PC Notes

KPSC EXAM

Tuesday, December 21, 2021

ಸಾಮಾನ್ಯ ಜ್ಞಾನದ ಮಾಹಿತಿ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Tuesday, December 21, 2021

Title : ಸಾಮಾನ್ಯ ಜ್ಞಾನದ ಮಾಹಿತಿ

(Educational & Informational Purpose Only)



ಇಂಧನಗಳು

ಇಂಧನಗಳು ಉರಿದು ಶಕ್ತಿಯ ಜೊತೆಗೆ ಉಷ್ಣವನ್ನು ಬಿಡುಗಡೆ ಮಾಡುವ ವಸ್ತುಗಳಾಗಿವೆ. ಅನೇಕ ಕೆಲಸಗಳಿಗಾಗಿ ಇವುಗಳನ್ನು ಬಳಸುತ್ತೇವೆ.



ಲಕ್ಷಾಂತರ ವರ್ಷಗಳ ಹಿಂದೆ ಭೂಪದರದೊಳ ಹೂತು ಹೋದ (ಹುದುಗಿದ) ಸತ್ತ ಸಸ್ಯ ಮತ್ತು ಪ್ರಾಣಿಗಳ ದೇಹಗಳು ಆಕ್ಸಿಜನ್ ಇಲ್ಲದೆ ಕೊಳೆತು ಉಂಟಾಗಿರುವುದೇ ಪಳೆಯುಳಿಕೆ ಇಂಧನ. ಇದರಲ್ಲಿ ಪ್ರಮುಖವಾದವು ಎಂದರೆ ಪೆಟ್ರೋಲಿಯಮ್, ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲು.

ಪೆಟ್ರೋಲಿಯಮ್ : 

ನಾವು ಬಳಸುವ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಮತ್ತು ಮೇಣ ಇತ್ಯಾದಿಗಳು ಪೆಟ್ರೋಲಿಯಮ್‌ನ ಉಪ ಉತ್ಪನ್ನಗಳಾಗಿವೆ. ಪೆಟ್ರೋಲಿಯಮ್ ಎಂಬುದು ಭೂಮಿಯೊಳಗೆ ರೂಪುಗೊಂಡಿರುವ ಒಂದು ದ್ರವರೂಪದ ಖನಿಜ. ಶಿಲಾಪದರಗಳ ಅಡಿಯಲ್ಲಿ ಶೇಖರವಾದ ಸತ್ತ ಜೀವಿಗಳ ದೇಹದ ಮೇಲೆ ಬ್ಯಾಕ್ಟಿರಿಯಾಗಳ ಕ್ರಿಯೆ, ಅಧಿಕ ಉಷ್ಣತೆ ಮತ್ತು ಒತ್ತಡಗಳಿಂದ ಪೆಟ್ರೋಲಿಯಮ್ ರೂಪುಗೊಂಡಿದೆ.

ಮೇಣ, ಪ್ಯಾರಾಪಿನ್‌ಗಳಂತಹ ಪೆಟ್ರೋಲಿಯಮ್ ಉಪ ಉತ್ಪನ್ನಗಳನ್ನು ಮೇಣದ ಬತ್ತಿ, ಮರದ ಲಿಷ್, ಮುಲಾಮು, ಬಣ್ಣ, ಲಿಪ್‌ಸ್ಟಿಕ್, ರಾಸಾಯನಿಕ ಗೊಬ್ಬರ, ವಾಸಲಿನ್ ಜೆಲ್ಲಿ ಇತ್ಯಾದಿಗಳ ತಯಾರಿಕೆಯಲ್ಲಿಯೂ ಬಳಸುತ್ತಾರೆ.

ನೈಸರ್ಗಿಕ ಅನಿಲ : 

ನೈಸರ್ಗಿಕ ಅನಿಲವು ಪೆಟ್ರೋಲಿಯಮ್ ಬಾವಿಗಳಲ್ಲಿ ಪೆಟ್ರೋಲಿಯಮ್‌ನೊಂದಿಗೆ ದೊರೆಯುತ್ತದೆ. ಒತ್ತಡಕ್ಕೆ ಒಳಪಡಿಸಿದ ನೈಸರ್ಗಿಕ ಅನಿಲ (ಸಂಪೀಡಿತ ನೈಸರ್ಗಿಕ ಅನಿಲ)ವನ್ನು ಪೆಟ್ರೋಲ್ ಮತ್ತು ಡೀಸೆಲ್‌ಗಳ ಬದಲೀ ಇಂಧನವಾಗಿ ವಾಹನಗಳಿಗೆ ಬಳಸಲಾಗುತ್ತದೆ.


File Language : Kannada/English




ಓದಿ-ತಿ೪ : ಮನೆಯಲ್ಲಿ ಅಡುಗೆ ಅನಿಲ ಬಳಸುವುದನ್ನು

ನೀನು ನೋಡಿರಬಹುದು. ಇದನ್ನು ದ್ರವೀಕಲಿಸಿದ ನೈಸರ್ಗಿಕ ಅನಿಲ (Liquified Petroleum Gas - LPG ) ಎಂದು ಕರೆಯುತ್ತಾರೆ. ಪೆಟ್ರೋಲಿಯಮ್ ಅಥವಾ ತೇವದ ನೈಸರ್ಗಿಕ ಅನಿಲವನ್ನು ಸಂಸ್ಕಲಿಸಿ ಇದನ್ನು ಪಡೆಯಲಾಗುತ್ತದೆ.


Publish Date : 2021


Daily Quiz Telegram Group - @kpsc2019


ಭಾರತವು ಪ್ರಪಂಚದಲ್ಲಿಯೇ ಅತಿ ದೊಡ್ಡ ಖಂಡವಾಗಿರುವ ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿದೆ. ಅಕ್ಷಾಂಶ ಮತ್ತು ರೇಖಾಂಶಗಳ ವಿಸ್ತರಣೆಯ ಪ್ರಕಾರ ಭಾರತವು 8° ಉತ್ತರದಿಂದ 37° ಉತ್ತರ ಅಕ್ಷಾಂಶ ಹಾಗೂ 68° ಪೂರ್ವದಿಂದ 97° ಪೂರ್ವ ರೇಖಾಂಶಗಳವರೆಗೆ ವಿಸ್ತರಿಸಿದೆ. (ಪುಟ ಸಂಖ್ಯೆ 231 ರಲ್ಲಿರುವ ಭೂಪಟವನ್ನು ಗಮನಿಸು) ಇದರಿಂದ ಭಾರತವು ಪೂರ್ಣವಾಗಿ ಉತ್ತರ ಗೋಳಾರ್ಧ ಹಾಗೂ ಪೂರ್ವ ಗೋಳಾರ್ಧದ ಮಧ್ಯಭಾಗದಲ್ಲಿ ನೆಲೆಸಿದೆ. ಕರ್ಕಾಟಕ ಸಂಕ್ರಾಂತಿ ವೃತ್ತವು (23 ಉತ್ತರದ ವಿಶೇಷ ಅಕ್ಷಾಂಶ) ಭಾರತದ ಮಧ್ಯಭಾಗದಲ್ಲಿ ಹಾಯ್ದು ಹೋಗಿದೆ. ಇದು ಭಾರತವನ್ನು ಉತ್ತರ ಮತ್ತು ದಕ್ಷಿಣ ಭಾಗಗಳಾಗಿ ವಿಂಗಡಿಸುತ್ತದೆ. ಇದರಿಂದ ಉತ್ತರಕ್ಕೆ ಉಪಉಷ್ಣವಲಯದ ವಾಯುಗುಣವಿದ್ದರೆ, ದಕ್ಷಿಣದಲ್ಲಿ ಉಷ್ಣವಲಯದ ವಾಯುಗುಣವಿದೆ.


File Size : link


ಭೂಗೋಳದ ಮೇಲೆ ಪೂರ್ವ-ಪಶ್ಚಿಮವಾಗಿ ಎಳೆಯಬಹುದಾದ ಕಾಲ್ಪನಿಕ ರೇಖೆಗಳನ್ನು ಅಕ್ಷಾಂಶಗಳೆಂದು ಕರೆಯಲಾಗಿದೆ. ಇವುಗಳನ್ನು ಡಿಗ್ರಿಗಳಲ್ಲಿ ಎಣಿಕೆ ಮಾಡಲಾಗುವುದು. ಭೂಮಧ್ಯ ರೇಖೆಯಿಂದ ಉತ್ತರಕ್ಕೆ 90° ಮತ್ತು ದಕ್ಷಿಣಕ್ಕೆ 90° ಅಕ್ಷಾಂಶಗಳವೆ. ಭೂಮಿಯನ್ನು ಎರಡು ಸಮಭಾಗಗಳಾಗಿ ವಿಂಗಡಿಸುವ ಕಾಲ್ಪನಿಕ ರೇಖೆಗೆ ಭೂಮಧ್ಯರೇಖೆ ಅಥವಾ ಸಮಭಾಜಕರೇಖೆ (0) ಎನ್ನುವರು. ಇದರಿಂದ ಉತ್ತರಕ್ಕಿರುವ ಭೂಭಾಗವನ್ನು

ಉತ್ತರ ಗೋಳಾರ್ಧ ಮತ್ತು ದಕ್ಷಿಣದ ಭಾಗವನ್ನು ದಕ್ಷಿಣಗೋಳಾರ್ಧ ಎನ್ನುವರು. ಭೂಮಧ್ಯ ರೇಖೆ (೦), ಕರ್ಕಾಟಕ ಸಂಕ್ರಾಂತಿ ವೃತ್ತ (231 ಉ.). ಮಕರ ಸಂಕ್ರಾತಿ ವೃತ್ತ (23) ದ.), ಆರ್ಕ್ಟಿಕ್ ವೃತ್ತ (66) ಉ.) ಮತ್ತು ಅಂಟಾರ್ಕ್ಟಿಕ್ ವೃತ್ತ (66) ದ. ಗಳನ್ನು ವಿಶೇಷ ಅಕ್ಷಾಂಶಗಳೆಂದು ಪರಿಗಣಿಸಲಾಗಿದೆ.

ಭೂಗೋಳದ ಮೇಲೆ ಉತ್ತರ-ದಕ್ಷಿಣವಾಗಿ ಎಳೆಯಬಹುದಾದ ಕಾಲ್ಪನಿಕ ರೇಖೆಗಳನ್ನು ರೇಖಾಂಶಗಳೆಂದು ಕರೆಯಲಾಗಿದೆ. ಇಂಗ್ಲೆಂಡ್‌ನ ಗ್ರೀನ್ವಿಟ್ ಮೂಲಕ ಹಾಯ್ದು ಹೋಗಿರುವ ರೇಖಾಂಶವನ್ನು (O) ಪ್ರಧಾನ ರೇಖಾಂಶವೆಂದು ಕರೆಯಲಾಗಿದೆ. ಇದರಿಂದ ಪೂರ್ವಕ್ಕಿರುವ ಭೂಭಾಗವನ್ನು ಪೂರ್ವಗೋಳಾರ್ಧ ಮತ್ತು ಪಶ್ಚಿಮದ ಭಾಗವನ್ನು ಪಶ್ಚಿಮ ಗೋಳಾರ್ಧ ಎನ್ನುವರು.

ಪ್ರಧಾನ ರೇಖಾಂಶದಿಂದ ಪೂರ್ವಕ್ಕೆ 180° ಮತ್ತು ಪಶ್ಚಿಮಕ್ಕೆ 180° ರೇಖಾಂಶಗಳವೆ.

ರೇಖಾಂಶ ಮತ್ತು ಕಾಲಮಾನಗಳಿಗೆ ಸಂಬಂಧವಿದೆ. ಅಕ್ಷಾಂಶ ಮತ್ತು ರೇಖಾಂಶಗಳು ಒಂದು ಪ್ರದೇಶದ ಸ್ಥಾನ, ದೂರ ಮತ್ತು ದಿಕ್ಕುಗಳ ಬಗ್ಗೆ ತಿಳಿಯಲು ಅಗತ್ಯವಾಗಿವೆ.

ಭಾರತವು ವಿಸ್ತೀರ್ಣದಲ್ಲಿ ಪ್ರಪಂಚದ ಏಳನೆಯ ಸ್ಥಾನದಲ್ಲಿದೆ ಹಾಗೂ ಚೀನಾದ ನಂತರ ಎರಡನೆಯ ಜನಭರಿತ ರಾಷ್ಟ್ರ

- 32,87.263 0 6.ve.

ಭಾರತದ ವಿಸ್ತೀರ್ಣ ಭಾರತದ ಜನಸಂಖ್ಯೆ 121 ಕೋಟ (2011ರ ಜನಗಣತಿ ಪ್ರಕಾರ). -

ಭಾರತದ ದಕ್ಷಿಣ ತುದಿ ಇಂದಿರಾಪಾಯಂಟ್, -

ಭಾರತದ ಉತ್ತರದ ತುದಿ ಇಂದಿರಾಕೋಲ್.

ಭಾರತದ ಪಶ್ಚಿಮದ ತುದಿ - ಗೂವರಮೋಟ

ಭಾರತದ ಪೂರ್ವ ತುದಿ - ಕಿಬುತು.


Scanned Copy : Yes


1) ಭಾರತ ಮತ್ತು ನೆರೆಯ ರಾಷ್ಟ್ರಗಳು

ಭಾರತದ ನೆರೆಯ ರಾಷ್ಟ್ರಗಳೆಂದರೆ - ವಾಯವ್ಯಕ್ಕೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ, ಉತ್ತರಕ್ಕೆ ನೇಪಾಳ, ಭೂತಾನೆ ಮತ್ತು ಚೀನ ಹಾಗೂ ಪೂರ್ವಕ್ಕೆ ಬಾಂಗ್ಲಾದೇಶ ಮತ್ತು ಮಯನ್ಮಾರ್ ದೇಶಗಳು, ಆನ್ನೇಯ ದಿಕ್ಕಿನಲ್ಲಿ ಶ್ರೀಲಂಕವಿದೆ. ಅದೊಂದು ದ್ವೀಪವಾಗಿದ್ದು, ಭಾರತದಿಂದ ಪಾಕ್ ಜಲಸಂಧಿ ಮತ್ತು ಮನ್ನಾರ್ ಖಾರಿಗಳಿಂದ ಪ್ರತ್ಯೇಕಗೊಂಡಿದೆ.


Password Protected : No


• ಭಾರತದ ಪರ್ಯಾಯ ದ್ವೀಪ ಭಾಗವು ಮೂರು ಕಡೆ ಸಮುದ್ರ-ಸಾಗರಗಳಿಂದ ಆವರಿಸಿದೆ. ಒಟ್ಟು 7,516.6 km ಉದ್ದವಾದ ಸಮುದ್ರತೀರವನ್ನು ಹೊಂದಿದೆ. ಇದರಿಂದ ದೇಶದ ವಿದೇಶೀ ವ್ಯಾಪಾರ, ಹಡಗು ಸಂಚಾರ, ಮೀನುಗಾರಿಕೆ, ಹಡಗು ನಿರ್ಮಾಣಗಳ ಅಭಿವೃದ್ಧಿಗೆ ನೆರವಾಗುತ್ತದೆ.

• ಭಾರತವನ್ನು ಸುತ್ತುವರಿದ ಜಲರಾಶಿಗಳೆಂದರೆ-ಪೂರ್ವಕ್ಕೆ ಬಂಗಾಳಕೊಲ್ಲಿ, ಪಶ್ಚಿಮಕ್ಕೆ ಅರಬ್ಬಿಸಮುದ್ರ ಮತ್ತು ದಕ್ಷಿಣಕ್ಕೆ ಹಿಂದೂ ಮಹಾಸಾಗರ.

ಭಾರತದ ಪಶ್ಚಿಮ ಮತ್ತು ಪೂರ್ವದ ಜಲರಾಶಿಗಳಲ್ಲಿ ಕ್ರಮವಾಗಿ ಲಕ್ಷದ್ವೀಪ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಿವೆ.

• ಭಾರತದ ಭೂಪಟದಲ್ಲಿ ಮೂರುಕಡೆ ನೀರಿದ್ದು, ಒಂದು ಕಡೆ ಭೂ ಭಾಗವಿರುವುದನ್ನು ಗಮನಿಸು. ಇದನ್ನು ಪರ್ಯಾಯ ದ್ವೀಪ ಎನ್ನುವರು. ದಕ್ಷಿಣ ಭಾರತವು ಒಂದು ಪರ್ಯಾಯ ದ್ವೀಪವಾಗಿದೆ.

ಸುತ್ತಲೂ ನೀರಿನಿಂದ ಅವರಿಸಿರುವ ಭೂಭಾಗವನ್ನು ದ್ವೀಪ ಎನ್ನುವರು. ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಲಕ್ಷದ್ವೀಪಗಳು ಭಾರತದ ದ್ವೀಪಗಳಾಗಿವೆ.


Download Link Available : Yes


2) ಭಾರತದ ಆಡಳಿತ ವಿಭಾಗಗಳು

ಮತ್ತೊಮ್ಮೆ ಭಾರತದ ಭೂಪಟವನ್ನು ಗಮನಿಸು. ನೀನು ಈಗ ನೋಡುತ್ತಿರುವಂತೆ ಪ್ರಸ್ತುತ ರಾಜ್ಯಗಳ ಗಡಿಗಳನ್ನು ಒಳಗೊಂಡ ಭೂಪಟವು ಈ ಹಿಂದೆ ಇರಲಿಲ್ಲ. ಈಗಾಗಲೇ ತಿಳಿಸಿದಂತೆ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವು ಹಲವು ದೇಶೀ ರಾಜಮನೆತನಗಳು ಮತ್ತು ವಿದೇಶಿ ರಾಜಕೀಯ ಶಕ್ತಿಗಳ ಆಳ್ವಿಕೆಗೆ ಒಳಪಟ್ಟಿತ್ತು. ನೂರಾರು ಚಿಕ್ಕ ಚಿಕ್ಕ ಸಾಮ್ರಾಜ್ಯಗಳಾಗಿ ಹರಿದು ಹಂಚಿಹೋಗಿತ್ತು.

ಸ್ವಾತಂತ್ರ್ಯಾನಂತರ ಭಾರತವು ಭೌಗೋಳಿಕ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿತು. ಸುಗಮ ಆಡಳಿತ ನಿರ್ವಹಣೆಗಾಗಿ ರಾಜ್ಯದ ಭೌಗೋಳಿಕ ಮೇರೆ(ಗಡಿಗಳನ್ನು ಪುನರ್ ನಿರ್ಧರಿಸಲಾಯಿತು. ಈ ಹಿನ್ನೆಲೆಯಲ್ಲಿ ಭಾಷಾವಾರು ರಾಜ್ಯಗಳ ಪುನರ್ ರಚನೆ ಕಾಯಿದೆ

232

1956ರ ಅನ್ವಯ ಆಯಾ ಪ್ರಾಂತ್ಯದಲ್ಲಿ ಬಹು ಜನರಾಡುವ ಭಾಷೆಯನ್ನು ಪರಿಗಣಿಸಿ ರಾಜ್ಯಗಳ ಪುನರ್ವಿಂಗಡಣೆ ಮಾಡಲಾಗಿದೆ.

ಭಾರತದಲ್ಲಿ ಅಸಂಖ್ಯಾತ ಭಾಷೆಗಳಿದ್ದು, ಅವು ಭಾಷಾ ವೈವಿಧ್ಯತೆಯನ್ನು ಸೂಚಿಸುತ್ತವೆ. ಅವುಗಳಲ್ಲಿ 15ನ್ನು ಅಧಿಕೃತ ಭಾಷೆಗಳೆಂದು ಪರಿಗಣಿಸಲಾಗಿದೆ. ಅವುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮುದ್ರಿಸಿರುವ ಅಧಿಕೃತ ನೋಟುಗಳಲ್ಲಿ ಮುದ್ರಿಸಲಾಗಿದೆ.


Password : No


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಸಾಮಾನ್ಯ ಜ್ಞಾನದ ಮಾಹಿತಿ

Previous
« Prev Post

No comments:

Ad Code

Blog Archive

My Blog List

Blog Archive

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.