Monday, January 31, 2022

ಬೆಳಕು (Light) KAS,PSI,FDA,SDA NOTES

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Monday, January 31, 2022

Title : ಬೆಳಕು (Light) KAS,PSI,FDA,SDA NOTES

(Educational & Informational Purpose Only)


ಬೆಳಕು (Light)


ಮಾನವನ ಕಣ್ಣಿಗೆ ನಿಗದಿತ ವ್ಯಾಪ್ತಿಯೊಳಗೆ ಪುನರಾವರ್ತನೆ ಹೊಂದಿರುವ ವಿಕಿರಣಗಳಿಗೆ ಬೆಳಕು ಎನ್ನುತ್ತೇವೆ. ಬೆಳಕಿನ ವೇಗ ಪ್ರತಿ ಸೆಕೆಂಡಿಗೆ 3 ಲಕ್ಷ ಕಿ.ಮೀ.ನಂತೆ ಒಂದು ವರ್ಷದಲ್ಲಿ ಕ್ರಮಿಸುವ ದೂರ ಒಂದು ಜ್ಯೋರ್ತೀವರ್ಪ

ಬೆಳಕಿನ ಲಕ್ಷಣಗಳು ಈ ಕೆಳಗಿನಂತಿವೆ.

# ಬೆಳಕು ಒಂದು ಶಕ್ತಿಯ ರೂಪವಾಗಿದೆ.

# ಸೂರ್ಯನ ಬೆಳಕು ಭೂಮಿಯನ್ನು ತಲುಪಲು 8 ನಿಮಿಷ 9 ಸೆಕೆಂಡ್ ತೆಗೆದುಕೊಳ್ಳುತ್ತದೆ.

# ಬೆಳಕು ಮೂಲಭೂತವಾಗಿ ಪೋಟಾನ್ ಎಂಬ ಸೂಕ್ಷ್ಮಕಣಗಳನ್ನು

ಹೊಂದಿರುತ್ತದೆ.

# ನಿರ್ವಾತದಲ್ಲಿ ಬೆಳಕಿನ ವೇಗ Zx10* msl

# ವಿವಿಧ ಬಣಗಳ ಬೆಳಕಿಗೆ ತರಂಗ ದೂರಗಳು ಭಿನ್ನವಾಗಿರುತ್ತದೆ.

# ಬೆಳಕಿನಿಂದ ವಿವಿಧ ಶಕ್ತಿ ಪಡೆಯಬಹುದು (ಉದಾ: ಸೌರಶಕ್ತಿ)

# ಬೆಳಕು ವಸ್ತುವನ್ನು ಗೋಚರಿಸುವಂತೆ ಮಾಡುತ್ತದೆ.

# ಬೆಳಕು ಯಾವುದೇ ಮಾಧ್ಯಮವಿಲ್ಲದ ಸರಳ ರೇಖೆಯಲ್ಲಿ ಚಲಿಸುತ್ತದೆ.

# ಯಾವುದೇ ದ್ರವ್ಯದ ವೇಗ ಬೆಳಕಿನ ವೇಗಕ್ಕಿಂತ ಕಡಿಮೆಯಾಗಿರುತ್ತದೆ.

# 1862 ರಲ್ಲಿ ಅಲ್ಬರ್ಟ್ ಮೈಕಲ್ ಸನ್ ಎಂಬುವರು ಬೆಳಕಿನ ವೇಗವನ್ನು ಕಂಡುಹಿಡಿದರು.


ಬೆಳಕಿನ ಪರಿಣಾಮಗಳು:

ಬೆಳಕು ವಸ್ತುವಿನ ಮೇಲೆ ಬಿದ್ದಾಗ ಸಾಮಾನ್ಯವಾಗಿ 3 ರೀತಿಯ ಪರಿಣಾಮ ಉಂಟುಮಾಡುತ್ತದೆ.

1) ಬೆಳಕಿನ ಪ್ರತಿಫಲನ (Reflection)

2) ಬೆಳಕಿನ ವಕ್ರೀಭವನ (Refraction)

3) ಬೆಳಕಿನ ಹೀರುವಿಕೆ (Absorption)

I. ಬೆಳಕಿನ ಪ್ರತಿಫಲನ:

ಬೆಳಕು ಒಂದು ಮಾಧ್ಯಮದಿಂದ ಮತ್ತೊಂದು ಮಾಧ್ಯಮಕ್ಕೆ ಚಲಿಸಿ ಅದೇ ಮಾಧ್ಯಮಕ್ಕೆ ಹಿಂದಿರುಗುವುದಕ್ಕೆ ಬೆಳಕಿನ ಪ್ರತಿಫಲನ ಎನ್ನುತ್ತೇವೆ.

ಪ್ರಮುಖ ಮುಖ್ಯಾಂಶಗಳು:

# ವಸ್ತುವಿನ ಮೇಲೆ ಹೊಳಪಾಗಿದ್ದರೆ ಪ್ರತಿಫಲನವೂ ಸಹ ಹೆಚ್ಚಾಗಿರುತ್ತದೆ.

# ಬೆಳಕು ಒಂದೇ ಮಾಧ್ಯಮದಲ್ಲಿ ಚಲಿಸಿದಾಗ ಸರಳ ರೇಖೆಯಲ್ಲಿ ಚಲಿಸುತ್ತದೆ.

# ಪತನ ಕೋನವು ಪ್ರತಿಫಲಿತಕೋನಕ್ಕೆ ಸಮನಾಗಿರುತ್ತದೆ.

# ಪತನ ಕಿರಣ, ಪ್ರತಿಫಲಿತ ಕಿರಣ, ಪತನಬಿಂದು ಒಂದೇ ಲಂಬ ಸಮತಲದಲ್ಲಿರುತ್ತವೆ.

II. ಬೆಳಕಿನ ವಕ್ರೀಭವನ:

ಬೆಳಕು ಒಂದು ಮಾಧ್ಯಮದಿಂದ ಮತ್ತೊಂದು ಮಾಧ್ಯಮಕ್ಕೆ ಚಲಿಸಿದಾಗ ಭಾಗುತ್ತದೆ. ಈ ವಿದ್ಯಮಾನಕ್ಕೆ ಬೆಳಕಿನ ವಕ್ರೀಭವನ ಎನ್ನುತ್ತಾರೆ.

ಪ್ರಮುಖ ಮುಖ್ಯಾಂಶಗಳು:

# ಕನಿಷ್ಠ 2 ಮಾಧ್ಯಮಗಳು ಅವಶ್ಯಕ.

# ಮಾಧ್ಯಮಗಳ ಸಾಂದ್ರತೆ ಭಿನ್ನವಾಗಿರಬೇಕು.




# ಕಡಿಮೆ ಸಾಂದ್ರತೆ ಮಾಧ್ಯಮದಿಂದ ಹೆಚ್ಚು ಸಾಂದ್ರತೆಯ ಮಾಧ್ಯಮದ ವಸ್ತುವನ್ನು ನೋಡಿದರೆ ವಸ್ತು ಹತ್ತಿರದಲ್ಲಿರುವಂತೆ ತೋರುತ್ತದೆ.

ಹೆಚ್ಚು ಸಾಂದ್ರತೆ ಮಾಧ್ಯಮದಿಂದ ಕಡಿಮೆ ಸಾಂದ್ರತೆ ಮಾಧ್ಯಮದ ವಸ್ತುವನ್ನು

ನೋಡಿದರೆ ವಸ್ತು ದೂರದಲ್ಲಿರುವಂತೆ ತೋರುತ್ತದೆ.

# ಒಂದೇ ಮಾಧ್ಯಮದಲ್ಲಿ ನೋಡಿದಾಗ ದೂರದಲ್ಲಿ ಯಾವುದೇ

ವ್ಯತ್ಯಾಸವಿರುವುದಿಲ್ಲ.

# ಬೆಳಕು ಹೆಚ್ಚು ಸಾಂದ್ರತೆಯ ಕಡೆಗೆ ಸಾಗುವಾಗ ಲಂಬವಾಗಿರುತ್ತದೆ.

# ಬೆಳಕು ಕಡಿಮೆ ಸಾಂದ್ರತೆಯ ಮಾಧ್ಯಮದೆಡೆಗೆ ಸಾಗುವಾಗ ಲಂಬದಿಂದ ದೂರಕ್ಕೆ ಬಾಗುತ್ತದೆ.

ಉದಾಹರಣೆಗಳು:

# ಓರೆಯಾಗಿ ನೀರಿನಲ್ಲಿ ಮುಳುಗಿಸಿದ ಪೆನ್ಸಿಲ್ ತುಂಡರಿಸಿದಂತೆ ಭಾಸವಾಗುತ್ತದೆ.

# ನೀರಿನಲ್ಲಿ ಮುಳುಗಿರುವ ಒಂದು ನಾಣ್ಯವು ತನ್ನ ಮೂಲ ಸ್ನಾನಕ್ಕಿಂತ ಎತ್ತರದಲ್ಲಿರುವಂತೆ ತೋರುತ್ತದೆ.

# ಡ್ರೈವಿಂಗ್ ಬೋರ್ಡ್‌ನ ತಳಭಾಗವು ತನ್ನ ಸ್ಥಾನಕ್ಕಿಂತ ಎತ್ತರದಲ್ಲಿ ಇರುವಂತೆ ತೋರುತ್ತದೆ.

# ಕೊಳದಲ್ಲಿರುವ ಮೀನು ದಡದಲ್ಲಿರುವ ವ್ಯಕ್ತಿಗೆ ಹತ್ತಿರದಲ್ಲಿರುವಂತೆ ಭಾಸವಾಗುತ್ತದೆ.

# ಕೊಳದಲ್ಲಿರುವ ಮೀನಿಗೆ ದಡದಲ್ಲಿರುವ ವ್ಯಕ್ತಿ ದೂರದಲ್ಲಿರುವಂತೆ ತೋರುತ್ತದೆ.

# ವ್ಯಕ್ತಿ ಅಥವಾ ಮೀನು ನೀರಿನಲ್ಲಿ ಇರುವಾಗ ದೂರದಲ್ಲಿ ವ್ಯತ್ಯಾಸವಾಗುವುದಿಲ್ಲ.

III. ಬೆಳಕಿನ ಹೀರುವಿಕೆ:

ಒಂದು ವಸ್ತುವಿನ ಮೇಲೆ ಬೆಳಕು ಬಿದ್ದಾಗ ಬೆಳಕಿನಲ್ಲಿರುವ ಬಣ್ಣಗಳನ್ನು ಹೀರಲ್ಪಟ್ಟು, ಕೆಲವು ಬಣ್ಣವನ್ನು ಮಾತ್ರ ಚದುರಿಸುತ್ತದೆ. ಯಾವ ಬಣ್ಣವನ್ನು ಹೀರಿಕೊಳ್ಳದೆ ಚದುರಿಸುತ್ತದೋ ಅಂತಹ ಬಣ್ಣವು ವಸ್ತುವಿನ ಬಣ್ಣವಾಗಿ ಕಾಣುತ್ತದೆ.


Publish Date : 2021


Daily Quiz Telegram Group - @kpsc2019


ಉದಾ: ಕೆಂಪು ಗುಲಾಬಿಯ ಮೇಲೆ ಬಿದ್ದ ಬೆಳಕು ಕೆಂಪು ಬಣ್ಣ ಹೊರತುಪಡಿಸಿ ಉಳಿದೆಲ್ಲಾ ಬಣ್ಣಗಳನ್ನು ಹೀರಿಕೊಳ್ಳುತ್ತದೆ. ಆದುದರಿಂದ ಕೆಂಪು ಬಣ್ಣ ಕಾಣಿಸುತ್ತದೆ.

ವಸ್ತುವಿನ ಮೂಲಕ ಬೆಳಕು ಹಾದು ಹೋಗುವುದರ ಆಧಾರದ ಮೇಲೆ 3 ಗುಂಪುಗಳಾಗಿ ವಿಂಗಡಿಸಬಹುದು.

1) ಪಾರದರ್ಶಕ

2) ಅಪಾರದರ್ಶಕ

3) ಅರಪಾರದರ್ಶಕ

1) ಪಾರದರ್ಶಕ: ಯಾವ ವಸ್ತುಗಳು ತಮ್ಮ ಮೂಲಕ ಬೆಳಕನ್ನು ಹಾದು ಬಿಡುತ್ತವೋ ಅವುಗಳನ್ನು ಪಾರದರ್ಶಕ ವಸ್ತುಗಳನ್ನುವರು. ಉದಾ: ಗಾಜು, ನೀರು, ಗಾಳಿ,

2) ಅಪಾರದರ್ಶಕ: ಯಾವ ವಸ್ತುಗಳು ತಮ್ಮ ಮೂಲಕ ಬೆಳಕನ್ನು ಹಾದು ಹೋಗಲು ಬಿಡುವುದಿಲ್ಲವೋ ಅವುಗಳನ್ನು ಅಪಾರದರ್ಶಕ ವಸ್ತುಗಳೆಂದು ಕರೆಯುತ್ತಾರೆ. ಉದಾ: ಮರ, ಕಲ್ಲು, ಇಟ್ಟಿಗೆ, ಕಪ್ಪು ಕಾಗದ.

3) ಅರೆಪಾರದರ್ಶಕ: ಯಾವ ವಸ್ತುಗಳು ತಮ್ಮ ಮೂಲಕ ಸ್ವಲ್ಪ ಬೆಳಕನ್ನು ಹರಿಬಿಡುತ್ತವೆ ಅಂತಹ ವಸ್ತುಗಳನ್ನು ಮಿತಿ ಪಾರದರ್ಶಕ ಅಥವಾ ಅರಪಾರದರ್ಶಕ ಎನ್ನುತ್ತಾರೆ. ಉದಾ: ತಂಪು ಕನ್ನಡಕ, ಉಜ್ಜಿನ ಗಾಜು, ಎಣ್ಣೆ ಕಾಗದ.

11.2.2) ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನ

ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನ:

ಹೆಚ್ಚು ಸಾಂದ್ರತೆಯಿಂದ ಕಡಿಮೆ ಸಾಂದ ಮಾಧ್ಯಮಕ್ಕೆ ಬೆಳಕು ಪ್ರಸಾರವಾಗುವಾಗ ಬೆಳಕಿನ ಕಿರಣಗಳು ಮಾಧ್ಯಮಗಳು ಬೇರ್ಪಡಿಸುವ ಮೈ ಮೇಲಿನ ಪತನ ಬಿಂದುವಿನಲ್ಲಿ ಲಂಬದಿಂದ ದೂರವಾಗಿ ಬಾಗುತ್ತವೆ ಮತ್ತು ಸ್ವಲ್ಪ ಬೆಳಕು ಸಾಂದ್ರ


ಮಾಧ್ಯಮದೊಳಗೆ ಪ್ರತಿಫಲಿಸುತ್ತವೆ. ಇಂತಹ ಪ್ರತಿಫಲನವನ್ನೇ “ಸಂಪೂರ್ಣ ಆಂತರಿಕ ಪ್ರತಿಫಲನ” ಎನ್ನುವರು.

ಉದಾಹರಣೆಗಳು:

# ವಜುವು ಅತ್ಯಂತ ಪುಕಾಶಮಾನವಾಗಿ ಹೊಳೆಯುತ್ತದೆ.

# ಮರಳುಗಾಡಿನಲ್ಲಿ ಮರಿಚಿಕ್ಕೆಗಳು ಕಾಣಿಸಿಕೊಳ್ಳುತ್ತವೆ.

# ಆಪ್ಟಿಕಲ್ ಫೈಬರ್ ಈ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ.

# ಬೈಸಿಕಲ್‌ನ ಪ್ರತಿಫಲಕಗಳಲ್ಲಿ ಇದನ್ನು ಬಳಸುತ್ತಾರೆ.

ಬೆಳಕಿನ ವರ್ಣ ವಿಭಜನೆ:

ಬಿಳಿಯ ಬೆಳಕನ್ನು ಪಟ್ಟಕದ ಮೂಲಕ ಹಾಯಿಸಿದಾಗ ಏಳು ಬಣಗಳಾಗಿ ವಿಭಜಿಸುವುದಕ್ಕೆ ಬೆಳಕಿನ ವರ್ಣ ವಿಭಜನೆ ಎನ್ನುತ್ತಾರೆ. ನ್ಯೂಟನ್ ಬಿಳಿಯ ಬೆಳಕು ಏಳು ಬಣ್ಣಗಳನ್ನು ಹೊಂದಿದೆ ಎಂದು ಪತ್ತೆ ಹಚ್ಚಿದರು.

ಬೆಳಕಿನ ವರ್ಣ ವಿಭಜನೆ 7 ಬಣ್ಣಗಳನ್ನು VIBGYOR ಎಂದು ಸೂಚಿಸಲಾಗುತ್ತದೆ.

V - Voilet (ನೇರಳ)

I - Indigo (ಬೂದು)

B - Blue (ನೀಲಿ)

G - Green (ಹಸಿರು)

Y - Yellow (ಹಳದಿ)

R -Red (ಕೆಂಪು)

O- Orange (ಕಿತ್ತಳ)









ಪ್ರಾಥಮಿಕ ಬಣ್ಣಗಳು GRB: Green (ಹಸಿರು) Red (ಕೆಂಪು) Blue (ನೀಲಿ)

ಕೆಂಪು ಬಣ್ಣ: ಹೆಚ್ಚು ತರಂಗ ದೂರವನ್ನು ಹೊಂದಿದೆ, ಕೆಂಪು ಬಣ್ಣ ಹೊಂದಿದೆ, ಕಡಿಮೆ ಬಾಗುತ್ತದೆ, ಕಡಿಮೆ ಶಕ್ತಿ ಹೊಂದಿರುತ್ತದೆ.

ನೇರಳೆ ಬಣ್ಣ: ಕಡಿಮೆ ತರಂಗ ದೂರ ಹೆಚ್ಚು ಬಾಗುತ್ತದೆ ಮತ್ತು ಹೆಚ್ಚು ಶಕ್ತಿಯನ್ನು ಹೊಂದಿದೆ. 7 ವರ್ಣಗಳಲ್ಲಿ ಮಧ್ಯದ ಬಣ್ಣ-ಹಸಿರು.

ಬೆಳಕಿನ ರೋಹಿತ:

ಬೆಳಕಿನಲ್ಲಿ ಬಣ್ಣಗಳು ನಿರ್ಧಿಷ್ಮವಾದ ಜೋಡಣೆವಾಗಿರುವುದಕ್ಕೆ ಬೆಳಕಿನ ರೋಹಿತ ಎನ್ನುತ್ತಾರೆ. ಇವುಗಳಲ್ಲಿ 2 ವಿಧಗಳಿವೆ.

(1) ಶುದ್ಧ ರೋಹಿತ: ಶುದ್ಧ ರೋಹಿತದಲ್ಲಿ ಬಣ್ಣಗಳು ನಿರ್ಧಿಷ್ಟವಾಗಿರುತ್ತವೆ. ಬಣ್ಣಗಳು ಒಂದರ ಮೇಲೊಂದು ಹಾದಿರುವುದಿಲ್ಲ.

(2) ಅಶುದ್ಧ ರೋಹಿತ: ಅಶುದ್ಧ ರೋಹಿತದಲ್ಲಿ ಬಣ್ಣಗಳು ನಿರ್ಧಿಷ್ಟವಾಗಿರುವುದಿಲ್ಲ. ಬಣ್ಣಗಳು ಒಂದರ ಮೇಲೊಂದು ಹಾದಿರುತ್ತವೆ.


ಬೆಳಕಿನ ಚದುರುವಿಕೆ: (Scattering of light)

ಬೆಳಕಿನ ವರ್ಣಗಳ ಚದುರುವಿಕೆಗೆ ಬೆಳಕಿನ ಚದುರುವಿಕೆ ಎನ್ನುತ್ತಾರೆ.

ಉದಾಹರಣೆಗಳು:

1. ಆಕಾಶದ ಬಣ್ಣ ಮತ್ತು ಸಮುದ್ರದ ನೀರಿನ ಬಣ್ಣ ನೀಲಿಯಾಗಿ ಕಾಣುತ್ತದೆ.

2. ಮಳೆಯ ನೀರಿನ ಹನಿಗಳ ಮೇಲೆ ಸೂರ್ಯನ ಬೆಳಕು ಬಿದ್ದು ವಿಭಜನೆ ಹೊಂದುವುದರಿಂದ ಕಾಮನಬಿಲ್ಲು ಉಂಟಾಗುತ್ತದೆ.

ಬೆಳಕಿನ ಚದುರುವಿಕೆಯ ವಿಧಗಳು:

ಬೆಳಕಿನ ಚದುರುವಿಕೆಯಲ್ಲಿ 2 ವಿಧ

I) ಸಂಸಕ್ತ ಚದುರುವಿಕೆ (Coherent Scattering)

2) ಅಸಂಸಕ್ತ ಚದುರುವಿಕೆ (Incoherent Seattering)

1. ಸಂಸಕ್ತ ಚದುರುವಿಕೆ:

ಪವನ ಕಿರಣದ ತರಂಗದೂರ ಮತ್ತು ಚದುರಿದ ಬೆಳಕಿನ ತರಂಗದೂರ ಎರಡೂ ಒಂದೇ ಆಗಿರುತ್ತದೆ. ಉದಾ: ಟೆಂಡಾಲ್ ಪರಿಣಾಮ, ರ್ಯಾಲಿ ಪರಿಣಾಮ ಬೆಳಕಿನ ಹಾದಿಯಲ್ಲಿ ಸಣ್ಣ ಕಣದಂತ ವಸ್ತುಗಳು ಗೋಚರಿಸುತ್ತವೆ ಇದು ಟಿಂಡಾಲ್ ಪರಿಣಾಮದಿಂದ.

2. ಅಸಂಸಕ್ತ ಚದುರುವಿಕೆ:

ಏಕವರ್ಣೀಯ ಬೆಳಕನ್ನು ಬೆಂಜೀನ್ ಅಥವಾ ಟಾಲಿನ್ ದ್ರಾವಣಗಳ ಮೂಲಕ ಹಾಯಿಸಿದಾಗ ಚದುರಿದ ಬೆಳಕು ಏಕವರ್ಣೀಯವಾಗಿರುವುದಿಲ್ಲ.

3 ಪ್ರಾಥಮಿಕ ಬಣ್ಣಗಳಿಗೆ ಬೇರೆ ಬಣ್ಣಗಳನ್ನು ಸೇರಿಸಿ ದ್ವಿತೀಯ ಬಣ್ಣಗಳನ್ನು ತಂಯಾರಿಸಲಾಗುತ್ತದೆ.

ಹಸಿರು + ನೀಲಿ ಬಣ್ಣಗಳ ಮಿಶ್ರಣ – ಸೈಯಾನ್

ಕೆಂಪು + ನೀಲಿ ಬಣ್ಣಗಳ ಮಿಶ್ರಣ = ಮೆಜೆಂಟಾ


ಕೆಂಪು + ಹಸಿರು ಬಣ್ಣಗಳ ಮಿಶ್ರಣ = ಹಳದಿ

ಸೈಯಾನ್ - ಮೆಂಜೆಂಟಾ + ಹಳದಿ = ಕಪ್ಪು (ಕೀ ಬ್ಲಾಕ್)

ಸೈಯಾನ್ - ಮೆಜೆಂಟಾ - ನೀಲಿ

ಮೆಜೆಂಟಾ + ಹಳದಿ = ಕೆಂಪು

ಹಳದಿ - ಸೈಯಾನ್ = ಹಸಿರು

ಕೆಂಪು – ಹಳದಿ = ಕಿತ್ತಳೆ ಬಣ

ಹಳದಿ + ನೀಲಿ = ಹಸಿರು ಬಣ್ಣ

ನೀಲಿ + ಕೆಂಪು = ನೇರಳೆ ಬಣ


Password Protected : No


Image Available : Yes


Download Link Available : Yes


File size Reduced : No


Password : No


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಬೆಳಕು (Light) KAS,PSI,FDA,SDA NOTES

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.