Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Friday, November 25, 2022

Motivation story : ಕಬ್ಬಿಣ ಕಾಯುವವರೆಗೆ ಕಾಯಬೇಕಿಲ್ಲ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, November 25, 2022

ಶೀರ್ಷಿಕೆ: Motivation story : ಕಬ್ಬಿಣ ಕಾಯುವವರೆಗೆ ಕಾಯಬೇಕಿಲ್ಲ




(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ನಾವೆಲ್ಲ Hit when it is hot ಎಂಬ ಮಾತನ್ನು ಕೇಳಿಸಿಕೊಂಡೇ ಬೆಳೆದವರು. ಅಷ್ಟೇ ಅಲ್ಲ, ಬಹುತೇಕರು ಕಬ್ಬಿಣ ತಾನಾಗಿಯೇ ಕಾಯುವವರೆಗೆ ಕಾಯುತ್ತ ಕುಳಿತವರೇ, ಕಬ್ಬಿಣ ಕಾಯ್ದರೆ ಮಾತ್ರ ನಮ್ಮ ಶಾನುಸಾರ ಕುಟ್ಟಿ (ಹೊಡೆದು) ಹಿಗ್ಗಿಸಿದವರು. ಹೀಗಾಗಿ ಅವರವರ ಬದುಕು ಆಯಾ ಮಟ್ಟಕ್ಕೆ ಹಿಗ್ಗಿರುತ್ತದೆ. But we need not wait to strike till the iron is hot. Instead we can make the iron hot by striking it ಈ ಸಿದ್ಧಾಂತ


ಮುಖ್ಯವಾಗಿ ಅನುಕೂಲತೆಗಳಿಲ್ಲದ ಯುವತಿಯರಿಗೆ


ಅನ್ವಯಿಸುತ್ತದೆ. ಅವರು ಹಲವಾರು ಅನನುಕೂಲತೆಗಳು, 'ಇಲ್ಲ'ಗಳ ಮಧ್ಯೆಯೇ


ಬದುಕನ್ನು ರೂಪಿಸಿಕೊಳ್ಳುವ ಅನಿವಾರ್ಯತೆಗೆ ಒಳಗಾಗಿರುತ್ತಾರೆ.


ಗ್ರಾಮೀಣ ಯುವಕ ಕಬ್ಬಿಣವನ್ನು ಕಾಯಿಸಲು ಅವರ ಬಳಿ ಅದಿ (ಊದುಗೊಳವೆ), ಕಲ್ಲಿದ್ದಲು ಅಥವಾ ಇದ್ದಿಲು ಇತ್ಯಾದಿ ಪರಿಕರಗಳು ಇರುವುದಿಲ್ಲ. ಆದರೂ ಬದುಕೆಂಬ ಕಬ್ಬಿಣವನ್ನು ತಮಗೆ ಬೇಕಾದ ಆಕಾರಕ್ಕೆ ತಿರುಗಿಸಿಕೊಳ್ಳಬೇಕು. ಆಗ ನನ್ನ ಬಳಿ ತಿಥಿಯಲ್ಲ, ಇದ್ದಿಲು ಇಲ್ಲ ಎಂದು ಹೇಳುತ್ತ ಸುಮ್ಮನೆ ಕೂಡಲಾಗದು, ರಸ್ತೆ, ಬಸ್ಸಿನ ಅನುಕೂಲತೆ ಇರುವವರು ಬಸ್ತಿನಲ್ಲಿ ಪ್ರಯಾಣಿಸುವುದು ತಪ್ಪಲ್ಲ. ಅವಿಲ್ಲದವರು ನಡೆದುಕೊಂಡಾದರೂ ಗುರಿಯನ್ನು ತಲುಪಲೇ ಬೇಕು, ಅವರು ವಹಿಸಬೇಕಾದ ಎಚ್ಚರಿಕೆಯೆಂದರೆ, ಬಸ್ಸಿನಲ್ಲಿ ಹೋಗುವವರಿಗಿಂತ ಮೊದಲು ಮನ


Who after Nehru ಎಂದು ಇಡೀ ಭಾರತ ಚಿಂತಿಸಿದ ಕಾಲವೊಂದಿತ್ತು. ಆದರೆ ಕೇವಲ ಒಂದೂವರೆ ವರ್ಷ ಈ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಲಾಲಬಹಾದ್ದೂರ್ ಶಾಸ್ತ್ರಿಯವರು ಹಲವಾರು ರೀತಿಯಲ್ಲಿ ನೆಹರುಜಿಗಿಂತ ಒಂದು ಕೈ ಮೇಲು ಎಂಬುದನ್ನು ಸಾಬೀತುಪಡಿಸಿದರು. ಎಲ್ಲರಿಗೂ ಗೊತ್ತಿರುವಂತೆ, Nehruji was born with silver spoon in mouth. ಈ ಅನುಕೂಲಕ ಶಾಶ್‌ ಬಹಾದ್ದೂರ್ ಶಾಸ್ತ್ರಿಯವರಿಗಿರಲಿಲ್ಲ. ಒಬ್ಬ ಶಿಕ್ಷಕನ ಮಗನಾಗಿ ಹುಟ್ಟಿದ ಶಾಸ್ತ್ರೀಜಿಯವರು ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ನಾವಿಕನಿಗೆ ಕೊಡಲು ದುಡ್ಡಿಲ್ಲದ ಕಾರಣಕ್ಕೆ ನದಿಯನ್ನು ಈಜಿಕೊಂಡೇ

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ದಾಟುತ್ತಿದ್ದರೆಂಬ ಕತೆ ಬಹುತೇಕರಿಗೆ ಗೊತ್ತು, ಅವರಿಗಿದ್ದ ಈ ಅನನುಕೂಲತೆ ಅವರನ್ನು ಈ ದೇಶದ ಪ್ರಧಾನಿಯಾಗುವುದರಿಂದ ತಡೆಯಲಿಲ್ಲ. ಇಂತಹ ಸಾಮರ್ಥ್ಯವಿದ್ದೂ ಅವರಲ್ಲಿನ ಸರಳತೆ ಮತ್ತು ಪ್ರಾಮಾಣಿಕತೆಯನ್ನು ನಾವು ಮರೆಯುವಂತಿಲ್ಲ. ರೈಲ್ವೆ ಮಂತ್ರಿಯಾಗಿದ್ದೂ ಸಾಮಾನ್ಯರೊಂದಿಗೆ ಸರದಿ ಸಾಲಿನಲ್ಲಿ ನಿಂತು ಅವರು ಟಿಕೆಟ್ ಪಡೆದ ಕತೆ, ಅವರು ಪ್ರಧಾನಿ ಹುದ್ದೆಯಲ್ಲಿದ್ದಾಗಲೇ ತಾಷ್ಠೆಂಟ್‌ನಲ್ಲಿ ತೀರಿಕೊಂಡ ಬಳಿಕ ಅವರ ಬ್ಯಾಂಕ್‌ ಖಾತೆಯಲ್ಲಿ ಕೆಲವೇ ನೂರು ರೂಪಾಯಿಗಳಿದ್ದವೆಂಬ ಕತೆ ನಮಗೆಲ್ಲ ಗೊತ್ತು.


ಕಷ್ಟಗಳ, ಕೊರತೆಗಳ ಮಧ್ಯೆ ಎತ್ತರಕ್ಕೆ ಏರುವುದು ಎಷ್ಟು ಅಪೇಕ್ಷಿತ ಪ್ರಶಂಸನಾರ್ಹವಿದೆಯೋ ಅಷ್ಟೇ ಅಪೇಕ್ಷಿತವೆಂದರೆ ಆ ಎತ್ತರಕ್ಕೆ ಏರಿದ ಬಳಿಕ ಪ್ರಾಮಾಣಿಕತೆ ಮತ್ತು ಸಾಮಾಜಿಕ ಕಳಕಳಿಯನ್ನು ಉಳಿಸಿಕೊಳ್ಳುವುದು, ಒಬ್ಬ ವ್ಯಕ್ತಿಯ ಪ್ರಾಮಾಣಿಕತೆ ಒರೆಗಲ್ಲಿಗೆ ಸ ಹತ್ತುವುದೇ ಅವನು ಅಪ್ರಾಮಾಣಿಕನಾಗಲು ಅವಕಾಶವಿದ್ದಾಗ.


ತುಂಬಾ ಕಷ್ಟದಲ್ಲಿ ಬೆಳೆದು ಒಂದು ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಅಥವಾ ಸರ್ಕಾರದ ಯಾವುದೋ ಇಲಾಖೆಯಲ್ಲಿ ಎಸ್‌ಡಿಎ, ಎಫ್‌ಡಿಎ ಆಗುವುದು ಒಂದು ಸಾಧನೆಯೇ, ಇಂತಹ ವ್ಯಕ್ತಿ ಐಎಎಸ್‌, ಕೆಎಎಸ್‌ ದಂತಹ ಹುದ್ದೆ ಪಡೆದರಂತೂ ಹ್ಯಾಟ್ಸಾಫ್ ಹೇಳಲೇಬೇಕು. ಆದರೆ ಇಂತಹ ಕಷ್ಟದಿಂದ ಬೆಳೆದ ವ್ಯಕ್ತಿಯ ಮನೆಯ ಮೇಲೆ ಲೋಕಾಯುಕ್ತದವರೋ ಜಾರಿ ನಿರ್ದೇಶನಾಲಯದವರೋ ದಾಳಿ ಮಾಡಿ ಕೋಟಿ ಕೋಟಿ ನೋಟಿನ


ಕಂತೆಗಳನ್ನು, ಕೆಜಿಗಟ್ಟಲೆ ಚಿನ್ನ, ಬೆಳ್ಳಿಯನ್ನು ಹೊರಗೆಳೆದಾಗ ಆ ವ್ಯಕ್ತಿಯ ಬಗ್ಗೆ ಹೇಸಿಗೆಯೆನಿಸುತ್ತದೆ.


ಬೆಳೆಯುವುದು ಮುಖ್ಯ, ಸಾಮರ್ಥ್ಯ ಗಳಿಸಿಕೊಳ್ಳುವುದು ಮುಖ್ಯ ಆದರೆ ಈ ಬೆಳವಣಿಗೆ, ಈ ಸಾಮರ್ಥ್ಯ ಕೇವಲ ಇನ್ನೊಬ್ಬರನ್ನು ಹೀರುವುದಕ್ಕಾಗಿ, ನಮ್ಮ ಸ್ವಾರ್ಥ ಸುಖಕ್ಕಾಗಿ ಬಳಕೆಯಾಗಬಾರದು.


ಕೇವಲ GDP ಹೆಚ್ಚಾದರೆ ಸಾಕಾಗದು. ಈ ಆದಾಯ ಯಾರಾರಿಗೆ ಸೇರುತ್ತದೆ ಎಂಬುದೂ ಮುಖ್ಯ. ನಮ್ಮ ಪ್ರಾಮಾಣಿಕತೆ. ಸ್ವಲ್ಪ ಮಟ್ಟಿನ ತ್ಯಾಗ - ಇತರರ ಪ್ರಗತಿಗೆ ಪೂರಕವಾಗುತ್ತದೆ. ಆದಿಲ್ಲ. ಇದಿಲ್ಲ, ಕಬ್ಬಿಣ ಕಾಯ್ದಿಲ್ಲ. ಎಂದು ಕಾಲಕಳೆಯುವುದು ಬೇಡ, ಕೊರತೆಗಳನ್ನೆದುರಿಸಿಯೇ ಬೆಳೆಯೋಣ, ಬೆಳೆದು ಪ್ರಾಮಾಣಿಕತೆ ಉಳಿಸಿಕೊಳ್ಳೋಣ.

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading Motivation story : ಕಬ್ಬಿಣ ಕಾಯುವವರೆಗೆ ಕಾಯಬೇಕಿಲ್ಲ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts