Search This Blog

 

ಭಾಗ - I

ಒಕ್ಕೂಟ ಮತ್ತು ಅದರ ರಾಜ್ಯಕ್ಷೇತ್ರ

1. ಒಕ್ಕೂಟದ ಹೆಸರು ಮತ್ತು ರಾಜ್ಯಕ್ಷೇತ್ರ:- (1) ಇಂಡಿಯಾ, ಅರ್ಥಾತ್ ಭಾರತವು, ರಾಜ್ಯಗಳ ಒಂದು ಒಕ್ಕೂಟವಾಗಿರತಕ್ಕದ್ದು.

(2) ಅದರ ರಾಜ್ಯಗಳು ಮತ್ತು ಅವುಗಳ ರಾಜ್ಯಕ್ಷೇತ್ರಗಳು ಮೊದಲನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂಥವುಗಳು ಆಗಿರತಕ್ಕದ್ದು.

(3) ಭಾರತದ ರಾಜ್ಯಕ್ಷೇತ್ರವು -

() ರಾಜ್ಯಗಳ ರಾಜ್ಯಕ್ಷೇತ್ರಗಳನ್ನು:

(ಬಿ) ಮೊದಲನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಒಕ್ಕೂಟ ರಾಜ್ಯಕ್ಷೇತ್ರಗಳನ್ನು; ಮತ್ತು

(ಸಿ) ಆರ್ಜಿಸಬಹುದಾದಂಥ ಇತರ ರಾಜ್ಯಕ್ಷೇತ್ರಗಳನ್ನು

ಒಳಗೊಂಡಿರತಕ್ಕದ್ದು.

2. ನೂತನ ರಾಜ್ಯಗಳ ಸೇರ್ಪಡೆ ಅಥವಾ ಸ್ಥಾಪನೆ:- ಸಂಸತ್ತು ಕಾನೂನಿನ ಮೂಲಕ ಸೂಕ್ತವೆಂದು ತೋರುವ ನಿಬಂಧನೆಗಳ ಮತ್ತು ಷರತ್ತುಗಳ ಮೇಲೆ ನೂತನ ರಾಜ್ಯಗಳನ್ನು ಒಕ್ಕೂಟಕ್ಕೆ ಸೇರಿಸಿಕೊಳ್ಳಬಹುದು ಅಥವಾ ನೂತನ ರಾಜ್ಯಗಳನ್ನು ಸ್ಥಾಪಿಸಬಹುದು.

[2. [ಒಕ್ಕೂಟದೊಂದಿಗೆ ಸಿಕ್ಕಿಂ ಸಹಯುಕ್ತವಾಗಿರತಕ್ಕದ್ದು.] 1975ನೆಯ ಇಸವಿಯ ಸಂವಿಧಾನದ (ಮೂವತ್ತಾರನೆಯ ತಿದ್ದುಪಡಿ) ಅಧಿನಿಯಮದ 5ನೆಯ ಪ್ರಕರಣದ ಮೇರೆಗೆ (26-4-1975ರಿಂದ ಜಾರಿಗೆ ಬರುವಂತೆ) ನಿರಸಿತವಾಗಿದೆ.

3. ನೂತನ ರಾಜ್ಯಗಳ ರಚನೆ ಮತ್ತು ಈಗಿರುವ ರಾಜ್ಯಗಳ ಪ್ರದೇಶಗಳ, ಸರಹದ್ದುಗಳ ಅಥವಾ ಹೆಸರುಗಳ ಬದಲಾವಣೆ:- ಸಂಸತ್ತು ಕಾನೂನಿನ ಮೂಲಕ -

() ಯಾವುದೇ ರಾಜ್ಯದಿಂದ ಯಾವುದೇ ರಾಜ್ಯಕ್ಷೇತ್ರವನ್ನು ಪ್ರತ್ಯೇಕಿಸುವುದರಿಂದಾಗಲಿ ಅಥವಾ ಎರಡು ಅಥವಾ ಹೆಚ್ಚು ರಾಜ್ಯಗಳನ್ನು ಅಥವಾ ರಾಜ್ಯಗಳ ಭಾಗಗಳನ್ನು ಒಂದುಗೂಡಿಸುವುದರಿಂದಾಗಲಿ ಅಥವಾ ಒಂದು ರಾಜ್ಯದ ಯಾವುದಾದರೂ ಭಾಗಕ್ಕೆ ಯಾವುದಾದರೂ ಕ್ಷೇತ್ರವನ್ನು ಸೇರಿಸುವುದರಿಂದಾಗಲಿ ಒಂದು ಹೊಸ ರಾಜ್ಯವನ್ನು ರಚಿಸಬಹುದು;

(ಬಿ) ಯಾವುದೇ ರಾಜ್ಯದ ಪ್ರದೇಶವನ್ನು ಹೆಚ್ಚಿಸಬಹುದು;

(ಸಿ) ಯಾವುದೇ ರಾಜ್ಯದ ಪ್ರದೇಶವನ್ನು ಕಡಿಮೆ ಮಾಡಬಹುದು;

(ಡಿ) ಯಾವುದೇ ರಾಜ್ಯದ ಸರಹದ್ದುಗಳನ್ನು ಬದಲಾಯಿಸಬಹುದು;

() ಯಾವುದೇ ರಾಜ್ಯದ ಹೆಸರನ್ನು ಬದಲಾಯಿಸಬಹುದು:

[ಪರಂತು. ಉದ್ದೇಶಕ್ಕಾಗಿ ಯಾವುದೇ ವಿಧೇಯಕವನ್ನು, ರಾಷ್ಟ್ರಪತಿಯ ಶಿಫಾರಸ್ಸಿನ ಮೇಲಲ್ಲದೆ ಮತ್ತು ವಿಧೇಯಕದಲ್ಲಿ ಅಡಕವಾದ ಪ್ರಸ್ತಾವವು * * * * * ರಾಜ್ಯಗಳ ಪೈಕಿ ಯಾವುದೇ ರಾಜ್ಯದ ಪ್ರದೇಶದ, ಸರಹದ್ದುಗಳ ಅಥವಾ ಹೆಸರಿನ ಮೇಲೆ ಪರಿಣಾಮಬೀರುವಲ್ಲಿ, ರಾಜ್ಯದ ವಿಧಾನಮಂಡಲವು. ಉಲ್ಲೇಖದಲ್ಲಿ ನಿರ್ದಿಷ್ಟಪಡಿಸಬಹುದಾದ ಅವಧಿಯೊಳಗೆ ಅಥವಾ ರಾಷ್ಟ್ರಪತಿಯು ಕೊಡಬಹುದಾದ ಇನ್ನೂ ಹೆಚ್ಚಿನ ಅವಧಿಯೊಳಗೆ ಅದರ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು, ರಾಷ್ಟ್ರಪತಿಯು ವಿಧೇಯಕವನ್ನು ವಿಧಾನಮಂಡಲಕ್ಕೆ ಕಳುಹಿಸಿರುವ ಹೊರತು ಮತ್ತು ಹಾಗೆ ನಿರ್ದಿಷ್ಟಪಡಿಸಿದ ಅವಧಿಯು ಅಥವಾ ಕೊಟ್ಟಿರತಕ್ಕಂಥ ಹೆಚ್ಚಿನ ಅವಧಿಯು ಮುಕ್ತಾಯವಾದ ಹೊರತು. ಸಂಸತ್ತಿನ ಯಾವುದೇ ಸದನದಲ್ಲಿ ಮಂಡಿಸತಕ್ಕದ್ದಲ್ಲ.

ವಿವರಣೆ I.- ಅನುಚ್ಛೇದದಲ್ಲಿ () ಯಿಂದ () ವರೆಗಿನ ಖಂಡಗಳಲ್ಲಿರುವ "ರಾಜ್ಯ" ಎಂಬ ಪದವು ಒಕ್ಕೂಟ ರಾಜ್ಯಕ್ಷೇತ್ರವನ್ನು ಒಳಗೊಳ್ಳುತ್ತದೆ; ಆದರೆ ಪರಂತುಕದಲ್ಲಿನ "ರಾಜ್ಯ" ಎಂಬ ಪದವು ಒಕ್ಕೂಟ ರಾಜ್ಯಕ್ಷೇತ್ರವನ್ನು ಒಳಗೊಳ್ಳುವುದಿಲ್ಲ.

ವಿವರಣೆ II.- () ಖಂಡದಿಂದ ಸಂಸತ್ತಿಗೆ ಪ್ರದತ್ತವಾದ ಅಧಿಕಾರವು, ಯಾವುದೇ ರಾಜ್ಯದ ಅಥವಾ ಒಕ್ಕೂಟ ರಾಜ್ಯಕ್ಷೇತ್ರದ ಒಂದು ಭಾಗವನ್ನು ಇತರ ಯಾವುದೇ ರಾಜ್ಯಕ್ಕೆ ಅಥವಾ ಒಕ್ಕೂಟ ರಾಜ್ಯಕ್ಷೇತ್ರಕ್ಕೆ ಸೇರಿಸಿ ಒಂದು ನೂತನ ರಾಜ್ಯವನ್ನು ಅಥವಾ ಒಂದು ನೂತನ ಒಕ್ಕೂಟ ರಾಜ್ಯಕ್ಷೇತ್ರವನ್ನು ರಚಿಸುವಂಥ ಅಧಿಕಾರವನ್ನು ಒಳಗೊಳ್ಳುತ್ತದೆ.

4. ಎರಡನೆಯ ಮತ್ತು ಮೂರನೆಯ ಅನುಚ್ಛೇದಗಳ ಮೇರೆಗೆ ಮಾಡಲಾದ ಕಾನೂನುಗಳು, ಮೊದಲನೆಯ ಮತ್ತು ನಾಲ್ಕನೆಯ ಅನುಸೂಚಿಗಳ ತಿದ್ದುಪಡಿಯ ಬಗ್ಗೆ ಮತ್ತು ಪೂರಕ, ಪ್ರಾಸಂಗಿಕ ಮತ್ತು ಆನುಷಂಗಿಕ ವಿಷಯಗಳ ಬಗ್ಗೆ ಉಪಬಂಧವನ್ನು ಕಲ್ಪಿಸುವುದು:- (1) 2ನೆಯ ಅನುಚ್ಛೇದದಲ್ಲಿ ಅಥವಾ 3ನೆಯ ಅನುಚ್ಛೇದದಲ್ಲಿ ಉಲ್ಲೇಖಿಸಲಾದ ಯಾವುದೇ ಕಾನೂನು ಕಾನೂನಿನ ಉಪಬಂಧಗಳನ್ನು ಜಾರಿಗೊಳಿಸುವುದಕ್ಕಾಗಿ, ಮೊದಲನೆಯ ಮತ್ತು ನಾಲ್ಕನೆಯ ಅನುಸೂಚಿಗಳ ತಿದ್ದುಪಡಿಗೆ ಅವಶ್ಯವಾಗಬಹುದಾದಂಥ ಉಪಬಂಧಗಳನ್ನು ಒಳಗೊಂಡಿರತಕ್ಕದ್ದು ಮತ್ತು (ಆಂಥ ಕಾನೂನಿನ ಪರಿಣಾಮಕ್ಕೆ ಒಳಗಾಗಿರುವ ರಾಜ್ಯಕ್ಕೆ ಅಥವಾ ರಾಜ್ಯಗಳಿಗೆ ಸಂಸತ್ತಿನಲ್ಲಿನ ಹಾಗೂ ಅಂಥ ರಾಜ್ಯದ ವಿಧಾನಮಂಡಲದಲ್ಲಿನ ಅಥವಾ ರಾಜ್ಯಗಳ ವಿಧಾನಮಂಡಲಗಳಲ್ಲಿನ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಉಪಬಂಧಗಳು ಒಳಗೊಂಡು) ಸಂಸತ್ತು ಅವಶ್ಯವೆಂದು ಭಾವಿಸಬಹುದಾದಂಥ ಪೂರಕ, ಪ್ರಾಸಂಗಿಕ ಮತ್ತು ಆನುಷಂಗಿಕ ಉಪಬಂಧಗಳು ಸಹ ಕಾನೂನಿನಲ್ಲಿ ಒಳಗೊಂಡಿರಬಹುದು.

(2) ಹಿಂದೆ ಹೇಳಿದಂಥ ಯಾವುದೇ ಕಾನೂನನ್ನು 368ನೆಯ ಅನುಚ್ಛೇದದ ಉದ್ದೇಶಗಳಿಗಾಗಿ, ಸಂವಿಧಾನದ ಒಂದು ತಿದ್ದುಪಡಿಯೆಂದು ಭಾವಿಸತಕ್ಕದ್ದಲ್ಲ.

 

- II ನಾಗರಿಕತ್ವ

5. ಸಂವಿಧಾನದ ಪ್ರಾರಂಭದಲ್ಲಿ ನಾಗರಿಕತ್ವ ಸಂವಿಧಾನದ ಪ್ರಾರಂಭದಲ್ಲಿ ಭಾರತದ ರಾಜ್ಯಕ್ಷೇತ್ರದಲ್ಲಿ ಅಧಿವಾಸವುಳ್ಳ ಮತ್ತು

() ಭಾರತದ ರಾಜ್ಯಕ್ಷೇತ್ರದಲ್ಲಿ ಹುಟ್ಟಿರುವ ಅಥವಾ

(ಬಿ) ತನ್ನ ತಾಯಿಯಾಗಲಿ, ತಂದೆಯಾಗಲಿ ಭಾರತದ ರಾಜ್ಯಕ್ಷೇತ್ರದಲ್ಲಿ ಹುಟ್ಟಿದ್ದ; ಅಥವಾ

(ಸಿ) ಸಂವಿಧಾನದ ಪ್ರಾರಂಭಕ್ಕೆ ನಿಕಟಪೂರ್ವದಲ್ಲಿ ಐದು ವರ್ಷಗಳಿಗೆ ಕಡಿಮೆ ಇಲ್ಲದಷ್ಟು ಕಾಲದಿಂದ ಭಾರತದ ರಾಜ್ಯಕ್ಷೇತ್ರದಲ್ಲಿ ಸಾಮಾನ್ಯವಾಗಿ ನಿವಾಸಿಯಾಗಿರುವ

- ಪ್ರತಿಯೊಬ್ಬ ವ್ಯಕ್ತಿಯೂ ಭಾರತದ ನಾಗರಿಕನಾಗಿರತಕ್ಕದ್ದು.

6. ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಕೆಲವು ವ್ಯಕ್ತಿಗಳ ನಾಗರಿಕತ್ವದ ಹಕ್ಕುಗಳು:- 5ನೆಯ ಅನುಚ್ಛೇದದಲ್ಲಿ

ಏನೇ ಇದ್ದಾಗ್ಯೂ, ಈಗ ಪಾಕಿಸ್ತಾನದಲ್ಲಿ ಸೇರಿರುವ ರಾಜ್ಯಕ್ಷೇತ್ರದಿಂದ ಭಾರತ ರಾಜ್ಯಕ್ಷೇತ್ರಕ್ಕೆ ವಲಸೆ ಬಂದಿರುವ ಯಾರೇ यू-

() ಅವನಾಗಲಿ, ಅವನ ತಾಯಿ ಅಥವಾ ತಂದೆಯಾಗಲಿ ಅಥವಾ ಅವನ ಅಷ್ಟೆ ಅಥವಾ ತಾತನಾಗಲಿ (ಮೂಲತಃ ಅಧಿನಿಯಮಿಸಿದಂತೆ) ಭಾರತ ಸರ್ಕಾರ ಅಧಿನಿಯಮ, 1935ರಲ್ಲಿ ಪರಿಭಾಷಿಸಿರುವಂತೆ ಭಾರತದಲ್ಲಿ ಹುಟ್ಟಿದ್ದರೆ, ಮತ್ತು

(ಬಿ) (i) ಅಂಥ ವ್ಯಕ್ತಿಯು 1948ನಿಯ ಇನವಿಯ ಮುಲ್ಕ್ ಕಿಂಗಳ ರಕ್ತನಿಂ ಬತ್ತನಯ ಕಲಿಗಿಂ ಮುಂಚಿತವಾಗಿ ವಲಸೆ ಬಂದಿದ್ದ ಸಂದರ್ಭದಲ್ಲಿ, ತಾನು ವಲಸೆ ಬಂದ ತಾರೀಖಿನಿಂದ ಭಾರತದ ರಾಜ್ಯಕ್ಷೇತ್ರದಲ್ಲಿ ಸಾಮಾನ್ಯವಾಗಿ ನಿವಾಸಿಯಾಗಿದ್ದರೆ, ಅಥವಾ

(ii) ಅಂಥ ವ್ಯಕ್ತಿಯು 1948ನೆಯ ಇಸವಿ ಜುಲೈ ತಿಂಗಳ ಹತ್ತೊಂಬತ್ತನೆಯ ತಾರೀಖಿನ ದಿನ ಅಥವಾ ತರುವಾಯ, ಹಾಗೆ ವಲಸೆ ಬಂದಿದ್ದ ಸಂದರ್ಭದಲ್ಲಿ, ತನ್ನನ್ನು ಭಾರತದ ನಾಗರಿಕನೆಂದು ನೋಂದಾಯಿಸಿಕೊಳ್ಳುವಂತೆ రాయలాగి యమునియన్ ఆఫ్ ఇండియా సౌకారదించ ನೇಮಕಗೊಂಡಿರುವ ಅಧಿಕಾರಿಗೆ ಸಂವಿಧಾನದ ಪ್ರಾರಂಭಕ್ಕೆ ಮೊದಲು, ಸರ್ಕಾರವು ನಿಯಮಿಸಿರುವಂಥ ನಮೂನೆಯಲ್ಲಿ ಮತ್ತು ರೀತಿಯಲ್ಲಿ ಸಲ್ಲಿಸಿದ ಅರ್ಜಿಯ ಮೇಲೆ ಅಧಿಕಾರಿಯು ಅವನನ್ನು ರೀತಿಯಾಗಿ ನೋಂದಾಯಿಸಿಕೊಂಡಿದ್ದರೆ

- ಸಂವಿಧಾನವು ಪ್ರಾರಂಭವಾದಂದಿನಿಂದ ಅವನನ್ನು ಭಾರತದ ನಾಗರಿಕನೆಂಬುದಾಗಿ ಭಾವಿಸತಕ್ಕದ್ದು:

ಪರಂತು, ಯಾರೇ ವ್ಯಕ್ತಿಯು, ಅವನ ಅರ್ಜಿಯ ತಾರೀಖಿಗೆ ನಿಕಟಪೂರ್ವದಲ್ಲಿ ಕನಿಷ್ಠ ಪಕ್ಷ ಆರು ತಿಂಗಳ ಕಾಲ: ಭಾರತದ ರಾಜ್ಯಕ್ಷೇತ್ರದ ನಿವಾಸಿಯಾಗಿಲ್ಲದಿದ್ದರೆ, ಅವನನ್ನು ಹಾಗೆ ನೋಂದಾಯಿಸಿಕೊಳ್ಳತಕ್ಕದ್ದಲ್ಲ.

7. ಪಾಕಿಸ್ತಾನಕ್ಕೆ ವಲಸೆಹೋದ ಕೆಲವು ವ್ಯಕ್ತಿಗಳ ನಾಗರಿಕತ್ವದ ಹಕ್ಕುಗಳು:- 5ನೆಯ ಮತ್ತು 6ನೆಯ ಅನುಚ್ಛೇದಗಳಲ್ಲಿ ಏನೇ ಇದ್ದಾಗ್ಯೂ, 1947ನೆಯ ಇಸವಿ ಮಾರ್ಚ್ ತಿಂಗಳ ಮೊದಲನೆಯ ತಾರೀಖಿನ ತರುವಾಯ ಭಾರತದ ರಾಜಕ್ಷೇತ್ರದಿಂದ ಈಗ ಪಾಕಿಸ್ತಾನದಲ್ಲಿ ಸೇರಿರುವ ರಾಜ್ಯಕ್ಷೇತ್ರಕ್ಕೆ ವಲಸೆ ಹೋದ ಯಾರೇ ವ್ಯಕ್ತಿಯನ್ನು ಭಾರತದ ನಾಗರಿಕನೆಂಬುದಾಗಿ ಭಾವಿಸತಕ್ಕದ್ದಲ್ಲ:

ಪರಂತು, ಈಗ ಪಾಕಿಸ್ಥಾನದಲ್ಲಿ ಸೇರಿರುವ ರಾಜ್ಯಕ್ಷೇತ್ರಕ್ಕೆ ಹಾಗೆ ವಲಸೆ ಹೋಗಿದ್ದು, ಮತ್ತೆ ನೆಲೆಸುವುದಕ್ಕಾಗಿ ಅಥವಾ ಖಾಯಂ ಆಗಿ ಹಿಂತಿರುಗುವುದಕ್ಕಾಗಿ ಯಾವುದೇ ಕಾನೂನಿನ ಪ್ರಾಧಿಕಾರದ ಮೂಲಕ ಅಥವಾ ಅದರ ಮೇರೆಗೆ ಕೊಡಲಾದ ರಹದಾರಿಯ ಪ್ರಕಾರ ಭಾರತದ ರಾಜ್ಯಕ್ಷೇತ್ರಕ್ಕೆ ವಾಪಸ್ಸು ಬಂದ ಯಾವ ವ್ಯಕ್ತಿಗೇ ಆಗಲೀ, ಅನುಚ್ಛೇದದಲ್ಲಿ ಹೇಳಿರುವುದು ಯಾವುದೂ ಅನ್ವಯಿಸತಕ್ಕದ್ದಲ್ಲ ಮತ್ತು ಅಂಥ ಪ್ರತಿಯೊಬ್ಬ ವ್ಯಕ್ತಿಯನ್ನು ಕನೆಯ ಅನುಚ್ಛೇದದ (ಬಿ) ಖಂಡದ ಉದ್ದೇಶಗಳಿಗಾಗಿ 1948ನೆಯ ಇಸವಿ ಜುಲೈ ತಿಂಗಳ ಹತ್ತೊಂಬತ್ತನೆಯ ತಾರೀಖಿನ ತರುವಾಯ ಭಾರತದ ರಾಜ್ಯಕ್ಷೇತ್ರಕ್ಕೆ ವಲಸೆ ಬಂದವನೆಂದು ಭಾವಿಸತಕ್ಕದ್ದು.

 

ಭಾರತದ

. ಧಾರತದ ಹೊರಗೆ ವಾಸಿಸುತ್ತಿರುವ ಭಾರತೀಯ ಮೂಲದ ಕೆಲವು ವ್ಯಕ್ತಿಗಳ ನಾಗರಿಕತ್ವದ ಹಕ್ಕುಗಳು 5ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ ಯಾರೇ ವ್ಯಕ್ತಿಯು ತಾನಾಗಲಿ ಅಥವಾ ತನ್ನ ತಾಯಿ ಅಥವಾ ತಂದೆಯಾಗಲಿ ಅಥವಾ ತನ್ನ ಅಜ್ಜಿ ಅಥವಾ ತಾತನಾಗಲಿ (ಮೂಲತಃ ಅಧಿನಿಯಮಿಸಲಾದಂತೆ) ಭಾರತ ಸರ್ಕಾರ ಅಧಿನಿಯಮ, 1935ರಲ್ಲಿ ಪರಿಭಾಷಿತವಾಗಿರುವಂತೆ ಭಾರತದಲ್ಲಿ ಹುಟ್ಟಿದ್ದು ಭಾರತದ ಹೊರಗಿನ ದೇಶವೆಂದು ಪರಿಭಾಷಿತವಾಗಿರುವಂಥ ಯಾವುದೇ ದೇಶದಲ್ಲಿ ಸಾಮಾನ್ಯವಾಗಿ ವಾಸಿಸುತ್ತಿದ್ದರೆ, ಅಂಥ ವ್ಯಕ್ತಿಯು ಡೊಮಿನಿಯನ್ ಆಫ್ ಇಂಡಿಯಾ ಸರ್ಕಾರವು ಅಥವಾ ಭಾರತ ಸರ್ಕಾರವು ನಿಯಮಿಸಿದ ನಮೂನೆಯಲ್ಲಿ ಮತ್ತು ರೀತಿಯಲ್ಲಿ, ತಾನು ತತ್ಕಾಲದಲ್ಲಿ ವಾಸಿಸುತ್ತಿರುವ ದೇಶದಲ್ಲಿನ ಭಾರತದ ರಾಜತಾಂತ್ರಿಕ ಪ್ರತಿನಿಧಿಗೆ ಅಥವಾ ಕಾನ್ಸುಲರ್ ಪ್ರತಿನಿಧಿಗೆ, ಸಂವಿಧಾನದ ಪ್ರಾರಂಭಕ್ಕೆ ಮುಂಚಿತವಾಗಿ ಆಗಲಿ ಅಥವಾ ತರುವಾಯ ಆಗಲಿ ಅರ್ಜಿಯನ್ನು ಸಲ್ಲಿಸಿ, ಪ್ರತಿನಿಧಿಯಿಂದ ತಾನು ಭಾರತದ ನಾಗರಿಕನೆಂದು ನೋಂದಾಯಿಸಿಕೊಂಡಿದ್ದರೆ, ಅಂಥ ವ್ಯಕ್ತಿಯನ್ನು ಭಾರತದ ನಾಗರಿಕನೆಂಬುದಾಗಿ ಭಾವಿಸತಕ್ಕದ್ದು.

9. ಸ್ವಯಿಚ್ಛೆಯಿಂದ ವಿದೇಶಿ ರಾಜ್ಯದ ನಾಗರಿಕತ್ವವನ್ನು ಪಡೆದವರು ಭಾರತದ ನಾಗರಿಕರಲ್ಲ:- ಯಾರೇ ವ್ಯಕ್ತಿಯು ಸ್ವಯಿಚ್ಛೆಯಿಂದ ಯಾವುದೇ ವಿದೇಶಿ ರಾಜ್ಯದ ನಾಗರಿಕತ್ವವನ್ನು ಪಡೆದಿದ್ದರೆ, 5ನೆಯ ಅನುಚ್ಛೇದದ ಆಧಾರದ ಮೇಲೆ ಅವನು ಭಾರತದ ನಾಗರಿಕನಾಗತಕ್ಕದ್ದಲ್ಲ ಅಥವಾ 6ನೆಯ ಅನುಚ್ಛೇದದ ಅಥವಾ 3ನೆಯ ಅನುಚ್ಛೇದದ ಆಧಾರದ ಮೇಲೆ ಅವನನ್ನು ಭಾರತದ ನಾಗರಿಕನೆಂದು ಭಾವಿಸತಕ್ಕದ್ದಲ್ಲ.

10. ನಾಗರಿಕತ್ವದ ಹಕ್ಕುಗಳ ಮುಂದುವರಿಕೆ:- ಭಾಗದಲ್ಲಿ ಹಿಂದೆ ಹೇಳಿರುವ ಯಾವುದೇ ಉಪಬಂಧದ ಮೇರೆಗೆ

ಭಾರತದ ನಾಗರಿಕನಾಗಿರುವ ಅಥವಾ ಭಾರತದ ನಾಗರಿಕನೆಂದು ಭಾವಿಸಲಾಗಿರುವ ಪ್ರತಿಯೊಬ್ಬ ವ್ಯಕ್ತಿಯೂ, ಸಂಸತ್ತು ಮಾಡಬಹುದಾದ ಯಾವುದೇ ಕಾನೂನಿನ ಉಪಬಂಧಗಳಿಗೆ ಒಳಪಟ್ಟು, ಭಾರತದ ನಾಗರಿಕನಾಗಿ ಮುಂದುವರಿಯತಕ್ಕದ್ದು.

11. ಸಂಸತ್ತು ನಾಗರಿಕತ್ವದ ಹಕ್ಕನ್ನು ಕಾನೂನಿನ ಮೂಲಕ ವಿನಿಯಮಿಸುವುದು:- ಭಾಗದಲ್ಲಿ ಹಿಂದೆ ಹೇಳಿರುವ

ಉಪಬಂಧಗಳಲ್ಲಿ ಇರುವುದು ಯಾವುದೂ, ನಾಗರಿಕತ್ವದ ಅರ್ಜನೆಯ ಮತ್ತು ಸಮಾಪ್ತಿಯ ಬಗ್ಗೆ ಮತ್ತು ನಾಗರಿಕತ್ವಕ್ಕೆ ಸಂಬಂಧಪಟ್ಟ ಇತರ ಎಲ್ಲಾ ವಿಷಯಗಳ ಬಗ್ಗೆ ಯಾವುದೇ ಉಪಬಂಧವನ್ನು ಮಾಡಲು ಸಂಸತ್ತಿಗಿರುವ ಅಧಿಕಾರವನ್ನು ಅಲೀಕರಿಸತಕ್ಕದ್ದಲ್ಲ.

logoblog

No comments:

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Ad Code

Blog Archive

My Blog List

Followers

Popular Posts