Friday, December 9, 2022

ಭಾರತದ ಪ್ರಾಚೀನ ನಾಗರಿಕತೆಗಳು.

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, December 9, 2022

ಶೀರ್ಷಿಕೆ: ಭಾರತದ ಪ್ರಾಚೀನ ನಾಗರಿಕತೆಗಳು.



(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ವಲಸೆಯ ಬದುಕು ಸ್ಥಿರಗೊಂಡಾಗ


ಪ್ರಾಕ್ತನಶಾಸ್ತ್ರಜ್ಞರು ಕೆಲವು ಸ್ಥಳಗಳಲ್ಲಿ ಗುಡಿಸಲು ಹಾಗೂ ಮನೆಯ ಕುರುಹುಗಳನ್ನು ಪತ್ತೆಹಚ್ಚಿದ್ದಾರೆ. ಇವತ್ತಿನ ಕಾಶ್ಮೀರದಲ್ಲಿನ ಬರ್ಜುಹೋಂನಲ್ಲಿ ನೆಲಮನೆಯನ್ನು ಗುರುತಿಸಿದ್ದಾರೆ. ಅಂದಿನ ಜನ ಭೂಮಿಯೊಳಗೆ ರಂಧ್ರದಂತೆ ಗುಂಡಿಯನ್ನು ತೋಡಿಕೊಂಡು ಅದರೊಳಗೆ ಬದುಕುತ್ತಿದ್ದರು. ಗುಂಡಿಯೊಳಗೆ ಹೋಗಲು ಮೆಟ್ಟಿಲುಗಳಿದ್ದವು. ಚಳಿ ಹಾಗೂ ಕ್ರೂರ ಮೃಗಗಳಿಂದ ರಕ್ಷಿಸಿಕೊಳ್ಳಲು ಅವರು ಹೀಗೆ ಮಾಡಿಕೊಂಡಿದ್ದರು. ಇಂತಹ ಗೂಡುಗಳ ಹೊರಗೂ ಹಾಗೂ ಒಳಗೂ ಮಣ್ಣಿನ ಕುಡಿಕೆಗಳು ದೊರೆತಿವೆ. ಇವುಗಳನ್ನು ವಾತಾವರಣಕ್ಕೆ ಅನುಗುಣವಾಗಿ ಗೂಡುಗಳ ಹೊರಗೆ ಹಾಗೂ ಒಳಗೆ ಅಡುಗೆ ಮಾಡಿಕೊಳ್ಳಲು ಉಪಯೋಗಿಸುತ್ತಿದ್ದರು.


ಇರಾನ್‌ಗೆ ಸಾಗಿಹೋಗುವ ಮಾರ್ಗವಾದ ಬೋಲಾನ್‌ಪಾಸಿನ ಫಲವತ್ತಾದ ಮೈದಾನದ ಸಮೀಪದಲ್ಲಿ * ಮೆಹರ್‌ಗ‌ ಎಂಬ ನೆಲೆಯಿದೆ. ಮೆಹರ್‌ಗರ್‌ನ ಜನ ಬಾರಿ ಮತ್ತು ಗೋಧಿಯನ್ನು ಬೆಳೆಯುವುದನ್ನು ಹಾಗೂ ಕುರಿ ಮತ್ತು ಮೇಕೆ ಸಾಕುವುದನ್ನು ಕಲಿತಿದ್ದರು. ಇದು ಪ್ರಾಕ್ತನಶಾಸ್ತ್ರಜ್ಞರ ಗಮನಕ್ಕೆ ಬಂದಿರುವ ಮೊಟ್ಟಮೊದಲ ಹಳ್ಳಿ. ಮೆಹರ್‌ಗರ್‌ನ ಜನ ಮನೆಗಳಲ್ಲಿ ವಾಸಿಸುತ್ತಿದ್ದರು. ಕೆಲವು ಮನೆಗಳು ನಾಲ್ಕು ಹಾಗೂ ಹೆಚ್ಚಿನ ಕೊಠಡಿಗಳನ್ನು ಹೊಂದಿದ್ದವು. ಪ್ರಾಣಿಗಳ ಪಳೆಯುಳಿಕೆಗಳಲ್ಲದೆ ಹಲವು ಸಮಾಧಿಗಳ ನೆಲೆಗಳೂ ಇಲ್ಲಿ ದೊರೆತಿವೆ. ಮನುಷ್ಯರ ಜೊತೆಯಲ್ಲಿಯೇ ಪ್ರಾಣಿಗಳನ್ನು ಇಲ್ಲಿ ಹೂಳುತ್ತಿದ್ದರು.

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಮೊದಲ ಹಂತದ ನಗರೀಕರಣ


ಸುಮಾರು 150 ವರ್ಷಗಳ ಹಿಂದೆ ಪಂಜಾಬಿನ ಸಿಂಧೂ ಕಣಿವೆ ಪ್ರದೇಶದಲ್ಲಿ ರೈಲಿನ ಹಳಿಗಳನ್ನು ಜೋಡಿಸುವಾಗ ಅಲ್ಲಿನ ಇಂಜಿನೀಯರುಗಳು ಹರಪ್ಪದ ಪ್ರಾಚೀನ ನೆಲೆಗಳನ್ನು ಕಂಡರು. ಅವರಿಗೆ ಅದೊಂದು ಅತ್ಯುತ್ತಮ ಇಟ್ಟಿಗೆಗಳಿಂದ ಕೂಡಿದ ದಿಣ್ಣೆಯಂತೆ ಕಂಡಿತು. ಅದರಲ್ಲಿ ಲಭ್ಯವಾದ ಇಟ್ಟಿಗೆಗಳನ್ನು ಅವರು ರೈಲು ಹಳಿಯ ನಿರ್ಮಾಣದಲ್ಲಿ ಬಳಸಿಕೊಂಡರು.


ಈ ರೀತಿಯಾಗಿ ಅಲ್ಲಿ ಹುದುಗಿ ಹೋಗಿದ್ದ ಅನೇಕ ಕಟ್ಟಡಗಳು ಪತ್ತೆಯಾದವು. ನಂತರದ ದಿನಗಳಲ್ಲಿ


ಪ್ರಾಕ್ತನಶಾಸ್ತ್ರಜ್ಞರು ಇದರ ಬಗ್ಗೆ ವೈಜ್ಞಾನಿಕ ಸಂಶೋಧನೆ ಕೈಗೊಂಡರು, ಅದೊಂದು ಪ್ರಾಚೀನ ನಗರವೆಂದು


ಅವರಿಗೆ ಮನವರಿಕೆಯಾಯಿತು. ಅಲ್ಲಿ ಸುತ್ತಲು ಕಂಡುಬಂದ ಮತ್ತಿತರ ನೆಲೆಗಳಿಗೂ ಈ ಮೊದಲು ಸಿಕ್ಕ


ನೆಲೆಗಳಿಗೂ ಸಾಮ್ಯತೆ ಇದ್ದ ಕಾರಣ ಅವುಗಳನ್ನು ಹರಪ್ಪದ ನಾಗರಿಕತೆಯೆಂದು ಕರೆಯಲಾಯಿತು. ಸಿಂದ್


ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ ಸಿಂಧು ಹಾಗೂ ಅದರ ಉಪನದಿಗಳ ಕಣಿವೆ ಪ್ರದೇಶದಲ್ಲಿ ಶೋಧಗೊಂಡ


ಈ ನೆಲೆಗಳೆಲ್ಲವು ಸುಮಾರು 4600 ವರ್ಷಗಳಷ್ಟು ಪುರಾತನ ಕಾಲದ್ದೆಂದು ಭಾವಿಸಲಾಗಿದೆ.

ನಗರಗಳ ವಿಶೇಷತೆ


ಹರಪ್ಪದ ನಗರಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಭಾಗವನ್ನು ಕಾಣಬಹುದು. ಪಶ್ಚಿಮದ ಭಾಗವು ಕಿರಿದಾಗಿದ್ದು ಅದು ಎತ್ತರದಲ್ಲಿದೆ. ಇದನ್ನು ಪ್ರಾಕ್ತನಶಾಸ್ತ್ರಜ್ಞರು ಕೋಟೆಯೆಂದಿದ್ದಾರೆ. ಸಾಮಾನ್ಯವಾಗಿ ಪೂರ್ವದ ಭಾಗವು ವಿಶಾಲವಾಗಿದ್ದು ಅದು ತಗ್ಗು ಪ್ರದೇಶದಲ್ಲಿದೆ. ಇದನ್ನು ಕೆಳಗಿನ ಗ್ರಾಮವೆಂದಿದ್ದಾರೆ. ಪ್ರತಿಯೊಂದು ಭಾಗದ ಸುತ್ತಲು ಸುಟ್ಟ ಇಟ್ಟಿಗೆಗಳ ಗೋಡೆಯೊಂದನ್ನು ಕಟ್ಟಿದ್ದರು. ಇಟ್ಟಿಗೆಗಳನ್ನು ಪರಸ್ಪರ ಬೆಸೆಯುವ ರೀತಿಯಲ್ಲಿ ಅಳವಡಿಸಿದ್ದರಿಂದ ಗೋಡೆಯು ಹೆಚ್ಚು ಭದ್ರವಾಗಿತ್ತು.

ಕೋಟೆಯ ಒಳಗೆ ಗಮನಾರ್ಹವಾದ ಕಟ್ಟಡಗಳಿದ್ದವು. ಇನ್ನೊಂದು ಪಟ್ಟಣವಾದ


ಮೊಹೆಂಜೋದಾರೊವಿನಲ್ಲಿ ಒಂದು ಕೊಳವನ್ನು ಕಟ್ಟಲಾಗಿತ್ತು. ಇದನ್ನು ವಿದ್ವಾಂಸರು ಸ್ನಾನದ ಕೊಳವೆಂದಿದ್ದಾರೆ. ಇದನ್ನು ಇಟ್ಟಿಗೆಗಳಿಂದ ಕಟ್ಟಿದ್ದಾರೆ. ಈ ಮೂಲಕ ಕೊಳದಿಂದ ನೀರಿನ ಸೋರಿಕೆ ಆಗದಂತೆ ನಿರ್ಮಿಸಿದ್ದಾರೆ. ಇದರ ಎರಡು ಕಡೆಗಳಲ್ಲಿ ಇಳಿಯುವ ಮೆಟ್ಟಿಲುಗಳಿದ್ದು ಸುತ್ತಲು ಕೊಠಡಿಗಳಿವೆ. ಬಹುಶಃ ಇದರ ನೀರಿನ ಪೂರೈಕೆಯು ಬಾವಿಯಿಂದ ಆಗುತಿತ್ತು ಹಾಗೂ ಬಳಕೆಯ ನಂತರ ನೀರನ್ನು ಹೊರಗೆ ಬಿಡಲಾಗುತ್ತಿತ್ತು. ಪ್ರಾಯಶಃ ಈ ಕೊಳದಲ್ಲಿ ಬಹು ಮುಖ್ಯ ವ್ಯಕ್ತಿಗಳು ವಿಶೇಷವಾದ ಸಂದರ್ಭಗಳಲ್ಲಿ ಸ್ನಾನ ಮಾಡುತ್ತಿದ್ದಿರಬಹುದು. ಇತರೆ ನಗರಗಳಾದ ಕಾಲಿಬಂಗನ್ ಮತ್ತು ಲೋಥಾಲ್‌ಗಳಲ್ಲಿ ಬೆಂಕಿಯ ಒಲೆಗಳು ಕಂಡುಬಂದಿವೆ. ಮೊಹೆಂಜೋದಾರೊ, ಹರಪ್ಪ ಹಾಗೂ ಲೋಥಾಲದಲ್ಲಿ ಸುವ್ಯವಸ್ಥಿತವಾದ ಸಂಗ್ರಹಣೆಯ


ಕೊಠಡಿಗಳನ್ನು ನಿರ್ಮಿಸಿದ್ದರು.


ನಗರ ಯೋಜನೆ


ನಗರದ ತಳ ಪ್ರದೇಶದಲ್ಲಿರುವ ಕೆಳಗಿನ ಗ್ರಾಮವು ಜನವಸತಿ ಜಾಗವಾಗಿತ್ತು. ಅದನ್ನು ಅತ್ಯಂತ ವ್ಯವಸ್ಥಿತವಾದ ರೀತಿಯಲ್ಲಿ ರಚಿಸಲಾಗಿತ್ತು. ಕ್ರಮಬದ್ಧವಾಗಿ ನಿರ್ಮಿಸಲಾದ ಮನೆಗಳನ್ನು, ರಸ್ತೆಗಳನ್ನು ಹಾಗೂ ಚರಂಡಿಗಳನ್ನು ನಾವು ಇಲ್ಲಿ ಕಾಣಬಹುದು. ಸಾಮಾನ್ಯವಾಗಿ ಜನರು ಒಂದು ಅಥವಾ ಎರಡು ಅಂತಸ್ತಿನ kpsc2019

ಮನೆಯನ್ನು ಹೊಂದಿದ್ದರು. ಮನೆಗಳು ಇಟ್ಟಿಗೆಗಳಿಂದ ಕಟ್ಟಲ್ಪಟಿದ್ದು, ಅವುಗಳ ಗೋಡೆಯು ಭದ್ರವಾಗಿದ್ದವು. ಒಳಾಂಗಣದ ಸುತ್ತ ಕೊಠಡಿಗಳು ಇದ್ದವು. ಮನೆಯ ದ್ವಾರವು ರಸ್ತೆಯ ಮಗ್ಗಲಿನಲ್ಲಿದ್ದವು. ಯಾವ ಕಿಟಕಿಗಳೂ ಕೂಡ ರಸ್ತೆಗೆ ಮುಖಮಾಡಿರಲಿಲ್ಲ. ಮನೆಗಳು ಸ್ನಾನದ ಕೊಠಡಿಗಳನ್ನು ಹೊಂದಿದ್ದವು. ಕೆಲವೊಂದರಲ್ಲಿ ಬಾವಿಗಳಿದ್ದು ಅವುಗಳಿಂದ ನೀರಿನ ಪೂರೈಕೆಯಾಗುತ್ತಿತ್ತು. ನಗರಗಳು ಒಳಚರಂಡಿ ವ್ಯವಸ್ಥೆಯನ್ನು ಹೊಂದಿದ್ದವು. ಇಟ್ಟಿಗೆಯಿಂದ ನಿರ್ಮಿಸಲಾಗಿದ್ದ ಚರಂಡಿಯನ್ನು ಚಪ್ಪಡಿಗಳಿಂದ ಮುಚ್ಚಲಾಗಿತ್ತು. ಮನೆಯ ಮೋರಿಗಳನ್ನು ಹೊರಗಿನ ಚರಂಡಿಗೆ ಹೊಂದಿಸಲಾಗಿತ್ತು. ಮನೆ ಬಳಕೆಯ ಹಾಗೂ ಸ್ನಾನದಲ್ಲಿ ಬಳಸಿದ ಕಲುಷಿತ ನೀರು ಮೋರಿಯ ಮೂಲಕ ಚರಂಡಿಗೆ ಬಂದು ಸೇರುತ್ತಿದ್ದವು. ಚರಂಡಿಗಳನ್ನು ಕಾಲದಿಂದ ಕಾಲಕ್ಕೆ ಶುಚಿಯಾಗಿಡಲು ಅಲ್ಲಲ್ಲಿ ರಂಧ್ರಗಳನ್ನು ನಿರ್ಮಿಸಿದ್ದರು.


ನಗರ ಜೀವನ


ಕಟ್ಟಡಗಳನ್ನು ಹೊರತುಪಡಿಸಿ ದೊರೆತಿರುವ ವಸ್ತುಗಳಲ್ಲಿ ನಾವು ಲೋಹ ಹಾಗೂ ಬೆಲೆಬಾಳುವ ಹರಳುಗಳನ್ನು ಕಾಣುತ್ತೇವೆ. ಅತಿ ಹೆಚ್ಚಿನದಾಗಿ ದೊರೆತಿರುವ ವಸ್ತುಗಳಲ್ಲಿ ಮಣಿಗಳನ್ನು ಹಾಗೂ ಮುದ್ರೆಗಳನ್ನು ನಾವು ಕಾಣಲು ಸಾಧ್ಯ. ನಗರ ವ್ಯವಸ್ಥೆಯು ಇದ್ದ ರೀತಿಯು ಅಲ್ಲಿ ಇದ್ದ ಆಡಳಿತ ವರ್ಗವೊಂದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಬೆಲೆಬಾಳುವ ಲೋಹಗಳನ್ನು, ಹರಳುಗಳನ್ನು ಮತ್ತು ಆಭರಣಗಳನ್ನು ಇವರು ಬಳಸಿರಬೇಕು. ಮಣಿಗಳನ್ನು ಜನಸಾಮಾನ್ಯರು ಬಳಸಿರಬೇಕು. ಮುದ್ರೆಗಳ ಮೇಲೆ ಇಲ್ಲಿಯವರೆಗೂ ಅರಿಯಲಾಗದ ಲಿಪಿಯಿದೆ. ಇದರಿಂದ ಅಕ್ಷರ ಕಲಿತಿದ್ದ ಜನಗಳಿಗೇನು ಕೊರತೆಯಿರಲಿಲ್ಲ ಎಂದೆನ್ನಬಹುದು. ಹೀಗಾಗಿ ಸಾವಿರಾರು ಮುದ್ರೆಗಳ ಮೇಲೆ ಲಿಪಿಗಳನ್ನು ಮೂಡಿಸಲು ಸಾಧ್ಯವಾಯಿತು.


ಹರಪ್ಪ ಸಂಸ್ಕೃತಿಯ ಜನ ಕೃಷಿ ಮತ್ತು ವ್ಯಾಪಾರವನ್ನು ಅವಲಂಬಿಸಿದ್ದರು. ಗೋಧಿ, ಬಾರಿ, ಕಾಳು ಹಾಗೂ ಸಾಸಿವೆ ಇವರ ಮುಖ್ಯ ಬೆಳೆಯಾಗಿತ್ತು. ಹತ್ತಿಯನ್ನು ಬೆಳೆದು ಉಡುಪು ತಯಾರಿಸುವುದನ್ನು ಸಹ ಇವರು ಕಲಿತಿದ್ದರು. ಹಲವು ನಗರಗಳು ನದಿಯ ದಂಡೆಯ ಮೇಲೆ ಇದ್ದ ಕಾರಣ ಅವರು ನೀರಾವರಿ ಬಲ್ಲವರಾಗಿದ್ದರೆನ್ನಬಹುದು. ಇವರು ಡುಬ್ಬದ ಗೂಳಿ, ದನಗಳು, ಎಮ್ಮೆ, ಕುರಿ, ಮೇಕೆ, ನಾಯಿ ಹಾಗೂ ಕೋಳಿಗಳ ಪಶುಸಂಗೋಪನೆಯಲ್ಲಿ ತೊಡಗಿದ್ದರು. ಎತ್ತುಗಳನ್ನು ಹೊರೆ ಒಯ್ಯಲು ಬಳಸಲಾಗುತ್ತಿತ್ತು. ಕೃಷಿಯ ಜೊತೆಯಲ್ಲಿ ವ್ಯಾಪಾರ ವಾಣಿಜ್ಯಗಳು ಪ್ರಮುಖ ಸ್ಥಾನವನ್ನು ಪಡೆದುಕೊಂಡಿದ್ದವು. ಇಲ್ಲಿನ ನಗರಗಳು ಗ್ರಾಮೀಣ ಪ್ರದೇಶಗಳ ಜೊತೆಯಲ್ಲಿ ವ್ಯಾಪಾರ ಸಂಪರ್ಕ ಹೊಂದಿದ್ದವು. ಬಲೂಚಿಸ್ತಾನ, ಸೌರಾಷ್ಟ್ರ ಹಾಗೂ ದಖನ್ ಪ್ರದೇಶಗಳು ಇವುಗಳಲ್ಲಿ ಕೆಲವು, ಮೆಸಪಟೋಮಿಯಾದಲ್ಲಿ ಲಭ್ಯವಾಗಿರುವ ಸಿಂಧೂಕಣಿವೆ ನಾಗರಿಕತೆಗೆ ಸಂಬಂಧಿಸಿದ ಹಲವು ಮುದ್ರೆಗಳು ಅವುಗಳು ಪರಸ್ಪರ ಹೊಂದಿದ್ದ ಸಂಬಂಧವನ್ನು ಸೂಚಿಸುತ್ತವೆ.


ನಗರಗಳ ಅವನತಿ


ಸುಮಾರು 4000 ವರ್ಷಗಳ ಹಿಂದೆ ಇಲ್ಲಿನ ವ್ಯವಸ್ಥೆ ಬದಲಾಗತೊಡಗಿತು. ಅವನತಿಗೆ ಪ್ರಾಕೃತಿಕ ಕಾರಣಗಳೂ ಸೇರಿದಂತೆ ವಿವಿಧ ಕಾರಣಗಳಿದ್ದವು. ಹರಪ್ಪದ ಕೋಟೆಯ ಸುತ್ತಲಿನ ಗೋಡೆಗಳನ್ನು ಮತ್ತಷ್ಟು ಭದ್ರಪಡಿಸಲಾಯಿತು. ಈ ನಗರದ ಕಡೆಯ ದಿನಗಳಲ್ಲಿ ಅದರ ಪಶ್ಚಿಮ ದ್ವಾರವನ್ನು ಸಂಪೂರ್ಣವಾಗಿ ಮುಚ್ಚಲಾಯಿತು. ಮೊಹೆಂಜೋದಾರೊವಿನ ವಿಶಾಲ ಕೋಣೆಗಳು ಈಗ ಕಿರಿದಾದವು. ಬೃಹತ್ ಕಟ್ಟಡಗಳು ಈಗ ಕುಟೀರಗಳಾದವು. ನಗರ ಯೋಜನೆಯಾಗಲಿ, ರಸ್ತೆ ಯೋಜನೆಯಾಗಲಿ ಈ ಸಂದರ್ಭದಲ್ಲಿ ವ್ಯವಸ್ಥಿತವಾಗಿ ಉಳಿಯಲಿಲ್ಲ.


ಚರಿತ್ರೆಕಾರರು ನಗರಗಳ ಅವನತಿಗೆ ಅನೇಕ ವಿವರಣೆಗಳನ್ನು ನೀಡಿದ್ದಾರೆ. ಕೆಲವರು ಬತ್ತಿಹೋದ ನದಿಗಳು, ದಿಕ್ಕು ಬದಲಾದ ನದಿಗಳು ಇದಕ್ಕೆ ಕಾರಣವೆಂದಿದ್ದಾರೆ. ಇನ್ನೂ ಕೆಲವರು ಕಾಡಿನ ನಾಶ ಇದಕ್ಕೆ ಕಾರಣವೆಂದಿದ್ದಾರೆ. ಪ್ರವಾಹಗಳಿಂದ ಜಲಾವೃತಗೊಂಡಿರುವುದು ಇದರ ನಾಶಕ್ಕೆ ಕಾರಣವಿರಬಹುದು. ಸಿಂಧೂ ಮತ್ತು ಪಶ್ಚಿಮ ಪಂಜಾಬಿನ ಕೆಲವು ನಿವೇಶನಗಳಲ್ಲಿನ ಜನರು ಆ ಪ್ರದೇಶವನ್ನೇ ಬಿಟ್ಟು ಪೂರ್ವ ಮತ್ತು ದಕ್ಷಿಣದ ಹೊಸ ಪ್ರದೇಶಗಳಿಗೆ ವಲಸೆ ಹೋಗಿರಬಹುದು. ಗುಜರಾತಿನಲ್ಲಿರುವ ಲೋಥಾಲ್‌ನ ನಗರದಲ್ಲಿ ಈ ನಾಗರಿಕತೆಯ ಪ್ರಕ್ರಿಯೆ ಇನ್ನೂ ಅನೇಕ ವರ್ಷಗಳು ಮುಂದುವರೆಯಿತು. ಏನೇ ಆಗಲಿ ಸಿಂಧೂ ನಾಗರಿಕತೆಯು ಪ್ರಾಚೀನ ಭಾರತೀಯರ ಪ್ರಬುದ್ಧತೆಗೆ ಸಾಕ್ಷಿಯಾಗಿದೆ. ವೇದಗಳ ಕಾಲ


ವೇದಗಳನ್ನು ರಚಿಸಿದವರು ಆರ್ಯರು. ಇವರು ದಕ್ಷಿಣ ರಷ್ಯಾದ ಯೂರಲ್ ಪರ್ವತದ ಇಳಿಜಾರು ಪ್ರದೇಶಗಳಲ್ಲಿದ್ದ ಆದಿ ಇಂಡೋ ಯುರೋಪಿಯನ್ ಬುಡಕಟ್ಟಿಗೆ ಸೇರಿದವರು. ಮಧ್ಯ ಏಷ್ಯಾದ ಮೂಲಕ ಇರಾನ್ ಪ್ರಸ್ಥಭೂಮಿಗೆ ಬಂದ ಈ ಬುಡಕಟ್ಟಿನ ಕೆಲವು ಗುಂಪುಗಳು ಆಫ್ಘಾನಿಸ್ತಾನವನ್ನು ದಾಟಿ ಪಂಜಾಬ್ ಪ್ರದೇಶಕ್ಕೆ ವಲಸೆ ಬಂದು ನೆಲೆಸಿದವು ಎಂದು ಭಾರತೀಯ ವಿದ್ಯಾಭವನವು ಪ್ರಕಟಿಸಿರುವ 'ದಿ ಹಿಸ್ಟರಿ ಅಂಡ್‌ ಕಲ್ಟರ್ ಆಫ್ ದಿ ಇಂಡಿಯನ್ ಖ್ಯಾತ ಪೀಪಲ್' ಪುಸ್ತಕಗಳ ಶ್ರೇಣಿಯಲ್ಲಿನ ಮೊದಲ ಸಂಪುಟದಲ್ಲಿ ಇತಿಹಾಸಕಾರ ಬಿ.ಕೆ. ಘೋಷ್‌ರವರು ಅಭಿಪ್ರಾಯ ಪಟ್ಟಿದ್ದಾರೆ. ಈ ಗುಂಪುಗಳು ಕಟ್ಟಿದ ಸಂಸ್ಕೃತಿಯನ್ನು ವೇದಗಳ ಆಧಾರದ ಮೇಲೆ ಅರ್ಥ ಮಾಡಿಕೊಂಡು ಅದನ್ನು ವೈದಿಕ ಸಂಸ್ಕೃತಿ ಎಂದು ಕರೆಯಲಾಗುತ್ತಿದೆ. ವೇದಗಳ ಕಾಲವನ್ನು ಸಾ.ಶ.ಪೂ. 1500 ರಿಂದ ಸಾ.ಶ.ಪೂ 700 ನಡುವಿನ ಅವಧಿ ಎಂದು ಗುರುತಿಸಲಾಗಿದೆ. ಇದನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಭಾಗ ಋಗೈದ ಕಾಲ ಅಥವಾ ಆರಂಭಿಕ ವೈದಿಕ ಕಾಲ. ಇದರ ಅವಧಿ ಸುಮಾರು ಸಾ.ಶ.ಪೂ. 1500 ರಿಂದ ಸಾ.ಶ.ಪೂ. 1000ದ ವರೆಗೆ, ಎರಡನೇ ಭಾಗ ಉತ್ತರ ಋಗೈದ ಕಾಲ ಅಥವಾ ನಂತರದ ವೈದಿಕ ಕಾಲ. ಇದರ ಅವಧಿ ಸುಮಾರು ಸಾ.ಶ.ಪೂ. 1000 ದಿಂದ 700. ಆದರೆ ವೇದಗಳು ಈ ಕಾಲಘಟ್ಟದಲ್ಲಿ ಬರವಣಿಗೆ ರೂಪದಲ್ಲಿ ರಚನೆಯಾಗಿರಲಿಲ್ಲ. ಇವು ಆರಂಭದಲ್ಲಿ ಮೌಖಿಕವಾಗಿ ಬೆಳೆದು ನಂತರದ ಕಾಲದಲ್ಲಿ ಸಾಕಷ್ಟು ಬದಲಾವಣೆಗಳೊಂದಿಗೆ ಬರಹ ರೂಪಕ್ಕೆ ಬಂದಿವೆ.


ವೇದಗಳು ನಾಲ್ಕು : ಋಗ್ವದ, ವೇದಗಳು ಪ್ರಕೃತಿ ಆರಾಧನೆ, ಸಾಮವೇದ, ಯಜುರ್‌ವೇದ ಮತ್ತು ಅಥರ್ವವೇದ. ಪ್ರಮುಖವಾಗಿ ಯಾಗ-ಯಜ್ಞಾದಿಗಳು, ಮಾಟವಿದ್ಯೆ ಮುಂತಾದವುಗಳ ಬಗೆಗಿನ ಸಂಗ್ರಹವಾಗಿವೆ. ಅವುಗಳನ್ನು 'ಸಂಹಿತೆ' ಎಂದೂ ಕರೆಯಲಾಗಿದೆ. ಪ್ರತಿಯೊಂದು ಸಂಹಿತೆಗೆ ಧಾರ್ಮಿಕ ಆಚರಣೆಗಳ ಬಗ್ಗೆ ವಿವರ ನೀಡುವಂತಹ 'ಬ್ರಾಹ್ಮಣ'ಗಳೆಂಬ ಪಠ್ಯಗಳಿವೆ. ಪ್ರತಿಯೊಂದು ಬ್ರಾಹ್ಮಣವೂ ಒಂದು 'ಅರಣ್ಯಕ' ಮತ್ತು 'ಉಪನಿಷತ್'ನಿಂದ ಕೂಡಿದೆ. ಅರಣ್ಯದಲ್ಲಿ ವಾಸಿಸುತ್ತಿದ್ದ ಋಷಿಗಳಿಗೆ ಅಗತ್ಯವಾದ 'ಅತೀಂದ್ರಿಯ' ಉಪದೇಶಗಳು (ಅರಣ್ಯಕದಲ್ಲಿದೆ. ಉಪನಿಷತ್ತುಗಳು ತತ್ವಜ್ಞಾನದ ಆಲೋಚನೆಯ ಕೃತಿಗಳಾಗಿವೆ. ಉಪನಿಷತ್ತುಗಳು ವೇದ ಕಾಲದ ಭಾರತೀಯರ ಬೌದ್ಧಿಕ ಪ್ರಬುದ್ಧತೆಗೆ ಸಾಕ್ಷಿಗಳಂತಿವೆ.


ಋಗ್ವದ ಕಾಲ


ವೇದಗಳಲ್ಲಿ ಋಗ್ವದ ಮೊದಲಿನದು. ಅದರ ಭಾಷೆ, ಅದರಲ್ಲಿ ಬರುವ ಭೌಗೋಳಿಕ ಮತ್ತು ಸಾಮಾಜಿಕ ಸನ್ನಿವೇಶಗಳು ಇದನ್ನು ಪುಷ್ಟಿಕರಿಸುತ್ತವೆ. ಋಗ್ವದದಲ್ಲಿ 1028 ಸೂಕ್ತ ಅಥವಾ ಸ್ತುತಿಗೀತೆಗಳಿದ್ದು, ಅವು 10 ಮಂಡಲಗಳಲ್ಲಿ ವಿಂಗಡಣೆಯಾಗಿವೆ. ಇವೆಲ್ಲವೂ ಒಂದೇ ಕಾಲಕ್ಕೆ ರಚನೆಯಾದವುಗಳಲ್ಲ. ಋಗ್ವದದ ಪ್ರಾರಂಭಿಕ ಪಠ್ಯ ಮತ್ತು ಅಂತಿಮ ಪಠ್ಯ ಜೋಡಣೆಯ ನಡುವೆ 500 ವರ್ಷಗಳಷ್ಟು ದೀರ್ಘಕಾಲವಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ.


ಋಗ್ವದದ ಭಾಷೆ ಇಂಡೋ-ಯೂರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿದೆ. ಋಗ್ವದದಲ್ಲಿ ಪ್ರಸ್ತಾಪವಾಗಿರುವ ಭೌಗೋಳಿಕ ಎಲ್ಲೆ ಆಫ್ಘಾನಿಸ್ತಾನದ ಹಿಂದೂ ಕುಶ್ ಪರ್ವತಗಳಿಂದ, ಗಂಗಾ-ಯಮುನಾ ದೋ-ಅಬ್ (ಎರಡು ನದಿಗಳ ಮಧ್ಯದ ಪ್ರದೇಶ – ಈಗಿನ ಉತ್ತರ ಪ್ರದೇಶ ರಾಜ್ಯದ


ಸಿಂಧನ ಉತ್ತರ ಗಡಿಗಳ


ಪಶ್ಚಿಮ ಭಾಗದ)


ನಡುವಿನದ್ದು ಎಂದು ಪರಿಗಣಿಸಲಾಗಿದೆ.


ಸಾಮಾಜಿಕ ವ್ಯವಸ್ಥೆ: ಭಾರತಕ್ಕೆ ಬಂದ ಆರಂಭದಲ್ಲಿ ಆರ್ಯರಲ್ಲಿದ್ದ ಪ್ರಮುಖ ಸಾಮಾಜಿಕ ವರ್ಣಗಳೆಂದರೆ ಶ್ರೀಮಂತರು, ಪುರೋಹಿತರು ಮತ್ತು ಸಾಮಾನ್ಯ ಜನರು. ಜಾತಿ ಪ್ರಜ್ಞೆಯು ಇನ್ನೂ ಮೂಡಿರಲಿಲ್ಲ. ಋಗ್ವದದ ಹತ್ತನೆಯ (ಸುಮಾರು ಸಾ.ಶ.ಪೂ. 1000ದಲ್ಲಿ ಮಂಡಲದಲ್ಲಿ ಬರುವ ಪುರುಷ ಸೂಕ್ತದಲ್ಲಿ ಹೊಸ ಸಾಮಾಜಿಕ ವ್ಯವಸ್ಥೆ ರೂಪುಗೊಳ್ಳುತ್ತಿದ್ದ ಚಿತ್ರಣ ಸಿಗುತ್ತದೆ. ಇದರ ಪ್ರಕಾರ ದೇವತೆಗಳು (gods) ಸೃಷ್ಟಿಸಿದ ಆದಿಪುರುಷನ ಬಾಯಿಯೇ ಬ್ರಾಹ್ಮಣರಾದರು. ಬಾಹುಗಳು ಕ್ಷತ್ರಿಯರಾದರು, ತೊಡೆಗಳು ವೈಶ್ಯರಾದರು ಹಾಗೂ ಪಾದಗಳಿಂದ ಶೂದ್ರರು ಹುಟ್ಟಿದರು. ಈ ಮೂಲಕ ಜಾತಿ ಸೃಷ್ಟಿಗೆ ದೈವಿಕ ಮತ್ತು ಪುರಾಣದ ಹಿನ್ನೆಲೆಯಾಗಿ ಒದಗಿಸುವ ಪ್ರಯತ್ನ ಮಾಡಲಾಯಿತು. ಇದರಲ್ಲಿ ವರ್ಣ ಎಂಬ ಪದವಿಲ್ಲ. ನಂತರದ ವೇದಗಳಲ್ಲಿ ನಾಲ್ಕು ವರ್ಣಗಳ ಪ್ರಸ್ತಾಪವಿದೆ. ಮೊದಲ ಮೂರು ವರ್ಣಗಳು ಆಡಳಿತ ಸಂಬಂಧಿಸಿದ, ಪುರೋಹಿತಿಕೆ ಮತ್ತು ವ್ಯಾಪಾರಿ ವೃತ್ತಿಗಳನ್ನು ಮಾಡುತ್ತಿದ್ದರು ಹಾಗೂ ಆಸ್ತಿಯ ಹಕ್ಕುಗಳನ್ನು ಹೊಂದಿದ್ದರು.


ನಾಲ್ಕನೆಯ ವರ್ಣವಾದ 'ಶೂದ್ರ' ಎಂಬುದು ಋಗ್ವದ ಕಾಲದ ಕೊನೆ ಘಟ್ಟದಲ್ಲಿ ಸೇರ್ಪಡೆಯಾಗಿದೆ. ಈ ವರ್ಣದಲ್ಲಿ ಸ್ಥಳೀಯ ಬುಡಕಟ್ಟುಗಳಾದ ದಸ್ಯು, ಪಾಣಿಗಳು ಮತ್ತು ದಾಸರಿದ್ದರು. ಆರ್ಯರು ಇಲ್ಲಿನ ಸ್ಥಳೀಯ ಬುಡಕಟ್ಟುಗಳಾದ ದಾಸ ಹಾಗೂ ದಸ್ಯುಗಳ ಮೇಲೆ ಜಯ ಸಾಧಿಸಿದ ನಂತರ ಇವರನ್ನು ಗುಲಾಮರಂತೆ ದುಡಿಸಲು ಪ್ರಾರಂಭಿಸಿದರು. ಯುದ್ಧಗಳಲ್ಲಿ ಗೆದ್ದು ಅದರಿಂದ ಬಂದ ಸಂಪತ್ತಿನ ಹಂಚಿಕೆಯಲ್ಲಿ ವ್ಯತ್ಯಾಸಗಳು ಉಂಟಾಗಿ ಸಾಮಾಜಿಕ ತಾರತಮ್ಯಗಳು ಬೆಳೆದವು. ಜೊತೆಗೆ ವಿಸ್ತರಣೆಯಾಗುತ್ತಿದ್ದ ಕೃಷಿ ಮತ್ತು ಇದರ ಒಡೆತನವನ್ನು ಮೇಲಿನ ವರ್ಣಗಳವರು ಹೊಂದಿದ್ದರು. ಮೇಲಿನ ಮೂರು ವರ್ಣಗಳಿಗೆ ದುಡಿಮೆ ಮಾಡುವುದು ಶೂದ್ರರ ಕರ್ತವ್ಯವೆಂದು ಅವರ ಮೇಲೆ ಹೇರಲಾಯಿತು. ಪಿತೃಪ್ರಧಾನ ಕುಟುಂಬ ಮುಖ್ಯವಾದ ಸಾಮಾಜಿಕ ಘಟಕವಾಗಿತ್ತು.


ಅರ್ಥ ವ್ಯವಸ್ಥೆ: ಋಗೈದದ ಜನ ಮೂಲಭೂತವಾಗಿ ಪಶುಸಂಗೋಪನೆಯಲ್ಲಿ ತೊಡಗಿದ್ದರು. ಋಗ್ವದ ರಚನಾಕಾರರ ದೃಷ್ಟಿಯಲ್ಲಿ ಸಂಪತ್ತು ಎಂದರೆ ಪ್ರಧಾನವಾಗಿ ಕುದುರೆಗಳು, ಹಸುಗಳು, ಒಂಟೆಗಳು ಮತ್ತು ಕುರಿಗಳು. ಆದರೂ ಋಗ್ವದದಲ್ಲಿ ಸಾಗುವಳಿ ಮಾಡಿದ ಭೂಮಿಯನ್ನು ಸಂಪತ್ತಿನ ಒಂದು ಭಾಗವೆಂದು ಪರಿಗಣಿಸಲಾಗಿದೆ. ವ್ಯವಸಾಯ ಒಂದು ಕಸುಬಾಗಿ ರೂಪುಗೊಳ್ಳುತ್ತಿದ್ದ ಬಗ್ಗೆ ವಿವರಗಳಿವೆ. ಭೂಮಿಯನ್ನು ಯಾರಾದರೂ ವಶಪಡಿಸಿಕೊಳ್ಳಬಹುದಿತ್ತು ಮತ್ತು ಅದರ ಒಡೆತನವನ್ನು ಪಡೆಯಬಹುದಿತ್ತು. ಭೂಮಿಯನ್ನು ಉತ್ತಲು, ನೀರೆತ್ತಲು ಮತ್ತು ಬಂಡಿಗಳನ್ನು ನಡೆಸಲು ಮತ್ತು ವ್ಯವಸಾಯದ ವಿಸ್ತರಣೆಗೆ ಪಶುಗಳ ಮಹತ್ವ ಹೆಚ್ಚಾಗುತ್ತಾ ಬಂತು. ಇವುಗಳಿಂದ ಹಾಲು ಮತ್ತು ಮಾಂಸದ ಉಪಯೋಗವೂ ಇತ್ತು. ಒಟ್ಟಾರೆಯಾಗಿ ದನದ ಮಂದೆಗಳನ್ನು ಹೆಚ್ಚೆಚ್ಚು ಹೊಂದಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದ 'ಗೋಮಾಳ'ಗಳು ಅಸ್ತಿತ್ವಕ್ಕೆ ಬಂದವು.


ಕಬ್ಬಿಣದ ಬಗ್ಗೆ ಇನ್ನೂ ತಿಳಿದಿರಲಿಲ್ಲ. ಆದರೆ ಲೋಹ ಕರಗಿಸಲು 'ಮಾಗಿದ ಮತ್ತು ಸಂಸ್ಕರಿಸಿದ ಗಿಡ'ಗಳನ್ನು ಇದ್ದಿಲಾಗಿ ಬಳಸುತ್ತಿದ್ದರು. ಮಿಶ್ರಲೋಹವಾದ ಕಂಚನ್ನು 'ಅಯಸ್' ಎನ್ನುತ್ತಿದ್ದರು. ಮಡಿಕೆ ಕುಡಿಕೆಗಳ ಬಗ್ಗೆ ಉಲ್ಲೇಖಗಳಿವೆ. ಕುಂಬಾರಿಕೆಯ ಬಗ್ಗೆ ಉಲ್ಲೇಖವಿಲ್ಲ. ಋಗ್ವದದಲ್ಲಿ ನೇಕಾರಿಕೆ, ಬಡಗಿ ಮುಂತಾದ ಕುಶಲವೃತ್ತಿಗಳ ಬಗ್ಗೆ ಉಲ್ಲೇಖಗಳು ಕೇವಲ ಪ್ರಾಸಂಗಿಕವಾಗಿ ಬಂದಿವೆ. ಋಗ್ವದದಲ್ಲಿ 'ಪಾಣಿ'ಗಳು ಎಂಬ ಪದ ಹಲವಾರು ಬಾರಿ ಬರುತ್ತದೆ. ಇದನ್ನು ಶ್ರೀಮಂತವಾಗಿದ್ದ ಸ್ಥಳೀಯ ಗುರ್ತಿಸಲು ಬಳಸಲಾಗಿದೆ. ಇವರಿಗೆ ಕೃಷಿಯ ಬಗ್ಗೆ ತಿಳುವಳಿಕೆ ಇತ್ತು.ಋಗ್ರೇದದಲ್ಲಿ ಸಾಗುವಳಿ ಮಾಡಿದ ಗದ್ದೆಯನ್ನು 'ಕ್ಷೇತ್ರ'ವೆಂದು, ಉಳುಮೆ ಮಾಡುವ ಕಾರ್ಯವನ್ನು 'ಕೃಷಿ' ಎಂದು ಕರೆಯಲಾಗಿದೆ. ಸಾ.ಶ.ಪೂ 11ನೇ ಶತಮಾನದ್ದು ಎನ್ನಬಹುದಾದ ಸ್ವಾತ್ ಕಣಿವೆಯ ಅಲಿಗ್ರಾಮದಲ್ಲಿ ಉಳುಮೆ ಮಾಡಿದ ಗದ್ದೆ ಪತ್ತೆಯಾಗಿದೆ. ನೀರೆತ್ತುವ ಕಲ್ಲಿನ ರಾಟೆ ಚಕ್ರವನ್ನು ಬಳಸಿ ಬಾವಿಯಿಂದ ನೀರೆತ್ತುವ ಮರದ ಬಾನೆಯ ಕುರಿತು ಉಲ್ಲೇಖವಿದೆ. ನೇಗಿಲು ಮತ್ತು ಬಂಡಿಗಳನ್ನು ಎಳೆಯಲು ಎತ್ತುಗಳನ್ನು ಬಳಸಲಾಗುತ್ತಿದ್ದ ಅನುಭವದ ಆಧಾರದಲ್ಲಿ, ಅವುಗಳನ್ನು ರಾಟೆ ಮತ್ತು ಹಗ್ಗದ ಸಹಾಯದಿಂದ ನೀರನ್ನು ಎತ್ತಿ ಅಗಲವಾದ ಕಾಲುವೆಗಳಿಗೆ ಹರಿಸಲು ಬಳಸಲಾಗುತ್ತಿತ್ತು. ಈ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ, ಆದುವರೆಗೂ ನದಿ ಕಾಲುವೆ ಪಕ್ಕದ ಜಾಗಗಳಿಗೆ ಸೀಮಿತವಾಗಿದ್ದ ವ್ಯವಸಾಯ, ಹೆಚ್ಚಿನ ಅಂತರ್ಜಲ ಮಟ್ಟ ಇರುವ ಪ್ರದೇಶಗಳಿಗೆ ಹರಡಲು ಅವಕಾಶವಾಯಿತು. ಋಗ್ವದದಲ್ಲಿ ಬಿತ್ತನೆ ಬೀಜವನ್ನು ನೆಲದೊಳಗಿಡುವ ಬಗ್ಗೆ ಮತ್ತು ಬೆಳೆದ ಕಾಳಿನ ಬಗ್ಗೆ ಉಲ್ಲೇಖವಿದೆ.


ರಾಜಕೀಯ ವ್ಯವಸ್ಥೆ: ಋಗ್ವದದಲ್ಲಿ 'ಗ್ರಾಮ'ದ ಉಲ್ಲೇಖವಿದೆ. ಗ್ರಾಮಗಳಲ್ಲಿ ಬುಡಕಟ್ಟುಗಳು ವಾಸಿಸುತ್ತಿದ್ದವು. ಬುಡಕಟ್ಟಿನ ಮುಖ್ಯಸ್ಥನಾಗಿ ರಾಜನ್ ಅಥವಾ ರಾಜ ಇರುತ್ತಿದ್ದ. ರಾಜರ ಹೆಸರುಗಳು ನಿರ್ದಿಷ್ಟ ಬುಡಕಟ್ಟುಗಳಿಗೆ ಸಂಬಂಧಿಸಿತ್ತು. ಒಂದು ಬುಡಕಟ್ಟಿನಲ್ಲಿ ಒಂದಕ್ಕಿಂತ ಹೆಚ್ಚು ರಾಜರು ಇದ್ದಿರಬಹುದು. ರಾಜನ ಸ್ಥಾನ ವಂಶಪಾರಂಪರ್ಯವಾಗಿತ್ತು. ಪುರು ವಂಶಾವಳಿಯ 'ತೃಕ್ಷ' ಮತ್ತು ಭರತ ವಂಶಾವಳಿಯ 'ಸುಧಾಸ' ಉದಾಹರಣೆ.


ರಾಜಕೀಯ ಚಟುವಟಿಕೆಗಳಲ್ಲಿ ಆರ್ಯೇತರ ಬುಡಕಟ್ಟುಗಳಾಗಿದ್ದ ದಸ್ಯುಗಳು, ಪಾಣಿಗಳ ಮೇಲೆ ಆರ್ಯರು ನಡೆಸಿದ ಆಕ್ರಮಣಗಳು ಮತ್ತು ಆ ಬುಡಕಟ್ಟುಗಳ ದಮನದಂತಹ ಅಂಶಗಳು ಮುಖ್ಯ ಸಂಗತಿಗಳಾಗಿವೆ. ಋಗ್ವದ ದಸ್ಯುಗಳು, ಪಾಣಿಗಳು ಅಮಾನುಷರು, ಅನ್ಯವ್ರತದವರು ಮತ್ತು ವಧಾರ್ಹರು ಎಂದು ಹೇಳಿದೆ, ಆರ್ಯ ಮತ್ತು ಆರ್ಯೇತರರ ಈ ಸಂಘರ್ಷದ ಬಗ್ಗೆ ಋಗ್ವದದಲ್ಲಿ ಪ್ರಸ್ತಾಪಗಳಿವೆ.


ರಾಜನ ಸುತ್ತ ಸಾರ್ವಜನಿಕರು ಸೇರುವ ಅರ್ಥದಲ್ಲಿ 'ಸಭಾ' ಮತ್ತು 'ಸಮಿತಿ' ಎಂಬ ಶಬ್ದಗಳ ಉಲ್ಲೇಖವಿದೆ. ಜನರ ಮೇಲೆ ಅಧಿಕಾರ ನಡೆಸುವವರನ್ನು 'ಕ್ಷತ್ರ' ಎನ್ನಲಾಗುತ್ತಿತ್ತು. ಸೈನಿಕ ಅಥವಾ ಹೋರಾಡುವವರನ್ನು 'ಯೋಧ' ಎನ್ನಲಾಗುತ್ತಿತ್ತು. ಕ್ಷತ್ರಿಯ ಪದ ಇನ್ನೂ ಬಳಕೆಗೆ ಬಂದಿರಲಿಲ್ಲ. ರಾಜರು, ಸಿರಿವಂತರು ಅಧಿಕಾರವನ್ನು ಹೊಂದಿದ್ದರು. ಇವರು ಪುರೋಹಿತರಿಗೆ ಅಪಾರವಾಗಿ ದನಗಳು, ಕುದುರೆಗಳು, ಚಿನ್ನ ಮತ್ತು ವ್ಯವಸಾಯದ ಉತ್ಪನ್ನಗಳನ್ನು ಕಾಣಿಕೆಯಾಗಿ ನೀಡುತ್ತಿದ್ದರು. ದನಕರುಗಳಿಗಾಗಿ ದಾಳಿ ಅಥವಾ ಜಗಳಗಳು ನಡೆಯುತ್ತಿದ್ದವು. ಇಂತಹ ದಾಳಿಗಳಿಂದ ಯಶಸ್ಸು ಪಡೆದವರ ಸಂಪತ್ತು ಹೆಚ್ಚಾಗುವುದರ ಜೊತೆಗೆ, ಸೆರೆಯಾಳುಗಳು ಸಹ ದೊರೆಯುತ್ತಿದ್ದರು.


ಧಾರ್ಮಿಕ ವ್ಯವಸ್ಥೆ: ಧಾರ್ಮಿಕ ವ್ಯವಸ್ಥೆಯ ಮುಖ್ಯ ಕೇಂದ್ರ ಬಿಂದು ಯಜ್ಞ ಯಜ್ಞದಲ್ಲಿ ದೇವತೆಗಳನ್ನು ತೃಪ್ತಿಪಡಿಸಲು ಪ್ರಾಣಿ ಬಲಿಯನ್ನು ಕೊಡಲಾಗುತ್ತಿತ್ತು. ಮುಖ್ಯವಾಗಿ ಎರಡು ಉದ್ದೇಶಗಳನ್ನು ಪೂರೈಸಿಕೊಳ್ಳಲು ಯಜ್ಞವನ್ನು ನೆರವೇರಿಸಲಾಗುತ್ತಿತ್ತು. ಉತ್ತಮ ಮಳೆ-ಬೆಳೆ ಮತ್ತು ತಮ್ಮ ಶತ್ರುಗಳಾಗಿದ್ದ ದಸ್ಯು ಬುಡಕಟ್ಟುಗಳನ್ನು ಸಂಹರಿಸಲು ಇಂದ್ರಾಧಿದೇವತೆಗಳ ಸಹಾಯ ಪಡೆಯಲು ಆರ್ಯರು ಯಜ್ಞಗಳನ್ನು ಮಾಡುತ್ತಿದ್ದರು.


ಯಜ್ಞಗಳನ್ನು ನಡೆಸಿಕೊಡುವ ಪುರೋಹಿತನನ್ನು ಹೊತ‌' ಎಂದು ಕರೆಯಲಾಗುತ್ತಿತ್ತು. ಇದರಲ್ಲಿ ಮಂತ್ರಗಳ ಉಚ್ಚಾರಣೆ ಮತ್ತು 'ಸೋಮ' ಪಾನ ಸೇವನೆ ಇರುತ್ತಿತ್ತು. ಆರ್ಯರ ಧರ್ಮದಲ್ಲಿ ಮೂರ್ತಿ ಪೂಜೆ ಮನುಷ್ಯ, ಪ್ರಾಣಿ ಅಥವಾ ಇನ್ನಾವುದೇ ಸಂಕೇತಗಳನ್ನು ಬಳಸುತ್ತಿರಲಿಲ್ಲ. ಇರಲಿಲ್ಲ.


ಋಗ್ವದದಲ್ಲಿ ಬೆಂಕಿಗೆ ತುಂಬಾ ಪ್ರಾಮುಖ್ಯತೆಯಿದ್ದು, ಅಗ್ನಿಯನ್ನು ಕುರಿತು ಸುಮಾರು 200 ಶ್ಲೋಕಗಳಿವೆ. ಇಂದ್ರ ಮಳೆ ತರುತ್ತಾನೆ. ಆರ್ಯರ ಶತ್ರುಗಳನ್ನು, ದಸ್ಯು ಮತ್ತು ದಾಸರನ್ನು ನಾಶಪಡಿಸುತ್ತಾನೆ, ವಿಪರೀತವಾಗಿ ಕುಡಿಯುತ್ತಾನೆ, ಕೋಣಗಳನ್ನು ತಿನ್ನುತ್ತಾನೆ, ಮುಂತಾದ ಸುಮಾರು 250 ಶ್ಲೋಕಗಳನ್ನು ಇಂದ್ರನಿಗೆ ಅರ್ಪಿಸಲಾಗಿದೆ. ವಿಷ್ಣುವಿಗೆ ಇನ್ನೂ ಅಂತಹ ಮಹತ್ವ ಬಂದಿರಲಿಲ್ಲ. ಋಗ್ವದದಲ್ಲಿ ಜನ್ಮಾಂತರದ ನಂಬಿಕೆ ಬಗ್ಗೆ ವಿವರಗಳಿಲ್ಲ. ಆಳುವವರು ಮತ್ತು ಬುಡಕಟ್ಟು ಮುಖ್ಯಸ್ಥರ ಮಹಾಯಾಗಗಳನ್ನು ಪುರೋಹಿತರು ನಡೆಸಿಕೊಡುತ್ತಿದ್ದರು.


ಪ್ರಾರಂಭಿಕ ಹಂತದಲ್ಲಿ ಪುರೋಹಿತರ ಹಿಡಿತ ತುಂಬಾ ಕಡಿಮೆ ಇದ್ದಾಗ, ಉಳುಮೆ ಮಾಡಿದ ಕಿರುದೇವತೆ 'ಕ್ಷೇತ್ರಸ್ಯ-ಪತಿ', ನೇಗಿಲ ದೇವಿ 'ಸೀತಾ', ಮನೆಯ ಕಿರುದೇವತೆ 'ವಾಸ್ತೋಷ್ಪತಿ, ಇಂತಹ ಸಾಮಾನ್ಯ ಜನರ ಧರ್ಮದ ಕುರಿತು ಪ್ರಸ್ತಾಪಗಳಿವೆ. ಋಗ್ವದದ ಕೊನೆಯ ಭಾಗದಲ್ಲಿ ವಿವಾಹ ಮತ್ತು ಮರಣದ ಕುರಿತು ಶ್ಲೋಕಗಳಿವೆ. ಋಗ್ವದ ಕಾಲದ ಜನರಿಗೆ ಬರವಣಿಗೆ ಗೊತ್ತಿರಲಿಲ್ಲ. ಭಾಷೆಯು ಉಚ್ಛಾರಗಳನ್ನು ಆಧರಿಸಿತ್ತು. ಋಗ್ಗೇದದ ಮತ್ತು ಇಂಡೋ-ಇರಾನಿಯನ್ ಧರ್ಮಗ್ರಂಥ 'ಅವೆಸ್ತ್ರ'ದಲ್ಲಿ ಬರುವ ಹೆಸರುಗಳು ಮತ್ತು ಪಾತ್ರಗಳು ಸಾಕಷ್ಟು ಹೋಲಿಕೆಯನ್ನು ಹೊಂದಿವೆ. ಉತ್ತರ ಋಗ್ದದ ಕಾಲ


ಋಗ್ವದದ ನಂತರ ಅದರ ಮುಂದುವರೆದ ಮತ್ತು ಪೂರಕವಾದ ಸ್ವರೂಪದಲ್ಲಿ ಇತರ ಮೂರು ವೇದಗಳು; ಸಾಮವೇದ, ಯಜುರ್ವೇದ ಮತ್ತು ಅಥರ್ವವೇದ ಬಂದವು. ಇವು ಮೂರು ವಿಭಿನ್ನ ರೀತಿಯ ಯಜ್ಞಗಳನ್ನು ನಡೆಸುವ ಪುರೋಹಿತರಾದ ಸಾಮನ್ (ಉದ್ಘಾತ್ರಿ = ಹಾಡುಗಾರ), ಅಧ್ವರ್ಯು (ಯಜುಸ್ ಎಂಬ ಸೂತ್ರಗಳನ್ನು ಹೇಳುವವನು) ಮತ್ತು ಅಥರ್ವನ್ (ಅಂಗಿರ = ಅಗ್ನಿ ಪುರೋಹಿತ) ಇವರ ಹೆಸರನ್ನು ಹೊಂದಿರುವ ವೇದಗಳಾಗಿವೆ.


ಸಾಮವೇದವು ಋಗ್ವದದಿಂದಲೇ ಹೆಚ್ಚಿನ ಭಾಗ ಆರಿಸಿಕೊಂಡು ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಯಜ್ಞದಲ್ಲಿ ಪಠಿಸುವ ಮಂತ್ರಗಳನ್ನು ಒಳಗೊಂಡಿದೆ. ಯಜುರ್ವೇದವು ಕಪ್ಪು (ಕೃಷ್ಣ) ಮತ್ತು ಬಿಳಿ (ಶುಕ್ಲ) ಯಜುರ್ವೇದಗಳೆಂಬ ಎರಡು ಭಿನ್ನ ಪಠ್ಯಗಳನ್ನು ಹೊಂದಿದೆ. ಕಪ್ಪು ಯಜುರ್ವೇದದಲ್ಲಿ, ಮಂತ್ರಗಳನ್ನು ಯಾವ ವಿಧಿಯ ಭಾಗವಾಗಿ ಉಚ್ಚರಿಸಬೇಕೋ ಅದರ ವಿವರಣೆಗಳು ಮತ್ತು ಚರ್ಚೆಗಳಿವೆ. ಬಿಳಿ ಯಜುರ್ವೇದದಲ್ಲಿ ಮಂತ್ರಗಳು ಮತ್ತು ಶ್ಲೋಕಗಳು ಮಾತ್ರವಿದ್ದು ವಿವರಣೆಗಳು ಕಾಣುವುದಿಲ್ಲ. ಇವುಗಳಲ್ಲಿ ಕಬ್ಬಿಣದ ಉಲ್ಲೇಖ ಬಂದಿದೆ. ಆದ್ದರಿಂದ ಈ ವೇದವು ಸಾ.ಶ.ಪೂ 1000ಕ್ಕಿಂತ ಮುಂಚಿನದ್ದಲ್ಲ ಎಂದು ತಿಳಿಯುತ್ತದೆ.


ಅಥರ್ವವೇದವು ಗಾತ್ರ ಮತ್ತು ವಿಷಯದ ದೃಷ್ಟಿಯಿಂದ ಋಗ್ವದವನ್ನು ಹೆಚ್ಚು ಹೋಲುತ್ತದೆ. ಇದು ಋಗ್ವದದ ಹತ್ತನೆಯ ಮಂಡಲದಿಂದ ಸಾಕಷ್ಟು ಪಡೆದಿದೆ. ಅಥರ್ವವೇದವು ಗದ್ಯ ರೂಪದಲ್ಲಿದೆ. ಇದರಲ್ಲಿ ಹೆಚ್ಚಾಗಿ ಪ್ರಾಚೀನ ಭಾಷೆಗಿಂತ 'ಬ್ರಾಹ್ಮಣ'ಗಳ ಭಾಷೆ ಬಳಕೆಯಾಗಿದೆ. ಇದರಲ್ಲಿನ ಭೌಗೋಳಿಕ ವಿವರಣೆಯು ಋಗ್ವದದ ಪ್ರದೇಶಕ್ಕಿಂತ ಭಿನ್ನವಾಗಿದೆ. ಅಂದರೆ ಆರ್ಯರು ಪೂರ್ವಕ್ಕೆ ಚಲಿಸಿರುವುದನ್ನು ಇದು ಸೂಚಿಸುತ್ತದೆ.


ಸಾಮಾಜಿಕ ವ್ಯವಸ್ಥೆ: ಋಗ್ವದದ ಕೊನೆಯಲ್ಲಿ ಪುರುಷಸೂಕ್ತದಲ್ಲಿ ಪ್ರಸ್ತಾಪಗೊಂಡ, ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಎಂಬ ನಾಲ್ಕು ವಿಭಜನೆಗಳು ಉತ್ತರ ವೇದಗಳ ಕಾಲದಲ್ಲಿ ಹಲವಾರು ಬದಲಾವಣೆಗಳಿಗೆ ಒಳಗಾಗಿ ಗಟ್ಟಿಗೊಂಡವು. ಬ್ರಾಹ್ಮಣರು ವೈದಿಕ ಯಜ್ಞ ಮತ್ತು ಆಚರಣೆಗಳನ್ನು ಮಾಡುವುದಕ್ಕೆ ಪ್ರತಿಫಲವಾಗಿ ಕಾಣಿಕೆಗಳನ್ನು ಸ್ವೀಕರಿಸುತ್ತಿದ್ದರು. ಜಮೀನು ಹೊಂದುವುದರಲ್ಲಿ, ಗೋವುಗಳನ್ನು ಪಡೆಯುವುದರಲ್ಲಿ, ಪೂಜೆಯಲ್ಲಿ, ದೇವರ ವಿಚಾರದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಇವರು ಪಡೆದುಕೊಂಡರು.


ರಾಜನ್ಯ ಎಂಬುದು ಕ್ಷತ್ರಿಯ ವರ್ಣವನ್ನು ಸೂಚಿಸುತ್ತಿತ್ತು. ಅಧಿಕಾರ ಪಡೆದವರ ಮೂಲ ಏನೇ ಆಗಿದ್ದರೂ ಅವರನ್ನು ಕ್ಷತ್ರಿಯ ಎಂದು ಪರಿಗಣಿಸಲಾಗುತ್ತಿತ್ತು. ಬಿಲ್ಲುವಿದ್ಯೆಯಲ್ಲಿ ಪರಿಣತರು ಮತ್ತು ರಥಗಳಲ್ಲಿ ಕುಳಿತು ಯುದ್ಧ ಮಾಡಬಲ್ಲ ಯೋಧರಾಗಿ ರಾಜನ್ಯರ ಮಹತ್ವ ಹೆಚ್ಚಾಯಿತು. 'ವೈಶ್ಯ' ಪದ ಬಳಕೆ ಇಲ್ಲಿಯೂ * ವಿರಳವಾಗಿ ಕಾಣುತ್ತದೆ. ಇವರು ಕಾಣಿಕೆಯನ್ನು ಇನ್ನೊಬ್ಬರಿಗೆ ಕೊಡಬೇಕಾಗಿತ್ತು. ಇವರನ್ನು ಇಷ್ಟ ಬಂದಾಗ.

ದಬ್ಬಾಳಿಕೆಗೆ ಒಳಪಡಿಸಬಹುದಾಗಿತ್ತು. ಯಜ್ಞ ಮಾಡುವ ಮತ್ತು ಅಲ್ಲಿ ಪ್ರವೇಶಿಸುವ ಹಕ್ಕು ಹೊಂದಿರಲಿಲ್ಲ. ಮೇಲಿನ ಎರಡು ವರ್ಣಗಳಿಗಿಂತ ಕೆಳಗಿದ್ದರೂ ಸಹ ಇವರೂ ಆರ್ಯರೇ ಆಗಿದ್ದರು.


ಶೂದ್ರರನ್ನು ವರ್ಣ ವ್ಯವಸ್ಥೆಯ ಕೊನೆಯಲ್ಲಿ ಇಡಲಾಗಿತ್ತು. ಆದರೆ ದಸ್ಯುಗಳು ಮತ್ತು ದಾಸರನ್ನು ಇಡಲಾಗಿತ್ತು. ಕ್ರಮೇಣ ವರ್ಣವ್ಯವಸ್ಥೆಯ ಹೊರಗಡೆ ಇವರು ಶೂದ್ರ ವರ್ಣಕ್ಕೆ ಸೇರ್ಪಡೆಯಾದರು. ಶೂದ್ರರನ್ನು ವರ್ಣ ಸಮಾಜದ ಭಾಗವೆಂದು ಒಪ್ಪಿಕೊಂಡಾಗಲೂ ಅವರಿಗೆ ಯಾವ ಹಕ್ಕುಗಳನ್ನೂ ನೀಡಿರಲಿಲ್ಲ. ಶೂದ್ರನನ್ನು ಬೇಕೆಂದಾಗ ಹೊರಹಾಕಬಹುದಿತ್ತು ಮತ್ತು ಕೊಲ್ಲಬಹುದಿತ್ತು. ಶೂದ್ರ ಯಜ್ಞ ಆಚರಣೆ ಮಾಡುವಂತಿರಲಿಲ್ಲ. ಪವಿತ್ರನಾದ ಗುರುವು ಶೂದ್ರರನ್ನು ತ್ಯಜಿಸಬೇಕು ಮತ್ತು ಅಷ್ಟೇ ಅಲ್ಲ, ಶೂದ್ರರನ್ನು ನೋಡಬಾರದೆಂದು ಹೇಳಲಾಯಿತು. ಕೆಲವೊಮ್ಮೆ ಈ ದಾಸ, ದಸ್ಯು ಮತ್ತು ಇತರ ಬುಡಕಟ್ಟುಗಳಿಂದಲೇ ಶೂದ್ರರು ಬಂದಿರಬಹುದು. ಕೆಲವು ಆದಿಕಾಲದ 'ಆಹಾರ ಸಂಗ್ರಹ' ಸಮುದಾಯಗಳಾದ 'ನಿಷಾದರು' ಮತ್ತು 'ಚಂಡಾಲ'ರನ್ನು ಅಸ್ಪೃಶ್ಯ ಜಾತಿಗಳೊಂದಿಗೆ ಸೇರಿಸಲಾಗಿದೆ.


ಸಾಮಾಜಿಕ ಶ್ರೇಣೀಕರಣದಲ್ಲಿ ಹೆಣ್ಣನ್ನು ಕೆಳಸ್ಥಾನದಲ್ಲಿ ಇರಿಸಲಾಯಿತು. ಮಹಿಳೆಯನ್ನು 'ಅಸತ್ಯ'ದ ಮೂರ್ತರೂಪವೆಂದು ಪರಿಗಣಿಸಲಾಗಿತ್ತು. ಅಥರ್ವವೇದದ ಸಮಯಕ್ಕೆ ವರದಕ್ಷಿಣೆ ಪದ್ಧತಿಯ ಉಲ್ಲೇಖವಿದೆ. ಮಹಿಳೆಯರ ಶ್ರಮಕ್ಕೆ ಪ್ರತಿಫಲವೂ ಸರಿಯಾಗಿರಲಿಲ್ಲ. ಬಾಲ್ಯ ವಿವಾಹ ಪದ್ಧತಿ ಇರಲಿಲ್ಲ. ಶ್ರೀಮಂತರು ಮತ್ತು ಬಲಾಡ್ಯರಲ್ಲಿ ಬಹುಪತ್ನಿತ್ವ ಇತ್ತು. ವಿಧವೆಯರು ಮರುವಿವಾಹ ಮಾಡಿಕೊಳ್ಳುವ ಸಾಧ್ಯತೆಯಿತ್ತು.


ಅರ್ಥ ವ್ಯವಸ್ಥೆ: ಉತ್ತರ ವೇದಗಳ ಕಾಲಕ್ಕೆ ಆರ್ಯ ಬುಡಕಟ್ಟುಗಳು ಸಿಂಧೂ ನದಿ ಪ್ರದೇಶದಿಂದ ಗಂಗಾ ನದಿ ಪ್ರದೇಶಕ್ಕೆ ಬಂದು ನೆಲೆಸಿದವು. ಇದಕ್ಕಾಗಿ ಅರಣ್ಯಗಳನ್ನು ನಾಶ ಮಾಡಬೇಕಿತ್ತು. ಅರಣ್ಯವನ್ನು ಆಗ್ನಿಯ ಸಹಾಯದಿಂದ ಸುಡುತ್ತಾ, ಕೃಷಿಗೆ ಅನುಕೂಲವಾದ ಭೂಮಿಯನ್ನು ಸೃಷ್ಟಿಸುತ್ತಾ ಉತ್ತರ ಪ್ರದೇಶದ ಬಯಲುಗಳಿಗೆ ಈ ಬುಡಕಟ್ಟುಗಳು ಬಂದವು. ಸಟೇಜ್ ಮತ್ತು ಯಮುನಾ ದೋ ಅಬ್ ಪ್ರದೇಶಗಳ ನೀರಿನ ಕೊರತೆಯನ್ನು ನೀಗಿಕೊಳ್ಳಲು ಸಹಜವಾಗಿಯೇ ಗಂಗಾ ಬಯಲಿಗೆ ಬಂದರು. ಮರಗಳನ್ನು ಕಡಿಯಲು ಕಬ್ಬಿಣದ ಕೊಡಲಿಯನ್ನು ಬಳಸುತ್ತಿದ್ದರು. ಅಥರ್ವವೇದದಲ್ಲಿ ಆರು ಮತ್ತು ಎಂಟು ಎತ್ತುಗಳ ನೇಗಿಲಿನ ಪ್ರಸ್ತಾಪವಿದೆ. ಯಜುರ್ವೇದ ಸಂಹಿತೆಗಳಲ್ಲಿ ಹನ್ನೆರೆಡು ಎತ್ತುಗಳ ನೇಗಿಲಿನ ಬಗ್ಗೆ ಹೇಳಲಾಗಿದೆ. ಅಂದರೆ ಕೃಷಿ ಕ್ಷೇತ್ರದಲ್ಲಿ ಎತ್ತುಗಳ ಬಳಕೆ ಇನ್ನೂ ಹೆಚ್ಚಾಯಿತು ಎಂಬುದನ್ನು ಇದು ಸೂಚಿಸುತ್ತದೆ.


ನಿಮಗಿದು ತಿಳಿದಿರಲಿ:


ವೈದಿಕ ಪಠ್ಯಗಳಲ್ಲಿ ಮುಂದೆ ಹೆಸರಿಸಿರುವ ಬೆಳೆಗಳ ಉಲ್ಲೇಖವಿದೆ : 1. ಭತ್ತ, 2. ಬಾರ್ಲಿ, 3. ಉದ್ದು, 4. ಎಳ್ಳು, 5. ಹೆಸರು, 6. 'ಕುಲ್ಲಿ' ಅಥವಾ ಹುರುಳಿ, 7. ನವಣೆ, 8. 'ಚೀನ' ಅಥವಾ ಸಾಮಾನ್ಯ ರಾಗಿ, 9. 'ಸಾನ್ನ' ಅಥವಾ ಬಡವನ ರಾಗಿ', 10, ಕಾಡು ನೆಲ್ಲು, II, ಗೋಧಿ ಮತ್ತು 12. ಮಸೂರ್. ಕಾಡು ನೆಲ್ಲು ಬಿಟ್ಟು ಮೇಲೆ ಹೇಳಿದ 12 ರಲ್ಲಿ 9 ಬೆಳೆಗಳು ಸಾ.ಶ.ಪೂ 1500 ಕ್ಕಿಂತ ಮೊದಲಿನ ಅವಧಿಯದ್ದೆಂದು ಪುರಾತತ್ವಶಾಸ್ತ್ರ ಪ್ರಮಾಣೀಕರಿಸಿದೆ. ಇನ್ನೊಂದು ಸೂಕ್ತದಲ್ಲಿ 13ನೇ ಬೆಳೆಯಾಗಿ ಕಬ್ಬಿನ (ಇಕ್ಷು) ಬಗ್ಗೆ ಉಲ್ಲೇಖವಿದೆ.


ಆರ್ಯರ ಜೀವನ ಪದ್ಧತಿಯಲ್ಲಿ ಈಗ ಬೇಟೆ ಮತ್ತು ಪಶುಪಾಲನೆಗಿಂತ ಕೃಷಿ ಪ್ರಮುಖವಾಯಿತು. ಕೃಷಿ ಮತ್ತು ವಾಣಿಜ್ಯದಲ್ಲಿ ಯಾರು ತೊಡಗಿಕೊಂಡಿಲ್ಲವೋ ಅವರನ್ನು 'ವ್ಯಾತರು', ಅಂದರೆ ಪರಕೀಯರು ಎಂದು ಕರೆಯಲಾಯಿತು. ಆದರೆ ವ್ಯವಸಾಯ ಮತ್ತು ವಸ್ತುಗಳ ಸಾಗಾಣಿಕೆಗೆ ದನಗಳ ಸಾಕಾಣಿಕೆ ಅಗತ್ಯವಾಗಿತ್ತು. ಈ ಹಿನ್ನೆಲೆಯಲ್ಲೇ 'ಹಸು ಮತ್ತು ಎತ್ತುಗಳನ್ನು ತಿನ್ನಬಾರದು' ಎಂಬ ವಿಚಾರ ಮಹತ್ವ ಪಡೆಯಿತು. ಆದರೆ ಈ ನಿಷೇಧವನ್ನು ಎಲ್ಲರೂ ಒಪ್ಪಿರಲಿಲ್ಲ. ಒಬ್ಬರು ಹೊಂದಿದ್ದ ದನಗಳ ಸಂಖ್ಯೆಯನ್ನು ಆಧರಿಸಿ ಸಂಪತ್ತನ್ನು ತೀರ್ಮಾನಿಸಲಾಗುತ್ತಿತ್ತು.

ಚಿನ್ನ, ತಾಮ್ರ, ಕಬ್ಬಿಣ, ಸೀಸ, ಕಂಚು ಮತ್ತು ತವರದಂತಹ ಲೋಹಗಳ ಪ್ರಸ್ತಾಪಗಳು ವೇದಗಳಲ್ಲಿವೆ. ಬೆಳ್ಳಿಯ ಉಲ್ಲೇಖವೂ ಇದೆ. ಪುರಾತತ್ವಶಾಸ್ತ್ರದ ಪ್ರಕಾರ ಸಿಂಧೂ ಮತ್ತು ಗಂಗಾ ನದಿ ಪ್ರದೇಶಗಳಲ್ಲಿ ಅದಿರನ್ನು ಕಮ್ಮಾರಿಕೆ ಮಾಡಿ 'ಕಬ್ಬಿಣ'ವನ್ನು ಉತ್ಪಾದಿಸುವ ಹಂತ ಸಾ.ಶ.ಪೂ. 1000ಕ್ಕೂ ಮೊದಲೇ ಇತ್ತು ಎನ್ನಲು ಪುರಾವೆಗಳಿಲ್ಲ. ಇದರ ಪ್ರಕಾರ ಕಬ್ಬಿಣವನ್ನು ಉಕ್ಕಾಗಿಸುವ ವಿಧಾನ ಪಶ್ಚಿಮ ಏಷ್ಯಾದಲ್ಲಿ ಕಂಡುಹಿಡಿಯಲ್ಪಟ್ಟು ಪೂರ್ವ ದೇಶಗಳಿಗೆ ಹಬ್ಬಿದ್ದು ಸಾ.ಶ.ಪೂ. 10ನೆಯ ಶತಮಾನದ ನಂತರ, ಉತ್ತರ ಭಾರತಕ್ಕೆ ಇದು 8ನೆಯ ಶತಮಾನಕ್ಕಿಂತ ಮುಂಚೆ ಕಾಲಿಟ್ಟಿರುವ ಸಾಧ್ಯತೆ ಕಡಿಮೆ. ಅತ್ರಂಜಿಖೇರಾದಲ್ಲಿ (ಉತ್ತರ ಪ್ರದೇಶದ ಪಶ್ಚಿಮ ಭಾಗ) ಸಿಕ್ಕಿರುವ ಕಬ್ಬಿಣದ ಹಸ್ತಕೃತಿಗಳು ಇದನ್ನು ಪುಷ್ಟಿಕರಿಸುತ್ತವೆ.


ನಿಮಗಿದು ತಿಳಿದಿರಲಿ.


ರಥ ತಯಾರಿಕೆಯ ಕಾರಣದಿಂದ ಬಡಗಿ ವೃತ್ತಿ ಗೌರವಯುತವಾಗಿತ್ತು. ಒರಳು ಮತ್ತು ಒನಕೆ ಬಳಕೆಯಲ್ಲಿತ್ತು. ಲೋಹಗಳ ಬಳಕೆ ಹೆಚ್ಚಾದಂತೆ ಕಲ್ಲಿನ ಉಪಕರಣಗಳ ಬಳಕೆ ಕಡಿಮೆಯಾಗಿರಬಹುದು. ಕುಂಬಾರ ವೃತ್ತಿ ಇತ್ತು. ನೂಲು ತೆಗೆಯುವ ಕೆಲಸವನ್ನು ಬಹುಪಾಲು ಸ್ತ್ರೀಯರು ಮಾಡುತ್ತಿದ್ದರು. ಬಟ್ಟೆ ಕಸೂತಿ, ಬಟ್ಟೆಗೆ ಬಣ್ಣ ಹಾಕುವುದು, ಬಟ್ಟೆ ಒಗೆಯುವುದನ್ನು ಮಹಿಳೆಯೇ ಮಾಡುತ್ತಿದ್ದಳು.


ಈ ಕಾಲಘಟ್ಟದಲ್ಲಿ ವಿಶಿಷ್ಟ ವೃತ್ತಿಗಳು ಹೆಚ್ಚುತ್ತಲೇ ಹೋದದನ್ನು ಕಾಣಬಹುದು. ಬಿಲ್ಲು ಬಾಣಗಳ ತಯಾರಿಕೆ, ಹಗ್ಗದ ತಯಾರಿಕೆ, ಬಿಲ್ಲಿಗೆ ಹೆದೆ ಮಾಡುವುದು, ಬೊಂಬುಗಳನ್ನು ಸೀಳಿ ಕೆಲಸ ಮಾಡುವುದು, ಮುಲಾಮು ತಯಾರಿಸುವ ಸ್ತ್ರೀಯರು, ಕಟ್ಟಿಗೆ ಸಾಗಿಸುವವರು, ಬೆಂಕಿ ಹೊತ್ತಿಸುವವರು, ಕುದುರೆ ಪಾಲಕರು, ದನಗಾಹಿಗಳು, ಬೇಟೆಗಾರರು, ಮೀನುಗಾರರು, ಕಮ್ಮಾರರು, ಅಕ್ಕಸಾಲಿಗರು, ವ್ಯಾಪಾರಿಗಳು, ವರ್ತಕರು, ವೈದ್ಯರು, ಜ್ಯೋತಿಷಿಗಳು, ಇಂತಹ ಇನ್ನೂ ಅನೇಕ ವೃತ್ತಿಪರರು ಇದ್ದರು.


ಈ ಅವಧಿಯಲ್ಲಿ ಪಟ್ಟಣಗಳು ಅಥವಾ ನಗರಗಳು ಬೆಳೆದಿರಲಿಲ್ಲ. ಶತಪಥ ಬ್ರಾಹ್ಮಣದಲ್ಲಿ ಬರುವ 'ಪು‌' ಎಂಬ ಶಬ್ದವು ಬೇಲಿಯಿಂದ ಸುತ್ತುವರೆದ, ಗೋಡೆಯಿಂದ ಆವೃತವಾದ, ರಕ್ಷಿತವಾದ ಬಹುಶಃ ಒಂದೇ ಬಾಗಿಲಿರುವ ಒಂದು ನೆಲೆಯಾಗಿತ್ತು. ಉತ್ತರ ವೇದದ ಪಠ್ಯಗಳಲ್ಲಿ ರಸ್ತೆಗಳು, ಅಂಗಡಿಗಳು ಮತ್ತು ಸಂತೆ ಅಥವಾ ನಿವಾಸ ಸ್ಥಳಗಳಿರುವ ಪಟ್ಟಣದ ವಿವರಣೆ ಅಥವಾ ಹೆಸರುಗಳು ಕಾಣುವುದಿಲ್ಲ. ಪಟ್ಟಣಗಳನ್ನು ಪೋಷಿಸುವಷ್ಟು ಆರ್ಥಿಕತೆ ಇನ್ನೂ ಬೆಳೆದಿರಲಿಲ್ಲ.


ರಾಜಕೀಯ ವ್ಯವಸ್ಥೆ: ಋಗ್ವದದ ಅಂತಿಮ ಘಟ್ಟದಲ್ಲಿ ಯಾವುದು ಆರ್ಯರ ಆಕ್ಷೇಯ ದಿಕ್ಕಿನಲ್ಲಿ ಭೌಗೋಳಿಕ ತುದಿಯಾಗಿತ್ತೋ ಅದು ಈಗ ಮಧ್ಯಪ್ರದೇಶವಾಗಿದೆ. ಈ ಪ್ರದೇಶಗಳಲ್ಲಿ ಕುರು, ಪಾಂಚಾಲ, ವಶ, ಉಶೀನ ಬುಡಕಟ್ಟುಗಳು ವಾಸವಿದ್ದವು. ಕುರುಕ್ಷೇತ್ರ ಎಂದು ಕರೆಯಲಾಗುವ ಇಂದಿನ ಪ್ರದೇಶವು ಆಗಿನ ಕುರು ಬುಡಕಟ್ಟಿನ ವಾಸಸ್ಥಳವಾಗಿತ್ತು. ಕೋಸಲ ಮತ್ತು ವಿದೇಹ ಬುಡಕಟ್ಟುಗಳು ಆರ್ಯ ಜನರಿದ್ದ ಪ್ರದೇಶದ ಪೂರ್ವ ತುದಿಯಲ್ಲಿದ್ದವು. ಅಂದರೆ ಈಗಿನ ಉತ್ತರ ಪ್ರದೇಶದ ಈಶಾನ್ಯ ಮತ್ತು ಉತ್ತರ ಬಿಹಾರಗಳಲ್ಲಿ ವಾಸವಿದ್ದರು. ಬುಡಕಟ್ಟುಗಳೇ ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುವ ಪ್ರಧಾನ ಶಕ್ತಿ ಕೇಂದ್ರಗಳಾಗಿದ್ದವು.


ಅಥರ್ವವೇದದ ಕಾಲದಲ್ಲಿ ಪೂರ್ವ ಬಿಹಾರದಲ್ಲಿ ಅಂಗರು ಮತ್ತು ಗಂಗಾನದಿಯ ದಕ್ಷಿಣ ಭಾಗದ ಮಧ್ಯಬಿಹಾರ ಪ್ರದೇಶದಲ್ಲಿ ಮಗಧ ಬುಡಕಟ್ಟುಗಳು ವಾಸವಿದ್ದವು. ಇವರನ್ನು ಶತ್ರುಗಳೆಂದು ಋಷಿಗಳು ಕಾಣುತ್ತಿದ್ದರು. ಇನ್ನೂ ಪೂರ್ವದಲ್ಲಿದ್ದ ಪುಂಡರನ್ನು ಮತ್ತು ದಕ್ಷಿಣದ ಆಂಧ್ರರನ್ನು ಬಹಿಷ್ಕೃತರೆಂದು ಹೇಳಲಾಗಿತ್ತು. ಈ ಬುಡಕಟ್ಟುಗಳು ಇನ್ನೂ ಆರ್ಯರ ಭಾಷೆ ಮತ್ತು ಸಂಸ್ಕೃತಿಗಳಿಂದ ಪ್ರಭಾವಿತರಾಗಿರಲಿಲ್ಲ, ಎಂದರೆ ಅಥರ್ವವೇದ ಕಾಲದಲ್ಲೂ ಬುಡಕಟ್ಟುಗಳು ಸೃಷ್ಟಿಸಿಕೊಂಡಿದ್ದ ರಾಜಕೀಯ ವ್ಯವಸ್ಥೆಯೆ ಮುಂದುವರೆದಿತ್ತು.

ಇಂಡೋ-ಆರ್ಯ ಜನರ ವಲಸೆ ಗಂಗಾನದಿ ದಂಡೆಗೆ ಬಂದದ್ದು ಮತ್ತು ಇರಾನಿಯರು ಭಾರತದ ಗಡಿ ಪ್ರದೇಶ ಮತ್ತು ಪಶ್ಚಿಮ ಪಂಜಾಬಿಗೆ ಬಂದದ್ದು ಅತಿಕ್ರಮಣ ಮತ್ತು ಯುದ್ಧಗಳಿಂದ ಆಗಿರಬಹುದು. ವೈದಿಕ ಬುಡಕಟ್ಟುಗಳು ಬಿಲ್ಲು, ಬಾಣ ಮತ್ತು ಕುದುರೆ ರಥಗಳ ಸಹಾಯದಿಂದ ಗಂಗಾನದಿ ಪ್ರದೇಶದ ಆರ್ಯೇತರ ಬುಡಕಟ್ಟುಗಳ ಮೇಲೆ ತಮ್ಮ ಗೆಲುವನ್ನು ಪಡೆದರು. ಸಾ.ಶ.ಪೂ 800 ನಂತರದಲ್ಲಿ ಕಬ್ಬಿಣದ ಬಳಕೆ ಈ ಗೆಲುವಿಗೆ ಸಹಾಯ ಮಾಡಿದೆ.


ವೈದಿಕ ಬುಡಕಟ್ಟುಗಳಲ್ಲಿ ಹೆಚ್ಚುತ್ತಿದ್ದ ಸೈನಿಕ ಸಾಮರ್ಥ್ಯದಿಂದಾಗಿ ಪ್ರದೇಶಗಳ ವಿಸ್ತರಣೆಯಾಗುತ್ತಿತ್ತು. ಪರಿಣಾಮವಾಗಿ ಬಲಿಷ್ಟ ರಾಜಪ್ರಭುತ್ವಗಳು ರೂಪುಗೊಂಡವು. ಅಥರ್ವವೇದದಲ್ಲಿ, “ಎಲ್ಲಾ ಜನರನ್ನು ಆಳುವವನು, ನರರೊಳಗೆ ದೇವನಿದ್ದ ಹಾಗೆ” ಎಂದು ರಾಜನನ್ನು ವರ್ಣಿಸಲಾಗಿದೆ. ಅಧಿಕಾರ ಮತ್ತು ಸಂಪತ್ತು ಹೆಚ್ಚು ಶೇಖರಣೆಯಾದಂತೆ, ಅದನ್ನು ರಕ್ಷಿಸಿಕೊಳ್ಳಲು, ರಾಜನು ದೇವರಿಗೆ ಸಮಾನ ಅಥವಾ ದೇವರ ಪ್ರತಿನಿಧಿ ಎನ್ನುವ ಕಲ್ಪನೆಯನ್ನು ಸೃಷ್ಟಿಸಲಾಯಿತು. ಈ ಘಟ್ಟದಲ್ಲಿ ಬಲಿ, ತೆರಿಗೆ, ಕಾಣಿಕೆಗಳ ಬಗ್ಗೆ ಉಲ್ಲೇಖಗಳು ಹೆಚ್ಚೆಚ್ಚು ಬರುತ್ತವೆ. ರಾಜನ ಸುತ್ತ ಸಂಕೀರ್ಣ ಮತ್ತು ಶ್ರೀಮಂತಿಕೆಯನ್ನು ಸೂಚಿಸುವ ಆಚರಣೆಗಳು ಬೆಳೆದವು. ರಾಜನು ಅಧಿಕಾರಕ್ಕೆ ಏರಲು 'ರಾಜಸೂಯ' ಹೆಸರಿನ ಪಟ್ಟಾಭಿಷೇಕದ ಆಚರಣೆ ಹುಟ್ಟಿಕೊಂಡಿತು. ರಾಜನ ಅಧಿಕಾರದ ಪ್ರಶ್ನೆಯಾಗಿ 'ಅಶ್ವಮೇಧಯಾಗ ಮಹತ್ವ ಪಡೆದುಕೊಂಡಿತು.


ಧಾರ್ಮಿಕ ವ್ಯವಸ್ಥೆ: ಋಗ್ವದದ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳ ಮುಂದುವರಿಕೆಯಾಗಿ, ಉತ್ತರ ವೇದಗಳ ಕಾಲದಲ್ಲಿ ಅನೇಕ ಬದಲಾವಣೆಗಳು ಮತ್ತು ಸೇರ್ಪಡೆಗಳೊಂದಿಗೆ ಧಾರ್ಮಿಕ ವಿಚಾರಗಳು ಮತ್ತು ಆಚರಣೆಗಳು ಬೆಳೆದವು. ಉತ್ತರ ಋಗೈದ ಕಾಲಕ್ಕೆ ವಿಷ್ಣು ಮತ್ತು ರುದ್ರ ಇಬ್ಬರು ದೇವತೆಗಳು ಪ್ರಮುಖ ಸ್ಥಾನವನ್ನು ಹೊಂದಿದ್ದರು. ವೇದಗಳಿಗೆ ಅನುಬಂಧವಾಗಿ ಬಂದ 'ಬ್ರಾಹ್ಮಣ'ಗಳ ಕಾಲಕ್ಕೆ ಇವರು ವೈದಿಕ ದೇವತೆಗಳ ಸಾಲಿನಲ್ಲಿ ಪ್ರಮುಖರಾದರು. ವಿಷ್ಣುವಿನ ಅವತಾರಗಳ ಬಗ್ಗೆ ನೇರ ಉಲ್ಲೇಖಗಳಿಲ್ಲ. ರುದ್ರನು ಸ್ಥಳೀಯ ದೇವತೆಗಳನ್ನು ಒಳಗೊಳ್ಳುವ ಮೂಲಕ ಅವುಗಳಿಗಿದ್ದ ಪುರಾಣ ಕಥನಗಳನ್ನು ಮತ್ತು ಶಕ್ತಿಗಳನ್ನು ತನ್ನದಾಗಿಸಿಕೊಂಡ ಎನ್ನಲಾಗಿದೆ. ಜಗತ್ತಿನ ಎಲ್ಲಾ ಆಗುಹೋಗುಗಳೂ ಒಂದಲ್ಲ ಒಂದು ಯಜ್ಞದ ಫಲ ಎನ್ನುವ ವಿಧಿ ವಿಧಾನಗಳನ್ನು ಪುರಾಣಗಳಲ್ಲಿ ತರಲಾಯಿತು.


'ಉಪನಿಷದ್'ಗಳಲ್ಲಿ 'ಕರ್ಮ' ಮತ್ತು 'ಆತ್ಮಗಳ ಪುನರ್ಜನ್ಮ' ಎಂಬ ಹೊಸ ಕಲ್ಪನೆಗಳನ್ನು ಹುಟ್ಟುಹಾಕಲಾಯಿತು. ಹುಟ್ಟಿನಿಂದಲೇ ಸ್ಥಾನ ನಿರ್ಣಯ ಮಾಡುವ ಜಾತಿ ವ್ಯವಸ್ಥೆಯ ಮುಂದುವರಿಕೆಗೆ ಇದು ಸಹಾಯ ಮಾಡಿತು. ಜಾತಿ ವ್ಯವಸ್ಥೆಯು ಸಾಂಸ್ಥಿಕ ರೂಪದಲ್ಲಿ ಬೆಳೆಯಲು ಇದು ಅತಿ ಮುಖ್ಯ ತಾತ್ವಿಕ ಆಧಾರವಾಯಿತು.


ಅಶ್ವಮೇಧಯಾಗ


ಅಶ್ವಮೇಧಯಾಗದ ಪ್ರಾರಂಭದಲ್ಲಿ ರಾಜನ ವಿಶೇಷ ಕುದುರೆಯೊಂದನ್ನು ಮುಕ್ತವಾಗಿ ಬಿಡಲಾಗುತ್ತಿತ್ತು. ಅದರ ಹಿಂದೆ ವಿಶೇಷ ಯೋಧರ ದಂಡೊಂದು ಹೋಗುತ್ತಿತ್ತು. ಆದು ಪ್ರವೇಶಿಸಿದ ಪ್ರದೇಶಗಳ ರಾಜರು ಸಾರ್ವಭೌಮತ್ವವನ್ನು ಒಪ್ಪಿ ಅಶ್ವಮೇಧದ ಒಡೆಯನಿಗೆ ಅಧೀನರಾಗಿ ಕಪ್ಪವನ್ನು ನೀಡುತ್ತಿದ್ದರು. ಯಾರಾದರೂ ಕುದುರೆಯನ್ನು ಕಟ್ಟಿಹಾಕಿದರೆ ಅದು ರಾಜನ ಸಾರ್ವಭೌಮತ್ವಕ್ಕೆ ಸವಾಲಾಗುತ್ತಿತ್ತು ಹಾಗೂ ಅದು ಮುಂದಿನ ಸಮರಕ್ಕೆ ನಾಂದಿಯಾಗುತ್ತಿತ್ತು. ಹೀಗೆ ಪ್ರದೇಶಗಳನ್ನೆಲ್ಲ ಜಯಿಸಿಕೊಂಡು ಅಧೀನಗೊಳಿಸಿದ ನಂತರ ಅಶ್ವಮೇಧಯಾಗವನ್ನು ಮಾಡಲಾಗುತ್ತಿತ್ತು. ಬಹುತೇಕ ಎಲ್ಲ ಪ್ರಮುಖ ಆರಸರ ಮಹದಾಸೆ ಇದಾಗಿತ್ತು.


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಭಾರತದ ಪ್ರಾಚೀನ ನಾಗರಿಕತೆಗಳು.

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.