KPSC EXAM GK

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

2021ನೇ ಸಾಲಿನ ಪ್ರಮುಖ ಪ್ರಚಲತ ವಿಷಯಗಳು


2021ರ ಆಗಸ್ಟ್ 15 ರಂದು ಘೋಷಣೆಯಾದ ಕರ್ನಾಟಕ ಸರ್ಕಾರದ ಅಮೃತ ಯೋಜನೆಗಳು ಅಮೃತ ಗ್ರಾಮ ಪಂಚಾಯಿತಿ :


1. ಆಯ್ದ 750 ಪಂಚಾಯಿತಿಗಳಲ್ಲಿ ಸಮಗ್ರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ, ಡಿಜಿಟಲ್ ಲೈಬ್ರೆ ಮತ್ತು ಸುಸಜ್ಜಿತ ಶಾಲೆ, ಶೇ. 100 ರಷ್ಟು ಘನತ್ಯಾಜ್ಯ ವಿಂಗಡಣೆ.


2. ಅಮೃತ ಗ್ರಾಮೀಣ ವಸತಿ : ಆಯ್ದ 750 ಗ್ರಾಮ ಪಂಚಾಯಿತಿಗಳಲ್ಲಿ ವಸತಿ ರಹಿತ ಮತ್ತು ಆಶ್ರಯ ರಹಿತರನ್ನು ಗುರುತಿಸಿ ಸರ್ವರಿಗೂ ವಸತಿ ಕಲ್ಪಿಸುವ ಯೋಜನೆ


3. ಅಮೃತ ರೈತ್ ಉತ್ಪಾದಕ ಸಂಸ್ಥೆಗಳು :

750 ಸಂಸ್ಥೆಗಳ ಸ್ಥಾಪನೆ, ಪ್ರತೀ ಸಂಸ್ಥೆಗೆ 30 ಲಕ್ಷ ರೂ. ನಂತೆ 3 ವರ್ಷಗಳ ಅವಧಿಗೆ 225 ಕೋಟಿ ರೂ. ನೀಡಿಕೆ. ರೈತರು, ಮೀನುಗಾರರಿಗೆ ಉತ್ಪನ್ನಗಳ ಉತ್ತಮ ಮಾರಾಟಕ್ಕೆ ವಿಶೇಷ ಪ್ರೋತ್ಸಾಹ.


4. ಅಮೃತ ನಿರ್ಮಲ ನಗರ :

ಆಯ್ದ 75 ನಗರ ಸ್ಥಳೀಯ ಸಂಸ್ಥೆಗಳ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡುವುದು. ತಲಾ 1 ಕೋಟಿ ರೂ. ನಂತೆ ಕೋಟಿ ರೂ ನೀಡಿಕೆ.


5. ಅಮೃತ ಶಾಲಾ ಸೌಲಭ್ಯ:

ಆಯ್ದ 750 ಶಾಲೆಗಳಿಗೆ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ ಸೇರಿದಂತೆ ಸಮಗ್ರ ಸೌಲಭ್ಯ ಪೂರೈಕೆ. ತಲಾ 10 ಲಕ್ಷ ರೂ. ನಂತೆ 75 ಕೋಟಿ ರೂ ವೆಚ್ಚ


6. ಅಮೃತ ಅಂಗನವಾಡಿ ಕೇಂದ್ರ :

ಆಯ್ದ 750 ಅಂಗನವಾಡಿ ಕೇಂದ್ರಗಳಿಗೆ ತಲಾ 1 ಲಕ್ಷ ರೂ. ನಂತೆ 7.5 ಕೋಟಿ ರೂ. ವೆಚ್ಚ ಮೂಲ ಸೌಕರ್ಯ ಅಭಿವೃದ್ಧಿ


೧. ಅಮೃತ ಸ್ವ-ಸಹಾಯ ಕಿರು ಉದ್ದಿಮೆ :

ಆಯ್ದ 7,500 ಸ್ವ-ಸಹಾಯ ಗುಂಪುಗಳನ್ನು ಕಿರು ಉದ್ದಿಮೆ ಸಂಸ್ಥೆಗಳಾಗಿ ರೂಪಿಸುವುದು. ತಲಾ 1 ಲಕ್ಷ ರೂ. ನಂತೆ 75 ಕೋಟಿ ರೂ. ಮೌಲ್ಯದ ಬೀಜಧನ ಪೂರೈಕೆ.


8. ಅಮೃತ ಕೌಶಲ್ಯ ತರಬೇತಿ :

ಎಸ್‌ಸಿ-ಎಸ್‌ಟಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ 75,000 ಯುವಜನರ ಕೌಶಲ್ಯಾಭಿವೃದ್ಧಿ 2 ವರ್ಷಗಳ ತರಬೇತಿ, 112 ಕೋಟಿ ರೂ ವೆಚ್ಚ, 75 ಐಟಿ-ನವೋದ್ಯಮಗಳ ಉತ್ತೇಜನಕ್ಕಾಗಿ ಅಮೃತ ಪ್ರೋತ್ಸಾಹ ಧನ ನೀಡಿಕೆ.


9. ಅಮೃತ ನಗರೋತ್ಥಾನ :

ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿ, 75 ಕೊಳಗೇರಿ ಅಭಿವೃದ್ಧಿ, 75 ಕೆರೆ/ಉದ್ಯಾನಗಳ ಅಭಿವೃದ್ಧಿ


10. ಅಮೃತ ಆರೋಗ್ಯ ಮೂಲ ಸೌಕರ್ಯ ಉನ್ನತೀಕರಣ ಆಯ್ದ 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಕರ್ಯ ವಿಸ್ತರಣೆ ಮತ್ತು ಉನ್ನತೀಕರಣ, ತಲಾ 20 ಲಕ್ಷ ರೂ. ನಂತೆ 150 ಕೋಟಿ ರೂ. ವೆಚ್ಚ


11. ಅಮೃತ ಸಮುದಾಯ ಅಭಿವೃದ್ಧಿ ಯೋಜನೆ :


ಆಯ್ದ 750 ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರುತಿಸಿ ರಚನಾತ್ಮಕ ಸಾಮುದಾಯಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಣೆ


12. ಅಮೃತ ಕ್ರೀಡಾ ದತ್ತು ಯೋಜನೆ :


2024ರ ಪ್ಯಾರಿಸ್ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ದ 75 ಕ್ರೀಡಾಪಟುಗಳನ್ನು ಗುರುತಿಸಿ ಅಗತ್ಯ ತರಬೇತಿ ಮತ್ತು ಪ್ರೋತ್ಸಾಹ ನೀಡಿಕೆ,

logoblog

No comments:

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

My Blog List

Followers

Blog Archive