Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Monday, April 3, 2023

ಮಹಾವೀರ ಜಯಂತಿ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Monday, April 3, 2023

ಶೀರ್ಷಿಕೆ: ಮಹಾವೀರ ಜಯಂತಿ


 


(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಭಾರತೀಯ ಸಂಸ್ಕೃಗಳಲ್ಲಿ ಒಂದು ಜೈನದರ್ಶನ ರತೀಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ಈ ದರ್ಶನದ ಮೂಲತತ್ತ್ವಗಳು ಪ್ರಧಾನವಾಗಿ ಮಹಾವೀರನ ಜೀವನ ಮತ್ತು ಕಾಣೆಗಳನ್ನು ಆಶ್ರಯಿಸಿವೆ.


ವಸ್ತುತಃ ಜೈನಮತವು ಮಹಾವೀ- ರನಿಗಿಂತಲೂ ಪ್ರಾಚೀನವಾದುದು; ಮಹಾವೀರ, ಜೈನಪರಂಪರೆಯಲ್ಲಿ ಇಪ್ಪತ್ತನಾಲ್ಕನೆಯ ತೀರ್ಥಂಕರ, ಹೀಗಿದ್ದರೂ ಜೈನಮತದ ಮೇಲೆ ಮಹಾವೀರನ ಪ್ರಭಾವ ತುಂಬ ದೊಡ್ಡದು. ಮಹಾವೀರನ ಕಾಲ ಸುಮಾರು ಕ್ರಿ.ಪೂ. ಅರನೆಯ ಶತಮಾನ. ಇದರಿಂದ ಜೈನಮತದ ಪ್ರಾಚೀನತೆಯನ್ನು ಗ್ರಹಿಸಬಹುದಾ ಗಿದೆ. ಮಹಾವೀರ ಮತ್ತು ಬುದ್ಧ ಭಗವಂತನು ಸಮಕಾಲೀನರು ಎಂಬ ಎಣಿಕೆಯೂ ಉಂಟು.

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಮಹಾವೀರನು (ವರ್ಧಮಾನ ಎಂಬ ಜಯಂತಿ


ಹೆಸರೂ ಅವನಿಗೆ ಇದ್ದಿತು) ರಾಜಕುಮಾರ. ಆದರೆ ಅವನಿಗೆ ಎಳವೆಯಲ್ಲಿಯೇ ಲೌಕಿಕ ಜಗತ್ತಿನ ಆಸೆ ಆಕರ್ಷಣೆಗಳಿಂದ ವಿಮುಖತೆ ಒದಗಿತು; ತೀವ್ರವಾದ ತಪಸ್ಸಿನಲ್ಲಿ ತೊಡಗಿದ: ದಿವ್ಯಜ್ಞಾನವ ನ್ನು ಸಂಪಾದಿಸಿದ: ಮೂವತ್ತನೆಯ ವಯಸ್ಸಿನಲ್ಲೇ ಸನ್ಯಾಸಿಯಾದ. ತಾನು ಕಂಡುಕೊಂಡ ಲೋಕೋತ್ತರವಾದ ಅರಿವನ್ನು ಸಮಾಜದಲ್ಲಿ ಪಸರಿಸುತ್ತ, ತನ್ನ ಎಪ್ಪತ್ತೆರಡನೆಯ ವಯಸ್ಸಿನಲ್ಲಿ ಶರೀರವನ್ನು ತ್ಯಜಿಸಿದ.

ಮಹಾವೀರನು ಸನ್ಯಾಸಿಗಳಿಗೂ ಗೃಹಸ್ಥರಿಗೂ ಆಧ್ಯಾತ್ಮಿಕತೆಯನ್ನೂ ಲೌಕಿಕ ನೀತಿ-ನಿಯಮಗಳನ್ನೂ ಉಪದೇಶಿಸಿದ. ಅವನ ಉಪದೇಶಗಳಲ್ಲಿ ಪ್ರಧಾನವಾಗಿ ಐದು ವ್ರತಗಳನ್ನೂ ಇಪ್ಪತ್ತೆರಡು ವಿಧದ ಸಹನೆಗಳನ್ನೂ ಗುರುತಿಸಬಹುದು. ಇಂದು ಜೈನಧರ್ಮ ಎಂಬುದು ಅಹಿಂಸೆಗೆ ಪರ್ಯಾಯಪದವೇ ಆಗಿರುವುದನ್ನು ನಾವು ಬಲ್ಲೆವು, ಮಹಾವೀರನು ಅಹಿಂಸಾತತ್ತ್ವವನ್ನು ತನ್ನ ದರ್ಶ- ನಪದ್ಧತಿಯಲ್ಲಿ ಗಟ್ಟಿಗೊಳಿಸಿದ.

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಜೈನಮತ ಇಂದಿಗೂ ಜೀವಂತವಾಗಿರುವ ಜೀವನಪದ್ಧತಿ ಮತ್ತು ದಾರ್ಶನಿಕ ಪಂಥ. ಭಾರತದ ಉದ್ದಗಲಕ್ಕೂ ಇದು ಹರಡಿಕೊಂಡಿರುವುದ ನ್ನು ಕಾಣಬಹುದು. ಒಂದು ಕಾಲದಲ್ಲಿ ಕರ್ನಾಟಕ ಪ್ರಮುಖ ಜೈನಕೇಂದ್ರಗಳಲ್ಲಿ ಒಂದಾಗಿದ್ದಿತು. ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಒಂದೇ ಸಾಕು, ಜೈನಮತದ ಜೀವಂತಿಕೆಯನ್ನು ಸಾರಲು. ಈ ಮತದ ಧಾರೆಗಳಾದ ದಿಗಂಬರಪಂಥ ಮತ್ತು ಶ್ವೇತಾಂಬರಪಂಥ -ಈ ಎರಡೂ ಧಾರೆಗಳಲ್ಲಿ ಅಂದಿನಿಂದ ಇಂದಿನವರೆಗೂ ಹಲವರು


ತ್ಯಾಗಿಗಳು ಸನ್ಯಾಸವನ್ನು ಸ್ವೀಕರಿಸುತ್ತ, ಜೈನಪರಂಪರೆಯ ತತ್ತ್ವಗಳನ್ನು ಸಮಾಜದಲ್ಲಿ ಎತ್ತಿಹಿಡಿಯುತ್ತಿದ್ದಾರೆ. ಆಧುನಿಕ ಜಗತ್ತಿನ ಎಲ್ಲ ಆಕರ್ಷಣೆಗಳ ನಡುವೆಯೂ ಕಠಿಣವಾದ ಸನ್ಯಾಸಧರ್ಮವನ್ನು ಪಾಲಿಸುತ್ತಿರುವ ಜೈನಮುನಿಗಳ ಬದ್ಧತೆ ದಿಟವಾಗಿಯೂ ಪ್ರಶಂಸಾರ್ಹ.

ಜೈನದರ್ಶನದಲ್ಲಿ ಗೃಹಸ್ಥನು ಅತಿ ಮುಖ್ಯವಾಗಿ ಅನುಸರಿಸಬೇಕಾದ ಐದು ವ್ರತಗಳನ್ನು ಒಕ್ಕಣಿಸಲಾಗಿದೆ: ಇವನ್ನು ಅಣುವ್ರತಗಳು ಎಂದು ಕರೆಯುತ್ತಾರೆ. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ – ಇವೇ ಆ ವ್ರತಗಳು. ಆಧುನಿಕ ಕಾಲದ ಹಲವು ಸಮಸ್ಯೆಗಳ ಪರಿಹಾರಕ್ಕೆ ಈ ವ್ರತಗಳ ಅನುಸಂಧಾನ ಪೂರಕವಾಗು- ತ್ತದೆ ಎಂಬುದು ಸ್ಪಷ್ಟ. ಆದರೆ ಆ ದಿಕ್ಕಿನತ್ತ ಸಮಾಜವು ದೃಷ್ಟಿಯನ್ನು ಹರಿಸಬೇಕಷ್ಟೆ.

'ತೀರ್ಥಂಕರ' ಎಂಬುದಕ್ಕೆ ಸೇತುವೆಯನ್ನು ಕಟ್ಟುವವನು' ಎಂಬ ಅರ್ಥವೂ ಇದೆ. ಇದರ ಧ್ವನಿ ಏನೆಂದರೆ: ದುಃಖಸಾಗರವನ್ನು ದಾಟಲು ನಮ್ಮ ಸಹಾಯಕ್ಕೆ ಒದಗುವವನೇ ತೀರ್ಥಂಕರ. ವರ್ಧಮಾನ ಮಹಾವೀರ ಅಂಥ ತೀರ್ಥಂಕರ: ನಮ್ಮನ್ನು ದುಃಖದ ದಡದಿಂದ ಸಂತೋಷದ ದಡಕ್ಕೆ ತಲುಪಿಸಬಲ್ಲವನು.

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಮಹಾವೀರ ಜಯಂತಿ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts