Sunday, August 28, 2022

ನ್ಯೂಟನ್ ನ ಚಲನೆಯ ನಿಯಮಗಳು (Newton's laws of motion)

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Sunday, August 28, 2022

ಶೀರ್ಷಿಕೆ: ನ್ಯೂಟನ್ ನ ಚಲನೆಯ ನಿಯಮಗಳು (Newton's laws of motion)



(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಫೈಲ್ ಭಾಷೆ: ಕನ್ನಡ/ಇಂಗ್ಲಿಷ್

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

💧ನ್ಯೂಟನ್ ನ ಚಲನೆಯ ನಿಯಮಗಳು💧 (Newton's laws of motion) ♠ 

 👇🏻👇🏻👇🏻👇🏻👇🏻👇🏻👇🏻👇🏻👇?


ಒಂದು ವಸ್ತುವಿನ ಸ್ಥಾಯಿಸ್ಥಿತಿಯನ್ನಾಗಲಿ ಅಥವಾ ಚಲನೆಯನ್ನಾಗಲಿ ಉಂಟುಮಾಡಲು ಬೇಕಾಗುವ ಚಾಲಕಬಲವನ್ನು ತಿಳಿಸುವ ಭೌತವಿಜ್ಞಾನ ಭಾಗಕ್ಕೆ ಗತಿವಿಜ್ಞಾನ ಎಂದು ಹೆಸರು. ಇದನ್ನೇ ಚಲನಶಾಸ್ತ್ರವೆಂದು ಕರೆಯುತ್ತಾರೆ. ಗೆಲಿಲಿಯೋ ಗೆಲಿಲಿ (1564-1642) ಪ್ರಯೋಗಗಳ ಆಧಾರದಿಂದ ಅಸ್ಪಷ್ಟವಾಗಿ ಪ್ರತಿಪಾದಿಸಿದ್ದ ಚಲನೆಗಳ ಸ್ವರೂಪಗಳನ್ನು ಕ್ರೋಢೀಕರಿಸಿ ಅತ್ಯಂತ ಮಹತ್ವದ "ಪ್ರಿನ್ಸಿಪಿಯಾ ಮ್ಯಾತ್ ಮೆಟಿಕಾ ಫಿಲಾಸಫಿಯೇ ನ್ಯಾಚುರಾಲಿಸ್"(1686) ಎಂಬ ಗ್ರಂಥವನ್ನು ಸರ್ ಐಸಾಕ್ ನ್ಯೂಟನ್ ರಚಿಸಿದ.ಇದರ ಮೊದಲನೇ ಭಾಗದಲ್ಲಿ ಗೆಲಿಲಿಯೋ ಪ್ರತಿಪಾದಿಸಿದ್ದ ನಿಯಮಗಳನ್ನು ಹೆಚ್ಚು ನಿಖರವಾಗಿ ನ್ಯೂಟನ್ ಪ್ರತಿಪಾದಿಸಿದ್ದಾನೆ. ಆಧಾರ ಸೂತ್ರವು, ಸ್ವತಃ ಸಿದ್ಧ ಪ್ರಮಾಣ(Axiom) ವೆಂದು ವಿಶ್ವ ವಿಖ್ಯಾತವಾಗಿರುವ ಚಲನೆಯ ಮೂರು ನಿಯಮಗಳನ್ನು ಪ್ರತಿಪಾದಿಸಿದ ಕೀರ್ತಿ ನ್ಯೂಟನ್ ಗೆ ಸಲ್ಲುತ್ತದೆ. 


🌸 ನ್ಯೂಟನ್ ಚಲನೆಯ ಪ್ರಥಮ ನಿಯಮ : 


🍀ಜಡತ್ವ-ಬಲ 

"ಯಾವುದೇ ವಸ್ತುವಿನ ಮೇಲೆ ಬಾಹ್ಯದಿಂದ ಪ್ರೇರಣಾ ಕ್ರಿಯೆಯಾಗಲಿ, ರೋಧ ಕ್ರಿಯೆಯಾಗಲಿ ಇಲ್ಲದಿದ್ದಲ್ಲಿ ಅದು ಸದಾ ಕಾಲ ನಿಶ್ಚಲ ಸ್ಥಿತಿಯಲ್ಲಿಯೇ ಉಳಿಯುವುದು ಅಥವಾ ಸದಾಕಾಲ ವೇಗದೊಂದಿಗೆ ಸರಳರೇಖಾ ಚಲನೆ ಹೊಂದಿರುವುದು ".


🍀ಒಂದು ಕಾಯದ ಮೇಲೆ ಬಲ ಪ್ರಯೋಗವಾದಾಗ ಮಾತ್ರ ಅದು ತನ್ನ ಸ್ಥಾನವನ್ನು ಬದಲಿಸುತ್ತದೆ. ಇಲ್ಲದಿದ್ದರೆ, ಅದು ತಾನಿದ್ದ ಸ್ಥಾನದಲ್ಲಿಯೂ ಇರುತ್ತದೆ.


🍀ಅಂದರೆ ಇಲ್ಲಿ ಯಾವುದೇ ಒಂದು ವಸ್ತು ಬಲಾತ್ಕರಿಸಲ್ಪಡದೆ ಇದ್ದರೆ ಎಂದರೆ ಫಲಿತ ಬಲ ಸೊನ್ನೆ ಆದರೆ ತನ್ನ ವಿಶ್ರಾಂತ ಸ್ಥಿತಿ ಅಥವಾ ಸರಳರೇಖೆಯ ಏಕರೀತಿಯ ಚಲನೆಯ ಸ್ಥಿತಿಯಲ್ಲೆ ಮುಂದುವರೆಯುತ್ತದೆ. ಅಂದರೆ ಬಲಪ್ರಯೋಗವಾಗದ ಹೊರತು ಕೆಲಸ ಸಾಧ್ಯವಿಲ್ಲ.


🌼ಅನ್ವಯಗಳು :-


⭐️ಚಲಿಸುತ್ತಿರುವ ಬಸ್ಸ್ ನಲ್ಲಿನ ಪ್ರಯಾಣಿಕರು ಚಾಲಕ ಬ್ರೇಕ್ ಒತ್ತಿದಾಗ ಮುಂದಕ್ಕೆ ಮುಗ್ಗರಿಸುತ್ತಾರೆ.

⭐️ರತ್ನಗಂಬಳಿಯನ್ನು ತೂರಿದಾಗ ಧೂಳಿನ ಕಣಗಳು ಹೊರ ಬರುವದು.




🌸ನ್ಯೂಟನ್ ಚಲನೆಯ ದ್ವಿತೀಯ ನಿಯಮ 


🍀ಒಂದು ಕಾಯದ ವೇಗೋತ್ಕರ್ಷವು ಬಲಕ್ಕೆ ನೇರ ಅನುಪಾತದಲ್ಲಿ ಹಾಗೂ ರಾಶಿಗೆ ವಿಲೋಮ ಅನುಪಾತದಲ್ಲಿ ಇರುತ್ತದೆ.


🍀"ಯಾವುದೇ ಕಾಯದ ವೇಗೋತ್ಕರ್ಷವು ಆ ಕಾಯದ ಮೇಲೆ ಪ್ರಯೋಗವಾದ ಬಲದ ದಿಕ್ಕಿನಲ್ಲಿ ಬಲಕ್ಕೆ ನೇರ ಅನುಪಾತದಲ್ಲಿಯೂ ಕಾಯದ ರಾಶಿಗೆ ವಿಲೋಮ ಅನುಪಾತದಲ್ಲಿಯೂ ಇರುತ್ತದೆ".


🍀ವಸ್ತುವಿನ ಮೇಲೆ ಪ್ರಯೋಗಿಸಿದ ಬಲವು ಹೆಚ್ಚಿದಷ್ಟೂ ಅದರ ವೇಗವೂ ಹೆಚ್ಚುವುದು. ವೇಗವನ್ನು ಕಡಿಮೆ ಮಾಡಲು ಎದುರು ಬಲವನ್ನು ಪ್ರಯೋಗಿಸಬೇಕು.


🍀ಎರಡನೆಯ ನಿಯಮವನ್ನು ಆಧರಿಸಿಕೊಂಡು ಬಲದ ಪ್ರಮಾಣವನ್ನು ಅಳೆಯಬಹುದು. ಆರೋಹಿತ ಬಲದ ಪ್ರಮಾಣವನ್ನು ಅಳೆಯಲು ವಸ್ತುವಿನ ರಾಶಿ ಹಾಗೂ ವೇಗ, ಎರಡೂ ಮುಖ್ಯವಾಗುತ್ತದೆ.


🍀ದ್ರವ್ಯೇಗ ಎಂದರೆ ಚಲಿಸುವ ವಸ್ತುವಿನ ದ್ರವ್ಯ ಮತ್ತು ಅದರ ವೇಗದ ಗುಣಲಬ್ಧವೆಂದು ವ್ಯಾಖ್ಯಾನಿಸಲಾಗಿದೆ .

ಒಂದು ಕಾಯದ ವೇಗೋತ್ಕರ್ಷವು ಬಲಕ್ಕೆ ನೇರ ಅನುಪಾತದಲ್ಲಿ ಹಾಗೂ ರಾಶಿಗೆ ವಿಲೋಮ ಅನುಪಾತದಲ್ಲಿ ಇರುತ್ತದೆ.


🌼ಅನ್ವಯಗಳು:


⭐️ಗ್ರಹಗಳ ಚಲನೆಯಲ್ಲಿ, 

⭐️ಕ್ರಿಕೇಟ್ ಆಟದಲ್ಲಿ, 

⭐️ಬಾವಿಯಿಂದ ನೀರು ಎತ್ತುವಾಗ.


🌸ನ್ಯೂಟನ್ ಚಲನೆಯ ತೃತೀಯ ನಿಯಮ 


🍀Action & Reaction 

Always Equal & Opposite.


"ಪ್ರತಿಯೊಂದು ಕ್ರಿಯೆಗೆ ವಿರುದ್ಧವಾಗಿ ಸಮವಾದ ಪ್ರತಿಕ್ರಿಯೆಯೊಂದು ಯಾವಾಗಲೂ ಇರುತ್ತದೆ. ಅಥವಾ ಎರಡು ಕಾಯಗಳ ಒಂದರ ಮೇಲೊಂದು ಮಾಡುವ ಪರಸ್ಪರ ಕ್ರಿಯೆಗಳು ಯಾವಾಗಲೂ ಸಮವಾಗಿರುತ್ತದೆ ಮತ್ತು ವಿರುದ್ಧ ಭಾಗಗಳತ್ತ ನಿರ್ದೇಶಿತವಾಗಿರುತ್ತವೆ".


🌼ಅನ್ವಯಗಳು

⭐️ಈಜುಗಾರ ಕೈಯಿಂದ ನೀರನ್ನು ಹಿಂದಕ್ಕೆ ತಳ್ಳುತ್ತಾನೆ. ಅವನು ಮುಂದಕ್ಕೆ ಚಲಿಸುತ್ತಾನೆ.  


⭐️ಬಂದೂಕಿನಿಂದ ಗುಂಡು ಹಾರಿಸಿದಾಗ ಬಂದೂಕು ಹಿಮ್ಮುಖವಾಗಿ ಕೊಂಚ ಚಲಿಸುತ್ತದೆ. 


⭐️ ನಮ್ಮ ಕೈಯಿಂದ ಗೋಡೆಯನ್ನು ಒತ್ತಿದರೆ, ಗೋಡೆಯು ನಮ್ಮ ಕೈಯನ್ನು ಒತ್ತುವುದು. 


⭐️ನಾವು ಹೆಚ್ಚು ಒತ್ತಿದಷ್ಟು ನಮ್ಮ ಕೈ ನೋಯುವುದಕ್ಕೆ ಗೋಡೆಯ ಪ್ರತಿಬಲವೇ


⭐️ರಾಕೆಟ್ ಉಡಾವಣೆಯಲ್ಲಿ, 


⭐️ಮಾನವನ ಚಲನೆಯಲ್ಲಿ, 


⭐️ದೋಣಿಗಳ ಚಲನೆಯಲ್ಲಿ.

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ನ್ಯೂಟನ್ ನ ಚಲನೆಯ ನಿಯಮಗಳು (Newton's laws of motion)

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.