PC Notes

KPSC EXAM

Sunday, December 11, 2022

ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (PSI) ಹುದ್ದೆಗಳ ನೇಮಕಾತಿ ಮಾಹಿತಿ. | ಪರೀಕ್ಷೆ ಮಾಹಿತಿ.

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Sunday, December 11, 2022

ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (PSI) ಹುದ್ದೆಗಳ ನೇಮಕಾತಿ ಮಾಹಿತಿ. |  ಪರೀಕ್ಷೆ ಮಾಹಿತಿ.



(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಶೀಘ್ರದಲ್ಲಿ ಮತ್ತೊಮ್ಮೆ ಅಧಿಸೂಚನೆ ಹೊರಡಿಸುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ಪಿಎಸ್‌ಐ ಹುದ್ದೆಯ ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.



ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ವಯೋಮಿತಿ


ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ (ಸಿವಿಲ್) ಹುದ್ದೆಗಳು.

ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ: ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಹಾಗೂ ಈ ಕೆಳಕಂಡ ವಯಸ್ಸು ಮೀರಿರಬಾರದು.


1) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 28 ವರ್ಷಗಳು.


2) ಇತರೆ ಅಭ್ಯರ್ಥಿಗಳಿಗೆ 26 ವರ್ಷಗಳು.


3) ಸೇವಾನಿರತ ಅಭ್ಯರ್ಥಿಗಳು ಇತರರಿಗೆ 35, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 40 ವರ್ಷ.

ವಿದ್ಯಾರ್ಹತೆ


ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ ಪದವಿಯನ್ನು ಹೊಂದಿರಬೇಕು.

ಸಹಿಷ್ಣುತೆ ಪರೀಕ್ಷೆ (Endurance Test): ದೇಹದಾರ್ಡ್ಯತೆ ಪರೀಕ್ಷೆಗೆ ಅರ್ಹರಾಗಲು ಅಭ್ಯರ್ಥಿಗಳು ಈ ಕೆಳಗಿನ ಎಲ್ಲಾ ಸಹಿಷ್ಣುತೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. kpsc2019


ದೇಹದಾರ್ಡ್ಯತೆ ಪರೀಕ್ಷೆ: (ಸಹಿಷ್ಣುತೆ ಪರೀಕ್ಷೆಯಲ್ಲಿ ಅರ್ಹಗೊಂಡ ಅಭ್ಯರ್ಥಿಗಳಿಗೆ ಮಾತ್ರ)

1) ಎಲ್ಲಾ ನೇರ ಅಭ್ಯರ್ಥಿಗಳಿಗೆ ಸೇವಾನಿರತ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅನ್ವಯಿಸುವಂತೆ.

# ಎತ್ತರ : ಕನಿಷ್ಠ 168 ಸೆಂ.ಮೀ.


# ಎದೆ ಸುತ್ತಳತೆ : 86 ಸೆಂ.ಮೀ. (ಪೂರ್ತಿ ವಿಸ್ತರಿಸಿದಾಗ), ಕನಿಷ್ಠ ವಿಸ್ತರಣೆ 5 ಸೆಂ.ಮೀ. 2) ಮಹಿಳಾ ಅಭ್ಯರ್ಥಿಗಳಿಗೆ ಅನ್ವಯಿಸುವಂತೆ:

# ಎತ್ತರ : ಕನಿಷ್ಠ 157 ಸೆಂ.ಮೀ., ತೂಕ : ಕನಿಷ್ಠ 45 ಕೆ.ಜಿ.

ಲಿಖಿತ ಪರೀಕ್ಷೆ (Written Test)


ಅಭ್ಯರ್ಥಿಯು ಸಹಿಷ್ಣುತೆ ಹಾಗೂ ದೇಹದಾರ್ಡ್ಯತೆ ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ಮಾತ್ರ ಲಿಖಿತ ಪರೀಕ್ಷೆಗೆ ಕರೆಯಲಾಗುವುದು. ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ಈ ಕೆಳಗಿನ ಏಳು ಕೇಂದ್ರದಲ್ಲಿ ನಡೆಸಲಾಗುವುದು.ಬೆಂಗಳೂರು, ಮೈಸೂರು, ದಾವಣಗೆರೆ, ಬೆಳಗಾವಿ, ಕಲಬುರಗಿ,ಹುಬ್ಬಳ್ಳಿ-ಧಾರವಾಡ ಮತ್ತು ಮಂಗಳೂರು.

PSI ನೇಮಕಾತಿ ಪರೀಕ್ಷೆಯ ಪಠ್ಯಕ್ರಮ ವಿವರ


ಪತ್ರಿಕೆ-1: ಈ ಪ್ರಶ್ನೆಪತ್ರಿಕೆಯಲ್ಲಿ ಪ್ರಬಂಧ ಬರಹ, ಸಾರಾಂಶ ಬರಹ, ಭಾಷಾಂತರ ಪ್ರಶ್ನೆಗಳು ಇರುತ್ತವೆ. ಪ್ರಬಂಧ ಬರಹದಲ್ಲಿ 600 ಶಬ್ದಗಳ ಮಿತಿಯನ್ನು ಮೀರಬಾರದು. ಪ್ರಬಂಧದ ಜೊತೆ ಸಾರಾಂಶ ಬರಹ (Precis) ಪ್ರಶ್ನೆಯನ್ನೂ ಕೊಡಲಾಗುವುದು. ಈ ಪೇಪರ್‌ಗೆ ಕೊಡುವ ಉತ್ತರ ಪತ್ರಿಕೆಯಲ್ಲಿ ಕೇವಲ 10 ಪುಟಗಳು ಮಾತ್ರ ಇರುತ್ತವೆ. ಅಭ್ಯರ್ಥಿಗಳು 10 ಪುಟಗಳು ಮೀರದಂತೆ ಉತ್ತರಿಸತಕ್ಕದ್ದು ಈ ಪರೀಕ್ಷೆಯ ಅವಧಿ ಒಂದು ಗಂಟೆ ಮೂವತ್ತು ನಿಮಿಷಗಳಾಗಿದ್ದು, 50 ಅಂಕಗಳನ್ನು ಹೊಂದಿರುತ್ತದೆ. (20 ಅಂಕಗಳು ಪ್ರಬಂಧಕ್ಕೆ, 10 ಅಂಕಗಳು ಸಾರಾಂಶ ಬರಹಕ್ಕೆ ಹಾಗೂ 20 ಅಂಕಗಳು ಕನ್ನಡದಿಂದ ಇಂಗ್ಲಿಷ್‌ಗೆ ಮತ್ತು ಇಂಗ್ಲಿಷ್‌ನಿಂದ ಕನ್ನಡ ಭಾಷಾಂತರಕ್ಕೆ) ಇದರಲ್ಲಿ ಕನಿಷ್ಠ ಅಂಕಗಳು ಇರುವುದಿಲ್ಲ.


ಪತ್ರಿಕೆ-2: ಈ ಪ್ರಶ್ನೆಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿದ್ದು, 150 ಅಂಕಗಳಿಗೆ ವಸ್ತುನಿಷ್ಠ (ಆಪ್ಟೆಕ್ಟಿವ್) ಮಾದರಿಯದಾಗಿದ್ದು, ಬಹುವಿಧ ಆಯ್ಕೆ (Multiple Choice) ಉತ್ತರಗಳ ಲಿಖಿತ ಪರೀಕ್ಷೆ ಇರುತ್ತದೆ. ಇವುಗಳನ್ನು ಉತ್ತರಿಸಲು ಒಂದು ಗಂಟೆ ಮೂವತ್ತು ನಿಮಿಷ ಸಮಯ ನೀಡಲಾಗುತ್ತದೆ. ಪ್ರಶ್ನೆಪತ್ರಿಕೆಯಲ್ಲಿ ಪ್ರಚಲಿತ ವಿದ್ಯಮಾನಗಳು, ಸಾಮಾನ್ಯ ಜ್ಞಾನವನ್ನೊಳಗೊಂಡ ಸಾಮಾನ್ಯ ಅಧ್ಯಯನ, ಭಾರತದ ಸ್ವಾತಂತ್ರ್ಯ ಸಂಗ್ರಾಮ, ಭಾರತೀಯ ಸಂವಿಧಾನ, ಇತಿಹಾಸ, ಭೂಗೋಳ, ವಿಜ್ಞಾನ, ಕಲೆ, ಸಾಹಿತ್ಯ, ಮಾನಸಿಕ ಸಾಮರ್ಥ್ಯ ಮತ್ತು ನೀತಿ ಶಿಕ್ಷಣ ಇತ್ಯಾದಿಗಳ ಬಗ್ಗೆ ಪ್ರಶ್ನೆಗಳು ಇರುತ್ತವೆ. ಪ್ರತಿ ತಪ್ಪು ಉತ್ತರಕ್ಕೆ ಅಂತಹುದೇ ಪ್ರಶ್ನೆಯ ಸರಿ ಉತ್ತರದ 25% (.375) ರಷ್ಟು ಅಂಕಗಳನ್ನು ಕಳೆಯಲಾಗುವುದು.


ಮೌಖಿಕ ಪರೀಕ್ಷೆ (Interview)


ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳನುಸಾರ ಅರ್ಹತಾ ಪಟ್ಟಿಯನ್ನು ತಯಾರಿಸಲಾಗುವುದು. ಈ ಅರ್ಹತಾ ಪಟ್ಟಿಯಿಂದ ಪ್ರತಿ ಹುದ್ದೆಗೆ 1:2ರ ಪ್ರಮಾಣದಲ್ಲಿ ಪ್ರತಿ ಗುಂಪು/ಪ್ರವರ್ಗಗಳನುಸಾರ 10 (ಹತ್ತು) ಅಂಕಗಳುಳ್ಳ ಮೌಖಿಕ ಪರೀಕ್ಷೆ | ವ್ಯಕ್ತಿತ್ವ ಪರೀಕ್ಷೆಗೆ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (PSI) ಹುದ್ದೆಗಳ ನೇಮಕಾತಿ ಮಾಹಿತಿ. | ಪರೀಕ್ಷೆ ಮಾಹಿತಿ.

Previous
« Prev Post

No comments:

Ad Code

Blog Archive

My Blog List

Blog Archive

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.