Title : ಪದ್ಮಪ್ರಶಸ್ತಿಗಳು ಭಾರತದ ಅತ್ಯುತ್ತಮವಾದದ್ದನ್ನು ಪ್ರದರ್ಶಿಸುತ್ತವೆ.
(Educational & Informational Purpose Only)
ಪದ್ಮಪ್ರಶಸ್ತಿಗಳು ಭಾರತದ ಅತ್ಯುತ್ತಮವಾದದ್ದನ್ನು ಪ್ರದರ್ಶಿಸುತ್ತವೆ
Publish Date : 2021
ರಾಜಸ್ಥಾನದ ನಾಗೌರ್ ಜಿಲ್ಲೆಯ ನಿವಾಸಿಯಾದ ಹಿಮ್ಮತ್ ರಾಮ್ ಭಂಭು ಕಳೆದ 25 ವರ್ಷಗಳಿಂದ ವೃಕ್ಷ ಸಂರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ. ರಾಜಸ್ಥಾನದ ಅರಣ್ಯ ಕೊರತೆಯ ಜಿಲ್ಲೆಗಳಾದ ನಗೌರ್, ಜೋದ್ ಪುರ, ಜೈಸರ್, ಬಾರ್ಮರ್, ಸಿಕರ್, ಅಶ್ಲೋರ್ ನಲ್ಲಿ ಅವರು ಇಲ್ಲಿಯವರೆಗೆ ಐದೂವರೆ ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ.
File Size : link
Number of Pages : link
ದಳವಾಯಿ ಛಲಪತಿ ರಾವ್ ಅನಂತಪುರ ಜಿಲ್ಲೆಯ ತೊಗಲು ಗೊಂಬೆ ಕಲಾವಿದರು. ತಲೆಮಾರುಗಳಿಂದ ಬಂದ ನೆರಳು ಬೊಂಬೆಯಾಟ ಕಲೆಯನ್ನು ಅಂದಗೊಳಿಸುವ ಮತ್ತು ಬೆಳೆಸುವ ಮೂಲಕ ಅನೇಕ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.
Image Available : Yes
ಬೀಜ ಮಾತ ಅಥವಾ ಸೀಡ್ ಮದರ್ ಎಂದು ಜನಪ್ರಿಯವಾಗಿರುವ ರಾಹಿಬಾಯಿ ಸೋಮಾ ಪೋಪರ ಮಹಾರಾಷ್ಟ್ರದ ಅಹ್ಮದ್ ನಗರ ಮೂಲದವರು. ಪಾರಂಪರಿಕವಾಗಿ ಸಾಂಪ್ರದಾಯಿಕ ಕೃಷಿ ವಿಧಾನಗಳನ್ನು ಕಲಿತಿರುವ ಅವರು, 50 ಎಕರೆ ಭೂಮಿಯಲ್ಲಿ 17ಕ್ಕೂ ಹೆಚ್ಚು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ರಾಹಿ ತಮ್ಮ ಪ್ರಯತ್ನಗಳಿಗಾಗಿ ನಾರಿ ಶಕ್ತಿ ಸಮ್ಮಾನ್‌ಗೂ ಭಾಜನರಾಗಿದ್ದಾರೆ. ವಿಜ್ಞಾನಿಗಳು ಸಹ ಅವರ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ.
ಕರ್ನಾಟಕದ ಮಂಜಮ್ಮ ಜೋಗತಿ ಅವರು ಪದ್ಮ ಪ್ರಶಸ್ತಿ ಪಡೆದ ದೇಶದ ಮೊದಲ ತೃತೀಯ ಲಿಂಗಿಯಾಗಿದ್ದಾರೆ. ಅವರ ಜೀವನವು ಅನೇಕ ಕಠಿಣ ಹಂತಗಳನ್ನು ಹಾದುಹೋಗಿದೆ. ಜೋಗಪ್ಪ ಸಮುದಾಯದ ಜಾನಪದ ನೃತ್ಯವಾದ ಮಂಜಮ್ಮ, ಈಗ ಅವರ ಹೆಸರಿನಿಂದ ಗುರುತಿಸಲ್ಪಟ್ಟಿದೆ, ಅದನ್ನು ಅವರು ಜನಪ್ರಿಯಗೊಳಿಸಿದ್ದಾರೆ.
ಅಯೋಧ್ಯೆಯ ನಿವಾಸಿ 83 ವರ್ಷದ ಸೈಕಲ್ ಮೆಕ್ಯಾನಿಕ್ ಮೊಹಮ್ಮದ್ ಶರೀಫ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಮಾಜ ಕಲ್ಯಾಣಕ್ಕಾಗಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಶರೀಫ್ ಚಾಚಾ ಎಂದು ಜನಪ್ರಿಯವಾಗಿರುವ ಮೊಹಮ್ಮದ್ ಶರೀಫ್ ಇಲ್ಲಿಯವರೆಗೆ 25ಸಾವಿರಕ್ಕೂ ಹೆಚ್ಚು ವಾರಸುದಾರರಿಲ್ಲದ ಮೃತ ದೇಹಗಳ ಅಂತ್ಯ ಸಂಸ್ಕಾರ ಮಾಡಿದ್ದಾರೆ.
ಜನರು ಸಜ್ಜಾದ್ ಅಲಿ ಜಹೀರ್ ಅವರನ್ನು 1971ರ ಯುದ್ಧದ ನಾಯಕ ಎಂದು ಕರೆಯುತ್ತಾರೆ. ಆ ಸಮಯದಲ್ಲಿ ಪಾಕಿಸ್ತಾನ ಸೇನೆಯಲ್ಲಿದ್ದ ಜಹೀರ್, ಪೂರ್ವ ಪಾಕಿಸ್ತಾನದಲ್ಲಿ (ಈಗ ಬಾಂಗ್ಲಾದೇಶ) ಸೇನಾ ದೌರ್ಜನ್ಯ ಮತ್ತು ನರಮೇಧದ ಪುರಾವೆಗಳೊಂದಿಗೆ ಭಾರತಕ್ಕೆ ಬಂದಿದ್ದರು. ಬಾಂಗ್ಲಾದೇಶದ ರಚನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ವರ್ಷಗಳ ನಂತರ, ಅವರು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪದ್ಮ ಪ್ರಶಸ್ತಿಗಳಿಂದ ಗೌರವಿಸಲಾದ ರಾಜಸ್ಥಾನದ ರತ್ನಗಳಲ್ಲಿ ಉಷಾ ಚೌಮಾರ್ ಸಹ ಒಬ್ಬರು. ರಾಷ್ಟ್ರಪತಿಗಳಿಂದ ಗೌರವ ಪಡೆದ ಉಷಾ ಚೌಮಾರ್ ಒಂದು ಕಾಲದಲ್ಲಿ ಕೈಯಿಂದ ಮಲ ಸ್ವಚ್ಛ ಮಾಡುವವರಾಗಿದ್ದರು. 7ನೇ ವಯಸ್ಸಿನಿಂದಲೂ ಕೈಯಿಂದ ಮಲ ಸ್ವಚ್ಛ ಮಾಡುತ್ತಿದ್ದ ಉಷಾ, ಮಲ ಹೊರುವ ಅನಿಷ್ಟ ಪದ್ಧತಿಯ ವಿರುದ್ಧ ಹೋರಾಡಿ ಹೊಸ ಮಾದರಿಯನ್ನು ರೂಪಿಸಿದರು.
ಛುಲ್ಲಿಮ್ ಛೋಂಜೋರ್ ಅವರನ್ನು ಲಡಾಖ್ ನ 'ದಶರಥ ಮಾಂಝಿ' ಎಂದೂ ಕರೆಯಲಾಗುತ್ತದೆ. ಲಡಾಖ್ ನ ಜಂಸ್ಕಾರ್ ಕಣಿವೆಯ ಸ್ಪೋಂಗ್ಲ ಗ್ರಾಮದ ನಿವಾಸಿ ಛುಲ್ಲಿಮ್ ಛೋಂಜೋರ್ ಅವರು ದಾರ್ಚಾದಿಂದ ಶಿಂಕುಲಕ್ಕೆ ಸುಮಾರು 40 ಕಿ.ಮೀ. ರಸ್ತೆಯನ್ನು ಏಕಾಂಗಿಯಾಗಿ ನಿರ್ಮಿಸಿದ್ದಾರೆ. ಇದಕ್ಕಾಗಿ, ಅವರು ತಮ್ಮ ಭೂಮಿ ಮತ್ತು ಆಸ್ತಿಯನ್ನು ಸಹ ಮಾರಾಟ ಮಾಡಿದ್ದಾರೆ.
ಪದ್ಮ ಪ್ರಶಸ್ತಿ ಪಡೆದ ನಂತರ, ಬಹುಶಃ ನನ್ನ ಕಠಿಣ ಪರಿಶ್ರಮ ಯಶಸ್ವಿಯಾಗಿದೆ ಎಂದು ಭಾವಿಸಿದ್ದೇನೆ. ನಾನು ರಸ್ತೆಯನ್ನು ನಿರ್ಮಿಸುವಾಗ, ಇದು ಸಾಧ್ಯ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ ಎಂದು ಹೇಳಿದ್ದಾರೆ.
Click Here To Download
ಸುಮಾರು ಮೂರು ದಶಕಗಳ ಕಾಲ, ಮನೆಗೆಲಸದಾಕೆಯಾಗಿ ಮತ್ತು ತರಕಾರಿ ಮಾರಾಟಗಾರರಾಗಿ ಕೆಲಸ ಮಾಡುತ್ತಿದ್ದ ಸುಭಾಷಿಣಿ, ಯಾವುದೇ ಬಡ ರೋಗಿಯೂ ಚಿಕಿತ್ಸೆ ಸಿಗದೆ ಸಾಯಬಾರದು ಎಂದು ಬಂಗಾಳದ ದಕ್ಷಿಣ -24 ಪರಗನಾ ಜಿಲ್ಲೆಯ ಠಾಕೂರ್ ಪುಶುರ್ ಪ್ರದೇಶದಲ್ಲಿ 'ಮಾನವೀಯತೆಯ ಅಸ್ಪತ್ರೆ' ಸ್ಥಾಪಿಸಲು ಹಣವನ್ನು ಉಳಿಸಿದರು. ಇಲ್ಲಿ ಎಲ್ಲಾ ಚಿಕಿತ್ಸೆಯನ್ನೂ ಉಚಿತವಾಗಿ ನೀಡಲಾಗುತ್ತದೆ.
PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. Allthese PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
No comments:
Post a Comment