Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

 • ಈ ವಿಭಾಗದಲ್ಲಿ ಪ್ರಧಾನಮಂತ್ರಿ ಮತ್ತೆ ಸಂಪದ ಯೋಜನೆ (ಮೀನುಗಾರಿಕೆಯ ಸಮಗ್ರ ಅಭಿವೃದ್ಧಿ ಮತ್ತು ನಿರ್ವಹಣೆ), ಕರಾವಳಿ ಮೀನುಗಾರರಿಗೆ ಕೇಂದ್ರ ಪುರಸ್ಕೃತ ಉಳಿತಾಯ ಮತ್ತು ಪರಿಹಾರ ಯೋಜನೆ, ಮೀನುಗಾರರ ಸಾಮೂಹಿಕ ಅಪಘಾತ ವಿಮಾ ಯೋಜನೆ, ಮೀನುಗಾರರ ಸಂಕಷ್ಟ ಪರಿಹಾರ ನಿಧಿ, ಮತ್ತ್ವವಾಹಿನಿ ಯೋಜನೆ, ನೀಲಿ ಕ್ರಾಂತಿ, ಮೀನುಗಾರಿಕೆ ಮತ್ತು ಜಲಕೃಷಿ ಮೂಲಸೌಕರ್ಯ ಅಭಿವೃದ್ಧಿ ನಿಧಿ, ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ, ಕಡಲಕಳ ಉದ್ಯಾನವನ ಮತ್ತು ಫಿಶರೀಸ್ ಸ್ಟಾರ್ಟ್ ಅಪ್ ಗ್ರಾಂಡ್ ಚಾಲೆಂಜ್ ಗಳನ್ನು ಕುರಿತು ತಿಳಿದುಕೊಳ್ಳೋಣ.

ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆ

• ಮೀನುಗಾರಿಕೆ ವಲಯದಲ್ಲಿ ಮುಂದಿನ 5 ವರ್ಷಗಳಲ್ಲಿ (2020. 21 ರಿಂದ 2024-25) ಮಹತ್ತರ ಬೆಳವಣಿಗೆ ತರುವ ಸಲುವಾಗಿ ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಮತ್ತೆ ಸಂಪದ ಯೋಜನೆ ಮೀನುಗಾರಿಕೆಯ ಸಮಗ್ರ ಅಭಿವೃದ್ಧಿ ಮತ್ತು ನಿರ್ವಹಣೆ ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ.

• ಮೀನುಗಾರಿಕೆ ಕ್ಷೇತ್ರದ ಎಲ್ಲಾ ಅಂಶಗಳನ್ನು ಈ ಯೋಜನೆಯಲ್ಲಿ ಸೇರಿಸಲಾಗಿದೆ ಮತ್ತು ಫಲಾನುಭವಿಗಳು ಮೀನುಕೃಷಿ, ಮೀನು ಹಿಡುವಳಿ, ಮೌಲ್ಯವರ್ಧನೆ, ಮಾರುಕಟ್ಟೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೌಲಭ್ಯವನ್ನು ಪಡೆಯಬಹುದಾಗಿದೆ.

• ಈ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ ಫಲಾನುಭವಿಗಳಿಗೆ ನಿಯೋಜಿತ ಘಟಕ ವೆಚ್ಚ ಸೇರಿ ಶೇ 60ರಷ್ಟು ಆರ್ಥಿಕ ಸಹಾಯವನ್ನು ನೀಡಲಾಗುವುದು

• ಈ ಯೋಜನೆಯಡಿ ಸಾಮಾನ್ಯ ವರ್ಗಗಳಿಗೆ ಸೇರಿದ ಫಲಾನುಭವಿಗಳಿಗೆ ನಿಯೋಜಿತ ಘಟಕ ವೆಚ್ಚದ ಶೇ 40ರಷ್ಟು ಆರ್ಥಿಕ ಸಹಾಯವನ್ನು ನೀಡಲಾಗುವುದು.

• ಈ ಯೋಜನೆಯಡಿ ಆರ್ಥಿಕ ಸಹಾಯಧನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರವು 60:40 ಅನುಪಾತದಲ್ಲಿ ಭರಿಸುತ್ತವೆ.

ಕೇಂದ್ರ ಪುರಸ್ಕೃತ ಉಳಿತಾಯ ಮತ್ತು ಪರಿಹಾರ ಯೋಜನೆ

• ಈ ಯೋಜನೆಯಡಿ ಮೀನುಗಾರಿಕೆ ಚಟುವಟಿಕೆಯ ಅವಧಿಯಲ್ಲಿ ಕರಾವಳಿ ಮೀನುಗಾರರು ₹1500ಗಳನ್ನು ಪಾವತಿ ಮಾಡುತ್ತಿದ್ದು, ಈ ರೀತಿ ಪಾವತಿ ಮಾಡಿದ ಮೊತ್ತಕ್ಕೆ ಸಮನಾದ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ 1500 ಗಳನ್ನು ನೀಡುತ್ತಿದೆ.

• ಹೀಗೆ ಸಂಗ್ರಹಿಸಿದ ಒಟ್ಟು ₹4500 ಗಳನ್ನು ಮೀನುಗಾರಿಕೆ ನಿಷೇಧಿತ ಅವಧಿಯ (ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್) ತಿಂಗಳಲ್ಲಿ ಮಾಸಿಕ 1500 ರಂತೆ 3 ತಿಂಗಳು ಮೀನುಗಾರರಿಗೆ ಪಾವತಿಸಲಾಗುತ್ತದೆ.

ಮೀನುಗಾರರ ಸಾಮೂಹಿಕ ಅಪಘಾತ ವಿಮಾ ಯೋಜನೆ

• ಈ ಕೇಂದ್ರ ಪುರಸ್ಕೃತ ಯೋಜನೆಯಡಿ ಮೀನುಗಾರರು, ಮೀನುಕೃಷಿಕರು ಹಾಗೂ ಮೀನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ನೇರವಾಗಿ ತೊಡಗಿಸಿಕೊಂಡಿರುವವರು ಸಾಮೂಹಿಕ ಅಪಘಾತ ವಿಮೆಯ ಪ್ರಯೋಜನ ಪಡೆಯಬಹುದು.

•80099 ನೋಂದಾಯಿತ ಮೀನುಗಾರರ ವಿಮೆಯನ್ನು ಸರಿದೂಗಿಸಲು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಗೆ (NEDB, National Fisheries Development Board) * 30.44 ಲಕ್ಷ ರೂಪಾಯಿಗಳ ಪ್ರೀಮಿಯಂ ಅನ್ನು ಪಾವತಿಸಲಾಗಿದೆ.

 ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಜುಲೈ 10 ರಂದು ರಾಷ್ಟ್ರೀಯ ಮೀನು ರೈತರ ದಿನವನ್ನು ಆಚರಿಸುತ್ತದೆ. ಎಲ್ಲಾ ಮೀನುಗಾರ, ಮೀನು ಕೃಷಿಕರು ಮತ್ತು ಸಂಬಂಧಪಟ್ಟ ಪಾಲುದಾರರೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸಬೇಕೆಂಬುದು ಈ ದಿನದ ಉದ್ದೇಶವಾಗಿದೆ.

• ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯನ್ನು 2006ರಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಳಿತಾತ್ಮಕ ನಿಯಂತ್ರಣದಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ಪ್ರಸ್ತುತ ಇದು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

• ಇದು ದೇಶದಲ್ಲಿ ಮೀನು ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಸಮಗ್ರ ರೀತಿಯಲ್ಲಿ ಮೀನುಗಾರಿಕ ಅಭಿವೃದ್ಧಿಯನ್ನು ಸಂಘಟಿಸುವ ಗುರಿಯನ್ನು ಹೊಂದಿದೆ.

ಮೀನುಗಾರಿಕೆ ವಲಯದ ಪ್ರಮುಖ ಯೋಜನೆಗಳು

ಮುಖ್ಯಾಂಶಗಳು

ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವನ್ನು 1972 ರಲ್ಲಿ ಸ್ಥಾಪಿಸಲಾಗಿದೆ.

. ಮೀನುಗಾರರಿಗೆ ವಾಹನವನ್ನು ಖರೀದಿಸಲು ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ಮತ್ತವಾಹಿನಿ ಯೋಜನೆಯನ್ನು

• ಕೇಂದ್ರ ಪ್ರಾಯೋಜಿತ 'ನೀಲಿ ಕ್ರಾಂತಿ" ಯೋಜನೆಯನ್ನು 2016 ರಲ್ಲಿ ಮೀನುಗಾರಿಕೆಯ ಸಮಗ್ರ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ

• ತಮಿಳುನಾದಿನ ವಿವಿಧೋದ್ದೇಶ ಕಡಲಕಳೆ ಉದ್ಯಾನವನವು ಗುಣಮಟ್ಟದ ಕಡಲಕಳೆ ಆಧಾರಿತ ಉತ್ಪನ್ನಗಳ ಉತ್ಪಾದನೆಯ

• ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯನ್ನು 2006 ರಲ್ಲಿ సాయి సంస్థయోగి వాదనలాయనవి.

ವಾಣಿಜ್ಯ ಬ್ಯಾಂಕ್‌ಗಳಿಗೆ ಬಡ್ಡಿ ವ್ಯತ್ಯಾಸ ತುಂಬಿಕೊಡುವುದು

• ಮಹಿಳಾ ಮೀನುಗಾರರಿಗೆ ಮೀನುಗಾರಿಕೆ ಚಟುವಟಿಕೆ ಕೈಗೊಳ್ಳಲು ಗ್ರಾಮೀಣ ಅಥವಾ ವಾಣಿಜ್ಯ ಬ್ಯಾಂಕ್‌ನಿಂದ ಶೂನ್ಯ ಬಡ್ಡಿ ದರದಲ್ಲಿ 50,000 ಗಳವರೆಗೆ ಸಾಲ ಪಡೆಯಲು ಅವಕಾಶವಿರುತ್ತದೆ.

• ಗ್ರಾಮೀಣ ಅಥವಾ ವಾಣಿಜ್ಯ ಬ್ಯಾಂಕುಗಳು ಮೀನುಗಾರರಿಗೆ ಸಾಲ ನೀಡಿದ ಪ್ರಯುಕ್ತ ವ್ಯತ್ಯಾಸದ ಬಡ್ಡಿಯನ್ನು ತುಂಬಿಕೊಡಲು ಅವಕಾಶ ಕಲ್ಪಿಸಲಾಗಿದೆ.

ಮೀನುಗಾರರ ಸಂಕಷ್ಟ ಪರಿಹಾರ ನಿಧಿ

• ಮೀನುಗಾರಿಕೆಯಲ್ಲಿ ತೊಡಗಿರುವಾಗ ಮೃತಪಟ್ಟ ಅಥವಾ ಅಂಗವೈಕಲ್ಯತೆ ಉಂಟಾದ ಸಂದರ್ಭದಲ್ಲಿ ಅವರ ಅವಲಂಬಿತರಿಗೆ ಅಥವಾ ಮೀನುಗಾರರಿಗೆ ಅರ್ಥಿಕ ಪರಿಹಾರವನ್ನು ಸಂಕಷ್ಟ ಪರಿಹಾರ ನಿಧಿಯಿಂದ ನೀಡಲಾಗುತ್ತದೆ.

• ಮೀನುಗಾರಿಕೆಯನ್ನು ತೊಡಗಿರುವಾಗ ಮರಣ ಹೊಂದಿದ ಮೀನುಗಾರರ ಅವಲಂಬಿತರಿಗೆ ಗರಿಷ್ಠ ₹6.00,000 ಗಳ ಪರಿಹಾರವನ್ನು ನೀಡಲಾಗುತ್ತದೆ ಹಾಗೂ ಬಲೆಹಾನಿ, ದೋಣಿಹಾನಿ ಹಾಗೂ ವೈದ್ಯಕೀಯ ವೆಚ್ಚಗಳಿಗೆ ಗರಿಷ್ಠ ₹1,00,000 ನೆರವು

ನೀಡಲಾಗುತ್ತದೆ.

'ಮತ್ತ್ವವಾಹಿನಿ' ಯೋಜನೆ

• ಇಳಿದಾಣ ಕೇಂದ್ರಗಳಿಂದ ತಾಜಾ ಮೀನನ್ನು ಆರೋಗ್ಯಕರ ರೀತಿಯಲ್ಲಿ

ಮಾರಾಟ ಸ್ಥಳಗಳಿಗೆ ಇರಿತವಾಗಿ ಸಾಗಿಸಲು, ಮೀನುಗಾರರಿಗೆ

ವಾಹನವನ್ನು ಖರೀದಿಸಲು ನೆರವನ್ನು ನೀಡುವ ಉದ್ದೇಶದಿಂದ

'ಮತ್ತವಾಹಿನಿ'ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಕೇಂದ್ರ ಪ್ರಾಯೋಜಿತ ಯೋಜನೆಗಳು

ನೀಲಿ ಕ್ರಾಂತಿ: ಕೇಂದ್ರ ಪ್ರಾಯೋಜಿತ "ನೀಲಿ ಕ್ರಾಂತಿ' ಯೋಜನೆಯನ್ನು

2016 ರಲ್ಲಿ ಮೀನುಗಾರಿಕೆಯ ಸಮಗ್ರ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ

ಪ್ರಾರಂಭಿಸಲಾಯಿತು.

ಮೀನುಗಾರಿಕೆ ಮತ್ತು ಜಲಕೃಷಿ ಮೂಲಸೌಕರ್ಯ ಅಭಿವೃದ್ಧಿ ನಿಧಿ

• ಮೀನುಗಾರಿಕೆ ಮೂಲಸೌಕರ್ಯ ಸೌಲಭ್ಯಗಳ ರಚನೆ ಮತ್ತು

ನಿರ್ವಹಣೆಯಲ್ಲಿ ಖಾಸಗಿ ಹೂಡಿಕೆಯನ್ನು ಆಕರ್ಷಿಸಲು ಇದನ್ನು

ರಚಿಸಲಾಗಿದೆ.

ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ

ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವನ್ನು ಒಂದು

ನೋಡಲ್ ಸಮನ್ವಯ ಸಂಸ್ಥೆಯಾಗಿ ಸ್ಥಾಪನೆ ಮಾಡಲಾಗಿದೆ.

ಮೀನುಗಾರಿಕೆ ಉತ್ಪಾದನೆ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ

ತೊಡಗಿರುವ ರಾಜ್ಯ ಸ್ವಾಮ್ಯದ ಸಂಸ್ಥೆಯಾಗಿದೆ.

• ಇದನ್ನು 1972 ರಲ್ಲಿ ಸಮುದ್ರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ

ಕಾಯಿದೆ (MPEDA), 1972 ರ ಅಡಿಯಲ್ಲಿ ಸ್ಥಾಪಿಸಲಾಯಿತು.

ಕಡಲಕಳೆ ಉದ್ಯಾನ

• ತಮಿಳುನಾಡಿನ ವಿವಿಧೋದ್ದೇಶ ಕಡಲಕಳೆ ಉದ್ಯಾನವನವು

ಗುಣಮಟ್ಟದ ಕಡಲಕಳೆ ಆಧಾರಿತ ಉತ್ಪನ್ನಗಳ ಉತ್ಪಾದನೆಯ

ಕೇಂದ್ರವಾಗಿದೆ.

ತಮ್ಮ ನವೀನ ಪರಿಹಾರಗಳನ್ನು ಪ್ರದರ್ಶಿಸಲು ದೇಶದೊಳಗಿನ

ಸ್ಟಾರ್ಟ್‌ ಅಪ್‌ಗಳಿಗೆ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಈ

ಸವಾಲನ್ನು ಪ್ರಾರಂಭಿಸಲಾಗಿದೆ.

logoblog

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts