PC Notes

KPSC EXAM

Tuesday, April 25, 2023

ಪರೀಕ್ಷೆಗಳಿಗೆ ಹೇಗೆ ಓದಬೇಕು & ಓದಬೇಕಾದ ಪುಸ್ತಕಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Tuesday, April 25, 2023

ಶೀರ್ಷಿಕೆ: ಪರೀಕ್ಷೆಗಳಿಗೆ ಹೇಗೆ ಓದಬೇಕು & ಓದಬೇಕಾದ ಪುಸ್ತಕಗಳು


ಮೊದಲನೆಯದಾಗಿ ಎಲ್ಲರೂ ಸರಿಯಾಗಿ ಓದಿಕೊಳ್ಳಬೇಕಾದ್ದು ನೀವು ಬರೆಯಲು ಉದ್ದೇಶಿಸಿರುವ ಪರೀಕ್ಷೆಗಳ ಸಿಲಬಸ್.. ಬಹಳಷ್ಟು ಜನ ಪ್ರತಿಯೊಂದು ಹುದ್ದೆಯ ಪರೀಕ್ಷೆಗೂ ಪ್ರತ್ಯೇಕವಾದ ಪುಸ್ತಕ ಓದುತ್ತಾರೆ, ಪ್ರತ್ಯೇಕ ಕೋಚಿಂಗ್ ತಗೋತಾರೆ.. ಆದರೆ ಒಂದು ವಿಷಯ ಚೆನ್ನಾಗಿ ಮನದಟ್ಟು ಮಾಡಿಕೊಳ್ಳಿ.. ಯಾವುದೇ ಹುದ್ದೆಯ ಪರೀಕ್ಷೆಯಾದರೂ general studies ಅಂದರೆ ಇತಿಹಾಸ, ಭೂಗೋಳ, ಆರ್ಥಿಕತೆ, ಸಂವಿಧಾನ, ವಿಜ್ಞಾನ ತಂತ್ರಜ್ಞಾನ, ಮಾನಸಿಕ ಸಾಮರ್ಥ್ಯ ಮತ್ತು ಪ್ರಚಲಿತ ಘಟನೆಗಳು ಓದಲೇಬೇಕಾದ ವಿಷಯಗಳು.. ಇವುಗಳಲ್ಲಿ ಯಾವುದೂ ಪರೀಕ್ಷೆಯಿಂದ ಪರೀಕ್ಷೆಗೆ ಬದಲಾಗುವುದಿಲ್ಲ..ಒಂದು ಇತಿಹಾಸದ ಪುಸ್ತಕ ಅಥವಾ ನೋಟ್ಸ್ ಓದಿದರೆ ಅದು KAS, FDA, SDA, PSI, PC ಸೇರಿದಂತೆ ಎಲ್ಲಾ ಸಾಮಾನ್ಯ ಜ್ಞಾನದ ಪತ್ರಿಕೆಗಳಿಗೂ ಬೇಕಾಗುತ್ತದೆ.. ಅದೇ ರೀತಿ ಉಳಿದ ವಿಷಯಗಳೂ ಅಷ್ಟೇ.. ಪ್ರತಿ ಪರೀಕ್ಷೆಗೂ ಬೇರೆ ಬೇರೆ ಸಾಮಾನ್ಯ ಜ್ಞಾನ ವಿಷಯ ಇರೋದಿಲ್ಲ.. 

ಕೆಲವು ಪರೀಕ್ಷೆಗಳಿಗೆ Quantitative Aptitude, Reasoning ನಂತಹ ವಿಷಯಗಳಿರುತ್ತವೆ... ಈ ಎಲ್ಲಾ ವಿಷಯಗಳಿಗೆ ಒಂದೊಂದು ಒಳ್ಳೆಯ ಪುಸ್ತಕ ತಗೊಂಡು ಅವುಗಳನ್ನು ಒಂದು ಕಡೆಯಿಂದ ಪ್ರಾರಂಭಿಸಿ ಕೊನೆಯವರೆಗೂ ನಿಧಾನವಾಗಿ ಮನದಟ್ಟು ಮಾಡಿಕೊಂಡು ಓದಿ.. ವಿವರಣಾತ್ಮಕ ಪುಸ್ತಕಗಳನ್ನು ಓದಿ ವಿಷಯವನ್ನು ಅರ್ಥ ಮಾಡಿಕೊಳ್ಳಿ.. ಯಾವುದೇ ಕಾರಣಕ್ಕೂ ಮೊದಲ ಬಾರಿ ಓದುವಾಗ ನೋಟ್ಸ್ ಓದಬೇಡಿ. ಅದರಿಂದ ನಿಮಗೆ ವಿಷಯ ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.. ಓದುವಾಗ ಮರೆತು ಹೋಗುವಂತಹ ವಿಷಯಗಳನ್ನು ನೋಟ್ಸ್ ಮಾಡಿಕೊಳ್ಳಿ..  ನಂತರ ಓದಿದ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಉತ್ತರಿಸಿ.. ಆಗ ನಿಮಗೆ ಯಾವ ಅಧ್ಯಾಯ revision ಮಾಡುವ ಅಗತ್ಯವಿದೆ ಎನ್ನುವುದು ತಿಳಿಯುತ್ತದೆ.. ಅದನ್ನು ಮತ್ತೆ ಮತ್ತೆ revision ಮಾಡಿ ಆ ವಿಷಯದಲ್ಲಿ ಯಾವುದೇ ಪ್ರಶ್ನೆ ಕೇಳಿದರೂ ಉತ್ತರಿಸಬಲ್ಲೆ ಎನ್ನುವ confidence ಬರೋವರೆಗೂ revision ಮಾಡಿ.. ಈ ತರಾ ದಿನಕ್ಕೆ ಎರಡು ಅಥವಾ ನಿಮಗೆ ಲಭ್ಯವಿರುವ ಸಮಯಕ್ಕೆ ಅನುಗುಣವಾಗಿ 2-3 subjects ಓದಿ.. ಜೊತೆಗೆ ಪ್ರತಿನಿತ್ಯ ಒಂದು ಇಂಗ್ಲೀಷ್ ಮತ್ತು ಒಂದು ಕನ್ನಡ ದಿನಪತ್ರಿಕೆ ಓದಿ.. ನೀವೆ ಮುಖ್ಯ ಸಂಗತಿಗಳನ್ನು ನೋಟ್ಸ್ ಮಾಡಿಕೊಳ್ಳಿ.. ಈ ರೀತಿ ನೀವು general studies ಸಂಬಂಧಿಸಿದ ವಿಷಯಗಳನ್ನು ಚೆನ್ನಾಗಿ ಓದಿ ಮನದಟ್ಟು ಮಾಡಿಕೊಂಡರೆ ಯಾವ ಪರೀಕ್ಷೆಯೇ ಆದರೂ ಒಮ್ಮೆ revision ಮಾಡಿಕೊಂಡು ಹೋದರೆ ಸಾಕಾಗುತ್ತದೆ.. 

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಇನ್ನು ವಿವಿಧ ನೇಮಕಾತಿಗಳಿಗೆ ಆ ಹುದ್ದೆಗೆ ಅನುಗುಣವಾಗಿ ನಿರ್ದಿಷ್ಟ ವಿಷಯದ ಪತ್ರಿಕೆಗಳಿರುತ್ತವೆ.. ಅವುಗಳಿಗೂ ಒಳ್ಳೆಯ ಪುಸ್ತಕ ಆಯ್ದುಕೊಂಡು ಅಧ್ಯಯನ ಮಾಡಿ, ಒಂದೆರಡು revision ಮಾಡಿ.. ಪ್ರಶ್ನೆಗಳಿಗೆ ಉತ್ತರಿಸಿ. ಪ್ರಕಟಣೆ ದಿನಾಂಕ: 2023

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಬಹಳಷ್ಟು ಜನ ಯಾವ ಪುಸ್ತಕ ಓದಬೇಕು ಅಂತ ಕೇಳುತ್ತಿರುವುದರಿಂದ ಪ್ರತಿಯೊಂದು ಪರೀಕ್ಷೆಗೂ ಬೇರೆ ಬೇರೆ ಪುಸ್ತಕ ಓದಲು ನಾನು ಸಲಹೆ ಮಾಡುವುದಿಲ್ಲ. ಪರೀಕ್ಷೆ ಯಾವುದೇ ಆದರೂ ವಿಷಯಗಳು ಒಂದೇ ಇರುತ್ತವೆ. ಹಾಗಾಗಿ ಪ್ರತಿ ವಿಷಯಕ್ಕೆ ಒಂದೊಂದು ಒಳ್ಳೆಯ ಪುಸ್ತಕ ಓದಿದ್ರೆ ಸಾಕು. ನನಗೆ ಉತ್ತಮ ಅನ್ನಿಸಿದ ಪುಸ್ತಕಗಳ ಪಟ್ಟಿ ನೀಡುತ್ತಿದ್ದೇನೆ. ನಿಮಗೆ ಇದಕ್ಕಿಂತ ಬೇರೆ ಉತ್ತಮ ಪುಸ್ತಕ ಗೊತ್ತಿದ್ದರೆ ಅದನ್ನೂ ಓದಬಹುದು.

ಇತಿಹಾಸ

ಪ್ರಾಚೀನ ಭಾರತದ ಇತಿಹಾಸ- ಆರ್ ಎಸ್ ಶರ್ಮ

ಸಮಗ್ರ ಭಾರತದ ಇತಿಹಾಸ - ಸದಾಶಿವ

ಭಾರತ ಸ್ವಾತಂತ್ರ್ಯ ಸಂಗ್ರಾಮ - ಬಿಪಿನ್ ಚಂದ್ರ

ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು - ಶಂಕರನಾರಾಯಣ

ಕರ್ನಾಟಕ ಇತಿಹಾಸ - ಸೂರ್ಯನಾಥ ಕಾಮತ್ ಮತ್ತು ಕೆ.ಎನ್.ಎ.

ಭೂಗೋಳ

ಭಾರತ, ಕರ್ನಾಟಕ, ಪ್ರಪಂಚದ ಭೂಗೋಳ ಶಾಸ್ತ್ರ ಪುಸ್ತಕಗಳು - ಡಾ. ರಂಗನಾಥ

ಸ್ಪರ್ಧಾ ಭೂಗೋಳ ಶಾಸ್ತ್ರ - ಬಡೇಮಿಯಾ

*ಸಂವಿಧಾನ*

ಭಾರತದ ಸಂವಿಧಾನ - ಮೇರುನಂದನ್/ ಪಿ.ಎಸ್.ಗಂಗಾಧರ್


*ಆರ್ಥಿಕತೆ*

ಪಿಯುಸಿ ಅರ್ಥಶಾಸ್ತ್ರದ ಪುಸ್ತಕಗಳು

ಆರ್ಥಿಕತೆ- ಮಲ್ಲಿಕಾರ್ಜುನ ಅಂಗಡಿ

ಭಾರತ ಮತ್ತು ಕರ್ನಾಟಕ ಆರ್ಥಿಕ ಸಮೀಕ್ಷೆ


ವಿಜ್ಞಾನ ಮತ್ತು ತಂತ್ರಜ್ಞಾನ

ಪ್ರೌಢಶಾಲೆ ವಿಜ್ಞಾನ ಪುಸ್ತಕಗಳು

ವಿಜ್ಞಾನ & ತಂತ್ರಜ್ಞಾನ- ವೆಂಕಟರಮಣ/ಸ್ಪರ್ಧಾವಿಜೇತ/ಸ್ಪರ್ಧಾಸ್ಪೂರ್ತಿ


ಮಾನಸಿಕ ಸಾಮರ್ಥ್ಯ

ಮಾನಸಿಕ ಸಾಮರ್ಥ್ಯ - ಗುರುರಾಜ ಬುಲಬುಲೆ/ ಆಂಜಿನಪ್ಪ, ಬಾಲರಾಜ್


ಇತರ ಪುಸ್ತಕಗಳು/ಮ್ಯಾಗಜಿನ್

- ಒಂದು ಕನ್ನಡ ಮತ್ತು ಒಂದು ಇಂಗ್ಲಿಷ್ ದಿನಪತ್ರಿಕೆ

- ಒಂದು ಮಾಸಿಕ ಮ್ಯಾಗಜಿನ್

ಜನಪದ

ಕರ್ನಾಟಕ ವಿಕಾಸ

ಕರ್ನಾಟಕ ಕೈಪಿಡಿ

ಯೋಜನಾ

ಕುರುಕ್ಷೇತ್ರ

ಮುಂತಾದವು...


 ಇನ್ನು ನಿಮ್ಮ ಸಮಯಪಾಲನೆ ಅತ್ಯಂತ ಮುಖ್ಯ.. ಮೊದಲನೆಯದಾಗಿ ಈ ವಾಟ್ಸಪ್, Facebook, telegram ಗ್ರೂಪುಗಳು ನಿಮಗೆ ಎಷ್ಟರಮಟ್ಟಿಗೆ ಉಪಯುಕ್ತ ಎನ್ನುವುದು.. ಒಂದು ವಿಷಯ ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳಿ.. ಯಾವುದೇ ವಿಷಯದ ಬಗ್ಗೆ ಇಲ್ಲಿ ಕಳಿಸುವ ಯಾವುದೆ ಸಂಕ್ಷಿಪ್ತ ನೋಟ್ಸ್ ಪುಸ್ತಕಗಳಷ್ಟು ಸಂಪೂರ್ಣ ಮಾಹಿತಿ ನೀಡಲು ಸಾಧ್ಯವಿಲ್ಲ.. ಆದ್ದರಿಂದ ಪುಸ್ತಕಗಳೇ ನಿಮ್ಮ ಮೊದಲ ಆಯ್ಕೆ.. ನಿಮಗೆ ಬೇಕಾದ ಪುಸ್ತಕ PDF ರೂಪದಲ್ಲಿ ಸಿಕ್ಕಿದ್ದಾದರೆ ಅದನ್ನೇ ಓದಿ.‌ ಯಾವುದೇ ಕಾರಣಕ್ಕೂ ಒಂದು ಸಾಲಿನ ಮಾಹಿತಿ, multiple choice questions ಓದಿ ವಿಷಯ ಅರ್ಥೈಸಿಕೊಳ್ಳುವ ಪ್ರಯತ್ನ ಬೇಡ.. ಮೊದಲು theory ಓದಿ ನಂತರ ಪ್ರಶ್ನೆಗಳಿಗೆ ಉತ್ತರಿಸಿ..


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಪರೀಕ್ಷೆಗಳಿಗೆ ಹೇಗೆ ಓದಬೇಕು & ಓದಬೇಕಾದ ಪುಸ್ತಕಗಳು

Previous
« Prev Post

No comments:

Ad Code

Blog Archive

My Blog List

Blog Archive

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.