Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Tuesday, February 15, 2022

ಕೆಪಿಟಿಸಿಎಲ್ ಪರೀಕ್ಷೆಗೆ ಪೂರ್ವತಯಾರಿ ಹೇಗೆ?

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Tuesday, February 15, 2022

Title : ಕೆಪಿಟಿಸಿಎಲ್ ಪರೀಕ್ಷೆಗೆ ಪೂರ್ವತಯಾರಿ ಹೇಗೆ?

(Educational & Informational Purpose Only)



ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಯಾವರೀತಿ ಮಾಡಲಾಗುತ್ತದೆ. ಸಹಾಯಕ ಎಂಜಿನಿಯರ್‌ ಮತ್ತು ಕಿರಿಯ ಜನರ್‌ಮ್ಯಾನ್ ಹುದ್ದೆಗಳ ನೇಮಕದ ಬಗ್ಗೆ ಮಾಹಿತಿ.


File Language : Kannada/English




ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಪ್ರತಿ ವರ್ಷ ವಿವಿಧ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲಾಗುತ್ತದೆ. ಇದರ ಜೊತೆಗೆ ವಿವಿಧ ವಿದ್ಯುತ್ ಸರಬರಾಜು ಕಂಪೆನಿಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಭರ್ತಿಯನ್ನು ಮಾಡಿಕೊಳ್ಳಲಾಗುತ್ತದೆ. ಸಹಾಯಕ ಎಕ್ಸಿಕ್ಯುಟಿವ್ ಎಂಜಿನಿಯರ್‌, ಸಹಾಯಕ ಎಂಜಿನಿಯರ್, ಜೂನಿಯರ್ ಎಂಜಿನಿಯರ್, ಜೂನಿಯರ್ ಅಸಿಸ್ಟೆಂಟ್, ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳು ಪ್ರಮುಖವಾದವುಗಳು. ಪ್ರತಿಯೊಂದು ಹುದ್ದೆಯ ಅರ್ಹತ ಮತ್ತು ಆಯ್ಕೆ ಪ್ರಕ್ರಿಯೆ ಬೇರೆ ಬೇರೆಯಾಗಿರುತ್ತದೆ. 


ಸಿವಿಲ್ ಮತ್ತು ಎಲೆಕಲ್ ವಿಷಯಗಳಲ್ಲಿ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಎಂಜಿನಿಯರ್ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು.


Daily Quiz Telegram Group - @kpsc2019


ಸಹಾಯಕ ಎಕ್ಸಿಕ್ಯೂಟಿವ್ ಎಂಜಿನಿಯರ್‌, ಸಹಾಯಕ ಎಂಜಿನಿಯರ್‌ ಮತ್ತು ಜೂನಿಯರ್ ಎಂಜಿನಿಯರ್ ಹುದ್ದೆಗಳ ಭರ್ತಿ:

ಸಿವಿಲ್ ಮತ್ತು ಎಲೆಕ್ಟಿಕಲ್ ವಿಷಯಗಳಲ್ಲಿ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಸಹಾಯಕ ಎಕ್ಸಿಕ್ಯೂಟಿವ್ ಎಂಜಿನಿಯರ್ ಮತ್ತು ಸಹಾಯಕ ಎಂಜಿನಿಯರ್‌ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಇದೇ ವಿಷಯದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳು ಜೂನಿಯರ್ ಎಂಜಿನಿಯರ್‌ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು.


ಪಡೆದ ಅಂಕಗಳ ಆಧಾರದ ಮೇಲೆ ಮಾಡಿಕೊಳ್ಳಲಾಗುತ್ತದೆ. ಆಪ್ಟಿಟ್ಯೂಡ್ ಪರೀಕ್ಷೆಯನ್ನು ಆನ್‌ಲೈನ್ ಮಾದರಿಯಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯು 100 ಅಂಕಗಳಿಗೆ 100 ಪ್ರಶ್ನೆಗಳನ್ನು ಹೊಂದಿರುತ್ತದೆ, ಪ್ರತಿಯೊಂದು ತಪ್ಪು ಉತ್ತರಕ್ಕೆ ಶೇಕಡಾ 25ರಷ್ಟು ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಪ್ರಶ್ನೆಗಳನ್ನು ಕೇವಲ ಇಂಗ್ಲಿಷ್ ಕೇಳಲಾಗಿರುತ್ತದೆ. ಮಾಧ್ಯಮದಲ್ಲಿ

ಪ್ರಶ್ನೆಗಳನ್ನು ಅಭ್ಯರ್ಥಿಯು ಎಂಜಿನಿಯರಿಂಗ್ ಪದವಿಯಲ್ಲಿ ಅಥವಾ ಡಿಪ್ಲೊಮಾ ಪದವಿಯಲ್ಲಿ ಓದಿದ ವಿಷಯಗಳ ಆಧಾರದ ಮೇಲೆ ಕೇಳಲಾಗಿರುತ್ತದೆ. ಸುಮಾರು 75ರಷ್ಟು ಪ್ರಶ್ನೆಗಳನ್ನು ಎಂಜಿನಿಯರಿಂಗ್ ವಿಷಯದ ಮೇಲೆ ಹಾಗು 25 ಪ್ರಶ್ನೆಗಳನ್ನು ಜನರಲ್ ಅವೇರ್‌ನೆಸ್‌ ಮತ್ತು ಅಪ್ಟಿಟ್ಯೂಡ್ (General Awareness and Aptitude) ವಿಷಯದ ಮೇಲೆ ಕೇಳಲಾಗುತ್ತದೆ. ಎಂಜಿನಿಯರಿಂಗ್ ಪ್ರಶ್ನೆಗಳು ತಾಂತ್ರಿಕ ವಿಶ್ವವಿದ್ಯಾಲಯದ ಪಠ್ಯಕ್ರಮ ಆಧರಿಸಿರುತ್ತವೆ.





ಪರೀಕ್ಷೆಯ ತಯಾರಿಗಾಗಿ ನೀವು ನಿಮ್ಮ ಎಂಜಿನಿಯರಿಂಗ್ ಅಥವಾ ಡಿಪ್ಲೊಮಾ ಪದವಿಯ ಪುಸ್ತಕಗಳನ್ನು ಓದಿ, ಜನರಲ್ ಅವೇರನೆಸ್ ಮತ್ತು ಆಪ್ಟಿಟ್ಯೂಡ್ ವಿಷಯಗಳಿಗಾಗಿ 8-12ನೇ ತರಗತಿಯ ಮಸ್ತಕಗಳನ್ನು ಓದಬೇಕು. ಪ್ರಶ್ನೆಗಳನ್ನು ಹೆಚ್ಚಿನದಾಗಿ ಇತಿಹಾಸ, ಭೂಗೋಳ, ಭಾರತದ ಸಂವಿಧಾನ ರಾಜಕೀಯ, ಪರಿಸರ ಮತ್ತು ಸಂರಕ್ಷಣೆ ಇತ್ಯಾದಿಗಳ ಮೇಲೆ ಕೇಳಲಾಗಿರುತ್ತದೆ. ಇದರ ಜೊತೆಗೆ ಪ್ರಚಲಿತ ವಿದ್ಯಮಾನದ ಮೇಲೆ ಕೂಡ ಪ್ರಶ್ನೆಗಳಿರುತ್ತವೆ. ಪ್ರಚಲಿತ ವಿದ್ಯಮಾನ ವಿಷಯದ ತಯಾರಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಯ ನಿಯತಕಾಲಿಕೆಗಳನ್ನು ಓದಿ.


ಜೂನಿಯರ್‌ ಅಸಿಸ್ಟೆಂಟ್ ಹುದ್ದೆಗಳ ಭರ್ತಿ

ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪಿಯುಸಿ ಅಥವಾ ಅಕೌಂಟಿಂಗ್/ಆಡಿಟ್ ವಿಷಯಗಳಲ್ಲಿ ಡಿಪ್ಲೊಮಾ ಪದವಿಯನ್ನು ಪೂರ್ಣಗೊಳಿಸಿರಬೇಕು. ಆಯ್ಕೆಯನ್ನು ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಒದಗಿಸುತ್ತದೆ. ಮೇಲೆ ಮಾಡಿಕೊಳ್ಳಲಾಗುತ್ತದೆ. ಈ ಪರೀಕ್ಷೆಯನ್ನೂ ಆನ್‌ಲೈನ್ ಮಾದರಿಯಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯು 100 ಅಂಕಗಳಿಗೆ ಪ್ರಶ್ನೆಗಳನ್ನು ಹೊಂದಿರುತ್ತದೆ. 20 ಪ್ರಶ್ನೆಗಳನ್ನು ಕಂಪ್ಯೂಟರ್ ವಿಷಯದ ಮೇಲೆ, 40 ಪ್ರಶ್ನೆಗಳನ್ನು ಜನರಲ್ ಅವೇರ್‌ನೆಸ್ ಆಪ್ಟಿಟ್ಯೂಡ್ ವಿಷಯದ ಮೇಲೆ ಮತ್ತು ಇನ್ನುಳಿದ 40 ಪ್ರಶ್ನೆಗಳನ್ನು ಸಾಮಾನ್ಯ ಇಂಗ್ಲಿಷ್ ಕನ್ನಡ ವಿಷಯದ ಮೇಲೆ ಕೇಳಲಾಗಿರುತ್ತದೆ. ಈ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಲು ನೀವು 10ನೇ ತರಗತಿ ಮಟ್ಟದ ಪುಸ್ತಕಗಳನ್ನು ಓದಿದರೆ ಸಾಕು. ಜೊತೆಗೆ ಸರ್ಧಾತ್ಮಕ ಪರೀಕ್ಷೆಯ ನಿಯತಕಾಲಿಕೆಗಳನ್ನು ತಪ್ಪದೆ ಓದಿ.


ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳ ಭರ್ತಿ 

ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಆಯ್ಕೆಯನ್ನು 'ಸಹನ ಶಕ್ತಿ' ಪರೀಕ್ಷೆ ಮತ್ತು ಅಭ್ಯರ್ಥಿಯು 10ನೇ ತರಗತಿಯಲ್ಲಿ ಪಡೆದ ಶೇಕಡಾವಾರು ಅಂಕಗಳ ಆಧಾರದ ಮೇಲೆ ಮಾಡಿಕೊಳ್ಳಲಾಗುತ್ತದೆ.


ಸಹನ ಶಕ್ತಿ ಪರೀಕ್ಷೆಯಲ್ಲಿ ಈ ಕೆಳಗಿನ ಸ್ಪರ್ಧೆಗಳನ್ನು ನಿಗದಿಪಡಿಸಲಾಗಿದೆ

1. 100 ಮೀಟರ್ ಓಟ: 14 ಸೆಕೆಂಡುಗಳು

2. ಸಿಪ್ಪಿಂಗ್: 01 ನಿಮಿಷಕ್ಕೆ 50 ಬಾರಿ

3. ಶಾಟ್‌ಪಟ್ (12 ಪೌಂಡುಗಳು): 8 ಮೀಟರ್ ಉದ್ದ (3 ಅವಕಾಶಗಳು)

4. ವಿದ್ಯುತ್ ಕಂಬ ಹತ್ತುವುದು: 8 ಮೀಟರ್ ಎತ್ತರ 5, 800 ಮೀಟರ್ ಓಟ: 3 ನಿಮಿಷಗಳು

ವಿದ್ಯುತ್ ಕಂಬ ಹತ್ತುವ ಸ್ಪರ್ಧೆಯಲ್ಲಿ ಅಭ್ಯರ್ಥಿಯು ಕಡ್ಡಾಯವಾಗಿ ಅರ್ಹತೆಯನ್ನು ಪಡೆಯಬೇಕು.


ವಿವಿಧ ವಿದ್ಯುತ್ ಸರಬರಾಜ ನಿಗಮ ನಿಯಮಿತಗಳ ವಿವರ ಇಂತಿದೆ:

1. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ 

2. ಮಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ



3. ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ ನಿಯಮಿತ 


4. ಗುಲ್ಬರ್ಗ ವಿದ್ಯುತ್ ಸರಬರಾಜು ನಿಗಮ ನಿಯಮಿತ


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಕೆಪಿಟಿಸಿಎಲ್ ಪರೀಕ್ಷೆಗೆ ಪೂರ್ವತಯಾರಿ ಹೇಗೆ?

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts