PC Notes

KPSC EXAM

Saturday, December 18, 2021

ಸಂವಿಧಾನದ ವಿಧಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Saturday, December 18, 2021

Title : ಸಂವಿಧಾನದ ವಿಧಗಳು

(Educational & Informational Purpose Only)



1. ಲಿಖಿತ ಸಂವಿಧಾನ (Written Constitution): ಜನಪ್ರತಿನಿಧಿಗಳನ್ನೊಳಗೊಂಡು ಸಾಮಾನ್ಯವಾಗಿ

ಸಂವಿಧಾನ ರಚನಾಸಭೆ ಎಂದು ಕರೆಯಲ್ಪಡುವ ಒಂದು ಸಮಿತಿಯಿಂದ ರೂಪಿಸಲ್ಪಟ್ಟ ಸಂವಿಧಾನವನ್ನು ಲಿಖಿತ ಸಂವಿಧಾನ ಎನ್ನುತ್ತಾರೆ. ಇದು ಲಿಖಿತ ರೂಪದಲ್ಲಿರುತ್ತದೆ ಹಾಗೂ ದೇಶದ ಸಂವಿಧಾನಾತ್ಮಕ ಕಾನೂನಿನ ಮೂಲವಾಗಿದೆ. 
ಲಿಖಿತ ಸಂವಿಧಾನ ಹೊಂದಿದ ರಾಷ್ಟ್ರಗಳೆಂದರೆ 
ಅಮೆರಿಕಾ, 
ಭಾರತ,ಆಸ್ಟ್ರೇಲಿಯಾ ಹಾಗೂ ಕೆನಡಾ ಮೊದಲಾದವುಗಳು. 


File Language : Kannada/English




2. ಅಲಿಖಿತ ಸಂವಿಧಾನ (Unwritten Constitution):

ಸಾಂಪ್ರದಾಯಿಕ ಪದ್ಧತಿಗಳು, ನ್ಯಾಯಾಲಯದ ತೀರ್ಮಾನಗಳು, ಸಾಮಾನ್ಯ ಕಾನೂನು ತತ್ವಗಳು ಮತ್ತು ಪ್ರಕ್ರಿಯೆಗಳಿಂದ ಒಡಮೂಡಿದ ಸಂವಿಧಾನವನ್ನು ಅಲಿಖಿತ ಸಂವಿಧಾನ ಎನ್ನುವರು. ಇದು ಅಲಿಖಿತ ರೂಪದಲ್ಲಿರುತ್ತದೆ. ಈ ಸಂವಿಧಾನ ಹೊಂದಿದ ದೇಶಗಳೆಂದರೆ ಇಂಗ್ಲೆಂಡ್, ನ್ಯೂಜಿಲೆಂಡ್.


Publish Date : 2021


Daily Quiz Telegram Group - @kpsc2019


3.ವಿರಚಿತ ಸಂವಿಧಾನ (Enacted Constitution):


ಜನಪ್ರತಿನಿಧಿ ಸಭೆಯಿಂದ ಅಧಿನಿಯಮಿಸಲ್ಪಟ್ಟು ಪರಮೋಚ್ಚ ಕಾನೂನಾಗಿ ಸ್ಥಾಪಿತವಾದ ಸಂವಿಧಾನವೇ ವಿರಚಿತ ಸಂವಿಧಾನ, ಉದಾ:ಭಾರತ ಸಂವಿಧಾನ ಮತ್ತು ಅಮೆರಿಕ ಸಂವಿಧಾನ.


File Size : link


Number of Pages : link


 4.ವಿಕಸಿತ ಸಂವಿಧಾನ (Evolved Constitution): 

ಕಾಲಕ್ರಮೇಣ ಬೆಳವಣಿಗೆಯಾದ ಸಾಂಪ್ರದಾಯಿಕ ಬಳಕೆ, ಪದ್ಧತಿಗಳು, ಆಚರಣೆಗಳಿಂದ ಒಡಮೂಡಿದ ಸಂವಿಧಾನವನ್ನು ವಿಕಸಿತ ಸಂವಿಧಾನವೆನ್ನುವರು. ಉದಾ: ಬ್ರಿಟಿಷ್ ಸಂವಿಧಾನ.


Editable Text : No


Password Protected : No


5. ಒಕ್ಕೂಟ ಸಂವಿಧಾನ (Federal Constitution):

 ರಾಜ್ಯಗಳ ಒಂದು ಗುಂಪು ಕೇಂದ್ರದೊಡನೆ ಪರಸ್ಪರ ಸಂಬಂಧ ಕಲ್ಪಿಸಿಕೊಂಡಿರುವ ಸರಕಾರದ ವ್ಯವಸ್ಥೆಗೆ ಸಂಯುಕ್ತ ಗಣರಾಜ್ಯ ಎನ್ನಲಾಗುತ್ತದೆ. ಅರೆ ಸ್ವಾಯತ್ತ ರಾಜ್ಯಗಳ ಸರಣಿಯೊಂದು ಒಂದು ಸಂಯುಕ್ತ ರಾಷ್ಟ್ರವಾಗಿ ಒಟ್ಟುಗೂಡುವ ಅವಕಾಶವನ್ನು ಸಂಯುಕ್ತ ಸಂವಿಧಾನ ಕಲ್ಪಿಸುತ್ತದೆ. ಉದಾ : ಅಮೆರಿಕ ಸಂವಿಧಾನ.


Download Link Available : Yes


6. ಏಕಾತ್ಮಕ ಸಂವಿಧಾನ (Unitary Constitution):

ಈ ಸಂವಿಧಾನದ ಪ್ರಧಾನ ಲಕ್ಷಣವೆಂದರೆ ಅಧಿಕಾರದ ಕೇಂದ್ರೀಕರಣ. ಕೇಂದ್ರ ಬಹಳ ಶಕ್ತಿಯುತವಾಗಿ ಹಾಗೂ ರಾಜ್ಯಗಳು ಕೇವಲ ಕೇಂದ್ರದ ಪ್ರತಿನಿಧಿಗಳಾಗಿ ವರ್ತಿಸುತ್ತವೆ.


7. ಬದಲಾವಣೆಗೊಳಪಡಬಲ್ಲ ಸಂವಿಧಾನ (Flexible Constitution)

ಇಲ್ಲಿ ಸಂವಿಧಾನಕ್ಕೆ ಸರಳವಾಗಿ ತಿದ್ದುಪಡಿಗಳನ್ನು ತರಬಹುದಾಗಿದೆ. ಕ್ರೋಢೀಕೃತವಾಗದ ಬ್ರಿಟನ್ ಸಂವಿಧಾನ ಭಾಗಶಃ ಮುಖ್ಯ ಶಾಸನಗಳನ್ನು ಮತ್ತು ಭಾಗಶಃ ಅಲಿಖಿತ ಸಂಪ್ರದಾಯಗಳನ್ನು ಒಳಗೊಂಡಿದೆ. ಬ್ರಿಟನ್ನಿನ ಸಂವಿಧಾನದ ಶಾಸನಗಳನ್ನು ಸಂಸತ್ತಿನ ಒಂದು ಸರಳ ಅಧಿನಿಯಮದ ಮೂಲಕ ತಿದ್ದುಪಡಿ ಮಾಡಬಹುದಾಗಿದೆ. ಭಾರತದ ಸಂವಿಧಾನವು ಬದಲಾವಣೆಗೆ ಒಳಪಡಬಲ್ಲ ಸಂವಿಧಾನವಾಗಿದೆ.


Cost : Free of cost

8. ಅನಮ್ಯ ಸಂವಿಧಾನ (ಬದಲಾವಣೆಗೆ ಒಳಪಡದ ಸಂವಿಧಾನ) (Rigid Constitution) :


ಈ ಸಂವಿಧಾನವನ್ನು ಸರಳ ಅಧಿನಿಯಮಗಳ ಮೂಲಕ ತಿದ್ದುಪಡಿ ಮಾಡಲು ಬರುವುದಿಲ್ಲ. ಉದಾ : ಅಮೇರಿಕಾದ ಸಂವಿಧಾನ.


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಸಂವಿಧಾನದ ವಿಧಗಳು

Previous
« Prev Post

No comments:

Ad Code

Blog Archive

My Blog List

Blog Archive

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.