Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Monday, May 22, 2023

ಹಿರೋಷಿಮಾದಲ್ಲಿ ಜಿ 7 ಶೃಂಗಸಭೆ: ಯಾವೆಲ್ಲಾ ದೇಶಗಳು ಭಾಗವಹಿಸಲಿವೆ?

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Monday, May 22, 2023

ಹಿರೋಷಿಮಾದಲ್ಲಿ ಜಿ 7 ಶೃಂಗಸಭೆ: ಯಾವೆಲ್ಲಾ ದೇಶಗಳು ಭಾಗವಹಿಸಲಿವೆ?

G7


ಎರಡನೇ ಮಹಾಯುದ್ಧದ ಕೊನೆಯಲ್ಲಿ ವಿಶ್ವದ ಮೊದಲ ಪರಮಾಣು ದಾಳಿ ನಡೆದ ಸ್ಥಳವಾದ ಹಿರೋಷಿಮಾದಲ್ಲಿ ಈ ಬಾರಿ ವಿಶ್ವದ ಏಳು ಪ್ರಬಲ ದೇಶಗಳ ನಾಯಕರು ವಾರಾಂತ್ಯದಲ್ಲಿ ಗ್ರೂಪ್ ಆಫ್ ಸೆವೆನ್ ಶೃಂಗಸಭೆ ನಡೆಸಲಿದ್ದಾರೆ.

ಈ ವೇಳೆ ಚೀನಾ, ಉತ್ತರ ಕೊರಿಯಾ ಮತ್ತು ರಷ್ಯಾದಿಂದ ಹೆಚ್ಚುತ್ತಿರುವ ಆಕ್ರಮಣಶೀಲತೆ ಸೇರಿದಂತೆ ಪ್ರಮುಖ ಅಭಿವೃದ್ಧಿಶೀಲ ರಾಷ್ಟ್ರಗಳ ಭದ್ರತೆ ಕುರಿತು ಚರ್ಚಿಸಲಾಗುತ್ತದೆ.

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಏನಿದು ಜಿ 7 ಶೃಂಗಸಭೆ?: 

ಜಗತ್ತಿನ ಪ್ರಮುಖ ಆರ್ಥಿಕ ಬಲಾಡ್ಯ ದೇಶಗಳಾದ ಅಮೆರಿಕ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಇಂಗ್ಲೆಂಡ್‌ ದೇಶಗಳು ಸೇರಿ ಮಾಡಿಕೊಂಡಿರುವ ಅನಧಿಕೃತ ಒಕ್ಕೂಟ. ಅಂದ್ರೆ, ಕೈಗಾರಿಕೀಕರಣಗೊಂಡ ರಾಷ್ಟ್ರಗಳ ಅನೌಪಚಾರಿಕ ಗುಂಪು. ಇದರಲ್ಲಿ ಯುರೋಪಿಯನ್‌ ಒಕ್ಕೂಟದ ಸದಸ್ಯ ರಾಷ್ಟ್ರಗಳು, ಇತರೆ ಆಹ್ವಾನಿತ ದೇಶಗಳೊಂದಿಗೆ ಪ್ರತಿ ವರ್ಷ ವಾರ್ಷಿಕ ಜಿ 7 ಶೃಂಗಸಭೆ ನಡೆಸುತ್ತವೆ.

ಈ ವರ್ಷ ಜಪಾನ್‌ ಜಿ 7 ಶೃಂಗಸಭೆಯ ಆತಿಥ್ಯ ವಹಿಸಲಿದೆ. G-7 ಶೃಂಗಸಭೆಗಳ ಅಧ್ಯಕ್ಷತೆಯು ಈ ಏಳು ಸದಸ್ಯ ದೇಶಗಳ ನಡುವೆ ಸುತ್ತುತ್ತಿರುತ್ತದೆ. ಇದರಲ್ಲಿ ಯುರೋಪಿಯನ್ ಒಕ್ಕೂಟದ ಇಬ್ಬರು ಪ್ರತಿನಿಧಿಗಳು ಸಹ ಭಾಗಿಯಾಗಿರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ವಾಡಿಕೆಯಂತೆ, ಕೆಲವು G-7 ಅಲ್ಲದ ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ನಾಯಕರು ಸಹ ಕೆಲವು ಅಧಿವೇಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ವೇಳೆ ಆರ್ಥಿಕ ನೀತಿ, ಭದ್ರತೆ, ಹವಾಮಾನ ಬದಲಾವಣೆ ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸುತ್ತಾರೆ.ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಮೊದಲ ಶೃಂಗಸಭೆಯು 1975 ರಲ್ಲಿ ನಡೆಯಿತು. ಅರಬ್ ತೈಲ ನಿರ್ಬಂಧದ ನಂತರದ ಆರ್ಥಿಕ ಹಿಂಜರಿತವನ್ನು ನಿಭಾಯಿಸುವ ಕುರಿತು ಚರ್ಚಿಸಲು ಆರು ದೇಶಗಳ ಗುಂಪಿನ ಸಭೆಯನ್ನು ಫ್ರಾನ್ಸ್ ಆಯೋಜಿಸಿತ್ತು. ಒಂದು ವರ್ಷದ ನಂತರ ಕೆನಡಾ ಏಳನೇ ಸದಸ್ಯ ರಾಷ್ಟ್ರವಾಯಿತು. 1998 ರಲ್ಲಿ ರಷ್ಯಾವು G-8 ಅನ್ನು ರಚಿಸಿ ಈ ಗುಂಪಿಗೆ ಸೇರಿಕೊಂಡಿತು. ಆಗ ಸದಸ್ಯ ದೇಶಗಳ ಸಂಖ್ಯೆ 8 ಕ್ಕೆ ಏರಿಕೆಯಾಯಿತು. ಆದರೆ, ಮಾಸ್ಕೋ 2014 ರಲ್ಲಿ ಕ್ರೈಮಿಯಾವನ್ನು ವಶಪಡಿಸಿಕೊಂಡ ನಂತರ ರಷ್ಯಾವನ್ನು ಈ ಗುಂಪಿನಿಂದ ಹೊರಹಾಕಲಾಯಿತು.ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ಈ ಬಾರಿ ಜಿ 7 ಶೃಂಗಸಭೆಗೆ ಹಾಜರಾಗುವ ದೇಶಗಳು ಯಾವುವು? :


 ಈ ವರ್ಷ ಆಸ್ಟ್ರೇಲಿಯಾ, ಬ್ರೆಜಿಲ್, ಕೊಮೊರೊಸ್, ಕುಕ್ ದ್ವೀಪಗಳು, ಭಾರತ, ಇಂಡೋನೇಷ್ಯಾ, ದಕ್ಷಿಣ ಕೊರಿಯಾ ಮತ್ತು ವಿಯೆಟ್ನಾಂನ ನಾಯಕರನ್ನು ಆಹ್ವಾನಿಸಲಾಗಿದೆ. ಯಾಕೆಂದರೆ, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಮಿತ್ರ ಮತ್ತು ಪಾಲುದಾರಿಕೆ ಹೊಂದಿರುವ ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ. ಜೊತೆಗೆ, ವಿಶ್ವಸಂಸ್ಥೆ, ಅಂತರಾಷ್ಟ್ರೀಯ ಇಂಧನ ಸಂಸ್ಥೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ, ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ, ವಿಶ್ವಬ್ಯಾಂಕ್, ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವ ವ್ಯಾಪಾರ ಸಂಸ್ಥೆಗಳ ನಾಯಕರನ್ನು ಸಹ ಆಹ್ವಾನಿಸಲಾಗಿದೆ.

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಹಿರೋಷಿಮಾದಲ್ಲಿ ಜಿ 7 ಶೃಂಗಸಭೆ: ಯಾವೆಲ್ಲಾ ದೇಶಗಳು ಭಾಗವಹಿಸಲಿವೆ?

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts