Title : ಕ್ಷುದ್ರಗ್ರಹಕ್ಕೆ ಅಪಳಿಸುವ ನಾಸಾ ನೌಕೆ | KAS PSI Essay
(Educational & Informational Purpose Only)
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಡಬಲ್ ಆಸ್ಟರಾಯ್ಡ್ ರೀಡೈರೆಕ್ಷನ್ ಟೆಸ್ಟ್ (ಡಿಎಆರ್ಟಿ-ಡಾರ್ಟ್) ಮಿಷನ್ ಉಡಾವಣೆಗೆ ಸಜ್ಜಾಗುತ್ತಿದೆ. ಭೂಮಿಗೆ ಕ್ಷುದ್ರ ಗ್ರಹ ಅಪ್ಪಳಿಸುವುದನ್ನು ತಡೆಯುವ ಗೃಹ ರಕ್ಷಣಾ ತಂತ್ರಜ್ಞಾನದ ಭಾಗವಾಗಿ ಈ ಮಿಷನ್ ರೂಪಿಸಲಾಗಿದೆ. 2021 ನವೆಂಬರ್ 24ರಂದು ಮಿಷನ್ ಉಡಾವಣೆಗೊಳ್ಳಲಿದೆ. ಕ್ಯಾಲಿಫೋರ್ನಿಯಾದ ವಾಂಡನ್ಬರ್ಗ್ ಸ್ಪೇಸ್ ಫೋರ್ಸ್ ಬೇಸ್ನಿಂದ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ನಿಂದ ಡಾರ್ಟ್ ಉಡಾವಣೆಗೆ ಸಮಯ ನಿಗದಿಪಡಿಸಲಾಗಿದೆ.
File Language : Kannada/English
ಟಾರ್ಗೆಟ್ ಯಾವುದು?: ಭೂಮಿಗೆ ಸಮೀಪದ ಕ್ಷುದ್ರಗ್ರಹ (65803) ಡಿಡೈಮೋಸ್ ಹಾಗೂ ಅದರ ಮೂನ್ಲೆಟ್, ಡಾರ್ಟ್ ಯೋಜನೆಯ ಗುರಿಯಾಗಿದೆ. ಡಾರ್ಟ್ ಮಿಷನ್ ನೌಕೆಯನ್ನು ಜಾನ್ಸ್ ಹಾಪ್ಕಿನ್ಸ್ ಅನ್ವಯಿಕ ಭೌತಶಾಸ್ತ್ರ ಪ್ರಯೋಗಾಲಯ (ಎಪಿಎಲ್) ಅಭಿವೃದ್ಧಿಪಡಿಸಿ ನಿರ್ಮಿಸಿದೆ.
ಒಂದು ವರ್ಷದ ನಂತರ: ಡಾರ್ಟ್ ಬಾಹ್ಯಾಕಾಶ ನೌಕೆ ನವೆಂಬರ್ 24ರಂದು ಉಡಾವಣೆಗೊಂಡ ಒಂದು ವರ್ಷದ ನಂತರ 2022ರ ಸೆಪ್ಟೆಂಬರ್ ವೇಳೆಗೆ ಡಿಡೈಮೋಸ್ಅನ್ನು ಹಾದು ಹೋಗುವ ನಿರೀಕ್ಷೆಯಿದೆ. ಆಗ ಡಿಡೈಮೋಸ್ ಕ್ಷುದ್ರಗ್ರಹ ವ್ಯವಸ್ಥೆಯು ಭೂಮಿಯಿಂದ 11 ದಶಲಕ್ಷ ಕಿಲೋ ಮೀಟರ್ ದೂರದೊಳಗೆ ಇರುತ್ತದೆ.
ಸಾಧನಗಳು ಮತ್ತು ವ್ಯವಸ್ಥೆಗಳು: ಡಾರ್ಟ್ ಬಾಹ್ಯಾಕಾಶ ನೌಕೆಯಲ್ಲಿ ಡಿಡೈಮೋಸ್ ರೀಕಾನ್ ಸೆನ್ಸ್ ಅಂಡ್ ಆಪ್ಟರಾಯ್ ಕ್ಯಾಮರಾ ಫಾರ್ ಒಪ್ನ್ಯಾವ್ (ಡ್ರಾಕೋ) ಎನ್ನುವ ವಿಶೇಷ ಕ್ಯಾಮರಾ ಹೊಂದಿದೆ. ಅದು ನೌಕೆಯ ಉಡಾವಣೆ ನಂತರ ಎಲೆಕ್ನಿಕ್ ಪ್ರೊಪಲ್ಸ್ನ್ ವ್ಯವಸ್ಥೆಗೆ ಸೌರಶಕ್ತಿ ಸರಬರಾಜು ಮಾಡಲು ರೋಲ್ ಔಟ್ ಸೋಲಾರ್ ಅರೇಸ್ (ರೋಸಾ) ಅನ್ನು ಬಳಸುತ್ತದೆ.
ಆಧುನಿಕ ನ್ಯಾವಿಗೇಷನ್ ಆಲ್ದಾರಿದಂ
ಇವಲ್ಯೂಷನರಿ ಝನಾನ್ ಥಸ್ಟರ್-ಕಮರ್ಷಿಯಲ್ (ನೆಕ್ಸ್-ಸಿ) ಸೋಲಾರ ಎಲೆಕ್ಟಿಕ್ ಪ್ರೊಪಲ್ಟನ್ ವ್ಯವಸ್ಥೆಯನ್ನು ಕೂಡ ಬಾಹ್ಯಾಕಾಶ ನೌಕೆ ಪರೀಕ್ಷಿಸಲಿದೆ.
ಚಲನೆಯ ಪರಿಣಾಮ
ಆಸ್ಟರಾಯ್ಗೆ ಡಿಕ್ಕಿ ಹೊಡೆಯುವಾಗ ಡಾರ್ಟ್
ಬಾಹ್ಯಾಕಾಶ ನೌಕೆಯು ಉದ್ದೇಶಪೂರ್ವಕವಾಗಿಯೇ ಡಿಡೈಮೋಸ್ ವ್ಯವಸ್ಥೆಗೆ ಡಿಕ್ಕಿ ಹೊಡೆದು ಚಲನೆಯ ಪರಿಣಾಮವನ್ನು (ಕೈನೆಟಿಕ್ ಇಂಪ್ಯಾಕ್ಟ್) ಪಡೆದುಕೊಳ್ಳುತ್ತದೆ. ಸೆಕೆಂಡ್ಗೆ 6.6 ಕಿ.ಮೀ., ಅಂದರೆ ಒಂದು ಗಂಟೆಗೆ 24,140 ಕಿಲೋ ಮೀಟರ್ ವೇಗದಲ್ಲಿ ಅದು ಡಿಕ್ಕಿ ಹೊಡೆಯಲಿದೆ.'
ಏನು ಉಪಯೋಗ?
File size Reduced : No
ದೂರದರ್ಶಕದಲ್ಲಿ ಸೆರೆ
ಡಿಡೈಮೋಸ್ ಆಸ್ಟೆರಾಯ್ ವ್ಯವಸ್ಥೆಯ ಕುದ್ರಗ್ರಹಗಳು ಇಳೆಗೇ ಅಪಾಯವೊಡ್ಡುವಷ್ಟು ಗಾತ್ರದ್ದಾಗಿರುತ್ತವೆ ಎಂದು ವಿಶ್ಲೇಷಿಸಲಾಗಿದೆ.
For Personal Use Only
Click Here To Download
PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
No comments:
Post a Comment