Friday, March 29, 2024

ಪ್ರಚಲಿತ ವಿದ್ಯಮಾನಗಳ ಅವಲೋಕನ 29-03-2024

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, March 29, 2024

ಪ್ರಚಲಿತ ವಿದ್ಯಮಾನಗಳ ಅವಲೋಕನ 29-03-2024


(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

1) ಹೇಳಿಕೆಗಳನ್ನು ಓದಿಕೊಂಡು ಸರಿಯಾಗಿ ಉತ್ತರಿಸಿ.

ಹೇಳಿಕೆ I: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವು ಚೀನಾದ ಸಹಯೋಗದಲ್ಲಿ 'ಇಸ್ಲಾಮೊಫೋಬಿಯಾ' ಕುರಿತ ಕರಡು ನಿರ್ಣಯ ಮಂಡಿಸಿತು.

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಹೇಳಿಕೆ 2: ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಆಗಿರುವವರು ರುಚಿರಾ ಕಂಬೋಜ್.

ಎ) ಹೇಳಿಕೆ 1 ಸರಿ : ಬಿ) ಹೇಳಿಕೆ 2 ಸರಿ

ಸಿ) ಎರಡೂ ಹೇಳಿಕೆಗಳು ಸರಿ

ಡಿ) ಎರಡೂ ಹೇಳಿಕೆಗಳು ತಪ್ಪು

ಉತ್ತರ: ಸಿ) ಎರಡೂ ಹೇಳಿಕೆಗಳು ಸರಿ

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ವಿವರಣೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿ

ಸ್ತಾನವು ಚೀನಾದ ಸಹಯೋಗದಲ್ಲಿ ಮಂಡಿಸಿದ 'ಇಸ್ಲಾಮೊಫೋಬಿಯಾ' ಕುರಿತ ಕರಡು ನಿರ್ಣಯದ ಮೇಲಿನ ಮತದಾನದಿಂದ ಭಾರತ ದೂರವುಳಿಯಿತು. ಕೇವಲ ಒಂದು ಧರ್ಮವನ್ನು ಪ್ರತ್ಯೇಕಿಸುವ ಬದಲು, ಹಿಂಸೆ ಮತ್ತು ತಾರತಮ್ಯ ಎದುರಿಸುತ್ತಿರುವ ಹಿಂದೂ-ಬೌದ್ಧ, ಸಿಖ್ ಮತ್ತು ಇತರ ಧರ್ಮಗಳ ವಿರುದ್ಧದ ಧರ್ಮ ದ್ವೇಷವನ್ನೂ

ಖಂಡಿಸಬೇಕು : ಎಂದು ಭಾರತ ಪ್ರತಿಪಾದಿಸಿದೆ. ಜಾಗತಿಕವಾಗಿ ನಡೆಯುತ್ತಿರುವ ಧಾರ್ಮಿಕ ತಾರತಮ್ಮದ ವಿಶಾಲ ವ್ಯಾಪ್ತಿಯನ್ನು ಪರಿಗಣಿಸಲು" ಭಾರತ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ.

193 ಸದಸ್ಯರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಮಂಡಿಸಿದ 'ಇಸ್ಲಾಮೊಫೋಬಿಯಾವನ್ನು ಎದುರಿಸಲು ಕ್ರಮಗಳು* ಕುರಿತ ನಿರ್ಣಯವನ್ನು ಅಂಗೀಕರಿಸಲಾಯಿತು. 115 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದವು. ಯಾವುದೇ ರಾಷ್ಟ್ರ ಈ ನಿರ್ಣಯದ ವಿರುದ್ಧ ಮತ ಚಲಾಯಿಸಲಿಲ್ಲ. ಭಾರತ

-ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಇಟಲಿ, ಉಕ್ರೇನ್ ಮತ್ತು ಬ್ರಿಟನ್ ಸೇರಿ 44 ದೇಶಗಳು ಮತದಾನದಿಂದ ದೂರವುಳಿದವು. ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ರುಚಿರಾ, ಕಂಭೋಜ್ ಅವರು 'ನಾವು ಹಿಂದೂ, ಬೌದ್ಧ ಮತ್ತು ಸಿಖ್ ವಿರೋಧಿ ಭಾವನೆಗಳ ವಿರುದ್ಧ ನಿಂತಿದ್ದೇವೆ. ಅದು ಕ್ರಿಶ್ಚಿಯನ್‌ಫೋಬಿಯಾ ಅಥವಾ ಇಸ್ಲಾಮೊಫೋಬಿಯಾ, ಆಗಿರಬಹುದು. ಎಲ್ಲಾ ರೀತಿಯ ಧಾರ್ಮಿಕ ಫೋಬಿಯಾ ವಿರುದ್ಧವಾದ ನಿಲುವು ನಮ್ಮದು' ಎಂದು ಹೇಳಿದರು. ಇಸ್ಲಾಮೊಫೋಬಿಯಾ ಎಂದರೆ ಇಸ್ಲಾಂ ಧರ್ಮ, ಸಾಮಾನ್ಯವಾಗಿ ಮುಸಲ್ಮಾನರ ಬಗೆಗಿನ ಹೆದರಿಕೆ, ದ್ವೇಷ ಅಥವಾ ಪೂರ್ವಾಗ್ರಹ, 3

2) 'ಸಿಕಸ್ ಸಿರ್ಸಿನಾಲಿಸ್' ಇತ್ತೀಚೆಗೆ ಸುದ್ದಿಯಲ್ಲಿತ್ತು. ಇದೊಂದು ಏನು?

ಎ) ಕ್ಷುದ್ರಗ್ರಹ .

ಬಿ) ಎಕ್ಸೆಪ್ಲಾನೆಟ್

ಸಿ) ಬ್ಲ್ಯಾಕ್‌ ಹೋಲ್

ಡಿ) ತಾಳೆಯಂತಹ ಮರ

ಉತ್ತರ: ಡಿ) ತಾಳೆಯಂತಹ ಮರ

ವಿವರಣೆ: ಕೇರಳದಲ್ಲಿನ ತಾಳೆಯಂತಹ ಮರವಿದು. ಉತ್ತರ ಕೇರಳದಲ್ಲಿ ಹೆಚ್ಚಾಗಿ ಕಂಡುಬರುವ ಇದು ವೇಗವಾಗಿ ಹರಡುತ್ತಿರುವ ಸಸ್ಯ ರೋಗದಿಂದಾಗಿ ಹೆಚ್ಚಿನ ಸಂಖ್ಯೆಯ ಮರಗಳು ನಾಶವಾಗಿದ್ದು ಅಳಿವಿನಂಚಿಗೆ ವಾಲಬಹುದು ಎಂಬುದು ಜೀವವಿಜ್ಞಾನಿಗಳ ಆತಂಕ. 'ಸಿಕಸ್ ಸಿರ್ಸಿ * ನಾಲಿಸ್ ಮರ ಪ್ರಾಚೀನ ಮರದ ಪ್ರಭೇದಕ್ಕೆ ಸೇರಿದ್ದು, *300 ದಶಲಕ್ಷ ವರ್ಷಗಳ ಹಿಂದೆ ಭೂಮಿಯ ಮೇಲೆ ಕಾಣಿಸಿಕೊಂಡಿತು. ಸ್ಥಳೀಯವಾಗಿ ಇದನ್ನು 'ಎಂಥು ಪನಾ' ಎಂದು ಕರೆಯುತ್ತಾರೆ. ಅಡಿಕೆ ಮರವನ್ನು ಹೋಲುತ್ತದೆ. 25 ಅಡಿಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ.

3) ಗರ್ಭಪಾತ ಒಂದು ಹಕ್ಕನ್ನಾಗಿ ತನ್ನ ಸಂವಿಧಾನದಲ್ಲಿ ಅವಕಾಶ .. 'ಕಲ್ಪಿಸಿದ ವಿಶ್ವದ ಮೊದಲ ದೇಶ ಯಾವುದು?.

ಎ) ಪೋಲಂಡ್

ಬಿ) ಫ್ರಾನ್ಸ್

ಸಿ) ಜರ್ಮನಿ

ಡಿ) ಇಸ್ರೇಲ್

ಉತ್ತರ: ಬಿ) ಫ್ರಾನ್ಸ್

ವಿವರಣೆ: ಇತ್ತೀಚೆಗೆ ಫ್ರಾನ್ಸ್, ತನ್ನ ಸಂವಿಧಾನದಲ್ಲಿ ಗರ್ಭಪಾತ ಇದೊಂದು ಮಹಿಳೆಗೆ ಇರುವ ಹಕ್ಕು ಎಂದು ಬಹುಮತದಿಂದ ಸಂಸತ್ತಿನ ಜಂಟಿ ನಿರ್ಣಯವನ್ನು ಅಂಗೀಕರಿಸಿತು. ಅಧಿವೇಶನದಲ್ಲಿ 780 ಮತಗಳು ಗರ್ಭಪಾತ ಇದು ಮಹಿಳೆಗೆ ಇರುವ ಹಕ್ಕು ಎಂಬುದರ ಪರವಾಗಿ ಬಿದ್ದವು. 72 ಮತಗಳು ಮಾತ್ರ ವಿರುದ್ಧವಾಗಿ ) ಬಂದವು. ಇನ್ನು ಮುಂದೆ ಕಾನೂನಿನ ಪ್ರೇಮ್‌ವರ್ಕ್‌ನಡಿ ಮಹಿಳೆ ಗರ್ಭಪಾತದ ಹಕ್ಕನ್ನು ಹೊಂದಬಹುದು.

4) ಬ್ಲಾದಿಮಿರ್ ಪುಟಿನ್ ಇತ್ತೀಚೆಗೆ ಸತತ ಎಷ್ಟನೆಯ ಬಾರಿ ರಷ್ಯಾದ ಅಧ್ಯಕ್ಷರಾಗಿ ಚುನಾಯಿತರಾದರು?

ಎ) ಮೂರನೆಯ

ಬಿ) ಆರನೆಯ

ಸಿ) ಐದನೆಯ

ಡಿ) ನಾಲ್ಕನೆಯ

ಉತ್ತರ:

ಸಿ) ಐದನೆಯ

ವಿವರಣೆ: ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ವ್ಹಾದಿಮಿರ್ ಪುಟಿನ್ ಪುನರಾಯ್ಕೆಯಾದರು. ಚಲಾವಣೆಯಾದ ಮತಗಳ ಪೈಕಿ ಶೇ. 87.97ರಷ್ಟು ಮತ ಪಡೆದು ಪುಟಿನ್ ಸತತ ಐದನೆಯ ಬಾರಿ ರಷ್ಯಾ ಅಧ್ಯಕ್ಷನ ಸ್ಥಾನ ಅಲಂಕರಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಗೆ ನಡೆದ ಮತದಾನದಲ್ಲಿ ಶೇ.73ರಷ್ಟು ಮತದಾನವಾಗಿತ್ತು.

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಪ್ರಚಲಿತ ವಿದ್ಯಮಾನಗಳ ಅವಲೋಕನ 29-03-2024

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.