Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Monday, October 24, 2022

ಇ-ತ್ಯಾಜ್ಯ : KAS,PSI ESSAY

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Monday, October 24, 2022

ಶೀರ್ಷಿಕೆ: ಇ-ತ್ಯಾಜ್ಯ


(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಇ-ತ್ಯಾಜ್ಯ


ಮಾ ತಂತ್ರಜ್ಞಾನದ ತವರೂರಾಗಿರುವ ಬೆಂಗಳೂರು ಇ-ತ್ಯಾಜ್ಯ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಇ-ತ್ಯಾಜ್ಯದ ಕುರಿತು ಹೆಚ್ಚಿನ ವಿವರ ಇಲ್ಲಿದೆ.


ಯಾವ್ಯಾವುದು ಇ-ತ್ಯಾಜ್ಯ?: ದುರಸ್ತಿಯಾಗದ ಟಿವಿ, ಮೊಬೈಲ್, ಸ್ಮಾರ್ಟ್‌ ಫೋನ್, ಫ್ರಿಡ್ಜ್, ವಾಷಿಂಗ್ ಮೆಷಿನ್, ಓವನ್, ಪ್ರಿಂಟರ್, ಕೀ ಬೋರ್ಡ್, ಏರ್ ಕಂಡೀಷನರ್, ಜೆರಾಕ್ಸ್‌ ಸೇರಿದಂತೆ 23 ಬಗೆಯ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟಿಕಲ್ಸ್ ಉಪಕರಣಗಳನ್ನು ಇ-ತ್ಯಾಜ್ಯವೆಂದು ಪರಿಗಣಿಸಲಾಗುತ್ತದೆ.


ಪರಿಸರ, ಆರೋಗ್ಯಕ್ಕೆ ಮಾರಕ: ಇ-ತ್ಯಾಜ್ಯವನ್ನು ಸೂಕ್ತವಾಗಿ ಸಂಸ್ಕರಣೆ ಮಾಡದೆ ಇದ್ದರೆ ಪರಿಸರ ಮತ್ತು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಎಲೆಕ್ಟ್ರಾನಿಕ್ ತ್ಯಾಜ್ಯದಲ್ಲಿನ ಆರ್ಸೆನಿಕ್, ಸೀಸ, ಪಾದರಸ, ಕ್ಯಾಡ್ಮಿಯಂನಂಥ ಭಾರ ಲೋಹಗಳು ಜಲಮೂಲ ಮತ್ತು ಮಣ್ಣು ಸೇರಿದ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ.


ಭಾರತಕ್ಕೆ 5ನೇ ಸ್ಥಾನ: ಇ-ತ್ಯಾಜ್ಯ ಉತ್ಪಾದನೆಯಲ್ಲಿ ಭಾರತ 5ನೇ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ. ಪ್ರತಿ ವರ್ಷ 18.5 ಲಕ್ಷ ಟನ್ ಇ-ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎಂಬುದು ಅಧ್ಯಯನ ವರದಿಯಿಂದ ತಿಳಿದುಬಂದಿದೆ. ನಗರಗಳ ಪೈಕಿ ಮುಂಬಯಿ ಮೊದಲ ಸ್ಥಾನದಲ್ಲಿದೆ. ಹೊಸದಿಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಬೆಂಗಳೂರು ಮೂರನೇ ಅತಿದೊಡ್ಡ ಇ-ತ್ಯಾಜ್ಯ ಉತ್ಪಾದಕ ನಗರವಾಗಿದೆ.


ಇ-ತ್ಯಾಜ್ಯ ನಿಯಮ: ಎಲೆಕ್ಟ್ರಾನಿಕ್ ತ್ಯಾಜ್ಯಗಳ ನಿರ್ವಹಣೆಗೆ ಸಂಬಂಧಿ ಸಿದಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ, ಇ-ತ್ಯಾಜ್ಯ ನಿರ್ವಹಣೆ ನಿಯಮ - 2011 ಅನ್ನು 2012ರ ಮೇ 1ರಿಂದ ಅನ್ವಯ ಆಗುವಂತೆ ಜಾರಿಗೆ ತಂದಿದೆ. ತ್ಯಾಜ್ಯ ನಿರ್ವಹಣೆ ಜವಾಬ್ದಾರಿಯನ್ನು ಈ ನಿಯಮವು ಎಲೆಕ್ನಿಕ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದಕ, ವಿತರಕ ಮತ್ತು ಖರೀದಿದಾರರ ಮೇಲೆ ಹೊರಿಸಿದೆ. ಎಲೆಕ್ನಿಕಲ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಯ ಸಂದರ್ಭದಲ್ಲಿ ಉತ್ಪತ್ತಿಯಾಗುವ ಇ-ತ್ಯಾಜ್ಯದ ಸಂಸ್ಕರಣೆಯ ಜವಾಬ್ದಾರಿಯ ತಯಾರಕನ ಹೆಗಲ ಮೇಲೆ ಹಾಕಲಾಗಿದೆ. ತಯಾರಕರು ಇ-ತ್ಯಾಜ್ಯಗಳ ಸಂಗ್ರಹಣಾ ಘಟಕವನ್ನು ಆರಂಭಿಸಬೇಕು. ಇ-ತ್ಯಾಜ್ಯಗಳ ಸಂಗ್ರಹಣಾ ಘಟಕಗಳ ವಿಳಾಸವನ್ನು ಗ್ರಾಹಕರಿಗೆ ನೀಡಬೇಕೆಂಬ ನಿಯಮವಿದೆ.


ನಿಯಂತ್ರಣ ಹೇಗೆ?: ಬಳಸಿ ಬಿಸಾಡುವ ವಸ್ತುಗಳ ಉತ್ಪಾದನೆಗೆ ಕಡಿವಾಣ,


ಮತ್ತೆ ಮತ್ತೆ ಮರು ಬಳಸುವ, ರಿಪೇರಿಗೆ ಅವಕಾಶವಿರುವ ಅಪ್‌ಡೇಟ್‌ಗೆ ಅವಕಾಶವಿರುವ ಉಪಕರಣಗಳ ಬಳಕೆ ಮಾಡಬೇಕು. ಮಿತ ಬಳಕೆ, ಇ ತ್ಯಾಜ್ಯ ವಿಲೇವಾರಿಗೆ ಕಟ್ಟುನಿಟ್ಟಿನ ನಿಗಾ, ತಾಳಿಕೆ ಬಾಳಿಕೆ ಇರುವ ವಸ್ತು-ಸಾಮಗ್ರಿಗಳ ಬಳಕೆ, ರಿಪೇರಿಗೆ ಅವಕಾಶವೇ ಇಲ್ಲದ ಚೈನಾ ಐಟಂಗಳಿಗೆ ಬಹಿಷ್ಕಾರ ಮತ್ತು ಇ ತ್ಯಾಜ್ಯ ನಿರ್ವಹಣೆಗೆ ಕಟ್ಟುನಿಟ್ಟಿನ ಕಾನೂನು ಅನುಸರಿಸಬೇಕು.

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ರಾಜ್ಯ: ಕರ್ನಾಟಕ

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಇ-ತ್ಯಾಜ್ಯ : KAS,PSI ESSAY

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts