PC Notes

KPSC EXAM

Saturday, December 10, 2022

Panchayati raj amendment bill karnataka : ಕರ್ನಾಟಕದ ಪಂಚಾಯತ್ ರಾಜ್ ಕಾಯ್ದೆ.

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Saturday, December 10, 2022

ಕರ್ನಾಟಕದ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ಅಂಗೀಕಾರ.



(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಕರ್ನಾಟಕ ರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕದ ಕರಡನ್ನು ರಾಜ್ಯ ಸಚಿವ ಸಂಪುಟವು ಅನುಮೋದಿಸಿದ್ದು, ನವೆಂಬರ್ 16 ರಂದು ಆರಂಭವಾದ ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ ಮಾಡಲಾಯಿತು. ಈ ವಿಧೇಯಕಕ್ಕೆ ರಾಜ್ಯ ವಿಧಾನಮಂಡಲದಲ್ಲಿ ಅಂಗೀಕಾರ ದೊರೆತಿದ್ದು, ರಾಜ್ಯಪಾಲರ ಅಂಕಿತವನ್ನು ಪಡೆಯಬೇಕಾಗಿದೆ. ರಾಜ್ಯಪಾಲರ ಅಂಕಿತ ಪಡೆದ ನಂತರ ಈ ವಿಧೇಯಕವು ರಾಜ್ಯದಲ್ಲಿ ಜಾರಿಗೆ ಬರಲಿದೆ. 73ನೇ ಸಂವಿಧಾನಾತ್ಮಕ ತಿದ್ದುಪಡಿಯ ಆಧಾರದಂತೆ, 1993ರಲ್ಲಿ ಕರ್ನಾಟಕ ಪಂಚಾಯತ್‌ ರಾಜ್ ಕಾಯ್ದೆಯನ್ನು ಅಂದಿನ ವೀರಪ್ಪ ಮೊಯ್ಲಿ ಸರ್ಕಾರವು ಜಾರಿಗೆ ತಂದಿತ್ತು. ಪ್ರಸ್ತುತವಾಗಿ ಈ ಕಾಯ್ದೆಗೆ ಅನೇಕ ತಿದ್ದುಪಡಿಗಳನ್ನು ತಂದು, ಮತ್ತಷ್ಟು ವಿಕೇಂದ್ರೀಕರಿಸುವ ಮತ್ತು ಪಂಚಾಯಿತಿಗಳಿಗೆ ಹೆಚ್ಚಿನ ಬಲವನ್ನು ನೀಡುವ ಉದ್ದೇಶದಿಂದ ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ಹಾಗೂ ಹಾಲಿ ಶಾಸಕರಾದ ರಮೇಶ್ ಕುಮಾರ್‌ರವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ನೇಮಿಸಲಾಗಿತ್ತು.

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಈ ಸಮಿತಿಯು ಪಂಚಾಯತ್ ರಾಜ್ ವ್ಯವಸ್ಥೆಗೆ ಸಂಬಂಧಿಸಿದಂತೆ ಅನೇಕ ಶಿಫಾರಸ್ಸುಗಳನ್ನು ನೀಡಿತ್ತು. ಇಂತಹ ಶಿಫಾರಸ್ಸುಗಳನ್ನು ಪರಿಶೀಲಿಸಲು ಉಪಸಮಿತಿಯನ್ನು ನೇಮಿಸಲಾಗಿತ್ತು. ಉಪಸಮಿತಿಯು ಶಿಫಾರಸ್ಸುಗಳನ್ನು ಪರಿಶೀಲಿಸಿ, ಅಂತಿಮಗೊಳಿಸಿರುವ ತಿದ್ದುಪಡಿ ವಿಧೇಯಕಕ್ಕೆ ಸಚಿವ ಸಂಪುಟವು ಒಪ್ಪಿಗೆ ನೀಡಿತು. ಈ ವಿಧೇಯಕವನ್ನು ವಿಧಾನಮಂಡಲದಲ್ಲಿ ಮಂಡನೆ ಮಾಡಿ ಅಂಗೀಕಾರವನ್ನು ಕೂಡ ಪಡೆಯಲಾಗಿದೆ. ಶೀಘ್ರದಲ್ಲೇ ವಿಧೇಯಕವು ಜಾರಿಗೆ ಬರಲಿದೆ.

ಪ್ರಮುಖ ಶಿಫಾರಸ್ಸುಗಳು:-


1) ವಾರ್ಡ್‌ಸಭೆ ಮತ್ತು ಗ್ರಾಮಸಭೆಗಳು ಮಾತ್ರವಲ್ಲದೇ ಹಟ್ಟಿ, ತಾಂಡಾ, ಮತ್ತಿತರ ಜನವಸತಿ ಪ್ರದೇಶಗಳ ಸಭೆಗಳನ್ನು ಕನಿಷ್ಠ 6 ತಿಂಗಳಿಗೊಮ್ಮೆ ನಡೆಸಬೇಕು.


2) ಮೂರು ಹಂತದ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರಾವಧಿಯನ್ನು 5 ವರ್ಷಗಳಿಗೆ ನಿಗದಿ ಮಾಡಲು ಶಿಫಾರಸ್ಸು ನೀಡಿದೆ.


3) ಪಂಚಾಯಿತಿಗೆ ಹೆಚ್ಚು ಹಣಕಾಸು ಹಂಚಿಕೆ ನೀಡುವಂತೆ


ಶಿಫಾರಸ್ಸು ಮಾಡಿದೆ. 

4) ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ರಾಜ್ಯ ಸಚಿವ ದರ್ಜೆಯ ಸ್ಥಾನ ನೀಡಬೇಕೆಂದು, ಶಿಫಾರಸ್ಸು ನೀಡಲಾಗಿದೆ.


5) ಜಿಲ್ಲಾ ಪಂಚಾಯಿತಿಯ ಸಿ.ಇ.ಒ ಸೇರಿ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ದಾಖಲಿಸುವ ಅಧಿಕಾರವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ನೀಡಲಾಗಿದೆ.


6) ಮೂರು ಹಂತದ ಪಂಚಾಯಿತಿ ಅಧ್ಯಕ್ಷರು ಆಪ್ತ ಸಹಾಯಕರನ್ನು ಹೊಂದುವ ಹಾಗೂ ಪಂಚಾಯತ್ ರಾಜ್ ಆಡಳಿತ ಸೇವೆ, ಎಂಬ ಪ್ರತ್ಯೇಕ ವೃಂದ ಸೃಷ್ಟಿಸುವಂತೆ ಶಿಫಾರಸ್ಸು ಮಾಡಲಾಗಿದೆ.


7) ಪಂಚಾಯಿತಿ ಸದಸ್ಯರುಗಳಿಗೂ ಆಸ್ತಿ ವಿವರಗಳನ್ನು ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.


16

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading Panchayati raj amendment bill karnataka : ಕರ್ನಾಟಕದ ಪಂಚಾಯತ್ ರಾಜ್ ಕಾಯ್ದೆ.

Previous
« Prev Post

No comments:

Ad Code

Blog Archive

My Blog List

Blog Archive

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.