Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದ ಯೋಜನೆಗಳು



ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಗಾಗಿ ಒದಗಿಸಿರುವ ಸೇವಾ ಸೌಲಭ್ಯಗಳು.


ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ವಿವಿಧ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಸರ್ಕಾರವು ರೂಪಿಸಿ ಜಾರಿಗೊಳಿಸುತ್ತಿದೆ.

ಮಂಡಳಿಯಲ್ಲಿ ಇದುವರೆಗೂ 46.42 ಲಕ್ಷ ಕಾರ್ಮಿಕರು ನೋಂದಣಿ ಆಗಿರುತ್ತಾರೆ. ಅದರಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಇದುವರೆಗೂ 4.84 ಲಕ್ಷ ಕಾರ್ಮಿಕರು ನೋಂದಣಿಯಾಗಿದ್ದಾರೆ. ಈ ಜಿಲ್ಲೆಗಳಲ್ಲಿ ಕಳೆದ 3 ವರ್ಷಗಳಲ್ಲಿ 59,800 ಫಲಾನುಭವಿಗಳಿಗೆ ವಿವಿಧ ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ಯೋಜನೆಗಳ ರೂಪದಲ್ಲಿ ಒಟ್ಟು ರೂ.99.31 ಕೋಟಿಗಳಷ್ಟು ಸಹಾಯಧನವನ್ನು ನೀಡಲಾಗಿದೆ.

ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ನಿರಂತರವಾಗಿ ಬೃಹತ್ ನಿರ್ಮಾಣ ಕಾಮಗಾರಿಗಳು ನಿರ್ಮಾಣಗೊಳ್ಳುತ್ತಿದ್ದು, ಅವುಗಳಲ್ಲಿ ಕಾರ್ಯನಿರ್ವಹಿಸಲು ನಿರ್ಮಾಣದಾರರು ವಿವಿಧ ರಾಜ್ಯಗಳಿಂದ ವಲಸೆ ಕಾರ್ಮಿಕರನ್ನು ಸ್ಥಳದಲ್ಲಿಯೇ ಮಂಡಳಿಯ ಫಲಾನುಭವಿಗಳನ್ನಾಗಿ ನೋಂದಾಯಿಸಲು ಇತ್ತೀಚೆಗೆ ವಿಶೇಷ ನೋಂದಣಿ ಅಭಿಯಾನವನ್ನು ಕಾರ್ಮಿಕ ಇಲಾಖೆವತಿಯಿಂದ ಕೈಗೊಳ್ಳಲಾಗಿತ್ತು. ಇದರಿಂದಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ಮಾಡುವ ಅರ್ಹ ಕಾರ್ಮಿಕರನ್ನು ಮಂಡಳಿಯ ಫಲಾನುಭವಿಗಳನ್ನಾಗಿ ನೋಂದಾಯಿಸಿ ಅವರಿಗೆ ವಿವಿಧ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಲಾಯಿತು.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಫಲಾನುಭವಿಗಳಾಗಿ ನೋಂದಣಿಯಾಗಲು ಇರುವ ಅರ್ಹತೆ ಮತ್ತು ವಿಧಾನಗಳು ಈ ಕೆಳಕಂಡಂತಿದೆ :

ಕಳೆದ 12 ತಿಂಗಳಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳ ಕಾಲ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಾಗಿ ಕೆಲಸ ನಿರ್ವಹಿಸಿರಬೇಕು. ವಯೋಮಿತಿಯು 18 60 ವರ್ಷದೊಳಗಿರಬೇಕು. ಅರ್ಜಿಯನ್ನು https://kbocwwb.karnataka.gov.in e g ಉದ್ಯೋಗ ಪ್ರಮಾಣ ಪತ್ರ, ಸ್ವಯಂ ದೃಢೀಕರಣ ಪತ್ರ, ಆಧಾರ್ ನಂಬರ್, ಬ್ಯಾಂಕ್ ಖಾತೆ ಪಾಸ್ ಬುಕ್ ಪ್ರತಿ ಸಲ್ಲಿಸಬೇಕು. ಅಥವಾ ಹಿರಿಯ ಕಾರ್ಮಿಕ ನಿರೀಕ್ಷಕರು/ಕಾರ್ಮಿಕ ನಿರೀಕ್ಷಕರ ಕಚೇರಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ನೋಂದಾಯಿತ ಫಲಾನುಭವಿಗಳಿಗೆ ಮತ್ತು ಅವರ ಅವಲಂಬಿತರಿಗೆ ಸಹಾಯಧನ ನೀಡಲು ಪ್ರಸ್ತುತ ಕೆಳಕಂಡ ವಿವಿಧ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ರೂಪಿಸಲಾಗಿದೆ.


ಪಿಂಚಣಿ ಮತ್ತು ಕುಟುಂಬ ಪಿಂಚಣಿ ಸೌಲಭ್ಯ:


ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗಳಿಗೆ ಮಾಸಿಕ ರೂ.3000 ಪಿಂಚಣಿಯನ್ನು ಹಾಗೂ ಮೃತರ ಮೃತರಾದ ಅವರ ಅವಲಂಬಿತರಿಗೆ (ಮೃತ ಪಿಂಚಣಿದಾರರ ಪತಿ/ಪತ್ನಿಗೆ) ಮಾಸಿಕ ರೂ. 1500 ಮಾಸಿಕ ಕುಟುಂಬ ಪಿಂಚಣಿ ಸೌಲಭ್ಯವನ್ನು ಅಗತ್ಯವಿದೆ.


ದುರ್ಬಲತೆ ಪಿಂಚಣಿ:


ನೋಂದಾಯಿತ ಫಲಾನುಭವಿಯು ಖಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ ಅಥವಾ ನಿಲ್ದಾಣ ಅಂಗವಿಕಲತೆ ಹಾಗೂ ಸಾರ್ವಜನಿಕ ಮಾಸಿಕ ರೂ.2000 ಪಿಂಚಣಿ ಶೇಕಡವಾರು ದುರ್ಬಲತೆಯನ್ನಾಧರಿಸಿ ರೂ. 2,00,000 ದವರೆಗೆ ಅನುಗ್ರಹ ರಾಶಿ ಸಹಾಯಧನ ನೀಡಲಾಗುವುದು. ಜೊತೆಗೆ, ಕನ್ನಡಕ, ಶ್ರವಣಯಂತ್ರ, ಕೃತಕ ಕೈಕಾಲು ಮತ್ತು ಗಾಲಿ ಕುರ್ಚಿ ಮರುಪಾವತಿ ಸೌಲಭ್ಯ, ಟ್ರೈನಿಂಗ್-ಕಮ್-ಟೂಲ್‌ಕಿಟ್ ಖರೀದಿಗಾಗಿ (ಶ್ರಮ ಸಾಮರ್ಥ್ಯ) ರೂ.30,000 ನೀಡಲಾಗುವುದು.


ಶ್ರಮ ಸಂಸಾರ ಸಾಮರ್ಥ್ಯ ತರಬೇತಿ ಸೌಲಭ್ಯ:


ನೊಂದಾಯಿತ ಸಹಾಯಕಿಯ ಅವಲಂಬಿತರಿಗೆ ಶ್ರಮ ಸಂಸಾರ ಸಾಮರ್ಥ್ಯ ತರಬೇತಿ ಸೌಲಭ್ಯವನ್ನು ಒದಗಿಸಲಾಗಿದೆ.


ವಸತಿ ಸೌಲಭ್ಯ (ಕಾರ್ಮಿಕ ಗೃಹ ಭಾಗ್ಯ):

ವಸತಿ ಸೌಲಭ್ಯ ಯೋಜನೆ ವಸತಿ ನಿರ್ಮಾಣಕ್ಕಾಗಿ ರೂ. 2,00,000 ದವರೆಗೆ ಮುಂಗಡ ಸೌಲಭ್ಯ ನೀಡಿಲ್ಲ.


ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್):


ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್) ಯೋಜನೆಡಿ, ಮಹಿಳಾ ಗರ್ಭಿಣಿಯ ಮೊದಲ ಎರಡು ಮಗುವಿನ ಜನನಕ್ಕೆ ರೂ. 50,0000 ನೀಡಲಾಗುವುದಲ್ಲದೆ ಶಿಶುಪಾಲನೆಗಾಗಿ ವಿಶೇಷ ಸೌಲಭ್ಯವನ್ನು ಒದಗಿಸಲಾಗಿದೆ.


ತಾಯಿ ಮಗು ಸಹಾಯ ಹಸ್ತ;


ಮಹಿಳಾ ಗರ್ಭಿಣಿಯರಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಮಗುವಿನ ಶಾಲಾ ಶಿಕ್ಷಣ ಮತ್ತು ಪೌಷ್ಟಿಕತೆಗಾಗಿ ಮಗುವಿಗೆ ಮೂರು ವರ್ಷ ತುಂಬುವ ವಾರ್ಷಿಕ ರೂ. 6,000 ಗಳ ಸಹಾಯಧನ ನೀಡಲಾಗುವುದು.


ಅಂತ್ಯಕ್ರಿಯೆ ವೆಚ್ಚ:


ರೋಗಿಗಳು ಮೃತರಾದಾಗ ಅಂತ್ಯಕ್ರಿಯೆಗೆ ಅನುಕೂಲವಾಗುವಂತೆ ರೂ. 4,000 ನೀಡಲಾಗುವುದು, ಹಾಗೂ ಅನುಗ್ರಹ ರಾಶಿ ಯೋಜನೆಡಿ ರೂ.71,000 ಸಹಾಯಧನ ನೀಡಲಾಗುವುದು.


ಶೈಕ್ಷಣಿಕ ಸಹಾಯಧನ (ಕಲಿಕೆ ಭಾಗ್ಯ):


ಸಹಾಯಕಿಯರ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಸಹಾಯಧನ (ಕಲಿಕೆ ಭಾಗ್ಯ) ಯೋಜನೆ, 1ನೇ ತರಗತಿಯಿಂದ 5ನೇ ತರಗತಿಯವರೆಗೆ ರೂ. 1,100, 6ನೇ ತರಗತಿಯಿಂದ 7ನೇ ತರಗತಿಯವರೆಗೆ ರೂ. 1,250, 8ನೇ ತರಗತಿಗೆ ರೂ. 1,350, 9ನೇ ತರಗತಿಯಿಂದ 10ನೇ ತರಗತಿಯವರೆಗೆ ರೂ. 3,000, ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿ.ಯು.ಸಿ ಗೆ 4,600, ಪದವಿಗೆ 6,000, ಬಿಐ/ಬಿ.ಟೆಕ್ ಅಥವಾ ಸಂಬಂಧಪಟ್ಟ ಯೂಜಿ ಕೋರ್ಸ್‌ಗೆ ರೂ.10,000, ಸ್ನಾತಕೋತ್ತರ ಪದವಿ ರೂ. 10,000, ಪಾಲಿಟೆಕ್ನಿಕ್/ಡಿಪ್ಲೊಮಾ/ಐಟಿಐ ಗೆ ರೂ.4,600, ಬಿಎಸ್‌ಸಿ ನರ್ಸಿಂಗ್ / ಜಿಎನ್ಎಮ್ / ಎಎನ್ಎಮ್ / ಪಾರಮೆಡಿಕಲ್ ಕೋರ್ಸ್ / ಎಕ್ಸಲರಿ ನರ್ಸಿಂಗ್ ಅಂಡ್ ಮಿಡಿವೈಪ್ ಗೆ ರೂ.10000, ಬಿ.ಎಡ್ ರೂ.6,000, ವೈದ್ಯಕೀಯ (ಎಮ್‌ಬಿಬಿಎಸ್/ ಬಿಎನ್ /ಬಿಡಿ ಎನೋ ಜೇಬಿಇಮಾಎ ಕೋರ್ಸ್‌ಗೆ ಅಥವಾ ಇದಕ್ಕೆ ಸಂಬಂಧಿಸಿದ ಸಮಾನಾಂತರ ಸ್ನಾತಕೋತ್ತರ ಕೋರ್ಸ್‌ಗೆ ರೂ.11,000, ಹೇಗೆ 10,000, ಎಮ್.ಟೆಕ್ / ಎಂ.ಇ (ಇದಕ್ಕೆ ಸಂಬಂಧಿಸಿದ ಸಮನಾಂತರ ಸ್ನಾತಕೋತ್ತರ ಕೋರ್ಸ್) ಗೆ ರೂ.10,000, ಎಮ್ ಡಿ ಮೆಡಿಕಲ್ ಗೆ 2.12,000, 9.2 0.4,600, ಪಿಹೆಚ್ ಡಿ / ಎಂ.ಫಿಲ್ (ಯಾವುದೇ 2 ವರ್ಷ) 9.11,000 ಮತ್ತು ಭಾರತ ಸರ್ಕಾರದ ಮಾನ್ಯತೆ ಪಡೆದ ಕೋರ್ಸ್‌ಗಳಿಗೆ ರೂ.11,000 ನೀಡಲಾಗುವುದು. ಐಐಐಟಿ / ಐಐಎಂ / ಎನ್‌ಐಟಿ /


ವೈದ್ಯಕೀಯ ಸಹಾಯಧನ (ಕಾರ್ಮಿಕ ಆರೋಗ್ಯ ಭಾಗ್ಯ):


ಈ ಯೋಜನೆಯಡಿ ನೋಂದಾಯಿತ ಹಾಗೂ ಅವರ ಅವಲಂಬಿತರಿಗೆ ರೂ.300 ರಿಂದ ರೂ. 20,000 ವರೆಗೆ ನೀಡಲಾಗುವುದು.


ಅಪಘಾತ ಪರಿಹಾರ:


ವೈದ್ಯರಿಗೆ ಮರಣ ಹೊಂದಿದ್ದಲ್ಲಿ ರೂ. 5,00,000. ಸಂಪೂರ್ಣ ಶಾಶ್ವತ ದುರ್ಬಲತೆಯಲ್ಲಿ ರೂ2,00,000 ಮತ್ತು ಶಾಶ್ವತ ದುರ್ಬಲತೆಯಲ್ಲಿ ರೂ.1,00,000/- ನೀಡಲಾಗುವುದು.

ಪ್ರಮುಖ ವೈದ್ಯಕೀಯ ಸಹಾಯಧನ (ಕಾರ್ಮಿಕ ವೆಚ್ಚ ಚಿಕಿತ್ಸಾ ಭಾಗ್ಯ):

ಈ ಯೋಜನೆಯಡಿ ಹೃದ್ರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಪಾರ್ಶ್ವವಾಯು, ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶ ಶಸ್ತ್ರಚಿಕಿತ್ಸೆ, ಅಸ್ತಮ ಚಿಕಿತ್ಸೆ, ಗರ್ಭಪಾತದ ಪ್ರಕರಣಗಳು, ಪಿತ್ತಕೋಶದ ತೊಂದರೆಗೆ ಸಂಬಂಧಿಸಿದ ಚಿಕಿತ್ಸೆ, ಮೂತ್ರ ಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ, ಮೂತ್ರಪಿಂಡ ರಕ್ತಸ್ರಾವದ ಚಿಕಿತ್ಸೆ, ಎಲ್ಲಾ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆ, ಕಿಡ್ನಿ ಶಸ್ತ್ರಚಿಕಿತ್ಸೆ, ಇ.ಎನ್.ಟಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ವ್ಯಾಗ್ಯೂಲ‌ರ್ ಶಸ್ತ್ರಚಿಕಿತ್ಸೆ, ಅನ್ನನಾಳದ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಕರುಳಿನ ಶಸ್ತ್ರಚಿಕಿತ್ಸೆ, ಸ್ತನ ಸಂಬಂಧಿತ ಚಿಕಿತ್ಸೆ ಮತ್ತು " ಶಸ್ತ್ರಚಿಕಿತ್ಸೆ, ಹರ್ನಿಯ ಶಸ್ತ್ರಚಿಕಿತ್ಸೆ, ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ, ಮೊಳೆ ಮುಂತ/ಡಿಲೋಕೇಸನ್ ಚಿಕಿತ್ಸೆ, ಇತರೆ ಔದ್ಯೋಗಿಕ ಖಾಯಿಲೆಗಳ ಚಿಕಿತ್ಸೆಗಳಿಗೆ ರೂ.2,00,000 ವರೆಗೆ ಸಹಾಯಧನ ನೀಡಲಾಗುವುದು.

ಮದುವೆ ಸಹಾಯಧನ (ಗೃಹ ಲಕ್ಷ್ಮೀ ಬಾಂಡ್):

ಈ ಯೋಜನೆಯಡಿ ಫಲಾನುಭವಿಯ ಮಕ್ಕಳ ಮದುವೆ ವೆಚ್ಚ ಭರಿಸುವ ಸಲುವಾಗಿ (ಇಬ್ಬರು ಮಕ್ಕಳಿಗೆ ಮಾತ್ರ) ತಲಾ ರೂ.60,000 ಸಹಾಯಧನ ನೀಡಲಾಗುವುದು.

ಶೈಕ್ಷಣಿಕ ತರಬೇತಿ ಸೌಲಭ್ಯ :

ಈ ಯೋಜನೆಯಡಿ ಫಲಾನುಭವಿಯ ಮಕ್ಕಳು ಯುಪಿಎಸ್ಸಿ, ಕೆಪಿಎಸ್ಸಿ ಹುದ್ದೆಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪ್ರತಿಷ್ಠಿತ ಸಂಸ್ಥೆಗಳಿಂದ ತರಬೇತಿ ಸೌಲಭ್ಯವನ್ನು ಸಹ ಒದಗಿಸಲಾಗುವುದು.

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಲು ಜಾರಿಗೊಳಿಸುತ್ತಿರುವ ಯೋಜನೆಗಳು ಈ ಕೆಳಕಂಡಂತಿದೆ.

ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ:

ನಿರಂತರ ರಸ್ತೆ ಅಪಘಾತಗಳಿಗೆ ತುತ್ತಾಗಿ ಸಂಕಷ್ಟಕ್ಕೆ ಒಳಗಾಗುವ ಖಾಸಗಿ ವಾಣಿಜ್ಯ ಸಾರಿಗೆ ವಾಹನ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳ ಕುಟುಂಬದವರಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸಲು ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ" ಯನ್ನು ಜಾರಿಗೊಳಿಸಲಾಗುತ್ತಿದೆ.

ಈ ಯೋಜನೆಯಡಿ ಫಲಾನುಭವಿಗಳು ಅಪಘಾತಗೊಂಡಲ್ಲಿ ರೂ.5 ಲಕ್ಷಗಳವರೆಗೆ ಅಪಘಾತ ಪರಿಹಾರವನ್ನು ಒದಗಿಸಲಾಗುವುದು. ಖಾಸಗಿ ವಾಣಿಜ್ಯ ಸಾರಿಗೆ ವಾಹನ ಚಲಾಯಿಸಲು ಚಾಲನಾ ಪರವಾನಗಿಯನ್ನು ಹೊಂದಿದ ಚಾಲಕರು ಪ್ರತ್ಯೇಕವಾಗಿ ನೋಂದಣಿ ಮಾಡಿಸುವ ಅವಶ್ಯಕತೆ ಇರುವುದಿಲ್ಲ. ಆದರೆ, ನಿರ್ವಾಹಕರು ಮತ್ತು ಕ್ಲೀನರ್‌ಗಳು ಜಿಲ್ಲಾ కామళ అధికారిగళ శభరియల్లి ನೋಂದಾಯಿಸುವ ಅವಶ್ಯಕತೆ ಇರುತ್ತದೆ.

ಅಪಘಾತದ ಕಾರಣ ನಿಧನರಾದ

ಅಥವಾ ಸಂಪೂರ್ಣ ಶಾಶ್ವತ ದುರ್ಬಲತೆ

ಹೊಂದಿದ ಫಲಾನುಭವಿಗಳ ಇಬ್ಬರು

ಮಕ್ಕಳಿಗೆ ಪದವಿಪೂರ್ವ ವ್ಯಾಸಂಗದವರೆಗೆ

ವಾರ್ಷಿಕ ರೂ. 10,000 ಗಳ ಶೈಕ್ಷಣಿಕ

ಸಹಾಯಧನ ನೀಡಲಾಗುತ್ತಿದೆ.

ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ

ಅಪಘಾತ ಪರಿಹಾರ ಯೋಜನೆ:

ಈ ಯೋಜನೆಯಡಿ ಸ್ವಿ

ಜೊಮಾಟೋಗಳಂತಹ ಸಂಸ್ಥೆಗಳಲ್ಲಿ  ಫುಡ್ ಡೆಲಿವರಿ ಮಾಡುವ ಹಾಗೂ ಇ- ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಫ್‌ ಕಾರ್ಟ್, ಬಿಗ್ ಬಾಸ್ಕೆಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಪೋ, ಡಾಮಿನೋಜ್ ನಂತಹ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಸಿಕೊಂಡ ಎಲ್ಲಾ ಅಸಂಘಟಿತ ಗಿಗ್ ಕಾರ್ಮಿಕರಿಗೆ ಅಪಘಾತ ಪರಿಹಾರವನ್ನು ಒದಗಿಸಲು ಪ್ರಸಕ್ತ ಸಾಲಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿರುತ್ತದೆ.

ಈ ಯೋಜನೆಯಡಿ ನೋಂದಾಯಿತ ಎಲ್ಲಾ ಅರ್ಹ ಕಾರ್ಮಿಕರು ರೂ. 2 ಲಕ್ಷಗಳ ಜೀವವಿಮೆ ಮತ್ತು ರೂ. 2 ಲಕ್ಷಗಳ ಅಪಘಾತ ವಿಮೆ ಸೇರಿದಂತೆ ಒಟ್ಟು ರೂ. 4 ಲಕ್ಷಗಳ ವಿಮಾ ಸೌಲಭ್ಯಗಳನ್ನು ಪಡೆಯಲು ಅರ್ಹರಿರುತ್ತಾರೆ. ಕಾರ್ಮಿಕರು ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.

ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ:

ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ 1 ಅಸಂಘಟಿತ ವಲಯಗಳಾದ "ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈರ್ಸ್, ಮೆಕ್ಯಾನಿಕ್, ಆಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಹಾಗೂ ಭಟ್ಟಿ ಕಾರ್ಮಿಕ”ರನ್ನು ನೋಂದಾಯಿಸಲಾಗುತ್ತಿದೆ.

ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್- ಧನ್ ಯೋಜನೆ (ಪಿಎಂ-ಎಸ್ ವೈಎಂ):

ಕೇಂದ್ರ ಸರ್ಕಾರವು ದೇಶದ ಅಸಂಘಟಿತ ವಲಯದ ಕಾರ್ಮಿಕರಿಗೆ ರೂ.3,000 ಗಳ ನಿಶ್ಚಿತ ಪಿಂಚಣಿ ಸೌಲಭ್ಯ ಒದಗಿಸುವ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಯೋಜನೆ (ಪಿಎಂ-ಎಸ್‌ವೈಎಂ),ಯನ್ನು ಮಾರ್ಚ್ 2019ರಿಂದ ಜಾರಿಗೆ ತಂದಿರುತ್ತದೆ. ಇಎಸ್‌ಐ ಹಾಗೂ ಭವಿಷ್ಯನಿಧಿ ಸೌಲಭ್ಯಕ್ಕೆ ಅರ್ಹರಲ್ಲದ, ರೂ.15,000 ಮಾಸಿಕ ಆದಾಯಕ್ಕಿಂತ ಕಡಿಮೆ ಆದಾಯ ಹೊಂದಿರುವ 18 ರಿಂದ 40 ವಯೋಮಾನದ ಎಲ್ಲಾ ಅಸಂಘಟಿತ ಕಾರ್ಮಿಕರು ಯೋಜನೆಯಡಿ ನೋಂದಾಯಿಸಿಕೊಂಡು ಪಿಂಚಣಿ ಸೌಲಭ್ಯ ಪಡೆಯಬಹುದಾಗಿದೆ. ಇದು ವಂತಿಕೆ ಆಧಾರಿತ ಯೋಜನೆಯಾಗಿದ್ದು, ಕೇಂದ್ರ ಸರ್ಕಾರವು ಫಲಾನುಭವಿಯ ವಯಸ್ಸಿನ ಆಧಾರದ ಮೇಲೆ ಮಾಸಿಕ ರೂ.55 ರಿಂದ 200 ರವರೆಗೆ ಸಮಾನಾಂತರ ವಂತಿಕೆಯನ್ನು ಪಾವತಿಸುತ್ತದೆ.

ಪ್ರಧಾನಮಂತ್ರಿ ವ್ಯಾಪಾರಿ ಮಾನ್-ಧನ್ ಯೋಜನೆ:

ಈ ಯೋಜನೆಯಡಿ ವಾರ್ಷಿಕ ರೂ.1.5 ಕೋಟಿಗಳಿಗಿಂತ ಕಡಿಮೆ ಮೊತ್ತದ ವ್ಯವಹಾರ ಹೊಂದಿರುವ ಎಲ್ಲಾ ಲಘು ವ್ಯಾಪಾರಿಗಳು, ಸ್ವಯಂ ಉದ್ಯೋಗಿಗಳು ಯೋಜನೆಯಡಿ ಫಲಾನುಭವಿಯಾಗಿ ನೋಂದಾಯಿಸಿಕೊಳ್ಳಬಹುದು.

ನೋಂದಾಯಿತ ಫಲಾನುಭವಿಗಳು ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್- ಧನ್ ಯೋಜನೆಯಡಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ಆಶಾದೀಪ ಯೋಜನೆ:

ಕರ್ನಾಟಕ ರಾಜ್ಯ ಸರ್ಕಾರವು, ಖಾಸಗಿ ವಲಯದ ಉದ್ಯೋಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಮಾಲೀಕರನ್ನು ಹಾಗೂ ಉದ್ಯೋಗದಾತರನ್ನು ಉತ್ತೇಜಿಸುವ ದೃಷ್ಟಿಯಿಂದ "ಆಶಾದೀಪ" ಎಂಬ ನೂತನ ಯೋಜನೆಯನ್ನು ರೂಪಿಸಿದೆ.

ಈ ಯೋಜನೆಯಡಿ, ಮಾಲೀಕರು ಪಾವತಿಸಿದ ಇ.ಎಸ್.ಐ. ಮತ್ತು ಪಿ.ಎಫ್ ವಂತಿಕೆಯ ಮೊತ್ತ, ಅಪ್ರೆಂಟಿಸ್ ಶಿಷ್ಯವೇತನ ಮತ್ತು ಅಪ್ರೆಂಟಿಸ್‌ ತರಬೇತಿ ಪಡೆದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಂಡಲ್ಲಿ ವೇತನವನ್ನು ಸದರಿ ಮಾಲೀಕರಿಗೆ ಮರುಪಾವತಿ ಮಾಡಲಾಗುತ್ತದೆ.

ಇ-ಶ್ರಮ್ ನೋಂದಣಿ ಕಾರ್ಯಕ್ರಮ:

ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯವು ಅಸಂಘಟಿತ ಕಾರ್ಮಿಕರ ದತ್ತಾಂಶವನ್ನು ಸಂಗ್ರಹಿಸುವ ಉದ್ದೇಶದಿಂದ, ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶ ಸಂಗ್ರಹಿಸಲು ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಈ ಪೋರ್ಟಲ್‌ನಲ್ಲಿ 16 ರಿಂದ 59 ವಯೋಮಾನದ ಇ.ಎಸ್.ಐ. ಹಾಗೂ ಇ.ಪಿ.ಎಫ್ ಸೌಲಭ್ಯವನ್ನು ಹೊಂದಿರದ ಹಾಗೂ ಆದಾಯ ತೆರಿಗೆ ಪಾವತಿ 왕요 ~ 379 FAS ಅಸಂಘಟಿತ ಕಾರ್ಮಿಕರ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯಡಿ ಅಸಂಘಟಿತ ಕಾರ್ಮಿಕರು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಅಥವಾ ಸ್ವಯಂ ಆಗಿ ಇ-ಶ್ರಮ್ For www.eshram.gov.in ಮೂಲಕ ಉಚಿತವಾಗಿ ನೋಂದಾಯಿಸಿಕೊಂಡು ಸ್ಥಳದಲ್ಲಿಯೇ

ಗುರುತಿನ ಚೀಟಿ ಪಡೆಯಬಹುದಾಗಿದೆ.




logoblog

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts