Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Saturday, April 13, 2024

ವಾಣಿಜ್ಯ ನೌಕಾಪಡೆನಲ್ಲಿ 4,000 Navy Merchant ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆಯನ್ನು ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Saturday, April 13, 2024

ವಾಣಿಜ್ಯ ನೌಕಾಪಡೆನಲ್ಲಿ 4,000 Navy Merchant ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆಯನ್ನು ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.ಕೇಂದ್ರ ಬಂದರು, ಹಡಗು ಹಾಗೂ ಜಲಮಾರ್ಗದ ಸಚಿವಾಲಯದಡಿಯಲ್ಲಿ ವಾಣಿಜ್ಯ ನೌಕಾಪಡೆ ಕಾರ್ಯನಿರ್ವಹಿಸುತ್ತಿದ್ದು, ಕಡಲ ನಿರ್ವಾಹಕರಾದ ಡೈರೆಕ್ಟರ್ಜ ನರಲ್ ಆಫ್ ಶಿಪ್ಪಿಂಗ್ ಆಫೀಸರ್ಇ ದರ ಮೇಲುಸ್ತುವಾರಿಯಾಗಿದ್ದಾರೆ. ಖಾಸಗಿ ವಲಯ ಉದ್ಯಮವಾಗಿರುವ ವಾಣಿಜ್ಯ ನೌಕಾಪಡೆಯು ಕಡಲ ವ್ಯಾಪಾರಕ್ಕೆ ಅತ್ಯವಶ್ಯಕವಾಗಿದ್ದು, ಶೇ.7 ಪ್ರಮಾಣದಷ್ಟು ಜನರು ವಾಣಿಜ್ಯ ನೌಕಾಪಡೆಯನ್ನು ನೆಚ್ಚಿಕೊಂಡು ಸಾಗರ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಪ್ರಸ್ತುತ ವಾಣಿಜ್ಯ ನೌಕಾಪಡೆಯಲ್ಲಿ ಹಲವು ಹುದ್ದೆಗಳು ಖಾಲಿಯಿದ್ದು, ಅವುಗಳನ್ನುಭರ್ತಿ ಮಾಡಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ವಾಣಿಜ್ಯ ನೌಕಾಪಡೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ.

ಶೈಕ್ಷಣಿಕ ಅರ್ಹತೆ ಹೀಗಿರಲಿ...

  • ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ ನಿಗದಿಗೊಂಡಿದ್ದು, ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ಶಿಕ್ಷಣ ಮಂಡಳಿ ಅಥವಾ ವಿದ್ಯಾಸಂಸ್ಥೆಯಿಂದ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು.ಎಂಜಿನ್ ರೇಟಿಂಗ್, ಸೀಮನ್, ಮೆಸ್ ಬಾಯ್ ಹಾಗೂ ಕುಕ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ. ಹೊಂದಿರಬೇಕಿದೆ. ಎಲೆಕ್ನಿಷಿಯನ್, ವೆಲ್ಡರ್/ಹೆಲ್ಪರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್‌ಎಸ್‌ಎಲ್‌ಸಿಯೊಟ್ಟಿಗೆ ಹುದ್ದೆಗೆ ಅನುಗುಣವಾದ ವಿಷಯದಲ್ಲಿ ಐಟಿಐ ತೇರ್ಗಡೆಯಾಗಿರುವುದು ಕಡ್ಡಾಯ. ಇನ್ನು ಡೆಕ್ ರೇಟಿಂಗ್ ಹುದ್ದೆಗೆ ಅರ್ಜಿ ಸಲ್ಲಿಸುವವರು ದ್ವಿತೀಯ ಪಿಯುಸಿ ಪಾಸ್ ಆಗಿರಬೇಕಿದೆ.

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ವಯೋಮಿತಿ

  • ಕರೆ ನೀಡಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಕನಿಷ್ಠ 17.5ವರ್ಷ ತುಂಬಿರುವವರಾಗಿರಬೇಕಿದೆ. ಇನ್ನುಳಿದಂತೆ ಡೆಕ್ ರೇಟಿಂಗ್, ಇಂಜಿನಿಯರಿಂಗ್ ರೇಟಿಂಗ್, ಸೀಮನ್ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ 25 ವರ್ಷ ಹಾಗೂ ಎಲೆಕ್ನಿಷಿಯನ್, ವೆಲ್ಡರ್/ಹೆಲ್ಪರ್, ಮೆಸ್ ಬಾಯ್, ಕುಕ್ ಹುದ್ದೆಗೆ ಅರ್ಜಿ ಸಲ್ಲಿಸುವವರು 27 ವರ್ಷ ಮೀರದವರಾಗಿರಬೇಕು.


ಪ್ರಕಟಣೆ ದಿನಾಂಕ: 2024

ಹುದ್ದೆ ವಿವರ ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019


ಆಯ್ಕೆ ಹೇಗೆ ನಡೆಯಲಿದೆ?

  • ಬಹುಆಯ್ಕೆ ಆಧಾರಿತ ಪರೀಕ್ಷೆ ಮೂಲಕ ಅಭ್ಯರ್ಥಿ ಸಾಮರ್ಥ್ಯ ಅಳೆಯಲಾಗುವುದು. 100 ಅಂಕಕ್ಕೆ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಯ ಸಾಮಾನ್ಯ ಜ್ಞಾನ, ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯಾಧಾರಿತ ಜ್ಞಾನ, ಆ್ಯಪ್ಟಿಟ್ಯೂಡ್ ಹಾಗೂ ರೀಸನಿಂಗ್ ಕೌಶಲವನ್ನು ಪರೀಕ್ಷಿಸಲಾಗುವುದು.

ವಿಶೇಷ ಸೂಚನೆ

  • ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೊಸಬರು ಹಾಗೂ ದ್ವಿತೀಯ ಪಿಯುಸಿ ಫಲಿತಾಂಶ ನಿರೀಕ್ಷಿಸುತ್ತಿರುವವರು ಅರ್ಜಿ ಸಲ್ಲಿಸಬಹುದು. ಆಯ್ಕೆಗೊಂಡ ಅಭ್ಯರ್ಥಿಗಳನ್ನು ದೇಶದ ಹಲವು ಭಾಗಗಳಿಗೆ ಹಾಗೂ ವಿದೇಶದಲ್ಲಿಯೂ ಕೆಲಸಕ್ಕೆ ನಿಯೋಜಿಸಲಾಗುವುದು.


ಅರ್ಜಿ ಶುಲ್ಕ ಎಷ್ಟಿರಲಿದೆ?

  • ಎಲ್ಲ ವರ್ಗದ ಅಭ್ಯರ್ಥಿಗಳು 100ರೂ. ಅರ್ಜಿ ಶುಲ್ಕ ಪಾವತಿಸುವುದು ಕಡ್ಡಾಯ.

ಅರ್ಜಿ ಹೀಗೆ ಸಲ್ಲಿಸಿ...

  • ಅಧಿಕೃತ ವೆಬ್‌ಸೈಟ್ www.sealanemaritime.in ನಲ್ಲಿ ರಿಜಿಸ್ಟ್ರೇಷನ್‌ ಮಾಡಿಕೊಂಡ ನಂತರವೇ ಅರ್ಜಿ ಸಲ್ಲಿಸಬಹುದು. ತಪ್ಪು ಮಾಹಿತಿ ನೀಡಿದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.

ಹುದ್ದೆ ಆಧರಿಸಿ ವೇತನ ನಿಗದಿ....

  • ಡೆಕ್ ರೇಟಿಂಗ್, ವೆಲ್ಡರ್/ಹೆಲ್ಪರ್: 50,000ರೂ.-85,000ರೂ. ಇಂಜಿನ್ ರೇಟಿಂಗ್, ಮೆಸ್ ಬಾಯ್, ಕುಕ್:40,000-60,000.ಎಲೆಕ್ನಿಷಿಯನ್ 60,000ರೂ.-90,000ರೂ. ಸಿಮನ್ :38,000.-55,000.

ಅರ್ಜಿ ಸಲ್ಲಿಕೆ ಲಿಂಕ್ bit.ly/43JOD4T

ಅಧಿಸೂಚನೆ bit.ly/3TL4yv8

ಈ ದಿನದೊಳಗೆ ಅರ್ಜಿ ಸಲ್ಲಿಸಿ 30.04.2024


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ವಾಣಿಜ್ಯ ನೌಕಾಪಡೆನಲ್ಲಿ 4,000 Navy Merchant ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆಯನ್ನು ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts