Saturday, July 9, 2022

ಶೈಕ್ಷಣಿಕ ಮನೋವಿಜ್ಞಾನ : ಶೈಕ್ಷಣಿಕ ಮನೋವಿಜ್ಞಾನದ ಪ್ರಮುಖ ವಿಧಾನಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Saturday, July 9, 2022

ಶೈಕ್ಷಣಿಕ ಮನೋವಿಜ್ಞಾನ : ಶೈಕ್ಷಣಿಕ ಮನೋವಿಜ್ಞಾನದ ಪ್ರಮುಖ ವಿಧಾನಗಳು

(Educational & Informational Purpose Only)



ಅಂತರಾವಲೋಕನ ವಿಧಾನ :

ವ್ಯಕ್ತಿ ಒಂದು ನಿರ್ದಿಷ್ಟ ಸನ್ನಿವೇಶ ಮತ್ತು ಸಮಯದಲ್ಲಿ ಪ್ರಚೋದನೆಗೆ ಒಳಗಾದಾಗ ತನ್ನಲ್ಲಿ ಉಂಟಾದ ಮಾನಸಿಕ ಚಟುವಟಿಕೆಗಳನ್ನು ತಾನೇ ಆಂತರಿಕವಾಗಿ ಅವಲೋಕಿಸುವ ಕ್ರಮವೇ ಅಂತರಾವಲೋಕನ, ಇದು ಅವಲೋಕನಕಾರ ಅವಲೋಕಿತ ವ್ಯಕ್ತಿಯು ಒಬ್ಬನೆಯಾಗಿರುವ ವಿಧಾನ. ಇದರ ಸಹಾಯದಿಂದ ವ್ಯಕ್ತಿಯು ತನ್ನ ಆಲೋಚನೆಗಳು, ಭಾವನೆಗಳು ಮತ್ತು ಪ್ರೇರಣೆಯ ಸಂದರ್ಭದಲ್ಲಿನ ಮಾನಸಿಕ ಪ್ರಕ್ರಿಯೆಗಳನ್ನು ಪರೀಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದು ವ್ಯಕ್ತಿಯ ಅಂತರಂಗದ ಭಾವನೆಗಳನ್ನು ಅಧ್ಯಯನ ಮಾಡುವ ಏಕೈಕ ವಿಧಾನವಾಗಿದೆ.


ಅಂತರಾವಲೋಕನದ ಪ್ರಮುಖ ಅಂಶಗಳು :

• ಈ ವಿಧಾನ ರಚನಾವಾದಿಗಳಿಗೆ ಸಂಬಂಧಿಸಿದೆ. ಈ ವಿಧಾನವನ್ನು ಇ.ಬಿ.ಟಿಚ್ಚರ್ ರೂಪಿಸಿದರು.

• ವಿಲ್ಡ್ ಹೆಲ್ತ್ ವೂಂಟ್‌ನು ಅಂತರಾವಲೋಕನದ ಫಲಿತಾಂಶದಿಂದ

ಮನಸ್ಸಿನ ಸ್ವರೂಪವನ್ನು ಅರಿಯಲು ಸಾಧ್ಯ ಎಂದು ವಾದಿಸಿದ್ದಾನೆ.

• ಇದು ವ್ಯಕ್ತಿಯ ಪ್ರಜ್ಞಾನುಭವದ ಅನುಭವದ ಅನುಭವಗಳ ಮಾಹಿತಿ ಸಂಗ್ರಹಿಸಲು ಬಹಳ ಸೂಕ್ತವಾದ ವಿಧಾನ.

ಒಬ್ಬ ವ್ಯಕ್ತಿಯ ತನ್ನನ್ನು ತಾನು ಅರಿತುಕೊಂಡು ಸುಧಾರಿಸಿಕೊಳ್ಳಲು ಬಳಸಬಹುದಾದ ಸೂಕ್ತ ವಿಧಾನವಾಗಿದೆ.

• ಇದು ವ್ಯಕ್ತಿನಿಷ್ಠ ವಿಧಾನವಾಗಿದೆ. ಆದ್ದರಿಂದಲೇ ಇದರಿಂದ ಬಂದ ವರದಿ ವೈಜ್ಞಾನಿಕವಾದದ್ದು.

• ಈ ವಿಧಾನವನ್ನು ಚಿಕ್ಕ ಮಕ್ಕಳು, ಪ್ರಾಣಿಗಳು, ಮನೋರೋಗಿಗಳು, ಬುದ್ಧಿಮಾಂದ್ಯರನ್ನು ಅಧ್ಯಯನ ಮಾಡಲು ಬಳಸಲಾಗುವುದಿಲ್ಲ.




ಅವಲೋಕನ ವಿಧಾನ :

ಒಂದು ನಿರ್ದಿಷ್ಟ ಉದ್ದೇಶ ಸಾಧನೆಗಾಗಿ ವ್ಯಕ್ತಿಯು ಬಾಹ್ಯ ವರ್ತನೆಯನ್ನು ಅದು ಹೇಗೆ ಇದೆಯೋ ಹಾಗೆಯೇ ಸಂಗ್ರಹಿಸುವ ಮತ್ತು ದಾಖಲಿಸುವ ಮಾರ್ಗವೇ ಅವಲೋಕನ ವಿಧಾನ. ಇದರಲ್ಲಿ 2 ಪ್ರಕಾರಗಳು, 1) ಸ್ವಾಭಾವಿಕ ಅವಲೋಕನ :

ಸ್ವಾಭಾವಿಕ ಸನ್ನಿವೇಶಗಳಲ್ಲಿ ವ್ಯಕ್ತಿಗಳು ಪ್ರಕಟಿಸುವ ವರ್ತನೆಯನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡುವ ವಿಧಾನವಾಗಿದೆ. ಅವಲೋಕನಕ್ಕೆ ಒಳಪಟ್ಟಿರುವವರಿಗೆ ತಮ್ಮ ವರ್ತನೆಯನ್ನು ಅವಲೋಕಿಸುತ್ತಿದ್ದಾರೆ ಎಂದು ತಿಳಿ ವುದಿಲ್ಲ. ಇಲ್ಲಿ ವ್ಯಕ್ತಿಯು ಸಹಜ ವರ್ತನೆಯ ಮಾಹಿತಿಯನ್ನು ಹಾಗೂ ಸಾಮಾಜಿಕ ಸಂಬಂಧವನ್ನು ಅರಿತುಕೊಳ್ಳಲು ಸಹಾಯಕಾರಿಯಾದ ವಿಧಾನ ವಾಗಿದೆ.


Publish Date : 2021


Daily Quiz Telegram Group - @kpsc2019


2) ಸಹಭಾಗಿತ್ವ ಅವಲೋಕನ :

ಈ ರೀತಿಯ ಅವಲೋಕನ ವಿಧಾನದಲ್ಲಿ ಅವಲೋಕಿಸುವ ವ್ಯಕ್ತಿ ಅವಲೋಕನಕ್ಕೆ ಒಳಪಡುವ ಗುಂಪಿನ ಒಂದು ಭಾಗವಾಗಿ ಪಾಲ್ಗೊಳುತ್ತಾನೆ ಅವರೊಂದಿಗೆ ಇದು ಅವರಿಗೆ ಅರಿವಿಲ್ಲದಂತೆ ವರ್ತನೆಯನ್ನು ಅವಲೋಕಿ ತ್ತಾನೆ. ಒಂದು ವೇಳೆ ತಮ್ಮನ್ನು ಬೇರೆ ಯಾರು ಅವಲೋಕಿಸುತ್ತಿದ್ದಾರೆ ತಿಳಿದರೆ ಅವಲೋಕನಕ್ಕೆ ಒಳಪಟ್ಟ ವರ್ತನೆ. ಸಹಜವಾಗಿರದೆ.ಕೃತಕವಾಗಿರುತ್ತದೆ.


File Size : link


ಅವಲೋಕನದ ಪ್ರಮುಖ ಅಂಶಗಳು :

• ಇದು ವರ್ತನಾವಾದಿಗಳಿಂದ ಪ್ರಾರಂಭವಾದ ವಿಧಾನ, ಜೆ.ಬಿ.ವ್ಯಾಟ್ಸನ್ ಎಂಬ ವರ್ತನಾವಾದಿ ಈ ವಿಧಾನವನ್ನು ಹೆಚ್ಚು ಪ್ರಚಾರಪಡಿಸಿದರು.

• ಇದೊಂದು ವಸ್ತುನಿಷ್ಠವಾದ ವಿಧಾನ. ಇಲ್ಲಿ ವ್ಯಕ್ತಿಯ ಬಾಹ್ಯ ವರ್ತನೆಗಳಾದ ಮಾತನಾಡುವುದು, ನಡೆಯುವುದು, ಸಂತೋಷಗೊಂಡಿರುವುದು,ಕೋಪಕ್ಕೆ ಒಳಗಾಗಿರುವ ಪ್ರಕ್ರಿಯೆಗಳಂತಹ ವರ್ತನೆಯನ್ನು ವೀಕ್ಷಿಸಬಹುದೆ ಹೊರತಾಗಿ ಆಂತರಿಕ ಅಂಶಗಳಾದ ಬಿಂಬ ಕಲ್ಪನೆ, ಮಾನಸಿಕ ಚಿತ್ರಣಗಳನ್ನು ಭ್ರಮಾ ಲೋಕವಾಗಿ ನೇರವಾಗಿ ವೀಕ್ಷಿಸಲು ಸಾಧ್ಯವಿಲ್ಲ.

• ಯಾವುದೇ ಜೀವಿಯು ಸಾಮಾಜಿಕ ವರ್ತನೆಯನ್ನು ಅಧ್ಯಯನ ಮಾಡಲು ಈ ವಿಧಾನ ಸೂಕ್ತ.

• ಅವಲೋಕನಕಾರನಿಗೆ ಪೂರ್ವಗ್ರಹಗಳ ಪ್ರಭಾವ ಬೀರುವ ಸಾಧ್ಯತೆ ಹೆಚ್ಚು.

• ಬಾಹ್ಯ ಪರಿಸರವನ್ನು ನಿಯಂತ್ರಿಸದೇ ಅವಲೋಕಿಸಬೇಕಾಗಿರುವುದರಿಂದ ಘಟನೆಗಳು ಸಹಜವಾಗಿ ಸಂಭವಿಸುವ ವರ್ತನೆಗೆ ಕಾಯಬೇಕು.


Scanned Copy : Yes


Editable Text : No


Password Protected : No


Image Available : Yes


Download Link Available : Yes


File size Reduced : No


Password : No


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಶೈಕ್ಷಣಿಕ ಮನೋವಿಜ್ಞಾನ : ಶೈಕ್ಷಣಿಕ ಮನೋವಿಜ್ಞಾನದ ಪ್ರಮುಖ ವಿಧಾನಗಳು

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.