PC Notes

KPSC EXAM

Saturday, December 10, 2022

KAS ಅಧಿಕಾರಿ (ಗೆಜೆಟೆಡ್ ಪ್ರೊಬೇಷನರ್) ಹುದ್ದೆಗಳ ನೇಮಕಾತಿ ಮಾಹಿತಿ : Recruitment Information for KAS Officer (Gazetted Probationer) Posts.

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Saturday, December 10, 2022

KAS ಅಧಿಕಾರಿ (ಗೆಜೆಟೆಡ್ ಪ್ರೊಬೇಷನರ್) ಹುದ್ದೆಗಳ ನೇಮಕಾತಿ ಮಾಹಿತಿ : Recruitment Information for KAS Officer (Gazetted Probationer) Posts.



(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಸುವ ಗೆಜೆಟೆಡ್ ಪ್ರೊಬೇಷನರ್ ಪೂರ್ವಭಾವಿ ಪರೀಕ್ಷೆಗೆ ಸದ್ಯದಲ್ಲಿಯೇ ಅಧಿಸೂಚನೆ ಹೊರಡಿಸುವ ಸಾಧ್ಯತೆಗಳಿದ್ದು ಈ ಪರೀಕ್ಷೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಕೆಎಎಸ್‌ ಪರೀಕ್ಷೆ ಬರೆಯಲು ಇಚ್ಛಿಸುವ ಮತ್ತು ಇದೀಗ BA, B.Com, B.Sc., BE, MBBS, BBA, BSW ಮುಗಿಸಿರುವ ಅಭ್ಯರ್ಥಿಗಳಿಗೆ ಈ ಮಾಹಿತಿ ಅತ್ಯುಪಯುಕ್ತವಾಗಿದೆ.

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಶೈಕ್ಷಣಿಕ ವಿದ್ಯಾರ್ಹತೆ


ಅಭ್ಯರ್ಥಿಯು ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದ ಸ್ನಾತಕ/ ಸ್ನಾತಕೋತ್ತರ ಪದವಿಯನ್ನು ಹೊಂದಿರತಕ್ಕದ್ದು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು, ಅಭ್ಯರ್ಥಿಗಳು ಯಾವುದಾದರೂ ಪರೀಕ್ಷೆಗೆ ಹಾಜರಾಗಿದ್ದು, ಆಯೋಗವು ನಡೆಸುವ ಪೂರ್ವಭಾವಿ ಪರೀಕ್ಷೆಗೆ ಶೈಕ್ಷಣಿಕವಾಗಿ ಅರ್ಹರಾಗುವುದಾದಲ್ಲಿ, ಆದರೆ ಆ ಪರೀಕ್ಷೆಯ ಫಲಿತಾಂಶ ಪಕಟಗೊಳ್ಳದೇ ಇದ್ದಲ್ಲಿ, ಅಂತಹ ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆಗೆ ಪವೇಶ ಪಡೆಯಲು ಅರ್ಹರಾಗುತ್ತಾರೆ.

ವಯೋಮಿತಿ


ಅರ್ಜಿಯನ್ನು On-line ಮೂಲಕ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು 21 ವರ್ಷ ಪೂರೈಸಿರತಕ್ಕದ್ದು ಹಾಗೂ ಗರಿಷ್ಟ ವಯೋಮಿತಿಯನ್ನು ಈ


• ಸಾಮಾನ್ಯ ಅರ್ಹತೆ  - 35 ವರ್ಷ

•ಪ್ರವರ್ಗ – 2ಎ, 2ಬಿ, 3ಎ, 3ಬಿ – 38 ವರ್ಷ 

•ಪ ಜಾ/ ಪ. ಪಂ / ಪ- 1 - 40 ವರ್ಷ

ಪರೀಕ್ಷಾ ವಿಧಾನ


ಪೂರ್ವಭಾವಿ ಪರೀಕ್ಷೆ ಪ್ರಿಲಿಮಿನರಿ ಎಕ್ಸಾಮಿನೇಷನ್) ಮುಖ್ಯ ಪರೀಕ್ಷೆಗೆ (ಮೈನ್ ಎಕ್ಸಾಮಿನೇಷನ್) ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ


ಮುಖ್ಯ ಪರೀಕ್ಷೆ (ಲಿಖಿತ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ): ಅಭ್ಯರ್ಥಿಗಳನ್ನು ವಿವಿಧ ಸೇವೆಗಳು ಮತ್ತು ಹುದ್ದೆಗಳಿಗೆ ಆಯ್ಕೆ ಮಾಡುವ ಸಲುವಾಗಿ,


ಪೂರ್ವಭಾವಿ ಪರೀಕ್ಷೆ: ಪೂರ್ವಭಾವಿ ಪರೀಕ್ಷೆಯ ವಸ್ತುನಿಷ್ಠ (ಬಹು ಆಯ್ಕೆ ಮಾದರಿಯ ಎರಡು ಪತ್ರಿಕೆಗಳನ್ನು ಒಳಗೊ೦ಡಿರುತ್ತದೆ.


* ಪ್ರತಿ ಪ್ರಶ್ನೆಗೆ ಎರಡು ಅಂಕಗಳಂತೆ ಪ್ರತಿ ಪತಿಕೆಯು 200 ಅ೦ಕಗಳದ್ದಾಗಿರುತ್ತದೆ. ಪ್ರತಿ ಪತ್ರಿಕೆಯಲ್ಲಿ 100 ಪ್ರಶ್ನೆಗಳು, - kpsc2019

• ಪ್ರಶ್ನೆ ಪತ್ರಿಕೆಯನ್ನು ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಮುದ್ರಿಸಲಾಗಿರುತ್ತದೆ.

ಋಣಾತ್ಮಕ ಮೌಲ್ಯಮಾಪನ


1) ಪ್ರತಿಯೊಂದು ಪ್ರಶ್ನೆಗೂ 04 ಪರ್ಯಾಯ ಉತ್ತರಗಳಿದ್ದು,


ಅಭ್ಯರ್ಥಿಯು ಸದರಿ ಪ್ರಶ್ನೆಗೆ ನಮೂದಿಸುವ ಪ್ರತಿಯೊಂದು


ತಪ್ಪು ಉತ್ತರಕ್ಕೆ ಸಂಬಂಧಿಸಿದಂತೆ ನಾಲ್ಕನೇ ಒಂದಂಶದಷ್ಟು


(1/4) ಅಂಕಗಳನ್ನು ಕಳೆಯಲಾಗುವುದು. 

2) ಅದೇ ರೀತಿ ಅಭ್ಯರ್ಥಿಯು ಒಂದೇ ಪ್ರಶ್ನೆಗೆ ಒಂದಕ್ಕಿಂತ ಹೆಚ್ಚಿನ ಉತ್ತರಗಳನ್ನು ನಮೂದಿಸಿದ್ದಲ್ಲಿ ಹಾಗೂ ಅದರಲಿ ನಮೂದಿಸಿರುವ ಒಂದು ಉತ್ತರವು ಸರಿಯಾಗಿದ್ದರೂ ಸಹ ಅದನ್ನು ತಪ್ಪು ಉತ್ತರವೆಂದು ಪರಿಗಣಿಸಿ ಮೇಲ್ಕಂಡಂತೆ ಅಂಕಗಳನ್ನು ಕಳೆಯಲಾಗುವುದು.


ಅಭ್ಯರ್ಥಿಯು ಯಾವುದೇ ಪ್ರಶ್ನೆಗೆ ಉತ್ತರವನ್ನು ನಮೂದಿಸದೇ ಖಾಲಿ ಬಿಟ್ಟಿದ್ದಲ್ಲಿ ಅಂತಹ ಪ್ರಶ್ನೆಗೆ ಋಣಾತ್ಮಕ ಅಂಕಗಳನ್ನು ಕಳೆಯಲಾಗುವುದಿಲ್ಲ.

ಪರೀಕ್ಷೆಯ ಪಠ್ಯಕ್ರಮ


ಪೂರ್ವಭಾವಿ ಪರೀಕ್ಷೆ: (ವಸ್ತುನಿಷ್ಠ ಮಾದರಿ)


ಪತ್ರಿಕೆ-1


1) ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು.

ii) ಮಾನವಿಕ ಶಾಸ್ತ್ರ-ಭಾರತದ ಇತಿಹಾಸ-ಕರ್ನಾಟಕವನ್ನು ಪ್ರಾಮುಖ್ಯವಾಗಿರಿಸಿಕೊಂಡು ಭಾರತದ ರಾಷ್ಟ್ರೀಯ ಚಳುವಳಿಗೆ ಹೆಚ್ಚಿನ ಗಮನ ನೀಡಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯವಾಗಿ ಇತಿಹಾಸ ವಿಷಯದ ಬಗ್ಗೆ ಅಭ್ಯರ್ಥಿಯ ವಿಸ್ತಾರವಾದ ಸಾಮಾನ್ಯ ತಿಳುವಳಿಕೆ,


iii) ಕರ್ನಾಟಕದ ಬಗ್ಗೆ ಹೆಚ್ಚಿನ ಗಮನ ನೀಡುವುದರೊಂದಿಗೆ ಜಾಗತಿಕ ಭೂಗೋಳ ಶಾಸ್ತ್ರ ಮತ್ತು ಭಾರತದ ಭೂಗೋಳ


iv) ದೇಶದ ರಾಜಕೀಯ ವ್ಯವಸ್ಥೆ, ಗ್ರಾಮೀಣಾಭಿವೃದ್ಧಿ, ಭಾರತದ ನಿರಂತರ ಅಭಿವೃದ್ಧಿಗೆ ಯೋಜನೆ ಮತ್ತು ಆರ್ಥಿಕ ಸುಧಾರಣೆಗಳು, ಬಡತನ ನಿರ್ಮೂಲನೆ, ಜನಸಂಖಾರ, ಸಾಮಾಜಿಕ ಬದಲಾವಣಗಳನ್ನು ಒಳಗೊಂಡಂತೆ ಭಾರತದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆ

ಪತ್ರಿಕೆ-2


i) ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು.


ii) ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಪರಿಸರ ವಿಜ್ಞಾನ-ವಿಷಯದಲ್ಲಿ ಪ್ರಾವೀಣ್ಯತೆ ಬೇಕಾಗಿಲ್ಲದೆ ಆರೋಗ್ಯ, ಪರಿಸರ ವಿಜ್ಞಾನ, ಜೈವಿಕ ವೈವಿಧ್ಯತೆ ಮತ್ತು ಹವಾಮಾನ ಬದಲಾವಣೆಗಳು ಇವುಗಳನ್ನೊಳಗೊಂಡಂತೆ ಯಾವುದೇ ವಿಜ್ಞಾನ ವಿಷಯವನ್ನು ವಿಶೇಷವಾಗಿ ಅಧ್ಯಯನ ಮಾಡದಿರುವ ಒಬ್ಬ ಸುಶಿಕ್ಷಿತ ವ್ಯಕ್ತಿಯಿಂದ ನಿರೀಕ್ಷೆ ಮಾಡುವಂತೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಮಕಾಲೀನ ಬೆಳವಣಿಗೆಗಳು.


iii) ಸಾಮಾನ್ಯ ಮನೋಸಾಮರ್ಥ್ಯ-ಮನೋಶಕ್ತಿ, ಗ್ರಹಿಸುವಿಕೆ, ತಾರ್ಕಿಕ ಪ್ರತಿಪಾದನೆ ಮತ್ತು ವಿಶ್ಲೇಷಣಾ ಸಾಮರ್ಥ್ಯ, ನಿರ್ಧಾರ ತೆಗೆದುಕೊಳ್ಳುವಿಕೆ, ಸಮಸ್ಯೆ ಬಿಡಿಸುವಿಕೆ, ಮೂಲ ಗಣಿತ ಜ್ಞಾನ (ಸಂಖ್ಯೆಗಳು ಮತ್ತು ಅವುಗಳ ಸಂಬಂಧಗಳು, ಅವುಗಳ ಪರಿಮಾಣ ಇತ್ಯಾದಿ) ಮತ್ತು ದತ್ತಾಂಶದ ವ್ಯಾಖ್ಯಾನ (ನಕ್ಷೆಗಳು, ರೇಖಾಚಿತ್ರಗಳು, ಕೋಷ್ಟಕಗಳು, ದತ್ತಾಂಶದ ದಕ್ಷತೆ, ಇತ್ಯಾದಿ-ಹತ್ತನೇ ತರಗತಿ/ ಎಸ್.ಎಸ್.ಎಲ್.ಸಿ ಪರೀಕ್ಷೆ ಮಟ್ಟದಲ್ಲಿ).


• ಮುಖ್ಯ ಪರೀಕ್ಷೆ: ಮುಖ್ಯ ಪರೀಕ್ಷೆಯು ಲಿಖಿತ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಯನ್ನು ಒಳಗೊಂಡಿರುತ್ತದೆ.


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading KAS ಅಧಿಕಾರಿ (ಗೆಜೆಟೆಡ್ ಪ್ರೊಬೇಷನರ್) ಹುದ್ದೆಗಳ ನೇಮಕಾತಿ ಮಾಹಿತಿ : Recruitment Information for KAS Officer (Gazetted Probationer) Posts.

Previous
« Prev Post

No comments:

Ad Code

Blog Archive

My Blog List

Blog Archive

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.