Friday, April 14, 2023

ಗೃಹ ವ್ಯವಹಾರಗಳ ಸಚಿವಾಲಯ : ನಾರ್ಕೋಟಿಕ್ಸ್ ಕಂಟ್ರೋಲ್‌ ಬ್ಯೂರೋದಲ್ಲಿ ವಿವಿಧ ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದ್ದು Ministry of Home Affairs: Group C posts in Narcotics Control Bureau.

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, April 14, 2023

Ministry of Home Affairs: Notification has been issued to fill various Group C posts in Narcotics Control Bureau.


ಗೃಹ ವ್ಯವಹಾರಗಳ ಸಚಿವಾಲಯದಡಿ ಕಾರ್ಯನಿರ್ವಹಿಸುವ ನಾರ್ಕೋಟಿಕ್ಸ್ ಕಂಟ್ರೋಲ್‌ ಬ್ಯೂರೋದಲ್ಲಿ ವಿವಿಧ ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಭಾರತೀಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು ಸೇರಿ ದೇಶದ ವಿವಿಧೆಡೆ ಇರುವ ಘಟಕಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಸಕ್ತರು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಕಂಪನಿಯ ಅಗತ್ಯಕ್ಕೆ ಅನುಗುಣವಾಗಿ ಹುದ್ದೆಗಳ ಸಂಖ್ಯೆ ಬದಲಾಗಬಹುದು.

ಒಟ್ಟು ಹುದ್ದೆಗಳು 99

ಎಲ್ಲೆಲ್ಲಿ ನೇಮಕ


ದೆಹರಿ, ಬೆಂಗಳೂರು, ಅಲಹಾಬಾದ್, ಇಂದೋರ್, ಗೋವಾ, ಹೈದರಾಬಾದ್ ರಾಂಚಿ, ಡೆಹ್ರಾಡೂನ್, ಮುಂಬೈ, ಕೋಲ್ಕತ್ತಾ, ಲಖನೌ, ಜಮ್ಮು, ಛಂಡೀಗಡ, ಚೆನ್ನೈ ಮತ್ತು ಪಾಟ್ನಾ

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ವಿದ್ಯಾರ್ಹತೆ


ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯದಲ್ಲಿ ಪಿಯುಸಿಯೊಂದಿಗೆ ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು, ಹವಾಲ್ದಾರ್ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದ್ದರೆ ಸಾಕು.

ವೇತನ ಶ್ರೇಣಿ


ಎಲ್ಲ ಹುದ್ದೆಗಳಿಗೂ 7ನೇ ವೇತನ ಶ್ರೇಣಿ ಅನ್ವಯ 4ನೇ ಹಂತದ ಮಾಸಿಕ ವೇತನ ನಿಗದಿಪಡಿಸಲಾಗಿದೆ. ಇದರೊಂದಿಗೆ ಸಂಸ್ಥೆ ನೀಡುವ ಇತರ ಭತ್ಯೆಗಳೂ ಇರಲಿದೆ. ಹವಾಲ್ದಾರ್ ಹುದ್ದೆಗೆ ಮಾತ್ರ 1ನೇ ಹಂತದ ವೇತನ ಇರಲಿದೆ.

ಹುದ್ದೆಗಳ ವಿವರ


ಸಿಪಾಯಿ - 54 

ಸರ್ವೇಲೆನ್ಸ್ ಅಸಿಸ್ಟೆಂಟ್ - 42 ಹವಾಲ್ದಾರ್ - 3 ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಆಯ್ಕೆಯ ವಿಧಾನ


ಶೈಕ್ಷಣಿಕ ಅಂಕ ಮತ್ತು ವೃತ್ತಿ ಅನುಭವದ ಅಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾದ ಅಭ್ಯರ್ಥಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸಲಾಗುವುದು. ಇದರಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಆಧಾರದ ಮೇಲೆ ಹುದ್ದೆಗೆ ನೇಮಕ ಮಾಡಲಾಗುವುದು.

ಪ್ರಮುಖ ಸೂಚನೆ


ಮೂರು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಕೆಲಸ ತೃಪ್ತಿದಾಯಕ ಎನಿಸಿದರೆ ಅವಧಿ ವಿಸ್ತರಿಸಲಾಗುವುದು. ಅಯಾ ಪ್ರದೇಶದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಸ್ಥಳೀಯ ಭಾಷೆಯ ಮೇಲೆ ಹಿಡಿತವಿರಬೇಕು. ಇಂಗ್ಲಿಷ್ ಮತ್ತು ಹಿಂದಿ ಜ್ಞಾನ ಇರಬೇಕು.

ವಯೋಮಿತಿ


ಅರ್ಜಿ ಸಲ್ಲಿಸಲು ಕೊನೆ ದಿನಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ವಯೋಮಿತಿ 56 ವರ್ಷ ಮೀರಿರಬಾರದು. ಎಲ್ಲ ಹುದ್ದೆಗಳಿಗೂ ಇದೇ ವಯೋಮಿತಿ ಅನ್ವಯವಾಗಲಿದೆ.

ಅರ್ಜಿ ಸಲ್ಲಿಸುವುದು ಹೇಗೆ.


ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ನೀಡಲಾದ ಅರ್ಜಿ ಡೌನ್‌ಲೋಡ್ ಮಾಡಿಕೊಂಡು ದಾಖಲೆ ಲಗತ್ತಿಸಿ ನಿಗದಿತ ದಿನಾಂಕದೊಳಗೆ ಸ್ಪೀಡ್ ಪೋಸ್ಟ್ ಅಥವಾ ಕೊರಿಯ‌ ಮೂಲಕ ಸಲ್ಲಿಸಬೇಕು. ಇತರ ಯಾವ ವಿಧದ ಅರ್ಜಿಗಳನ್ನೂ ಸ್ವೀಕರಿಸುವುದಿಲ್ಲ.

ಅರ್ಜಿ ಸಲ್ಲಿಸಬೇಕಾದ ವಿಳಾಸ


Deputy Director (Admn.), Narcotics Control Bureau, 2nd Floor August Kranti Bhawan, Bhikaji Kama Place, New Delhi

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 


ಸಿಪಾಯಿ - 27.5.2023

ಸರ್ವೇಲೆನ್ಸ್ ಅಸಿಸ್ಟೆಂಟ್ -19.5.2023 

ಹವಾಲ್ದಾರ್ - 29.5.2023



https://narcoticsindia.nic.in/ ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಗೃಹ ವ್ಯವಹಾರಗಳ ಸಚಿವಾಲಯ : ನಾರ್ಕೋಟಿಕ್ಸ್ ಕಂಟ್ರೋಲ್‌ ಬ್ಯೂರೋದಲ್ಲಿ ವಿವಿಧ ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದ್ದು Ministry of Home Affairs: Group C posts in Narcotics Control Bureau.

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.