1.ನಮ್ಮ ಸಾಮಾಜಿಕ ಜೀವನ

2.ಗ್ರಾಮ ಪಂಚಾಯತಿ

3.ಪಂಚಾಯತ ಸಮಿತಿ 

4.ಜಿಲ್ಲಾ ಪರಿಷತ್ತು 

5.ನಗರ ಪರಿಷತ್ತು 

6.ಮಹಾನಗರಪಾಲಿಕೆ

7.ಸ್ಥಾನಿಕ ಸ್ವರಾಜ್ಯ ಸಂಸ್ಥೆಗಳ ಮಹತ್ವ

8.ನಮ್ಮ ಸಹಭಾಗಿತ್ವ 

9.ಪರಿಶಿಷ್ಟ


ಸಾಯಿ ೧. ನಮ್ಮ ಸಾಮಾಜಿಕ ಜೀವನ



ನಾವು ಸಮೂಹದಲ್ಲಿ ಇರುತ್ತೇವೆ. ಅನೇಕ ಸಮೂಹಗಳು ಕೂಡಿ ಸಮಾಜವಾಗುತ್ತದೆ. ಯಾವುದೊಂದು ಭೂಪ್ರದೇಶದಲ್ಲಿಯ ಸಮಾನ ಜೀವನಪದ್ಧತಿ ಇರುವ ಜನರ ಸಮೂಹಕ್ಕೆ ಸಮಾಜವನ್ನುವರು. ಸಮಾಜದಲ್ಲಿಯ ಜನರ ಆಚಾರ-ವಿಚಾರಗಳಲ್ಲಿ ಸಮಾನತೆ ಇರುತ್ತದೆ. ಸಮಾಜಕ್ಕೆ ಒಂದು ನಿಶ್ಚಿತವಾದ ಧೈಯವಿರುತ್ತದೆ. ಸಮಾಜದ ಧೈರ್ಯ ಹಾಗೂ ವಿಕಾಸಕ್ಕಾಗಿ ಜನರಲ್ಲಿ ಐಕ್ಯತೆಯ ಭಾವನೆ ಇರುವುದು ಅವಶ್ಯಕವಾಗಿರುತ್ತದೆ.


ಸಮಾಜದ ಅವಶ್ಯಕತೆ : ಸಮಾಜದಲ್ಲಿ ಒಟ್ಟಿಗೆ ಇರುವುದರಿಂದ ನಮಗೆ ಪರಸ್ಪರರ ಆಧಾರ ದೊರೆಯುತ್ತದೆ. ಅನ್ನ, ಬಟ್ಟೆ, ವಸತಿ, ಶಿಕ್ಷಣ ಮತ್ತು ಆರೋಗ್ಯ ಇವುಗಳಿಗೆ ಸಂಬಂಧಿತ ಅವಶ್ಯಕತೆಗಳು ಸಮಾಜದಿಂದ ಪೂರ್ಣವಾಗುತ್ತವೆ. ಈ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ನಾವು ನಿಸರ್ಗದಲ್ಲಿಯ ಸಾಧನ ಸಂಪನ್ಮೂಲಗಳ ಬಳಕೆ ಮಾಡುತ್ತೇವೆ. ನೈಸರ್ಗಿಕ ಪರ್ಯಾವರಣ ಮತ್ತು ಮಾನವ ಜೀವನ ಇವುಗಳಲ್ಲಿಯ ದೃಢವಾದ ಸಂಬಂಧದ ಅರಿವು ಕೂಡ ಸಮಾಜದಿಂದ ಆಗುತ್ತದೆ.


ಪ್ರತಿಯೊಬ್ಬ ವ್ಯಕ್ತಿಯಲ್ಲಿ ಜನ್ಮತಃ ಕೆಲವು ಗುಣಗಳು ಹಾಗೂ ಸಾಮರ್ಥ್ಯಗಳು ಇರುತ್ತವೆ. ವ್ಯಕ್ತಿಯಲ್ಲಿಯ ಗುಣಗಳ ಗುಣಗಳ ಹಾಗೂ ಸಾಮರ್ಥಗಳ ವಿಕಾಸವು ಸಮಾಜದಿಂದ ಆಗುತ್ತದೆ. ಕುಟುಂಬ, ಶಾಲೆ ಹಾಗೂ ಅನ್ಯ ಸಂಸ್ಥೆಗಳಿಂದಾಗಿ ವ್ಯಕ್ತಿಗೆ ತನ್ನ ಸರ್ವಾಂಗೀಣ ವಿಕಾಸವನ್ನು ಸಾಧಿಸುವ ಅವಕಾಶ ದೊರೆಯುತ್ತದೆ.


ಪ್ರಜಾಪ್ರಭುತ್ವ, ಧರ್ಮನಿರಪೇಕ್ಷತೆ ಹಾಗೂ ಸ್ತ್ರೀ-ಪುರುಷ ಸಮಾನತೆಗಳಂತಹ ವಿಚಾರಗಳ ಪರಿಚಯವು ಸಮಾಜದಲ್ಲಿ ಆಗುತ್ತದೆ. ಈ ವಿಚಾರಗಳನ್ನು ಕಾಪಾಡಿಕೊಂಡು ಹೋಗುವ ಪ್ರಯತ್ನವನ್ನು ಒಟ್ಟಿಗೆ ಸೇರಿ ಮತ್ತು ಪರಸ್ಪರರ ಸಹಕಾರದಿಂದ ಮಾಡಲು ಬರುತ್ತದೆ.


ಸಮಾಜದಲ್ಲಿ ಸತತವಾಗಿ ಬದಲಾವಣೆಗಳು ಆಗುತ್ತಿರುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿಯ ಪ್ರಗತಿಯ ಪರಿಣಾಮವು ನಮ್ಮ ಸಾಮಾಜಿಕ ಜೀವನದ ಮೇಲೆ ಆಗುತ್ತಿರುತ್ತದೆ. ನಮ್ಮ ಆಚಾರ-ವಿಚಾರಗಳ ಪದ್ಧತಿಯಲ್ಲಿಯೂ ಬದಲಾವಣೆಯಾಗುತ್ತದೆ. ಇಂಥ ಸಮಯದಲ್ಲಿ ಒಳ್ಳೆಯ ವಿಚಾರಗಳನ್ನು ನಾವು ಕಾಯ್ದುಕೊಂಡು ಹೋಗಬೇಕು. ವಿಜ್ಞಾನನಿಷ್ಠೆ, ಮಾನವನ ಹಕ್ಕುಗಳ ರಕ್ಷಣೆ, ಸಮಾನತೆ, ಪರ್ಯಾವರಣದ ಸಂರಕ್ಷಣೆ ಈ ಪ್ರಕಾರದ ಹೊಸ ವಿಚಾರಗಳನ್ನು ಸ್ವೀಕರಿಸಬೇಕು.


ಸಮಾಜದ ಹಿ ಪ್ರಗತಿಯಾಗಬೇಕೆಂದು ಪ್ರತಿಯೊಬ್ಬನಿಗೆ ಮನಃಪೂರ್ವಕವಾಗಿ ಅನಿಸಬೇಕು. ಇದರೊಳಗಿಂದ ನಾವು ನ್ಯಾಯ ಮತ್ತು ಸಮಾನತೆಯ ಮೇಲೆ ಆಧಾರಿತವಾದ ಸಮಾಜದ ನಿರ್ಮಾಣ ಮಾಡಬಹುದು.


ಸಾಮಾಜಿಕ ಸಂಸ್ಥೆಗಳು : ಸಮಾಜದಲ್ಲಿ ವಿವಿಧ ಪ್ರಕಾರದ ಸಂಸ್ಥೆಗಳು ಇರುತ್ತವೆ. ಸಮಾಜಕ್ಕೆ ಉಪಯುಕ್ತವಾದ ಮಹತ್ವದ ಕಾರ್ಯಗಳನ್ನು ಅವು ಮಾಡುತ್ತವೆ. ಇಂಥ ಕೆಲವು ಸಾಮಾಜಿಕ ಸಂಸ್ಥೆಗಳ ಪರಿಚಯವನ್ನು ನಾವು ಮಾಡಿಕೊಳ್ಳುವವರಿದ್ದೇವೆ.


ಕುಟುಂಬ ಸಂಸ್ಥೆ : ಕುಟುಂಬವು ಮಾನವ ಜೀವನದಲ್ಲಿಯ ಪ್ರಥಮ ಸಾಮಾಜಿಕ ಸಂಸ್ಥೆಯಾಗಿದೆ. ನಮ್ಮ ಪಾಲನೆ-ಪೋಷಣೆ ಕುಟುಂಬದಲ್ಲಿ ಆಗುತ್ತದೆ. ಮನೆಯಲ್ಲಿಯ ವಾತಾವರಣದ ಪರಿಣಾಮವು ನಮ್ಮ ಮೇಲೆ ಆಗುತ್ತಿರುತ್ತದೆ. ತಾಯಿ-ತಂದೆ, ಸಹೋದರ-ಸಹೋದರಿ, ಅಜ್ಜಿ-ಅಜ್ಜ ಹಾಗೂ ಇತರ ಸಂಬಂಧಿಕರ ಆಚಾರ-ವಿಚಾರಗಳ ಪ್ರಭಾವವು ನಮ್ಮ ಮೇಲೆ ಆಗುತ್ತದೆ. ಕುಟುಂಬದಲ್ಲಿ ಚಿಕ್ಕ-ಪುಟ್ಟ ಹಾಗೂ ಮಹತ್ವದ ನಿರ್ಣಯಗಳಲ್ಲಿ ಪ್ರತಿಯೊಬ್ಬರು ಭಾಗವಹಿಸಬಹುದು. ಪ್ರತಿಯೊಬ್ಬನಿಗೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಂಧಿ ದೊರೆಯುತ್ತದೆ. ಕುಟುಂಬದಲ್ಲಿ ಗಂಡು ಮತ್ತು ಹೆಣ್ಣು ಎಂದು ಭೇದ ಮಾಡದೆ ಇಬ್ಬರಿಗೂ ಶಿಕ್ಷಣದ ಹಾಗೂ ವಿಕಾಸದ ಸಮಾನ ಅವಕಾಶ ದೊರೆಯುತ್ತದೆ. ಇಂಥ ಕೌಟುಂಬಿಕ ವಾತಾವರಣದಲ್ಲಿ ದೊಡ್ಡವರಾದ ಗಂಡು ಹಾಗೂ ಹೆಣ್ಣುಮಕ್ಕಳು ಪರಸ್ಪರರನ್ನು ಹಾಗೂ ಇತರರನ್ನು ಗೌರವಿಸುವುದನ್ನು ಕಲಿಯುತ್ತಾರೆ. ಕುಟುಂಬದಲ್ಲಿ ಸಹಕಾರ, ಗೌರವಭಾವನೆ ಹಾಗೂ ಆತ್ಮವಿಶ್ವಾಸ ಈ ಗುಣಗಳು ಬೆಳೆದು ಬರುತ್ತವೆ.


ಮನೆಯಲ್ಲಿಯ ವಾತಾವರಣವು ಸೌಹಾರ್ದಮಯವಾಗಿರಬೇಕು. ಅದಕ್ಕಾಗಿ ಎಲ್ಲರೂ ಪ್ರಯತ್ನ ಮಾಡಬೇಕು. ಹಿರಿಯರನ್ನು ಗೌರವಿಸಬೇಕು. ಕುಟುಂಬದಲ್ಲಿಯ ಸರ್ವರ ಸ್ಥಾನಮಾನವು ಸಮಾನವಾಗಿರಬೇಕು. ಇದರಿಂದಾಗಿ ಸಮಾನತೆಯ ಮೇಲೆ ಆಧಾರಿತ ಸಮಾಜದ ಸಹಾಯಕವಾಗುತ್ತದೆ. ಅಡಿಪಾಯವು ಕುಟುಂಬದಲ್ಲಿ ನಿರ್ಮಾಣವಾಗಲು


೩. ಶಾಲೆ : ಶಾಲೆಯು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಭವಿಷ್ಯದಲ್ಲಿಯ ಒಬ್ಬ ಜವಾಬ್ದಾರಿಯುತ ನಾಗರಿಕನನ್ನು ನಿರ್ಮಾಣ ಮಾಡುವ ಪ್ರಯತ್ನಗಳು ಶಾಲೆಯಲ್ಲಿ ನಡೆಯುತ್ತವೆ. ವಿವಿಧ ಸ್ಪರ್ಧೆಗಳಿಂದಾಗಿ ನಮ್ಮಲ್ಲಿಯ ಸುಪ್ತ ಗುಣಗಳ ವಿಕಾಸಕ್ಕೆ ಅವಕಾಶ ದೊರೆಯುತ್ತದೆ. ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ

ಸಂಭಾಷಣೆಯ ಕೌಶಲವು ವೃದ್ಧಿಯಾಗುತ್ತದೆ. ಕ್ರೀಡಾಸ್ಪರ್ಧೆಯಲ್ಲಿ ಭಾಗ ವಹಿಸುವುದರಿಂದ ಸಾಂಘಿಕ ಪ್ರವೃತ್ತಿಯು ಬೆಳೆದು ಬರುತ್ತದೆ. ವಿವಿಧ ಹವ್ಯಾಸಗಳನ್ನು ವಿಕಸಿತಗೊಳಿಸುವ ರೂಢಿಯು ಶಾಲೆಯಲ್ಲಿ ಆಗುತ್ತದೆ. ಸಮೃದ್ಧ ಹಾಗೂ ಸಂತುಷ್ಟ ವ್ಯಕ್ತಿತ್ವದ ನಿರ್ಮಾಣ ಕಾರ್ಯದಲ್ಲಿ ಶಾಲೆಯ ಪಾಲು


ಸ್ನೇಹ ಸಮ್ಮೇಳನ ವಿದ್ಯಾಲಯ



ನಮ್ಮ ಶಾಲೆ

ಹಿರಿದಾಗಿರುತ್ತದೆ. ಸಣ್ಣ-ದೊಡ್ಡ ಆಹ್ವಾನಗಳನ್ನು ಸ್ವೀಕರಿಸುವುದು, ಸಾಹಸವನ್ನು ತೋರಿಸುವುದು, ಜವಾಬ್ದಾರಿಯಿಂದ ಯಾವುದೊಂದು ಉಪಕ್ರಮವನ್ನು ಪೂರ್ಣ ಮಾಡುವುದು ಮುಂತಾದ ಅವಕಾಶಗಳು ಶಾಲೆಯಲ್ಲಿ ದೊರೆಯುತ್ತವೆ. ಪ್ರವಾಸ, ಸ್ನೇಹಸಮ್ಮೇಳನ, ಕ್ಷೇತ್ರಭೆಟ್ಟಿ, ಬಾಲವೀರ-ವೀರಬಾಲಾ ಚಳುವಳಿ, ರಾಷ್ಟ್ರೀಯ ಛಾತ್ರಸೇನೆ ಹಾಗೂ ಮಹಾರಾಷ್ಟ್ರ ಛಾತ್ರಸೇನೆ ಮುಂತಾದ ಉಪಕ್ರಮಗಳಿಂದ ಈ ಅವಕಾಶಗಳು ದೊರೆಯುತ್ತವೆ. ಸಹಕಾರ, ಶಿಸ್ತು ಹಾಗೂ ನಿಯಮಗಳನ್ನು ಗೌರವಿಸುವ ಪ್ರವೃತ್ತಿ ಮುಂತಾದ ಗುಣಗಳ ವಿಕಾಸವು ಶಾಲೆಯಿಂದಾಗುತ್ತದೆ.

ಗ್ರಾಮ-ನಗರ: ನಾವು ಹಳ್ಳಿಯಲ್ಲಿ ಇಲ್ಲವೆ ನಗರದಲ್ಲಿ ವಾಸಿಸುತ್ತೇವೆ. ಹಳ್ಳಿಯಲ್ಲಿ ವಾಸಿಸುವುದರಿಂದ ನಾವು ಒಂದು ದೊಡ್ಡ ಸಮೂಹದ ಘಟಕವಾಗಿದ್ದೇವೆಯೆಂಬುದರ ಅರಿವು ನಮ್ಮಲ್ಲಿ ಉಂಟಾಗುತ್ತದೆ. ನಮ್ಮ ಊರಿನ ಬಗ್ಗೆ ಅಥವಾ ನಗರದ ಬಗ್ಗೆ ನಮ್ಮಲ್ಲಿ ಆತ್ಮೀಯತೆ ಇರಬೇಕು. ಗ್ರಾಮದ ವಿಕಾಸದ ವಿಷಯವಾಗಿ ಪ್ರತಿಯೊಬ್ಬನಿಗೆ ಕಳಕಳಿ ಇರಬೇಕು. ನಮಗೆ ನಮ್ಮ ಊರಿನ ಭೌಗೋಲಿಕ ಸ್ಥಾನಮಾನ ಮತ್ತು ಐತಿಹಾಸಿಕ ಮಹತ್ವಗಳ ಬಗ್ಗೆ ಮಾಹಿತಿ ಇರಬೇಕು. ಗ್ರಾಮ ವಿಕಾಸ ಯೋಜನೆಯಲ್ಲಿ ನಾವು ಸಹಭಾಗಿಯಾಗಬೇಕು. ಇಂಥ ಸಹಭಾಗಿತ್ವದಿಂದ ವಿಕಾಸ ಮಾಡುವ ಪ್ರವೃತ್ತಿಯು ಬೆಳವಣಿಗೆ ಹೊಂದುತ್ತದೆ. ಊರಿನ ವಿಕಾಸವನ್ನು ನಾವು ಮಾಡಬಹುದು ಎಂಬ ಅರಿವು ಪ್ರತಿಯೊಬ್ಬ ನಾಗರಿಕನಲ್ಲಿ ನಿರ್ಮಾಣವಾಗಬೇಕು.


ಅಭ್ಯಾಸ


೧. ತೆರವಿದ್ದ ಸ್ಥಳಗಳಲ್ಲಿ ಯೋಗ್ಯ ಶಬ್ದಗಳನ್ನು ಬರೆಯಿರಿ. (ಆ) ಸಮಾಜದ ಸೈರ್ಯ ಹಾಗೂ ವಿಕಾಸಕ್ಕಾಗಿ ಜನರಲ್ಲಿ ಭಾವನೆ ಇರುವುದು ಅವಶ್ಯಕವಾಗಿರುತ್ತದೆ.


(ಆ) ವ್ಯಕ್ತಿಯಲ್ಲಿಯ ಗುಣಗಳ ಹಾಗೂ ಗಳ ವಿಕಾಸವು ಸಮಾಜದಿಂದ ಆಗುತ್ತದೆ. (2) ಇದು ಮಾನವ ಜೀವನದಲ್ಲಿಯ ಪ್ರಥಮ ಸಾಮಾಜಿಕ ಸಂಸ್ಥೆಯಾಗಿದೆ. (ಈ) ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಪ್ರವೃತ್ತಿಯು ಬೆಳೆದುಬರುತ್ತದೆ.


೨. ಪ್ರತಿಯೊಂದಕ್ಕೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.


(ಅ) ಕುಟುಂಬದಲ್ಲಿಯ ಯಾವ ಯಾವ ಗುಣಗಳು ಬೆಳೆದು ಬರುತ್ತವೆ?


(ಆ) ಕುಟುಂಬದಲ್ಲಿಯ ಯಾರ ಯಾರ ಆಚಾರ-ವಿಚಾರಗಳ ಪ್ರಭಾವವು ನಮ್ಮ ಮೇಲೆ ಆಗುತ್ತದೆ?


(ಇ) ಹಳ್ಳಿಯಿಂದ ನಮ್ಮಲ್ಲಿ ಯಾವ ಅರಿವು ಉಂಟಾಗುತ್ತದೆ?


೩.ಎರಡರಿಂದ ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.


(ಅ) ಸಮಾಜದಿಂದ ಯಾವ ಅವಶ್ಯಕತೆಗಳು ಪೂರ್ಣವಾಗುತ್ತವೆ? (ಆ) ಶಾಲೆಯಲ್ಲಿ ಯಾವ ಅವಕಾಶಗಳು ದೊರೆಯುತ್ತವೆ?

logoblog

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.