Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Friday, November 25, 2022

ಗೊಂಡ ಬುಡಕಟ್ಟು ಜನಾಂಗ (Gonds)

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, November 25, 2022

ಶೀರ್ಷಿಕೆ: ಗೊಂಡ ಬುಡಕಟ್ಟು ಜನಾಂಗ (Gonds)




(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಗೊಂಡರು. ಭಾರತದ ಬುಡಕಟ್ಟು ಜನರಲ್ಲಿಯೇ ಎರಡನೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದಾರೆ. ಇವರು ದ್ರಾಏಡ ಗುಂಪಿಗೆ ಸೇರಿರುವ ಜನ ಇವರ ಒಟ್ಟು ಜನಸಂಖ್ಯೆ 1981ರ ಜನಗಣತಿಯ ಪ್ರಕಾರ 74.48 26, 20115) ಜನಗಣತಿಯ ಪ್ರಕಾರ 4,357,918 ಜನಸಂಖ್ಯೆಯನ್ನು ಹೊಂದಿದ್ದಾರೆ. ಇದು ಭಾರತದ ಒಟ್ಟುಗೊಂಡ ಆದಿವಾಸಿ ಜನಸಂಖ್ಯೆಯ ಶೇ.35.6ರಷ್ಟಿದೆ.

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಗೊಂಡ ಪದದ


ಗೊಂಡರು ಎಂಬ ಹೆಸರಿನಿಂದಲೇ ಗೊಂಡ್ವಾನಾ ಎಂಬ ಭೂರಾಶಿಯ ಪದವು ರೂಢಿಯಲ್ಲಿ ಬಂದಿರಬಹುದು, ಗೊಂಡರು ಸಾತ್ಪುರ ಪ್ರಸ್ಥಭೂಮಿ, ನರ್ಮದಾ ನದಿಯ ಹತ್ತಿರ ಮತ್ತು ನಾಗಮರ ಘಡ್‌ದ ಬಸ್ತಾರ, ಮೈದಾನ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಛತ್ತೀಸ್‌ ಸರ್‌ಗೂಜ, ಚಿಂದ್ದಾರ, ಮಾಂಡ್ಲ ಮತ್ತು ಮಹಾರಾಷ್ಟ್ರದ ಚಂಡ, ಇಯೋಟ್ ಮಲ್ ಜಿಲ್ಲೆಗಳಲ್ಲಿಯೂ ಕೇಂದ್ರೀಕೃತವಾಗಿರುವರು. ಐತಿಹಾಸಿಕವಾಗಿ ಗೊಂಡ್ವಾನ ಪ್ರದೇಶವು ಗೊಂಡರು ವಾಸಿಸುತ್ತಿದ್ದ ಜಾಗವೆಂದು, ಹಿಂದಿನ ಕಾಲದಲ್ಲಿ ಈ ಗೊಂಡ್ವಾನ ಪ್ರದೇಶವನ್ನು ಆಳುತ್ತಿದ್ದರೆಂದು ಹೇಳಲಾಗುತ್ತದೆ.


ಗೊಂಡ ಎಂಬ ಪದವು ತೆಲುಗು ಭಾಷೆಯ “ಕೊಂಡ" ಎಂಬ ಪದದಿಂದ ಬಂದಿರಬೇಕು. ತೆಲುಗಿನಲ್ಲಿ “ಕೊಂಡ” ಎಂದರೆ ಬೆಟ್ಟ-ಗುಡ್ಡ, ಎಂದರ್ಥ. ಆದ್ದರಿಂದ ಇವರನ್ನು ಬೆಟ್ಟದ ಜನರೆಂದು ಕರೆಯುತ್ತಾರೆ. ಸಂಸ್ಕೃತ ಭಾಷೆಯಲ್ಲಿ ಗೊಂಡ. ಎಂದರೆ "ದಟ್ಟ" ಎಂದರ್ಥ, ಗೊಂಡಾರಣ್ಯ ಎಂಬ ಶಬ್ದವನ್ನು ಗಣನೆಗೆ ತೆಗೆದುಕೊಂಡು ದಟ್ಟಕಾಡಿನ ನಿವಾಸಿಗಳೆಂದು ಹೇಳಬಹುದು ಈಗಲೂ ಗೊಂಡರ ಮೂಲದ ಬಗ್ಗೆ ಭಿನ್ನಾಭಿಪ್ರಾಯಗಳಿವೆ.


ಗೊಂಡರು. ದಾವಿಡ ಭಾಷಾ ಗುಂಪಿಗೆ ಸೇರಿದ "ಗೊಂಡಿ" (Condi) ಭಾಷೆಯನ್ನು ಬಳಸುತ್ತಾರೆ. ಈ ಭಾಷೆಯು ತೆಲುಗು, ತಮಿಳು ಭಾಷೆಗೆ ಹೊಂದುವ ಭಾಷೆಯಾಗಿದೆ.

ದೈಹಿಕ ಲಕ್ಷಣಗಳು


ಗೊಂಡರು ದೈಹಿಕವಾಗಿ ಎತ್ತರವಾಗಿದ್ದು, ಗಟ್ಟಿಮುಟ್ಟಾಗಿದ್ದಾರೆ. ಈ ಜನರು ಕಪ್ಪು ಮೈ ಬಣ್ಣ, ಹೊಳಪಾದ ಹಲ್ಲು, ಕಪ್ಪು ತಲೆಯ ಕೂದಲು, ದುಂಡನೆಯ ದಪ್ಪನಾದ ತುಟಿಗಳು ಮತ್ತು ಅಗಲವಾದ ಮೂಗು, ನೋಡಲು ಕಣ್ಣುಗಳು ಆಕರ್ಷಣೀಯವಾಗಿರುತ್ತವೆ.


ಆಹಾರ ಪದ್ಧತಿ


ಗೊಂಡ ಬುಡಕಟ್ಟು ಜನರು ಸಸ್ಯಾಹಾರಿಗಳು, ಜೊತೆಗೆ ಮಾಂಸಾಹಾರಿಗಳು, ಸಜ್ಜೆ, ಅಕ್ಕಿ, ಜೋಳ, ಗೆಡ್ಡೆ-ಗೆಣಸು ಮತ್ತು ಹಣ್ಣು-ಕಾಯಿಗಳನ್ನು, ಮೀನನ್ನು ತಿನ್ನುವರು. ವಿಶೇಷವಾಗಿ ಸಜ್ಜೆಯಿಂದ ತಯಾರಿಸಿದ ಮದ್ಯಪಾನವನ್ನು ಸೇವಿಸುತ್ತಾರೆ. ಈ ಮಧ್ಯಕ್ಕೆ "ಕೋಡ್” (Koh) ಎಂದು ಕರೆಯುತ್ತಾರೆ,

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019


ಉಡುಗೆ

ಗೊಂಡರು ತುಂಬಾ ಕಡಿಮೆ ಬಟ್ಟೆಯನ್ನು ತೊಡುವರು, ಗಂಡಸರು ತುಂಡು (Join) ಬಟ್ಟೆಯನ್ನು ಉಡುತ್ತಾರೆ. ಹೆಂಗಸರು ಸೀರೆಯನ್ನು ಉಡುತ್ತಾರೆ. ಕೊರಳಿಗೆ ಮನೆಗಳ ಸರ, ಕೈಗಳಿಗೆ

ವಸತಿ ವ್ಯವಸ್ಥೆ


ಗೊಂಡರು ಬೆಟ್ಟ-ಗುಡ್ಡಗಳ ಪ್ರದೇಶಗಳಲ್ಲಿ ವಾಸಿಸುವರು, ಸಾಮಾನ್ಯವಾಗಿ ಗುಡಿಸಲುಗಳನ್ನು ಮರ, ಬಿದಿರು, ಹುಲ್ಲು, ಮಣ್ಣಿನಿಂದ ನಿರ್ಮಿಸಿಕೊಳ್ಳುತ್ತಾರೆ, ಆ ಪ್ರದೇಶದಲ್ಲಿನ ಮನ ಫಲವತ್ತತೆ ಮತ್ತು ನೀರಿನ ಸೌಕರ್ಯಗಳನ್ನು ಗಮನಿಸಿ ಮನೆಗಳನ್ನು ನಿರ್ಮಿಸಿಕೊಳ್ಳುತ್ತಾರೆ, ಅವರ ದಿನನಿತ್ಯದ ಜೀವನಕ್ಕೆ ಬೇಕಾದ, ದನ-ಕರುಗಳಿಗೆ ಕುಡಿಯಲು ಹೆಚ್ಚಾಗಿ ಬೇಕಾಗಿರುವ ನೀರು ಸಿಗುವ ನದಿ ಕೊಳ-ತೊರೆಗಳ ಅಂಚುಗಳಲ್ಲಿ ತಮ್ಮ ಗುಡಿಸಲುಗಳನ್ನು ಕಟ್ಟಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ, ಗೊಂಡರ ಗುಡಿಸಲುಗಳು ಆಯತಾಕಾರವಾಗಿದ್ದು, ಮನೆಗಳನ್ನು ಮರದ ತುಂಡುಗಳಿಂದ ಕಟ್ಟಿಕೊಳ್ಳುತ್ತಾರೆ.

ಆರ್ಥಿಕ ಬೀದನ


ಗೊಂಡರು. ತಮ್ಮನ್ನು ಕೃಷಿ ಮತ್ತು ಬೇಟೆಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ನದಿಗಳು ಇರುವ ಪ್ರದೇಶಗಳಲ್ಲಿ ಮೀನುಗಾರಿಕೆಯನ್ನು ರೂಢಿಮಾಡಿಕೊಂಡಿದ್ದಾರೆ. ಈ ಗೊಂಡರು ಸ್ಥಳಾಂತರ ಕೃಷಿಯನ್ನು ಹಿಂದಿನಿಂದಲೂ ಅನುಸರಿಸುತ್ತಾ ಬಂದಿದ್ದಾರೆ. ಬೆಟ್ಟ-ಗುಡ್ಡಗಳಲ್ಲಿ ಇಳಿಜಾರು ಕೃಷಿಗೆ ಯೋಗ್ಯವಲ್ಲದಿದ್ದರೂ ಗುಡ್ಡಗಳನ್ನು ಕಡಿದು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಇವರ ಹೊಲಗಳಲ್ಲಿ ಭತ್ತ, ಗೋಧಿ, ಸಜ್ಜೆ ಜೋಳ, ಸಾಸಿವೆ, ಕೆಲವು ಕಡೆ ತಂಬಾಕುಗಳನ್ನು ಬೆಳೆಯುತ್ತಾರೆ. ಸ್ಥಳಾಂತರ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದರು. "ಫೈಂಡಾ" ಮತ್ತು "ಡಿಪ್ಪಾ" ಎಂಬ ಎರಡು ಕೃಷಿ ಪದ್ಧತಿಗಳಿವೆ. ಮೊದಲನೆಯದು ರಂಟೆ ಹೊಡೆಯದ ಬಿತ್ತನೆ ಮಾಡುವುದು ಮತ್ತು ಎರಡನೆಯದು ರಂಟೆ ಹೊಡೆದು ಬಿತ್ತನೆ ಮಾಡುವುದು. ಬೇಟೆಯಲ್ಲಿ ಬಿಲ್ಲು ಮತ್ತು ಬಾಣಗಳನ್ನು ಉಪಯೋಗಿಸಿ ಆ ತುದಿಗಳಿಗೆ ಒಂದು ರೀತಿಯ ಗಿಡಮೂಲಿಕೆಯ ವಿಷವನ್ನು ಲೇಖನ ಮಾಡಿ ಆಫ್ರಿಕಾದ ಬುಷ್ ಮ್ಯಾನ್‌ಗಳಂತೆ ಪಾಣಿಗಳ ಬೇಟೆ ಆಡುತ್ತಾರೆ.


ಸಾಮಾಜಿಕ ಜೀವನ


ಭಾರತದಲ್ಲಿರುವ ಇತರ ಬುಡಕಟ್ಟುಗಳಂತೆ ಇವರು ಕೂಡ ತಮ್ಮದೇ ಆದಂಥ ವಿವಾಹ ಪದ್ಧತಿಯನ್ನು ಹೊಂದಿದ್ದಾರೆ. ಗೊಂಡರಲ್ಲಿ "ಗೋಟುಲ್" (Ghotul) ಎಂಬ ಅವಿವಾಹಿತ ಯುವತಿ-ಯುವಕರಿಗೆ ಪ್ರತ್ಯೇಕ ವಸತಿಗಳಿರುತ್ತವೆ. ಮದುವೆ ವಯಸ್ಸಿಗೆ ಬಂದ ಯುವತಿಯರನ್ನು ಹಳ್ಳಿಯ ಮಧ್ಯ ಭಾಗದಲ್ಲಿಯೂ ಮತ್ತು ಯುವಕರಿಗೆ ಹಳ್ಳಿಯ ಹೊರಗಡೆ ಗೋಟುಲ್ ಮನೆಗಳ ವ್ಯವಸ್ಥೆಯಿರುತ್ತದೆ. ಯುವಕ- ಯುವತಿಯರಲ್ಲಿ ಅನುರಾಗ ಉಂಟಾದಾಗ, ಅದು ವಿವಾಹದಲ್ಲಿ ಮುಕ್ತಾಯವಾಗುತ್ತದೆ. ವಿವಾಹಕ್ಕೆ ಸಂಬಂಧಿಸಿದಂತೆ ವರನ ಮನೆಯವರು ಹೆಣ್ಣನ್ನು ಆನ್ವೇಷಣೆ ಮಾಡಬೇಕು, ಒಪ್ಪಿಗೆಯಾದ ಮೇಲೆ ಮದುವೆ ನಿಶ್ಚಯ ಹಳ್ಳಿಯ ನಾಯಕನ ನಿರ್ಧಾರಕ್ಕೆ ಬಿಟ್ಟಿರುವ ವಿಷಯವಾಗಿರುತ್ತದೆ.

ಧರ್ಮ


ಗೊಂಡರಲ್ಲಿ ಸೂರ್ಯನ ಪೂಜೆ, ನಾಗರಪೂಜೆ, ಪಿತೃಪೂಜೆಗಳು


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಗೊಂಡ ಬುಡಕಟ್ಟು ಜನಾಂಗ (Gonds)

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts