Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Wednesday, February 2, 2022

ಕೊಂಕಣ ರೈಲ್ವೆಯಲ್ಲಿ ತಾಂತ್ರಿಕ ಸಹಾಯಕರಾಗಿ | konkan railway recruitment 2022

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Wednesday, February 2, 2022

Title : ಕೊಂಕಣ ರೈಲ್ವೆಯಲ್ಲಿ ತಾಂತ್ರಿಕ ಸಹಾಯಕರಾಗಿ | konkan railway recruitment 2022

(Educational & Informational Purpose Only)



ಕೊಂಕಣ್ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ (ಕೆಆರ್‌ಸಿಎಲ್) ಖಾಲಿ ಇರುವ 14 ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಕೋವಿಡ್ ಹಿನ್ನೆಲೆಯಲ್ಲಿ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು 72 ಗಂಟೆ ಮುನ್ನ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದು, ನೆಗೆಟೀವ್ ರಿಪೋರ್ಟ್ ಹೊಂದಿರಬೇಕು.


ನವಿ ಮುಂಬೈನ ಸಿಬಿಡಿ ಬೇಲಾಪುರದ ಕಾರ್ಪೋರೇಟ್ ಕಚೇರಿಯಲ್ಲಿ ಕಾರ್ಯನಿರ್ವಹಿಸಲು ಈ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಆರಂಭದಲ್ಲಿ ಈ ಹುದ್ದೆಗಳು 2 ವರ್ಷದ ಅವಧಿಗೆ ಒಳಗೊಂಡಿರುತ್ತವೆ. ನಂತರ ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧರಿಸಿ ಒಂದು ವರ್ಷ ಅವಧಿ ವಿಸ್ತರಿಸಲಾಗುವುದು. ಸಾಮಾನ್ಯ ವರ್ಗದ ಅಭ್ಯರ್ಥಿಗೆ 9 ಸ್ಥಾನ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ 1, ಹಿಂದುಳಿದ ವರ್ಗಕ್ಕೆ 3, ಎಸ್ಸಿಗೆ 1 ಸ್ಥಾನ ಕಾಯ್ದಿರಿಸಲಾಗಿದೆ. ದೆಹಲಿ, ರಾಯ್‌ಪು‌, ಸೂರತ್, ಅಂಬಾಲ, ನಾಗ್‌ಪುರ ಹಾಗೂ ಇತರ ಫ್ಯಾಬ್ರಿಕೇಷನ್ ಹಬ್‌ಗಳಿಗೆ ನೇಮಕ ಮಾಡಲಾಗುವುದು.




ಅರ್ಹತಾ ಮಾನದಂಡಗಳು

ಶೈಕ್ಷಣಿಕ ಅರ್ಹತೆ: 

ಎಐಸಿಟಿಇಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಕಾಲೇಜಿನಿಂದ ಸಿವಿಲ್‌/ ಮೆಕಾನಿಕಲ್‌ನಲ್ಲಿ ಬಿಇ/ಬಿ.ಟೆಕ್ ಪದವಿ ಪಡೆದಿದ್ದು, ಪದವಿಯಲ್ಲಿ ಕನಿಷ್ಠ ಶೇ.55 ಅಂಕ ಪಡೆದಿರಬೇಕು. ಜತೆಗೆ ಎನ್‌ಡಿಟಿ ಲೆವಲ್‌-2 - ಎಎಸ್‌ಎನ್‌ಟಿ ಪ್ರಮಾಣಪತ್ರ ಹೊಂದಿರಬೇಕು. ಹುದ್ದೆಗೆ ಅನುಗುಣವಾಗಿ ವೃತ್ತಿ ಅನುಭವ ಕೇಳಲಾಗಿದೆ.


ವಯೋಮಿತಿ: 1.2.2021ಕ್ಕೆ ಅನ್ವಯವಾಗುವಂತೆ ಗರಿಷ್ಠ 35, 45ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.


Daily Quiz Telegram Group - @kpsc2019


ವೇತನ: ಅಸಿಸ್ಟೆಂಟ್ ಪ್ರಾಜೆಕ್ಟ್ ಇಂಜಿನಿಯರ್‌ಗೆ ಮಾಸಿಕ 73,491 ರೂ., ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್‌ಗೆ ಮಾಸಿಕ 58,819 ರೂ. ವೇತನ ನೀಡಲಾಗುವುದು.


ಸೂಚನೆ: 

ಅಧಿಸೂಚನೆ ಜತೆ ನೀಡಲಾಗಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ತರಬೇಕು. ಶೈಕ್ಷಣಿಕ, ವಯಸ್ಸು, ಜಾತಿ ಪ್ರಮಾಣಪತ್ರ ಸೇರಿ ಎಲ್ಲ ದಾಖಲೆಗಳ ಮೂಲ ಪ್ರತಿಯನ್ನು ತರಬೇಕು. ಹಾಗೂ ಅರ್ಜಿ ಜತೆ ದಾಖಲೆಗಳ ಪ್ರತಿಯನ್ನು ಸೇರಿಸಿರಬೇಕು. ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು 2-3 ದಿನ ಅಲ್ಲೇ ಉಳಿಯಲು ವ್ಯವಸ್ಥೆ ಮಾಡಿಕೊಂಡು ಬರುವುದರ ಜತೆಗೆ ಕರೊನಾ ಮುನ್ನೆಚ್ಚರಿಕಾ ನಿಯಮವನ್ನು ಪಾಲಿಸಲು ಸೂಚಿಸಲಾಗಿದೆ. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳ ಸಂಖ್ಯೆ ಆಧರಿಸಿ ಗುಂಪುಚರ್ಚೆ ನಡೆಸಲಾಗುವುದು.


Number of Pages : link


ಹುದ್ದೆ ವಿವರ

ಆ ಅಸಿಸ್ಟೆಂಟ್ ಪ್ರಾಜೆಕ್ಟ್ ಇಂಜಿನಿಯರ್ (ಫ್ಯಾಬ್ರಿಕೇಷನ್) - 4

ಆ ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ (ಫ್ಯಾಬ್ರಿಕೇಷನ್) - 10


ಹುದ್ದೆಗಳು 14


Password Protected : No


Image Available : Yes


ಸಂದರ್ಶನ ನಡೆಯುವ ದಿನಾಂಕ: 7.2.2022

(ಬೆಳಗ್ಗೆ 9 ರಿಂದ 12 ಗಂಟೆ ಒಳಗೆ ನೋಂದಾಯಿತರಾಗಬೇಕು) ಸಂದರ್ಶನ ನಡೆಯುವ ಸ್ಥಳ: Executive Club, Konkan Rail Vihar, Konkan Railway Corporation Ltd. Sector-40, Seawoods (West), Navi Mumbai, 400706.


File size Reduced : No


ಅಧಿಸೂಚನೆ : https://bit.ly/3uj8SXv


Cost : Free of cost

For Personal Use Only


ಮಾಹಿತಿಗೆ : www.konkanrailway.com


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಕೊಂಕಣ ರೈಲ್ವೆಯಲ್ಲಿ ತಾಂತ್ರಿಕ ಸಹಾಯಕರಾಗಿ | konkan railway recruitment 2022

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts