ಬ್ರಹ್ಮಪುತ್ರ ನದಿ ವ್ಯವಸ್ಥೆ | Brahmaputra River System



ವಿಷಯ: ಭೂಗೋಳ


* ಪೂರ್ವಭಾವಿ ಪರೀಕ್ಷೆ, ಐಎಎಸ್ ಮತ್ತು ಕೆಎಎಸ್ ಮುಖ್ಯ ಪರೀಕ್ಷೆ, ಎಫ್‌ಡಿಎ, ಎಸ್‌ಡಿಎ ಗ್ರೂಪ್ ಸಿ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ

 ಜಗತ್ತಿನ ಅತಿ ದೊಡ್ಡ ನದಿಗಳಲ್ಲಿ ಬ್ರಹ್ಮಪುತ್ರ ನದಿ ವ್ಯವಸ್ಥೆಯೂ ಕೂಡ ಒಂದಾಗಿದೆ. ಬ್ರಹ್ಮಪುತ್ರ ನದಿ ಬ್ರಹ್ಮಪುತ್ರ ಎಂದು ಕರೆಸಿಕೊಳ್ಳುವ ಮುನ್ನ ಈ ನದಿಯನ್ನು ಟಿಬೆಬ್‌ನಲ್ಲಿ


'ಸಾಂಗ್ ಪೋ' ಹಾಗೂ ಚೀನಿ ಭಾಷೆಯಲ್ಲಿ 'ಯಾರ್ಲುಂಗ್ ಸಾಂಗ್ ಪೋ' ಎಂದು ಕರೆಯಲಾಗುತ್ತದೆ. ಬ್ರಹ್ಮಪುತ್ರ ನದಿಯ ಉಗಮಸ್ಥಾನ: ಕೈಲಾಸ ಶ್ರೇಣಿಗಳ ಬಳಿ ಇರುವ ಚಮಯುಂಗ್ ಡಂಗ್ ಹಿಮ ಪ್ರದೇಶದಲ್ಲಿ ಬ್ರಹ್ಮಪುತ್ರ ನದಿಯ ಎರಡು ಉಪನದಿಗಳಾದ ದಿಬಾಂಗ್ ಮತ್ತು ಲೋಹಿತ್ ಬ್ರಹ್ಮಪುತ್ರ ನದಿಯನ್ನು ಸೇರಿದ ನಂತರ ಈ ನದಿಯನ್ನು ಬ್ರಹ್ಮಪುತ್ರ ನದಿ ಎಂದು ಕರೆಯಲಾಗುತ್ತದೆ. ಬಾಂಗ್ಲಾದೇಶದಲ್ಲಿ ಬ್ರಹ್ಮಪುತ್ರ ನದಿಯನ್ನು ಜಮುನಾ ಎಂಬ ಹೆಸರಿನಿಂದ ಕರೆಯುತ್ತಾರೆ.


ಈ ನದಿಯು ಪ್ರಸಿದ್ಧ ಅಂತರ್‌ನದಿ ದ್ವೀಪ ಮಜೂಲಿ ದ್ವೀಪ' ವನ್ನು ಅಸ್ಸಾಂನ ಜೋರ್ಹತ್ ಜಿಲ್ಲೆಯಲ್ಲಿ ಸೃಷ್ಟಿಸುತ್ತದೆ. ಅಸ್ಸಾಮಿನ ದಿಬ್ರುಗರ್ ಜಿಲ್ಲೆಯಲ್ಲಿ ಸುಮಾರು 16 ಕಿಲೋಮೀಟರ್ ಅಗಲವಾದ ಹರಿಯುವ ಈ ನದಿಯು ಹಲವಾರು ದ್ವೀಪಗಳನ್ನು ಸೃಷ್ಟಿಸುತ್ತದೆ. ಮಜುಲಿ ದ್ವೀಪವು ಸುಮಾರು 90 ಕಿಲೋಮೀಟರ್‌ನಷ್ಟು ಉದ್ದವಿದ್ದು 20 ಕಿಲೋಮೀಟರ್‌ನಷ್ಟು ಅಗಲವಿದೆ. ಬ್ರಹ್ಮಪುತ್ರ ನದಿ ಹರಿವ ದಿಕ್ಕಿನಲ್ಲಿ ನಗರಗಳು ಎಂದರೆ ದಿಬ್ರುಗರ್, ಪಸಿಘಟ್, ತಿ ಮತ್ತು`ಬ್ರಹ್ಮಪುತ್ರ ನದಿಯು ಪರ್ವತಗಳಿಗೆ ಸಮನಾಂತರವಾಗಿ 1,200 ಕಿಲೋಮೀಟರ್ ಹರಿಯುತ್ತದೆ.


ನಂತರ ಈ ನದಿಯು ದಕ್ಷಿಣಕ್ಕೆ ಹರಿದು ಹಿಮಾಲಯ ಪರ್ವತಗಳನ್ನು ದಾಟಿ ಭಾರತವನ್ನು ಪ್ರವೇಶಿಸುತ್ತದೆ. ಭಾರತವನ್ನು ಪ್ರವೇಶಿಸುವ ಸಂದರ್ಭದಲ್ಲಿ ಈ ನದಿಯನ್ನು ದಿಹಾಂಗ್' ಎಂದು ಕರೆಯಲಾಗುತ್ತದೆ.ನಂತರದ ಹಂತದಲ್ಲಿ ಸಾದಿಯಾ' ಎನ್ನುವ ಸ್ಥಳದಲ್ಲಿ ಉತ್ತರಭಾಗದಲ್ಲಿ 'ದಿಬಾಂಗ್' ಎನ್ನುವ ಉಪನದಿ ಬ್ರಹ್ಮಪುತ್ರನದಿಯನ್ನು ಸೇರುತ್ತದೆ ಮತ್ತು ಈಶಾನ್ಯದಿಕ್ಕಿನಲ್ಲಿ 'ಲೋಹಿತ್ ನದಿಯು ಬ್ರಹ್ಮಪುತ್ರ ನದಿಯನ್ನು ಸೇರುತ್ತದೆ. ನಂತರದ ಹಂತದಲ್ಲಿ ಅಸ್ಸಾಂ ಕಣಿವೆ ಪ್ರದೇಶವನ್ನು ಪ್ರವೇಶಿಸಿದ ನಂತರ ಈ ನದಿಯನ್ನು ಬ್ರಹ್ಮಪುತ್ರ ಎಂದು ಕರೆಯಲಾಗುತ್ತದೆ.


ಬ್ರಹ್ಮಪುತ್ರ ನದಿಯ ಪ್ರಮುಖ ಉಪನದಿಗಳು


1 ಧನ್ಸಿರಿ: 


ಈ ನದಿಯು ನಾಗಾಲ್ಯಾಂಡ್‌ನ ಪರ್ವತದಲ್ಲಿ ಉಗಮವಾಗುತ್ತದೆ.ಬ್ರಹ್ಮಪುತ್ರ ನದಿಯ ಎಡದಂಡೆಯ ಉಪನದಿಯಾಗಿದೆ.ನಾಗಾಲ್ಯಾಂಡ್‌ನ ದಿಮಾಪುರ್ ಜಿಲ್ಲೆ ಮತ್ತು ಅಸ್ಸಾಂನ ಗೋಲಾಘಾಟ್ ಜಿಲ್ಲೆಗೆ ಪ್ರಮುಖ ನದಿಯಾಗಿ ಕಾರ್ಯನಿರ್ವಹಿಸುತ್ತದೆ.ನದಿಯ ಎಡದಂಡೆಯ ಉಪನದಿಯಾಗಿದೆ. ಟಿಬೆಟ್‌ನ ಈಶಾನ್ಯ ಭಾಗದಲ್ಲಿ ಈ ನದಿಯು ಉಗಮವಾಗುತ್ತದೆ. ಲೋಹಿತ್ ನದಿಯು ಮಿಸ್ನಿ ಪರ್ವತಗಳ ಮೂಲಕ ಹರಿದು ನಂತರ ಅರುಣಾಚಲ ಪ್ರದೇಶದ ಸಾದಿಯಾ' ಪಟ್ಟಣದ ಬಳಿ ಬ್ರಹ್ಮಪುತ್ರ ನದಿಯನ್ನು ಸೇರುತ್ತದೆ.ಈ ನದಿಯ ಪಥದಲ್ಲಿ ಕಂಡುಬರುವಂತಹ ಪ್ರಮುಖ ನಗರಗಳು ಎಂದರೆ 'ಲೋಹಿತ್‌' ನಗರ ಮತ್ತು ಬ್ರಹ್ಮಕುಂಡ ನಗರ.


|ದಿಬಾಂಗ್: 


ಬ್ರಹ್ಮಪುತ್ರ ನದಿಯ ಅತ್ಯಂತ ಪ್ರಮುಖ ಉಪನದಿಗಳಲ್ಲಿ ಈ ನದಿಯು ಕೂಡ ನದಿಯ ಎಡದಂಡೆಯ ಉಪನದಿ ಎಂದು ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಈ ನದಿಯು ಬ್ರಹ್ಮಪು, ಗಣಿನ್ನು ಹರಿಯುತ್ತದೆ.


| ಸುಬಂಸಿರಿ: 


ಈ ನದಿಯು ಟಿಬೆಟಿನ ಹಿಮಾಲಯ ಪರ್ವತದಲ್ಲಿ ಬಲದಂಡೆಯ ನದಿಯಾಗಿದ್ದು, ಉಗಮವಾಗುತ್ತದೆ. ಟಿಬೆಟ್‌ನಲ್ಲಿ ಉಗಮವಾದ ನಂತರ ಈಶಾನ್ಯ ದಿಕ್ಕಿಗೆ ಹರಿದು ಅರುಣಾಚಲ ಪ್ರದೇಶದ 'ಕೆಳ ಸುಬಂಸಿರಿ' ಜಿಲ್ಲೆಯಲ್ಲಿ ಅರುಣಾಚಲ ಪ್ರದೇಶವನ್ನು ಸೇರುತ್ತದೆ. ನಂತರ ಅಸ್ಸಾಮಿನ ದಕ್ಷಿಣ ಭಾಗದಲ್ಲಿ ಹರಿದು ಅಸ್ಸಾಂನ ಲಖಿಂಪುರ (lakihmpur) ಜಿಲ್ಲೆಯ ಬಳಿ ಬ್ರಹ್ಮಪುತ್ರ ನದಿಯನ್ನು ಸೇರುತ್ತದೆ.ಸುಬಂಸಿರಿ ನದಿಯನ್ನು ಸ್ಥಳೀಯರು ಚಿನ್ನದ ನದಿ ಎಂದು ಕರೆಯುತ್ತಾರೆ. ಏಕೆಂದರೆ ಈ ನದಿಯು ತನ್ನೊಂದಿಗೆ ಚಿನ್ನದ ದೂಳನ್ನು ಹೊತ್ತು ತರುತ್ತದೆ.


ಕಮೆಂಗ್ (kameng): 


ಈಶಾನ್ಯ ತವಾಂಗ್ ಜಿಲ್ಲೆಯಲ್ಲಿ ಈ ನದಿಯು ಉಗಮ ಬ್ರಹ್ಮಪುತ್ರ ನದಿಯ ಬಲದಂಡೆಯ ಮ ಉಪನದಿಯಾಗಿದೆ. ಈ ನದಿಯು ಅರುಣಾಚಲ ಪ್ರದೇಶದ ಈಶಾನ್ಯ ಕಮೆಂಗ್ ಜಿಲ್ಲೆ ಮತ್ತು ಪಶ್ಚಿಮ ಕಮೆಂಗ್ ಜಿಲ್ಲೆಯ ಗಡಿಯಂತೆ ಕಾರ್ಯನಿರ್ವಹಿಸುತ್ತದೆ. ಅಸ್ಸಾಂ ರಾಜ್ಯದಲ್ಲಿ ಹರಿದ ನಂತರ ತೇಜುರ್ ಎನ್ನುವ ಸ್ಥಳದ ಬಳಿ ಬ್ರಹ್ಮಪುತ್ರ ನದಿಯನ್ನು ಸೇರುತ್ತದೆ. ಕಮೆಂಗ್ ನದಿಯನ್ನು ಎರಡು ಭಾಗಗಳಾಗಿ ವಿಂಗಡಿಸಬಹುದಾಗಿದೆ. ಪಶ್ಚಿಮ ಭಾಗದಲ್ಲಿ 'ಅಕ್ಕ ಪರ್ವತ'ಗಳಿಂದ ಆವೃತವಾಗಿದೆ ಮತ್ತು ಈಶಾನ್ಯ ಭಾಗದಲ್ಲಿ 'ದಾಫ್ಟ್ ಪರ್ವತಗಳಿಂದ ಆವೃತವಾಗಿದೆ. 'ಅಕ್ಕ ಪರ್ವತ'ದಲ್ಲಿ ಅಕ್ಕ ಬುಡಕಟ್ಟಿನ ಜನರು ವಾಸಿಸುತ್ತಿದ್ದಾರೆ. 'ದಾಫ ಪರ್ವತ'ಗಳಲ್ಲಿ ದಾಪ್ತ ಬುಡಕಟ್ಟು ಜನಾಂಗ ವಾಸಿಸುತ್ತಾರೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಪಕುಯಿ (pakkhui)ವನ್ಯಜೀವಿಧಾಮ ಕಮೆಂಗ್ ನದಿಯ ಬಳಿ ಕಂಡುಬರುತ್ತದೆ.


|ಮನಸ್: 


ಬ್ರಹ್ಮಪುತ್ರ ನದಿಯ ಬಲದಂಡೆಯ ಉಪನದಿಯಾಗಿದೆ. ದಕ್ಷಿಣ ಭೂತಾನ್ ಮತ್ತು ಭಾರತದ ನಡುವಿನ ಗಡಿ ಪ್ರದೇಶದಂತೆ ಹರಿಯುವ ಈ ನದಿಯನ್ನು ಮಾನಸ ಕರೆಯುತ್ತಾರೆ. ಈ ನದಿ ಈ ಹೆಸರನ್ನು ಪಡೆಯಲು ೨ ಕಾರಣವೇನೆಂದರೆ, ಮಾನಸ ಅಥವಾ ಮನಸ್ ಎಂದರೆ ಹಿಂದೂ ಪುರಾಣಗಳ ಪ್ರಕಾರ ನಾಗದೇವತೆಯನ್ನು ಮನಸ್ ಎಂದು ಕರೆಯಲಾಗುತ್ತದೆ. ರಾಯಲ್ ಮನಸ್ ರಾಷ್ಟ್ರೀಯ ಉದ್ಯಾನವನ ಮತ್ತು ಭಾರತದಲ್ಲಿ ಕಂಡುಬರುವ ಮನಸ್ವನ್ಯಜೀವಿಧಾಮ ಮನಸ್ ನದಿ ಕಣಿವೆಯಲ್ಲಿ ಕಂಡುಬರುತ್ತದೆ. ಬ್ರಹ್ಮಪುತ್ರ ನದಿಯನ್ನು ಸೇರುವ ಮುನ್ನ ಈ ನದಿಯು ಭೂತಾನ್ ಮತ್ತು ಭಾರತದ ಅಸ್ಸಾಂ ರಾಜ್ಯದಲ್ಲಿ ಹರಿಯುತ್ತದೆ.


Iಟಿಸ್ಟಾ: 


ಬ್ರಹ್ಮಪುತ್ರ ನದಿಯ ಬಲದಂಡೆಯ ಉಪನದಿಯಾಗಿದೆ. ಸಿಕ್ಕಿಂ ರಾಜ್ಯದ ಕಾಂಚನಜುಂಗಾ ಎನ್ನುವ ಪ್ರದೇಶದ ಬಳಿ 'ರೋಮು ಹಿಮಚ್ಛಾದಿತ' (zenu) ಪ್ರದೇಶದಲ್ಲಿ ಉಗಮವಾಗುತ್ತದೆ. ಸಿಕ್ಕಿಂ ರಾಜ್ಯದಲ್ಲಿ ಪೂರ್ಣಪ್ರಮಾಣದಲ್ಲಿ ಹರಿದ ನಂತರ ಡಾರ್ಜಿಲಿಂಗ್ ಪರ್ವತಗಳಲ್ಲಿ ಹರಿಯುತ್ತದೆ, ಆದ್ದರಿಂದ ಈ ನದಿಯನ್ನು ಸಿಕ್ಕಿಂ ರಾಜ್ಯದ ಜೀವನಾಡಿ ಎಂದು ಕರೆಯಲಾಗುತ್ತದೆ. ಈ ನದಿಯು ಬ್ರಹ್ಮಪುತ್ರ ನದಿಯನ್ನು ಬಾಂಗ್ಲಾದೇಶದಲ್ಲಿ ಸೇರುತ್ತದೆ.



logoblog

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.