂಚಾಯತಿಗಳಲ್ಲಿ 'ಅಮೃತ ಗ್ರಾಮ ಪಂಚಾಯತಿ ಯೋಜನೆ' ಜಾರಿಗೆ ತರುವ ಮೂಲಕ ಅವುಗಳ ಸಮಗ್ರ ಅಭಿವೃದ್ಧಿಗೆ ಗುರಿ ಹಾಕಿಕೊಳ್ಳಲಾಗಿದೆ. ಆ ಹಿನ್ನೆಲೆಯಲ್ಲಿ ಕೆಳಗಿನ ಹೇಳಿಕೆಗಳನ್ನು ಗಮನಿಸಿ 1. ಪ್ರತಿ ಗ್ರಾಮ ಪಂಚಾಯ್ತಿಗೆ ₹3 ಕೋಟಿ ಅನುದಾನ ಬಿಡುಗಡೆ, ಬರುವ ಮಾರ್ಚ್ ಹೊತ್ತಿಗೆ ಇದನ್ನು ಸದುಪಯೋಗಪಡಿಸಿಕೊಂಡರೆ ಹೆಚ್ಚುವರಿ ₹25 ಲಕ್ಷ ನೀಡಿಕೆಗೆ ಅವಕಾಶ. 2. ಶಾಲೆ/ ಅಂಗನವಾಡಿಯ ಮುರಿದ ಗೋಡೆ ದುರಸ್ತಿ, ಆಟದ ಮೈದಾನ ನಿರ್ಮಾಣ, ಕುಡಿಯುವ ನೀರು, ಶೌಚಾಲಯ ನಿರ್ಮಾಣಕ್ಕೆ ಅನುದಾನವನ್ನು ಬಳಸಿಕೊಳ್ಳಬಹುದು. 3. ಕೆರೆ, ಕಲ್ಯಾಣಿಗಳ ನಿರ್ಮಾಣಕ್ಕೆ ಅವಕಾಶ, ಉದ್ಯಾನವನಗಳ ನಿರ್ಮಾಣಕ್ಕೆ ಅವಕಾಶ, ತ್ಯಾಜ್ಯ ನೀರಿನ ನಿರ್ವಹಣೆಗೆ ಅವಕಾಶ, ಗ್ರಂಥಾಲಯಗಳ ಡಿಜಿಟಲೀಕರಣಕ್ಕೆ ಅವಕಾಶ, 4. 'ನನ್ನ ಗ್ರಾಮ ನನ್ನ ಪರಂಪರೆ' ಘೋಷಣೆಯಡಿ, ಸ್ವಾತಂತ್ರ್ಯದ ಹೋರಾಟಕ್ಕೆ ಕೈ ಜೋಡಿಸಿದ್ದ ಹಿರಿಯರ ಸ್ಮರಣೆಯಲ್ಲದೇ, ಗ್ರಾಮದ ವಿದ್ವಾಂಸರು, ಗ್ರಾಮದಲ್ಲಿ ಆಗಿ ಹೋದ ಹಿರಿಯರ ಸಂಸ್ಮರಣೆ ಮಾಡುವುದು ಮೇಲಿನ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ⓐ ಎ. 2, 3 ಮತ್ತು 4 ಮಾತ್ರ ಸರಿ
ⓑ ಬಿ. 1 ರಿಂದ 4ರ ತನಕ ಎಲ್ಲವೂ ಸರಿ
ⓒ ಸಿ. 1, 3 ಮತ್ತು 4 ಮಾತ್ರ ಸರಿ
ⓓ ಡಿ. 2, ಮತ್ತು 4 ಮಾತ್ರ ಸರಿ


State : Karnataka

Publish Date : 2021

File Format : PDF

File Size : link

Number of Pages : link

Scanned Copy : Yes

Editable Text : No

Password Protected : No

Image Available : Yes

Download Link Available : Yes

File size Reduced : No

Password : No

Cost : Free of cost

For Personal Use Only


Click Here To Download


https://jobsnewskpsc.blogspot.com/ is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (  https://jobsnewskpsc.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading KPSC Group C non-technical Questionnaire -01 | ಗ್ರೂಪ್‌ ಸಿ ತಾಂತ್ರಿಕೇತರ ಪ್ರಶ್ನೋತ್ತರ - 01

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.