PC Notes

KPSC EXAM

Friday, December 2, 2022

ಸಸ್ಯ ಅಂಗಾಂಶ Plant Tissues KAS Science Notes

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, December 2, 2022

ಶೀರ್ಷಿಕೆ: ಸಸ್ಯ ಅಂಗಾಂಶ Plant Tissues KAS Science Notes



(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಫೈಲ್ ಭಾಷೆ: ಕನ್ನಡ/ಇಂಗ್ಲಿಷ್

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

 
ಸಸ್ಯ ಅಂಗಾಂಶ

Plant Tissues

  




ಸಸ್ಯ ಅಂಗಾಂಶ Plant Tissues


ಅಂಗಾಂಶಗಳು (Tissues)

 


* ಒಂದೇ ಮೂಲದಿಂದ ಉಗಮ ಹೊಂದಿ ಒಂದೇ ರೀತಿಯ ಕಾರ್ಯ ಗಳನ್ನು ನಿರ್ವಹಿಸುವ ಜೀವಕೋಶಗಳ ಹಕ್ಕೆಅಂಗಾಂಶ” (Tissues). ವಕೋಶಗಳು ಯಾವುದೇ ಮೂಲಭೂತ, ರಚನಾತ್ಮಕ 3 ಮತ್ತು ಪ್ರಿಯಾತ್ಮಕ ಘಟಕಗಳಾಗಿದ್ದು, ಫಲವಾರು ಜೀವಕೋಶಗಳ ಸಮೂಹವೇಅಂಗಾಂಶ

ಹಿಸ್ಟಾಲಜಿ (Histology):- ಅಂಗಾಂಶಗಳ ಬಗ್ಗೆ ಅಧ್ಯಯಸ್ತವಾಗಿದೆ.

1.ಸಸ್ಯ ಅಂಗಾಂಶಗಳು

2.ಪ್ರಾಣಿ ಅಂಗಾಂಶಗಳು

1. ವರ್ಧನ ಅಂಗಾಂಶ

(Meristematic Tissue)


ಸಸ್ಯದ ಜೀವನದುದ್ದಕ್ಕೂ ವಿಭಜನೆಯಾಗುವ ಅಂಗಾಂಶ, ಇದು ಸಸ್ಯದ ನಿರ್ದಿಷ್ಟ ಭಾಗಗಳಲ್ಲಿ ಕಂಡು ಬರುತ್ತದೆ. ಸಸ್ಯದ ಸಂಪೂರ್ಣ ಬೆಳವಣಿಗೆಯ ಮೇಲೆ ಪ್ರಭಾವ ಹೊಂದಿದೆ.

 

ತುದಿ ವರ್ಧನ ಅಂಗಾಂಶ (Apical Meristem) ಸಸ್ಯದ ಕಾಂಡ, ಬೇರಿನ ತುದಿಗಳಲ್ಲಿ ನೆಲೆಗೊಂಡು ಸಸ್ಯದ ಬೇರಿನ ಉದ್ದವನ್ನು ಹೆಚ್ಚಿಸುವ ಅಂಗಾಂಶವಾಗಿದೆ. ಎಲೆಗ ಬೆಳವಣಿಗೆ ಹಾಗೂ ಕಾಂಡದ ಉದ್ದನೆಯ ಬೆಳವಣಿಗೆ ಸಂದರ್ಭದಲ್ಲಿ ಕಾಂಡದ ತುದಿಯಲ್ಲಿರುವ ಕೆಲವು ಜೀವಕೋಶಗಳು ಹಿಂದೆ ಉಳಿದುಕಂಕುಳ ಮೊಗ್ಗಾಗಿ (Axillary bud) ಸ್ಥಾಪಿತವಾಗುತ್ತವೆ. ಇವು ಮುಂದೆ ರೆಂಬೆ ಕೊಂಬೆಗಳ ಬೆಳವಣಿಗೆಗೆ ಕಾರಣವಾಗುತ್ತವೆ.

 

2. ಪಾಶ್ವ ವರ್ಧನ (Lateral leristem)

ಬೇರು ಹಾಗೂ ಕಾಂಡದ ತಿರುಳನ್ನು ತಯಾರಿಸುವ ಕೊ ರೂಪದ ವರ್ಧನ ಅಂಗಾಂಶವಾಗಿದ್ದು ಕಾಂಡ ಮತ್ತು ಬೇ ಸುತ್ತಳತೆಯನ್ನು ಹೆಚ್ಚಿಸುತ್ತದೆ.

 

3. ಅಂತರಗೆಣ್ಣು ವರ್ಧನ ಅಂಗಾಂಶ (Intercalary Meristem)

 

ಕಾಂಡದ ಅಂತರಗಣ್ಣುಗಳ ನಡುವಿನ ಉದ್ದವನ್ನು ಹೆಚ್ಚಿಸುತ್ತ ಮತ್ತು ಪ್ರಮುಖವಾಗಿ ಹುಲ್ಲಿನಲ್ಲಿ ಕಂಡು ಬರುವ ಇದು ಸಸ್ಯಹಾರಿ ಪ್ರಾಣಿಗಳು ಮೇಯ್ದ ಭಾಗಗಳನ್ನು ಪನರ್ನಿವ ಮಾಡುತ್ತದೆ.

 

2. ಶಾಶ್ವತ ಅಂಗಾಂಶ (Permanent Tissue)


Cytoplasm- ಅಂಗಾಂಶದ ಜೀವಕೋಶಗಳು ಪ್ರೌಡತೆಯನ್ನು ಗಳಿಸಿಕೊಂಡು ತಮ್ಮ ಕೋಶ ವಿಭಜನೆ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಇದರ 'ಪರಿಣಾಮವಾಗಿ ಶಾಶ್ವತ ಅಂಗಾಂಶಗಳಾಗಿರುತ್ತವೆ. (ಶಾಶ್ವತ ರೂಪ, ಮತ್ತು ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯ ಪಡೆಯುತ್ತವೆ).

 

1. ಸರಳ ಶಾಶ್ವತ ಅಂಗಾಂಶ (Simple Permanent Tissue)


ಶಾಶ್ವತ ಅಂಗಾಂಶದ ಎಲ್ಲಾ ಜೀವಕೋಶಗಳು ರಚನೆ ಮತ್ತು ಕಾರ್ಯದಲ್ಲಿ ಹೋಲಿಕೆ ಹೊಂದಿದ್ದರೆ ಸರಳ ಶಾಶ್ವತ ಅಂಗಾಂಶಗಳೆನ್ನುವರು.

 

2.ಪ್ಯಾರಂಕೈಮಾ (Parenchyma)

 ಇಲ್ಲಿ ಜೀವಕೋಶಗಳು ಸಮವ್ಯಾಸವಾಗಿರುತ್ತವೆ. ಇವು ದುಂಡಾಗಿ ಅಂಡಾಕಾರ, ಬಹುಕೋನ ಅಥವಾ ಉದ್ದನೆಯ ಆಕಾರವನ್ನು ಹೊಂದಿರುತ್ತವೆ. ಕೋಶಬಿತ್ತಿಯು ತೆಳುವಾಗಿದ ಸೆಲ್ಯೂಲೋಸ್ನಿಂದಾಗಿರುತ್ತದೆ. ಜೀವಕೋಶಗಳು ಒತ್ತೊತ್ತಾ ಸರಳವಾಗಿ ಜೋಡಣೆಗೊಂಡಿರುತ್ತವೆ. (ಅಂತರ ಕೋಶೀಯ ಕೋಶಾವಕಾಶ ಹೆಚ್ಚು)

 

ಪ್ಯಾರಂಕೈಮಾ ರಂಕೈಮವು ದ್ಯುತಿಸಂಶ್ಲೇಷಣೆ, ಆಹಾರ ಸಂಗ್ರಹಣೆ, ಸ್ರವಿಸುವಿಕೆ ಮುಂತಾದ ಬಗೆಯ ಕಾರ್ಯಗಳನ್ನು ನಿರ್ವಹಿಸುತ್ತದೆ.

ಇದರಲ್ಲಿ 2 ವಿಧಗಳು

1.ಕ್ಲೋರೆಂಕೈಮಾ (Chlorenchyma)


ಅಂಗಾಂಶದ ಜೀವಕೋಶಗಳಲ್ಲಿ ಪತ್ರಹರಿತ್ತು (Chlorophyll) ಕಂಡುಬರುತ್ತಿದ್ದು ಸಸ್ಯಗಳಲ್ಲಿ ದ್ಯುತಿಸಂಶ್ಲೇಷಣಾ ಕ್ರಿಯೆ (Photosynthosis) ಅನ್ನು ನೆರವೇರಿಸಿ ಪೋಷಣೆಯನ್ನು ನೀಡುತ್ತದೆ

2.ಏರೆಂಕೈಮಾ (Acrenchyma)

ಅಂಗಾಂಶದ ಜೀವಕೋಶಗಳ ನಡುವೆ ಗಾಳಿ ಚೀಲಗಳು ಅಥವಾ ಖಾಲಿ ಜಾಗಗಳು ಸಸ್ಯದ ಎಲೆ, ಕಾಂಡ, ಬೇರುಗಳ ಕಂಡು ಬರುತ್ತಿದ್ದು ಇದರಿಂದಾಗಿ ಸಸ್ಯಗಳು ನೀರಿನಲ್ಲಿ ತೇಲಲ ಸಹಕಾರಿಯಾಗುತ್ತದೆ.

ಉದಾಹರಣೆಗೆ: Hydrophytes/ Halophytes


ಕೋಲಂಕೈಮಾ (Collenchyma)

 ಅಂಡಾಕಾರ, ದುಂಡಾಕಾರ, ಬಹುಕೋನಾಕೃತಿ ಅಂಗಾಂಶದ ಜೀವಕೋಶಗಳ ಹೊರಪದರವು ಸೆಲ್ಯೂಲೋಸ್, ಹೆಮಿಸೆಲ್ಯೂಲೋಸ್ ಮತ್ತು ಪೆಕ್ಟಿನ್ ಶೇಖರಣೆಯಿಂದ ದಪ್ಪವಾಗಿರುತ್ತದೆ. ಕೋಶಗಳ ನಡುವೆ ಅಂತರಕೋಶಾವಕಾಶ ಇರುವುದಿಲ್ಲ ಇವು ಬೆಳೆಯುವ ಭಾಗಗಳಾದ ಚಿಗುರು ಕಾಂಡ ಮತ್ತು ಎಲೆಯ ತೊಟ್ಟುಗಳಿಗೆ ಆಧಾರ ನೀಡುತ್ತವೆ.

 

ಸಿ.ಸ್ಕ್ಲೆರೆಂಚೈಮಾ (Selerenchyma)


ಅಂಗಾಂಶದ ಜೀವಕೋಶಗಳು ಉದ್ದವಾದ ಆದರೆ ಅಗಲವಿಲ್ಲದ ಲಿಗ್ನಿನ್ಯುಕ್ತ ದಪ್ಪ ಕೋಶಭಿತ್ತಿ ಇರುವ ಹಾಗೂ ಅಲ್ಲಲ್ಲಿ ಕುಳಿಗಳನ್ನೊಳಗೊಂಡಿದೆ. ಸಾಮಾನ್ಯವಾಗಿ ಇವು ಪ್ರೋಟೋಪ್ಲಾಸ್ಟ್ಗಳಿಲ್ಲದ ಸತ್ತ ಜೀವಕೋಶಗಳಾಗಿ, ಉಗಮ, ರಚನೆ, ಆಧರಿಸಿ ನಾರು (Fiber) ಅಥವಾ ರೈಡ್ (Scleroids) ಎನ್ನುವರು.

ನಾರುಗಳು ದಪ್ಪ ಬಿತ್ತಿಯುಳ್ಳ, ಉದ್ದವಾದ ಮತ್ತು ಚೂಪಾದ ಕೋಶಗಳು.ಸ್ಕ್ಲೀರೈಡ್ಗಳು ದುಂಡಾಕಾರ, ಅಂಡಾಕಾರ, ಕೊಳವೆಯಾಕಾರದ ಅತಿ ಗಡುಸಾದ ನಿರ್ಜೀವ ಕೋಶಗಳು,

ಇವು ಸಸ್ಯಕ್ಕೆ ಗಡುಸುತನವನ್ನು ನೀಡುತ್ತದೆ, ಬೀಜಗಳ ಕವಚ, ಕಾಯಿಗಳ ಗಟ್ಟಿ ಭಾಗ, ಹಣ್ಣುಗಳ ಹೊರ ಕವಚ, ಎಲೆಯ ಕವಚ, ಕಾಂಡದ ಗಡುಸುತನಕ್ಕೆ ಕಾರಣವಾಗಿ, ಸಸ್ಯ ಬಾಗಿ ಮತ್ತೆ ತನ್ನ ಸ್ಥಾನಕ್ಕೆ ಬರುವ ಶಕ್ತಿಯನ್ನು ನೀಡಿದೆ.

ಹೊರದರ್ಮ (Epidermis)


ಸಸ್ಯದ ಅತ್ಯಂತ ಹೊರಗಿನ ಕವಚವಾಗಿದ್ದು ಹೊರದರ್ಮ ಕೋಶಗಳು, ಪತ್ರರಂಧ್ರಗಳು (Stomata) ಮತ್ತು ರೋಮಗಳನ್ನು ಒಳಗೊಂಡಿರುತ್ತದೆ ("ಸಸ್ಯದ ಚರ್ಮ ಎನ್ನುವರು")

ಹೊರದರ್ಮದ ಹೊರಮೈ ಮೇಣ (Wax) ದಂತಹ ದಪ್ಪ ಪದರ ಹೊಂದಿದ್ದು ಇದನ್ನು ಕ್ಯುಟಿಕಲ್ (Cuticle) ಎನ್ನುವರು

ಬೇರುಗಳಲ್ಲಿನ ಹೊರದರ್ಮ ಕೋಶಗಳು ಪೋಷಾಕಾಂಶ ಗಳನ್ನು ಮಣ್ಣಿನಿಂದ ಹೀರಿಕೊಳ್ಳಲು ಸಹಕಾರಿಯಾಗಿವೆ.

ಎಲೆಯ ತೊಗಟೆಯು ನಿರ್ಜೀವಕೋಶಗಳಿಂದಾಗಿರುತ್ತದೆ. ತೊಗಟೆಯ ಪದರಗಳಲ್ಲಿಸುಬೆರಿನ್ಇರುತ್ತದೆ. ಇದು ಕಾಂಡದೊಳಗೆ ನೀರು ಮತ್ತು ಗಾಳಿ ಪ್ರವೇಶಿಸದಂತೆ ತಡೆಯುತ್ತದೆ.

 

3. ಸಂಕೀರ್ಣ ಶಾಶ್ವತ ಅಂಗಾಂಶ (Complex permanent Tissue)


ಸಂಕೀರ್ಣ ಶಾಶ್ವತ ಅಂಗಾಂಶಗಳು ಒಂದಕ್ಕಿಂತ ಹೆಚ್ಚು ಬಗೆಯ ಜೀವಕೋಶಗಳನ್ನು ಹೊಂದಿದ್ದು ಒಂದು ಘಟಕವಾಗಿ ಕಾರ್ಯನಿರ್ವಹಿಸುತ್ತದೆ. ಇವು ನಾಳಕೂರ್ಚ (Vascular bundle) ಗಳನ್ನು ನಿರ್ಮಿಸುತ್ತವೆ.

 

1.   ಕೆಮ್ (Xylcm) (ಜಲವಾದಕ ಅಂಗಾಂಶ)

 

ಬೇರಿನಿಂದ ನೀರು ಮತ್ತು ಖನಿಜಗಳನ್ನು ಕಾಂಡ ಹಾಗೂ ಎಲೆಗಳಿಗೆ

ಸರಬರಾಜು ಮಾಡುವ ಅಂಗಾಂಶವಾಗದೆ.ಇದು ಏಕಮುಖ ಚಲನೆಯನ್ನು ಹೊಂದಿದೆಕೈಲಮ್ನಾರು ನೀರಳಿಕೆ (Tracheids), ನಾಳಗಳು (Vessels), (Xylem fibre) ಲಮ್' ಪ್ಯಾರಂಕೈಮಾ (Xylem parenchyma) ಎಂಬ 4 ಘಟಕಗಳಿಂದಾಗಿದೆ.

 

2 ಫ್ಲೋಯಮ್ (Phloem)


(ಆಹಾರವಾದಕ ಅಂಗಾಂಶವಾಗಿದೆ) ಆಹಾರ ಮತ್ತು ಪೋಷಕಾಂಶಗಳನ್ನು ಸಸ್ಯದ ಎಲ್ಲಾ ಭಾಗಗಳಿಗೆ ಸಾಗಿಸುತ್ತದೆ. ಇದು ಬಹುಮುಖ ಚಲನೆಯನ್ನು ಹೊಂದಿದೆ.

 

ಆವೃತ್ತ ಬೀಜ ಸಸ್ಯಗಳಲ್ಲಿ ಅಂಗಾಂಶವು ಜರಡಿನಳಿಕೆ (Sieve tube) zones (Companian cells). ಫ್ಲೋಯಮ್ಪ್ಯಾರಂಕೈಮ (Phloem pharenchyma) igrata (Phloem fibres) ಎಂಬ ಘಟಕಗಳಿಂದಾಗಿರುತ್ತದೆ.

 

ಅನಾವೃತ ಬೀಜ ಸಸ್ಯಗಳಲ್ಲಿ ಅಲ್ಬುಮಿನಸ್ ಕೋಶಗಳು ಮತ್ತು ಜರಡಿ ಕೋಶಗಳಿಂದ (Sive cells) ನಿಂದ ಆಗಿದೆ.

 

ಸೆಣಬು (Jute) ಅಗಸೆ (Flax) ಮತ್ತು ಪುಂಡಿ (Hemp)ಗಳ ಫ್ಲೋಯಮ್ ನಾರುಗಳನ್ನು ವಾಣಿಜ್ಯ ಉದ್ದೇಶಗಳಿಗೆ ಉಪಯೋಗಿಸಲಾಗುತ್ತದೆ.

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಸಸ್ಯ ಅಂಗಾಂಶ Plant Tissues KAS Science Notes

Previous
« Prev Post

No comments:

Ad Code

Blog Archive

My Blog List

Blog Archive

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.