PC Notes

KPSC EXAM

Friday, March 29, 2024

ರಾಜ್ಯಸಭೆ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, March 29, 2024

ಶೀರ್ಷಿಕೆ: ರಾಜ್ಯಸಭೆ


(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಭಾರತದ ಶಾಸಕಾಂಗ ವ್ಯವಸ್ಥೆಯ ಬಾಮೇಲ್ಮನೆ ರಾಜ್ಯಸಭೆ. ಈ ಸದನದ ಒಟ್ಟು ಸದಸ್ಯರ ಸಂಖ್ಯೆ 250, ಇದರಲ್ಲಿ 12 ಸದಸ್ಯರನ್ನು ರಾಷ್ಟ್ರಪತಿ ನಾಮಕರಣ ಮಾಡುತ್ತಾರೆ. ಕಲೆ, ಸಾಹಿತ್ಯ, ಕ್ರೀಡೆ, ಪತ್ರಿಕೋದ್ಯಮ, ಸಮಾಜ ಸೇವೆ ಮತ್ತಿತರ ಪ್ರಮುಖ ಕ್ಷೇತ್ರಗಳಿಗೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಅವರನ್ನು ರಾಜ್ಯಸಭೆಯ ಸದಸ್ಯರನ್ನಾಗಿ ನಾಮಕರಣ ಮಾಡಲಾಗುತ್ತದೆ. ಇವರನ್ನು ನಾಮನಿರ್ದೇಶಿತ ಸದಸ್ಯರೆಂದು ಕರೆಯಲಾಗುತ್ತದೆ. ಉಳಿದ ಸದಸ್ಯರನ್ನು ರಾಜ್ಯ ವಿಧಾನಸಭೆಗಳಿಂದ ಆಯ್ಕೆ ಮಾಡಲಾಗುತ್ತದೆ


ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಪ್ರಕ್ರಿಯೆ ಹೇಗೆ?: ರಾಜ್ಯಸಭೆಯ ಸದಸ್ಯರ ಅವಧಿ 6 ವರ್ಷ. ಇದರಲ್ಲಿ

ಸದಸ್ಯರು 2 ವರ್ಷಗಳಿಗೊಮ್ಮೆ 50 

ರಾಜ್ಯಸಭೆಯ 1/3ರಷ್ಟು ನಿವೃತ್ತಿ ಹೊಂದುತ್ತಾರೆ. ರಾಜ್ಯಸಭೆಯು ಸತತವಾಗಿ ಸೇರುವ ಸದನವಾಗಿದ್ದು, ಲೋಕಸಭೆಯ ಹಾಗೇ ಇದರ ಸೇವಾವಧಿ ಅನೂರ್ಜಿತವಾಗುವುದಿಲ್ಲ, ರಾಜ್ಯಸಭೆಯು ಲೋಕಸಭೆಯ ಹಾಗೆಯೇ ಸಮನಾದ ಅಧಿಕಾರವನ್ನು ಹೊಂದಿರುತ್ತದೆ, ಆದರೆ ಕೆಲವು ವಿಷಯಗಳಲ್ಲಿ ರಾಜ್ಯಸಭೆಯ ನಿರ್ಣಯವನ್ನು ಲೋಕಸಭೆ ತಿರಸ್ಕರಿಸಬಹುದು. ಕೆಲವು ವಿಷಯಗಳು ಇತ್ಯರ್ಥವಾಗದ ಪಕ್ಷದಲ್ಲಿ ಜಂಟಿ ಸದನಗಳ ಬೈಠಕ್ ಕರೆಯಲಾಗುತ್ತದೆ. 1952ರ ಮೇ 13ರಂದು ರಾಜ್ಯಸಭೆಯ ಮೊದಲ ಅಧಿವೇಶನ ನಡೆಯಿತು.

ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ರಾಷ್ಟ್ರಪತಿಗಳಿಂದ ನಾಮನಿರ್ದೇಶನಗೊಂಡ ಹನ್ನೆರಡು ಸದಸ್ಯರು ಸಂವಿಧಾನದ 55ನೇ ವಿಧಿಯ ಪ್ರಕಾರ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ. ರಾಜ್ಯಸಭೆಯ ಸಭಾಧ್ಯಕ್ಷರು ಉಪಾಧ್ಯಕ್ಷರಾಗಿರುತ್ತಾರೆ. ಭಾರತದ ಇವರನ್ನು ಚುನಾವಣೆ ಮೂಲಕ ಭಾರತದ ಸಂಸತ್‌ ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರು ಆಯ್ಕೆ ಮಾಡುತ್ತಾರೆ.

ಸದಸ್ಯ ಬಲ: ಪ್ರಸ್ತುತ 245 ಸದಸ್ಯ ಬಲವಿದ್ದು, ಇವರಲ್ಲಿ 225 ರಾಜ್ಯಗಳಿಂದ ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿಂದ ಸೇರಿದಂತೆ ಒಟ್ಟು 233 ಆಯ್ಕೆಯಾದವರು, 12 ಸದಸ್ಯರು ನಾಮನಿರ್ದೇಶಿತ ಸದಸ್ಯರಾಗಿದ್ದಾರೆ.

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಅರ್ಹತೆ: ಸಂವಿಧಾನದ 84ನೇ ವಿಧಿಯು ಸಂಸತ್ತಿನ ಸದಸ್ಯತ್ವಕ್ಕೆ ಅರ್ಹತೆಗಳನ್ನು ವಿಧಿಸಿದೆ. ಪ್ರಕಾರ ರಾಜ್ಯಸಭೆ ಸದಸ್ಯರಾಗಲು ಭಾರತದ ಪ್ರಜೆಯಾಗಿರಬೇಕು, 30 ವರ್ಷ ಮೇಲ್ಪಟ್ಟವರಾಗಿರಬೇಕು. ನ್ಯಾಯಾಂಗದ ಶಿಕ್ಷೆಗೆ ಒಳಗಾಗಿರಬಾರದು, ಸಂಸತ್ತು ಆಗಿಂದಾಗ್ಗೆ ನಿಗದಿಪಡಿಸಿದ ಅರ್ಹತೆಗಳನ್ನು ಪಡೆದಿರಬೇಕು.

ರಾಜ್ಯಸಭೆ ಮಿತಿಗಳು

ಸಂವಿಧಾನವು ರಾಜ್ಯಸಭೆ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆಯು ಕೆಲವು ಕ್ಷೇತ್ರಗಳಲ್ಲಿ ಹೆಚ್ಚು ಶಕ್ತಿಶಾಲಿಯಾಗಿದೆ. ಸಂವಿಧಾನದ 110ನೇ ವಿಧಿಯಲ್ಲಿ ಹಣಕಾಸು ಮಸೂದೆ ಕುರಿತು ವಿವರಿಸಿದೆ. ಇದರ ಪ್ರಕಾರ ರಾಷ್ಟ್ರಪತಿಗಳ ಶಿಫಾರಸಿನ ಮೇರೆಗೆ ಲೋಕಸಭೆಯಲ್ಲಿ ಹಣಕಾಸು ಮಸೂದೆಯನ್ನು ಮಂತ್ರಿ ಮಂಡಿಸಬಹುದು. ಹಣಕಾಸು ಮಸೂದೆಯನ್ನು ಲೋಕಸಭೆ ಅಂಗೀಕರಿಸಿದ ಬಳಿಕ ಹಣಕಾಸು ಮಸೂದೆಯನ್ನು 14 ದಿನಗಳ ಕಾಲ ರಾಜ್ಯಸಭೆಗೆ ಕಳಿಸುತ್ತದೆ. ಈ ಸಮಯದಲ್ಲಿ ಅದು ಶಿಫಾರಸು ಮಾಡಬಹುದು. ರಾಜ್ಯಸಭೆ 14 ದಿನಗಳಲ್ಲಿ ಹಣದ ಮಸೂದೆಯನ್ನು ಲೋಕಸಭೆಗೆ ಹಿಂದಿರುಗಿಸಲು ವಿಫಲವಾದರೆ ಆ ಮಸೂದೆಯನ್ನು ಉಭಯ ಸದನಗಳು ಅಂಗೀಕರಿಸಿದವು ಎಂದು ಪರಿಗಣಿಸ ಲಾಗುತ್ತದೆ. ಅಲ್ಲದೆ, ರಾಜ್ಯಸಭೆಯು ಪ್ರಸ್ತಾಪಿಸಿದ ಯಾವುದೇ (ಅಥವಾ ಎಲ್ಲ) ತಿದ್ದುಪಡಿಗಳನ್ನು ಲೋಕಸಭೆತಿರಸ್ಕರಿಸಬಹುದು. ಹೀಗಾಗಿ ಹಣಕಾಸು ಮಸೂದೆಗೆ ಸಂಬಂಧಿ ಸಿದಂತೆ ರಾಜ್ಯಸಭೆ ಕೇವಲ ಶಿಫಾರಸುಗಳನ್ನು ನೀಡಬಹುದಾಗಿದ್ದು, ತಿದ್ದುಪಡಿ ಮಾಡಲು ಸಾಧ್ಯವಿಲ್ಲ, ಅಂತಿಮವಾಗಿ ಸಂಸತ್ತಿನ ಎರಡೂ ಸದನಗಳಿಂದ ಮಸೂದೆ ಅಂಗೀಕರಿಸಲಾಗಿದೆ. ಎಂದು ಪರಿಗಣಿಸಲಾಗುತ್ತದೆ. ಹಣಕಾಸು ಮಸೂದೆಗೆ ಸಂಬಂಧಿಸಿದಂತೆ ಎರಡೂ ಸದನಗಳ ಜಂಟಿ ಸಭೆ ಇಲ್ಲ, ಏಕೆಂದರೆ ಎಲ್ಲ ಅಂತಿಮ ನಿರ್ಧಾರಗಳನ್ನು ಲೋಕಸಭೆ ತೆಗೆದುಕೊಳ್ಳುತ್ತದೆ.

ಉಪಾಧ್ಯಕ್ಷ: ಹರಿವಂಶ ನಾರಾಯಣ ಸಿಂಗ್, ಜೆಡಿಯು; 9 ಆಗಸ್ಟ್ 2018 ರಿಂದ

ಅಧ್ಯಕ್ಷರು (ಭಾರತದ ಉಪಾಧ್ಯಕ್ಷರು): ಜಗದೀಪ್ ಧಂಖರ್; 11 ಆಗಸ್ಟ್ 2022 ರಿಂದ

ಕೊನೆಯ ಚುನಾವಣೆ: ಫೆಬ್ರವರಿ 2024

ಸಭಾನಾಯಕ: ಪಿಯೂಷ್ ಗೋಯಲ್; (ಕ್ಯಾಬಿನೆಟ್ ಮಂತ್ರಿ), ಬಿಜೆಪಿ; 14 ಜುಲೈ 2021 ರಿಂದ

ವಿರೋಧ ಪಕ್ಷದ ನಾಯಕ: ಮಲ್ಲಿಕಾರ್ಜುನ ಖರ್ಗೆ, INC; 16 ಫೆಬ್ರವರಿ 2021 ರಿಂದ

ಮುಂದಿನ ಚುನಾವಣೆ: 2025

ಸ್ಥಾನಗಳು: 245 (233 ಚುನಾಯಿತ + 12 ನಾಮನಿರ್ದೇಶಿತ)

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ರಾಜ್ಯಸಭೆ

Previous
« Prev Post

No comments:

Ad Code

Blog Archive

My Blog List

Blog Archive

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.