Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ನೇಮಕಾತಿ 2023

ಅಧ್ಯಾಯ - 13 ತೆರಿಗೆಗಳು ಮತ್ತು ದರಗಳು

ಪ್ರಕರಣ 199: ಗ್ರಾಮ ಪಂಚಾಯಿತಿಗಳು ತೆರಿಗೆಗಳ

ದರ ವಿಧಿಸುವುದು ಇತ್ಯಾದಿ:

1) ಪ್ರತಿಯೊಂದು ಗ್ರಾಮ ಪಂಚಾಯಿತಿಯು, ಗೊತ್ತುಪಡಿಸಿದ ರೀತಿಯಲ್ಲಿ ಮತ್ತು ವಿನಾಯಿತಿಗೊಳಪಟ್ಟು ಮತ್ತು VIನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಗರಿಷ್ಠ ದರವನ್ನು ಮೀರದಂತೆ, ಪಂಚಾಯಿತಿಯ ವ್ಯಾಪ್ತಿಯಲ್ಲಿರುವ, ಕೃಷಿ ತೆರಿಗೆ ನಿರ್ಧಾರಣೆಗೆ ಒಳಪಟ್ಟಿರದ ಕಟ್ಟಡಗಳು ಮತ್ತು ಭೂಮಿಗಳ ಮೇಲೆ (ಸ್ವತ್ತಿನ ಬಂಡವಾಳ ಮೌಲ್ಯದ

ಆಧಾರದಲ್ಲಿ) ತೆರಿಗೆ ವಿಧಿಸುವುದು. ಆದರೆ, ಕಟ್ಟಡದ ಅಥವಾ ಭೂಮಿಯ ಮಾಲೀಕನು ಪಂಚಾಯಿತಿ ಪ್ರದೇಶವನ್ನು ಬಿಟ್ಟು ಹೋಗಿರುವಲ್ಲಿ ಅಥವಾ ಅನ್ಯತಾ ಕಂಡುಬರದಿದ್ದಲ್ಲಿ, ಅಂತಹ ಕಟ್ಟಡ ಅಥವಾ ಭೂಮಿಯ ಅನುಭವದಾರನು ಮಾಲೀಕನ ಮೇಲೆ ವಿಧಿಸಬಹುದಾದ ತೆರಿಗೆಗೆ ಹೊಣೆಗಾರನಾಗಬೇಕು.

2) ಗ್ರಾಮ ಪಂಚಾಯಿತಿಯು ಕುಡಿಯುವುದಕ್ಕೆ ಮತ್ತು ಇತರ ಉದ್ದೇಶಗಳಿಗಾಗಿ ನೀರು ಸರಬರಾಜು ಮಾಡಲು ನೀರಿನ ದರವನ್ನು ವಿಧಿಸಬಹುದು.

3) ಗ್ರಾಮ ಪಂಚಾಯಿತಿಯು, IVನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಗರಿಷ್ಠ ದರವನ್ನು ಮೀರದಂತೆ ಮತ್ತು

ಗೊತ್ತುಪಡಿಸಿದ ರೀತಿಯಲ್ಲಿ ಮತ್ತು ಅದರ ವಿನಾಯಿತಿಗಳ ಅನ್ವಯ ಕೆಲವು ಉಪವಿಧಿಗಳ ಮೂಲಕ ನಿರ್ಧರಿಸುವಂತಹ ದರಗಳಲ್ಲಿ ಈ ಕೆಳಗಿನ ಎಲ್ಲ ತೆರಿಗೆಗಳು ಅಥವಾ ದರ (ಫೀಜು)ಗಳನ್ನು ವಿಧಿಸಬಹುದು:

ಎ) ಚಲನಚಿತ್ರ ಪ್ರದರ್ಶನವನ್ನು ಹೊರತುಪಡಿಸಿ ಇತರ ಯಾವುದೇ ಮನರಂಜನೆಗಳ ಮೇಲೆ ತೆರಿಗೆ.

ಬಿ) ಮೋಟಾರು ವಾಹನಗಳನ್ನು ಹೊರತುಪಡಿಸಿ .ಇತರ ವಾಹನಗಳ ಮೇಲೆ ತೆರಿಗೆ.

ಸಿ) ಈ ಉಪವಿಧಿಯನ್ನು 2017ರ ಅಧಿನಿಯಮ ಸಂಖ್ಯೆ 37ರ ಅನ್ವಯ ದಿನಾಂಕ:

12.07.2017ರಂದು ತೆಗೆಯಲಾಗಿದೆ.

ಡಿ) ಗ್ರಾಮ ಪಂಚಾಯಿತಿಗಳು ನೀರು ಸರಬರಾಜು, ಆರೋಗ್ಯ ಮತ್ತು ನೈರ್ಮಲಕ್ಕಾಗಿ ಅಗತ್ಯ ವ್ಯವಸ್ಥೆಯನ್ನು ಮಾಡಿರುವ ಜಾತ್ರೆಗಳು, ಉತ್ಸವಗಳು ಮುಂತಾದವುಗಳಿಗೆ ಬರುವ ವ್ಯಕ್ತಿಗಳ ಪ್ರವಾಸಿ ಶುಲ್ಕ.

ಇ) ಯಾವುದೇ ಮಾರುಕಟ್ಟೆ ಸ್ಥಳದಲ್ಲಿ ಮಾರಾಟಕ್ಕಾಗಿ ತಮ್ಮ ಸರಕುಗಳನ್ನು ಇಡುವ ವ್ಯಕ್ತಿಗಳಿಗೆ ಮಾರುಕಟ್ಟೆ ಶುಲ್ಕ.

ಎಫ್) ಯಾವುದೇ ಮಾರುಕಟ್ಟೆ ಸ್ಥಳದಲ್ಲಿ ಮಾರಾಟಕ್ಕಾಗಿ ತರುವ ಜಾನುವಾರು ನೋಂದಣಿಯ ಶುಲ್ಕ.

ಜಿ) ಗ್ರಾಮ ಪಂಚಾಯಿತಿಯು ಪ್ರಯಾಣಿಕರಿಗಾಗಿ ಸೂಕ್ತ ಸೌಕರ್ಯಗಳನ್ನು ಒದಗಿಸಿರುವ ಬಸ್ಸು, ಟ್ಯಾಕ್ಸಿ ಮತ್ತು ಆಟೋ ನಿಲ್ದಾಣಗಳ

ಮೇಲಿನ ಶುಲ್ಕ.

ಎಚ್) ಹುಲ್ಲುಗಾವಲುಗಳಲ್ಲಿ ಜಾನುವಾರುಗಳನ್ನು ಮೇಯಿಸುವ ಶುಲ್ಕ.

ಐ) ತೆರಿಗೆ ಮತ್ತು ಶುಲ್ಕ ಅನುಸೂಚಿ-VIರಲ್ಲಿ ನಿರ್ದಿಷ್ಟಪಡಿಸಿದಂತೆ ಇರಬೇಕು.

ಜೆ) ನಿಯಮಿಸಬಹುದಾದ ಯಾವುದೇ ಇತರ ಶುಲ್ಕ.

ಪ್ರಕರಣ 199ಎ: ತೆರಿಗೆಗಳು ಮತ್ತು ದರಗಳ ಪರಿಷ್ಕರಣೆ

ಗ್ರಾಮ ಪಂಚಾಯಿತಿಯು 199ನೇ ಪ್ರಕರಣದ ಅಡಿಯಲ್ಲಿ ವಿಧಿಸಬಹುದಾದ ತೆರಿಗೆಗಳು ಮತ್ತು ದರಗಳನ್ನು, ಕಟ್ಟಡಗಳು ಮತ್ತು ಭೂಮಿಯ ಸಂಬಂಧದಲ್ಲಿ ಕನಿಷ್ಠ ಎರಡು ವರ್ಷಗಳಿಗೊಮ್ಮೆ ಮತ್ತು ಅನುಸೂಚಿ VIನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಇತರ ಬಾಬುಗಳ ಮೇಲೆ ವರ್ಷದಲ್ಲಿ ಕನಿಷ್ಠ ಒಮ್ಮೆ ಪರಿಷ್ಕರಿಸುವುದು. -

ಪ್ರಕರಣ 200: ತೆರಿಗೆಗಳು ಮತ್ತು ಇತರ ಬಾಕಿಗಳ ವಸೂಲಿ

1) ಯಾವುದೇ ತೆರಿಗೆ, ದರ ಅಥವಾ ಶುಲ್ಕ ಬಾಕಿ ಇರುವಾಗ, ಗ್ರಾಮ ಪಂಚಾಯಿತಿಯು ಕಾರ್ಯಸಾಧ್ಯವಾದಷ್ಟು ಕಡಿಮೆ ಅವಧಿಯಲ್ಲಿ ಸಂದಾಯ ಮಾಡುವಂತೆ ಸಂಬಂಧಪಟ್ಟ ವ್ಯಕ್ತಿಗೆ ಯಾವ ದಿನಾಂಕದಂದು ಅಥವಾ ಅದಕ್ಕೆ ಮುಂಚಿತವಾದ ಪಾವತಿ ಮಾಡಬೇಕೆಂದು ನಿರ್ದಿಷ್ಟಪಡಿಸಿ ಬಾಕಿ ಮೊತ್ತಕ್ಕೆ ರಸೀದಿ (ಬಿಲ್ಲನ್ನು) ನೀಡಬೇಕು.

ಮುಂದುವರಿಯುವುದು

logoblog

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts