Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Friday, September 15, 2023

ಪ್ರಚಲಿತ ಪೇಪರ್ ಕಟ್ಟಿಂಗ್ 16-09-2023

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, September 15, 2023

ಶೀರ್ಷಿಕೆ: ಪ್ರಚಲಿತ ಪೇಪರ್ ಕಟ್ಟಿಂಗ್ 16-09-2023

ವಿಶ್ವ ಓಜೋನ್ ದಿನಾಚರಣೆಯಾಗಿದೆ. ಪ್ರತಿವರ್ಷ ಸೆಪ್ಟೆಂಬರ್ 16

ಭೂ ಮಂಡಲವನ್ನು ಆವರಿಸಿರುವ ಓಜೋನ್ ಪದರ ಭೂಮಿಯನ್ನು ಮತ್ತು ಅಲ್ಲಿರುವ ಜೀವ ಸಂಕುಲಗಳನ್ನು ಸೂರ್ಯನ ಹಾನಿಕಾರಕ ವಿಕಿರಣಗಳಿಂದ ರಕ್ಷಿಸುತ್ತದೆ.

ಈ ಪದರದ ಕಾರಣದಿಂದಲೇ ಭೂಮಿ ಮತ್ತು ಅದರಲ್ಲಿರುವ ಜೀವಿಗಳು ಅನಾದಿ ಕಾಲದಿಂದಲೂ ಸುರಕ್ಷಿತವಾಗಿವೆ. ಮುಂದಿನ ಪೀಳಿಗೆಯೂ ಇದೇ ರೀತಿ ಸುರಕ್ಷಿತವಾಗಿರುವ ನಿಟ್ಟಿನಲ್ಲಿ ಓಜೋನ್ ಪದರದ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ಆದರೆ ಕೆಲವು ವರ್ಷಗಳಿಂದ ಮಾನವರು ಮಾಡುತ್ತಿರುವ ಅಭಿವೃದ್ಧಿ ಸಂಬಂಧಿ ಯೋಜನೆಗಳು, ತಂತ್ರಜ್ಞಾನಗಳು, ಕೈಗಾರಿಕೆ ಮುಂತಾದ ಚಟುವಟಿಕೆಗಳಿಂದ ಹೊರಹೊಮ್ಮುವ ರಾಸಾಯನಿಕ ಮತ್ತು ವಿಷಕಾರಕ ವಸ್ತುಗಳು, ಹೆಚ್ಚುತ್ತಿರುವ ಜಾಗತಿಕ ತಾಪಮಾನ ಓಜೋನ್ ಪದರದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಈ ಕಾರಣದಿಂದ ಈ ಪದರ ಕ್ಷೀಣಿಸುತ್ತಿದ್ದು ಮುಂದೊಂದು ದಿನ ಇದು ಭೂಮಂಡಲ ಮತ್ತು ಅದರಲ್ಲಿರುವ ಜೀವಿಗಳಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎಂಬುದು ಕಳವಳ ವ್ಯಕ್ತವಾಗಿದೆ.

ಆದ್ದರಿಂದ ಓಜೋನ್ ಪದರವನ್ನು ರಕ್ಷಿಸುವ ಅಭಿಯಾನವೊಂದು ಜಗತ್ತಿನಾದ್ಯಂತ ಶುರುವಾಗಿದೆ.

ಓಜೋನ್ ಪದರ ಉಳಿಸಿ ಅಭಿಯಾನದ ಒಂದು ಭಾಗವೇ ವಿಶ್ವ ಓಜೋನ್ ದಿನಾಚರಣೆಯಾಗಿದೆ. ಪ್ರತಿವರ್ಷ ಸೆಪ್ಟೆಂಬರ್ 16 ಅನ್ನು ವರ್ಲ್ಡ್ ಓಜೋನ್ ಡೇ ಎಂದು ಆಚರಿಸಲಾಗುತ್ತದೆ.

ಈ ದಿನದಂದು ಜನರಿಗೆ ಓಜೋನ್ ಪದರ ಕ್ಷೀಣಿಸುತ್ತಿದೆ ಮತ್ತು ಇದನ್ನು ಉಳಿಸಿಕೊಳ್ಳಲು ಮಾಡಬೇಕಾದ ಪ್ರಯತ್ನಗಳ ಕುರಿತಂತೆ ಅರಿವು ಮೂಡಿಸಲಾಗುತ್ತದೆ. ಈ ದಿನದಂದು ಶಾಲೆ, ಕಾಲೇಜು ಸೇರಿದಂತೆ ವಿವಿಧೆಡೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಈ ದಿನ ಇತಿಹಾಸ

  • 1916 - ಕರ್ನಾಟಕ ಸಂಗೀತ ಲೋಕದ ಪ್ರಸಿದ್ಧ ಗಾಯಕಿ ಎಂ. ಎಸ್ ಸುಬ್ಬುಲಕ್ಷ್ಮಿಯವರ ಜನನ
  • 1959 - ಮೊದಲ ಫೋಟೋಕಾಪಿ ಯಂತ್ರದ ಆವಿಷ್ಕಾರ
  • 1986 - ಅಂತಾರಾಷ್ಟ್ರೀಯ ಕಡಲು ಸ್ವಚ್ಛತಾ ದಿನ ಆರಂಭ
  • ವಿಶ್ವ ಓಝನ್ ದಿನ

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಸಾಮಾನ್ಯ ಜ್ಞಾನ


  1. ವಿದ್ಯಾಚಲ ಥರ್ಮಲ್ ಪವರ್ ಸ್ಟೇಷನ್ ಯಾವ ರಾಜ್ಯದಲ್ಲಿದೆ? ಉತ್ತರ: ಮಧ್ಯಪ್ರದೇಶ
  2. ಇಂದ್ರಪ್ರಸ್ಥ ಥರ್ಮಲ್ ಪವರ್ ಸ್ಟೇಷನ್ ಎಲ್ಲಿದೆ? ಉತ್ತರ: ದೆಹಲಿ
  3. 2019-20ರಲ್ಲಿ ಲಾ ಲಿಗಾ ಫುಟ್‌ಬಾಲ್ ಚಾಂಪಿಯನ್‌ಶಿಪ್ ಗೆದ್ದವರು ಯಾರು? ಉತ್ತರ: ರಿಯಲ್ ಮ್ಯಾಡ್ರಿಡ್
  4. ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಯಸ್ಸು ಎಷ್ಟು? ಉತ್ತರ: 25
  5. IIM ಪದವೀಧರರಾದ ಚಿತ್ರಾ ಸುಂದರಂ ಅವರು ಯಾವ ಭಾರತೀಯ ನಗರದಿಂದ ಬ್ರಿಟಿಷ್ ಸಾಮ್ರಾಜ್ಯದ ಪದಕವನ್ನು ಪಡೆದರು? ಉತ್ತರ: ಅಹಮದಾಬಾದ್
  6. ಭಾರತದ ಹೊಸ ವಿದೇಶಿ ವ್ಯಾಪಾರ ನೀತಿಯನ್ನು ಯಾವಾಗ ಜಾರಿಗೆ ತರಲಾಗುವುದು ಎಂದು ಘೋಷಿಸಲಾಯಿತು? ಉತ್ತರ: ಏಪ್ರಿಲ್ 1, 2021
  7. ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಸ್ವಾತಂತ್ರ್ಯದ ನಂತರ ಮೊದಲ ಕಾಗದರಹಿತ ಬಜೆಟ್ ಅನ್ನು ಯಾವಾಗ ಘೋಷಿಸಲಾಯಿತು? ಉತ್ತರ: ಫೆಬ್ರವರಿ 1
  8. ನವದೆಹಲಿಯಲ್ಲಿ ಎರಡು ದಿನಗಳ ಸ್ಟಾರ್ಟ್ಅಪ್ ಇಂಡಿಯಾ ಅಂತರಾಷ್ಟ್ರೀಯ ಸಮ್ಮೇಳನವನ್ನು ಯಾರು ಉದ್ಘಾಟಿಸಿದರು? ಉತ್ತರ: ಶ್ರೀ ಪಿಯೂಷ್ ಗೋಯಲ್
  9. ಜಾಗತಿಕ ಡೇಟಾಬೇಸ್ ಕಂಪನಿ ನಂಬಿಯೊದ ವಾರ್ಷಿಕ ವರದಿಯ ಪ್ರಕಾರ, ಯಾವ ದೇಶವು ಅತಿ ಹೆಚ್ಚು ಅಪರಾಧ ಪ್ರಮಾಣವನ್ನು ಹೊಂದಿದೆ? ಉತ್ತರ: ವೆನೆಜುವೆಲಾ
  10. ಜುಲೈನಿಂದ ಡಿಸೆಂಬರ್ 2020 ರ ಅವಧಿಯಲ್ಲಿ ಸರಾಸರಿ ಮಾರುಕಟ್ಟೆ ಬಂಡವಾಳೀಕರಣದ ಮೂಲಕ ಯಾವ ಕಂಪನಿಯು ಅಗ್ರ 100 ಕಂಪನಿಗಳ ಪಟ್ಟಿಯನ್ನು ಪ್ರವೇಶಿಸಿತು? ಉತ್ತರ: ಜುಬಿಲೆಂಟ್ ಫುಡ್‌ವರ್ಕ್ಸ್

ಗೋಮ್ಸ್‌ ವಿಲ್ಲೇ ಗೊಂಬೆಗಳ ಸಾಮ್ರಾಜ್ಯ

ದಕ್ಷಿಣ ಆಸ್ಟ್ರೇಲಿಯಾದ ಪರ್ಗು ಸನ್ ಕಣಿವೆಯಲ್ಲಿ ಗೋಮ್ಸ್‌ಎಲ್ಲೇ ಎಂಬ ಸಣ್ಣ ಹಳ್ಳಿಯಲ್ಲಿ ಕುಳ್ಳ ಗೊಂಬೆಗಳದೇ ಸಾಮ್ರಾಜ್ಯ. ಹಳ್ಳಿಯಲ್ಲಿ ಹೆಜ್ಜೆಯಿಟ್ಟೆಡೆಯಲ್ಲಿ ಲ್ಲಾ ಕುಳ್ಳ ಗೊಂಬೆಗಳು ಸಿಗುತ್ತವೆ. 16ನೇ ಶತಮಾನದಿಂದಲೇ ಇಲ್ಲಿ ಕುಳ್ಳ ಗೊಂಬೆಗಳನ್ನು ಸಂಗ್ರಹಿಸಲು ಶುರುಮಾಡಿದ್ದಾರೆ. ದಂತಕಥೆಗಳ ಪ್ರಕಾರ ಪಶ್ಚಿಮ ಆಸ್ಟ್ರೇಲಿಯಾದ ಕರವಾಳಿಯಲ್ಲಿ ಕುಳ್ಳನೊಬ್ಬತಿರುಗಾಡುತ್ತಿರುವಾಗ, ವಿಚಿತ್ರವಾದ ಮಾಂತ್ರಿಕ ಶಕ್ತಿ ಅವನನ್ನು ಈ ಪ್ರದೇಶಕ್ಕೆ ಕರೆದು ತಂದಿತಂತೆ. ಅದೇ ಈಗ ಗೋಮ್ ಎಲ್ಲೇ ಎಂಬ ಹಳ್ಳಿಯಾಗಿದೆ. ಇಡೀ ಪ್ರದೇಶದಲ್ಲಿ ಐದು ಸಾವಿರಕ್ಕಿಂತಲೂ ಹೆಚ್ಚು ಗೊಂಬೆಗಳಿದ್ದು ಅವುಗಳಿಗೆ ವಿವಿಧ ಹೆಸರುಗಳನ್ನು ಇಡಲಾಗಿದೆ.

ಸೆ.16: ಭಾರತದ ಇತಿಹಾಸದಲ್ಲಿ ಈ ದಿನ

  • 2003-ಭಾರತದ ಹಿತಾಸಕ್ತಿ ವಿರುದ್ಧ ಬಳಸಲು ನನ್ನ ಭೂಮಿಯನ್ನು ಯಾರಿಗೂ ನೀಡುವುದಿಲ್ಲವೆಂದು ಭೂತಾನ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿತು.
  • 2008-ಬಿಹೆಚ್‌ಇಎಲ್ ಸಂಸ್ಥೆಯ ನೌಕರರಿಗೆ ವಿಶ್ವಕರ್ಮ ಪ್ರಶಸ್ತಿಯನ್ನು ನೀಡಲಾರಂಭಿಸಿತು.
  • 1932-ಜಾತಿ ಆಧಾರಿತವಾಗಿ ಚುನಾವಣೆ ರೂಪಿಸಲು ಮುಂದಾದ ಬ್ರಿಟನ್ ಸರ್ಕಾರದ ನಿರ್ಧಾರವನ್ನು ಖಂಡಿಸಿ ಮಹಾತ್ಮ ಗಾಂಧಿ ಮುಂಬೈನ ಯರವಡ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಮಾಡಿದ್ದರು.

ವಿದೇಶಿ ವಿನಿಮಯ ಮೀಸಲು

ಯಾವುದೇ ದೇಶದ ಕೇಂದ್ರೀಯ ಬ್ಯಾಂಕ್‌ಗಳು ಹೊಂದಿರುವ ವಿದೇಶಿ ಕರೆನ್ಸಿಗಳ ಸಂಗ್ರಹವನ್ನು ವಿದೇಶಿ ವಿನಿಮಯ ಮೀಸಲು (Foreign exchange reserves or Forex reserves or FX reserves) ಎಂದು ಕರೆಯಲಾಗುತ್ತದೆ.

ಉದಾಹರಣೆಗೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಹೊಂದಿರುವ ಡಾಲರ್, ಯೂರೋ, ಯೆನ್ ಮೊದಲಾದ ವಿದೇಶಿ ಕರೆನ್ಸಿಗಳು. ಕೆಲವೊಮ್ಮೆ ಚಿನ್ನದ ರೂಪದಲ್ಲಿಯೂ ವಿದೇಶಿ ವಿನಿಮಯ ಮೀಸಲು ಸಂಗ್ರಹಿಸಲಾಗಿರುತ್ತದೆ. ವಿದೇಶಿ ವಿನಿಮಯ ಮೀಸಲು ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ದೇಶದ ಕರೆನ್ಸಿಯ ಮೌಲ್ಯದ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ವಿದೇಶಿ ವಿನಿಮಯ ಮೀಸಲುಗಳು ಹೂಡಿಕೆದಾರರು ಮತ್ತು ಮಾರುಕಟ್ಟೆಯ ವಿಶ್ವಾಸವನ್ನು ಹೆಚ್ಚಿಸಬಹುದು. ಇದು ಆರ್ಥಿಕ ಬಿಕ್ಕಟ್ಟುಗಳ ಅಪಾಯ ವನ್ನೂ ಕಡಿಮೆ ಮಾಡುತ್ತದೆ. ಡಾಲರ್ ಎದುರಿನ ರೂಪಾಯಿ ಕುಸಿತದ ತೀವ್ರತೆಯನ್ನು ತಪ್ಪಿಸಲು ರಿಸರ್ವ್ ಬ್ಯಾಂಕ್, ತನ್ನಲ್ಲಿನ ಡಾಲರ್ ಸಂಗ್ರಹವನ್ನು ಬಳಸುತ್ತಿದೆ.ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಐಐಎಂಬಿಗೆ ಮೊದಲ ಬ್ಯಾಂಕ್‌ ಅನುಭವಿ ವೃತ್ತಿಪರರಿಗಾಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು (ಐಐಎಂಬಿ) ರೂಪಿಸಿರುವ ವರ್ಷದ ಪೂರ್ಣಾವಧಿಯ ಕಾರ್ಯನಿರ್ವಾಹಕ ಸ್ನಾತಕೋತ್ತರ ಕಾರ್ಯಕ್ರಮವು (ಇಪಿಜಿಪಿ) ಬ್ಲೂಮ್ಬರ್ಗ್ ಬೆಸ್ಟ್ ಬಿ-ಶಾಲೆಗಳ ಸಮೀಕ್ಷೆ 2023ರಲ್ಲಿ ರಾಷ್ಟ್ರದಲ್ಲಿ ಮೊದಲ ಮತ್ತು ಎಪಿಎಸಿ ಪ್ರದೇಶದಲ್ಲಿ 4ನೇ ಸ್ಥಾನ ಪಡೆದಿದೆ. ಐಐಎಂಬಿಯಲ್ಲಿನ ಇಪಿಜಿಪಿ ಕಲಿಕೆ (86.6), ನೆಟ್ವರ್ಕಿಂಗ್ (83) ಮತ್ತು ಎಂಟರ್ಪ್ರೆಕ್ಯೂರ್ಶಿಪ್ (79) ನಿಯತಾಂಕಗಳಲ್ಲಿ ಉತ್ತಮ ಅಂಕ ಗಳಿಸಿದ್ದು, ಹಿಂದಿನ ವರ್ಷಕ್ಕಿಂತ ಭಾರಿ ಸುಧಾರಣೆ ಕಂಡಿದೆ. ಕಾರ್ಯಕ್ರಮವು ಕಳೆದ ವರ್ಷ 66.4 ಅಂಕಗಳಿಂದ ಈ ವರ್ಷ ಒಟ್ಟಾರೆ 69.3 ಅಂಕಗಳಿಗೆ ಏರಿಕೆ ಕಂಡಿದೆ. ಕಳೆದ ವರ್ಷಕ್ಕಿಂತ (34.2) ಈ ವರ್ಷ ಗಮನಾರ್ಹ ಹೆಚ್ಚಳವನ್ನು (44.8) ಕಂಡಿದೆ.

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಪ್ರಚಲಿತ ಪೇಪರ್ ಕಟ್ಟಿಂಗ್ 16-09-2023

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts