Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Sunday, January 21, 2024

ತಾಪಮಾನ ಏರಿಕೆ v/s ಮಾನವನ ಹಸ್ತಕ್ಷೇಪ PSI,KAS Essays 2024

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Sunday, January 21, 2024

ತಾಪಮಾನ ಏರಿಕೆ v/s ಮಾನವನ ಹಸ್ತಕ್ಷೇಪ PSI,KAS Essays 2024 


ತಾಪಮಾನ ಏರಿಕೆ v/s ಮಾನವನ ಹಸ್ತಕ್ಷೇಪ


ಜಾಗತಿಕ ತಾಪಮಾನವು ವರ್ಷದಿಂದ ವರ್ಷಕ್ಕೆ ಜಾರಿಕೆಯಾಗುತ್ತಿದ್ದು, ಅಂಕಿ-ಅಂಶಗಳು ಕೂಡ ಇದಕ್ಕೆ ಪುರಾವೆಯನ್ನು ಒದಗಿಸುತ್ತಿವೆ. ಜಾಗತಿಕ ತಾಪಮಾನವನ್ನು ದಾಖಲಿಸಲು ಆರಂಭಿಸಿ ಬಳಿಕ ಅಂದರೆ, 1850ರ ಬಳಿಕ 2023ನೇ ಇಸವಿಯಲ್ಲಿ ಅತ್ಯಧಿಕ ತಾಪಮಾನ ದಾಖಲಾಗಿದೆ ಎಂದು ಯುರೋಪಿನ ಕೋಪರ್ನಿಕನ್ ಚೇಂಜ್ ಸರ್ವೀಸ್ (ಇಂಖ) ವರದಿ ಮಾಡಿದೆ. ಕಳೆದ ವಾರ ಬಿಡುಗಡೆಯಾದ ಜಾಗತಿಕ ಜಲ ನಿರ್ವಹಣಾ ವರದಿಯಲ್ಲಿಯೂ 2023ನೇ . ವರ್ಷವನ್ನು ಅತ್ಯಧಿಕ ತಾಪಮಾನ ದಾಖಲಾದ ವರ್ಷವೆಂದು ಹೇಳಲಾಗಿದೆ. 2024ರಲ್ಲಿ ಈ ದಾಖಲೆಯು ಮುರಿಯುವ ಎಲ್ಲಾ ಸಾಧ್ಯತೆಗಳಿವೆ ಎಂದೂ ವರದಿಗಳು ತಿಳಿಸುತ್ತಿವೆ.


ತಾಪಮಾನ ಏರಿಕೆ ಪ್ರಪಂಚದಾದ್ಯಂತ ಬಿಸಿ ಅಲೆಗಳು, ಪ್ರವಾಹಗಳು, ಬರ ಮತ್ತು ಕಾಡಿಚ್ಚಿನಂಥ ಹವಾಮಾನ ವೈಪರೀತ್ಯಗಳಿಗೆ ಕಾರಣವಾಗಿದೆ. ಆದರೆ, ಮಾನವನ ಹಸ್ತಕ್ಷೇಪವೇ ಹವಾಮಾನ ಬದಲಾವಣೆಗೆ ಪ್ರಮುಖ ಕಾರಣ ಎನ್ನುವುದು ಗಮನಾರ್ಹ ವಿಚಾರ. ಈ ಹಿನ್ನೆಲೆಯಲ್ಲಿ ಹವಾಮಾನ ಬದಲಾವಣೆಯಲ್ಲಿ ಮಾನವರ ಹಸ್ತಕ್ಷೇಪ ಕುರಿತಾದ ಮಾಹಿತಿ ಇಲ್ಲಿದೆ.


* ಹಸಿರುಮನೆ ಅನಿಲಗಳು: ಹವಾಮಾನ ಸಮತೋಲನ ಮತ್ತು ಬದಲಾವಣೆಯಲ್ಲಿ ಹಸಿರು ಮನೆ ಪರಿಣಾಮ ಪ್ರಕ್ರಿಯೆಯಲ್ಲಿ ಹಸಿರುಮನೆ ಅನಿಲಗಳಾದ (ಗ್ರೀನ್‌ಹೌಸ್ ಗ್ಯಾಸ್) ನೀರಿನ ಇಂಗಾಲದ ಡೈಆಕ್ಸೆಡ್, ಮಿಥೇನ್, ಓಝೂನ್ ಮತ್ತು ನೈಟ್ರಸ್ ಆಕ್ಸೆಡ್ ಪರಿಣಾಮ ಬೀರುತ್ತವೆ.

ಬದಲಾವಣೆಗೆ ಕಾರಣವಾಗುತ್ತಿದ್ದು, ಮಾನವರ ಹಸ್ತಕ್ಷೇಪದ ನಿರಂತರ ಹೆಚ್ಚಳವನ್ನು ಸೂಚಿಸುತ್ತದೆ,ಕಾರ್ಬನ್-12, ಕಾರ್ಬನ್-13, ಕಾರ್ಬನ್-14 ಎಂಬ ಮೂರು ಬಗೆಯ ಇಂಗಾಲಗಳು ವಾತಾವರಣದಲ್ಲಿದ್ದು, ಕಳೆದೊಂದು ಶತಮಾನದ ಅವಧಿಗೆ ಹೋಲಿಸಿದರೆ ಇತ್ತೀಚೆಗೆ ವಾತಾವರಣದಲ್ಲಿ ಕಾರ್ಬನ್-12 ಹೆಚ್ಚಿರುವುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಇತ್ತೀಚಿನ ದಶಕಗಳಲ್ಲಿ ಕಾರ್ಬನ್-14 ಮತ್ತಷ್ಟು ಕಡಿಮೆಯಾಗಿದೆ. ಗಾಳಿಯಲ್ಲಿ ನೈಸರ್ಗಿಕ ಇಂಗಾಲಕ್ಕಿಂತ ಪಳೆಯುಳಿಕೆ ಇಂಧನಗಳನ್ನು ಸುಡುವುದರಿಂದ ಸೃಷ್ಟಿಯಾಗುವ ಇಂಗಾಲ (ಕಾರ್ಬನ್-12) ಹೆಚ್ಚಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇಂಥ ಇಂಗಾಲದ ಡೈಆಕ್ರೈಡ್‌ಗಳು ಶತಮಾನಗಳವರೆಗೆ ವಾತಾವರಣದಲ್ಲಿರುತ್ತವೆ. ಇವು ತಾಪಮಾನ ಏರಿಕೆಗೆ, ಸಮುದ್ರ ಮಟ್ಟದಲ್ಲಿ ಏರಿಕೆಗೆ ಕಾರಣವಾಗುತ್ತವೆ.


ಮಹತ್ವ: ಹಸಿರುಮನೆ ಅನಿಲಗಳು ಸೂರ್ಯನ ಶಾಖವನ್ನು ವಾತಾವರಣದ ಮೂಲಕ ಹಾದುಹೋಗಲು ಅವಕಾಶ ಮಾಡಿಕೊಡುತ್ತವೆ. ವಾತಾವರಣದ ಶೀತ ಭೂಮಿಯನ್ನು ಆವರಿಸುವುದನ್ನು ತಡೆಯುವ ಹಸಿರುಮನೆ ಪರಿಣಾಮಕ್ಕೆ ಕಾರಣವಾಗಿವೆ.


ಇಂಗಾಲ ಸಾಂದ್ರತೆಯಲ್ಲಿ ಏರುಪೇರು: ಹಸಿರುಮನ ಪರಿಣಾಮದ ಸಮರ್ಪಕ ಕ್ರಿಯೆಗೆ ಕಾರಣವಾಗುವ ಹಸಿರುಮನೆ ಅನಿಲಗಳ ಸಾಂದ್ರತೆಯಲ್ಲಿ ಏರುಪೇರಾಗಿದೆ. ಕೈಗಾರಿಕಾ ಕ್ರಾಂತಿಗೆ ಮುನ್ನ ಸ್ಥಿರವಾಗಿದ್ದ ಹಸಿರುಮನೆ ಅನಿಲಗಳ(ಜಿಎಚ್ ಜಿ) ಸಾಂದ್ರತೆ, ನಂತರದಲ್ಲಿ ಅರಣ್ಯನಾಶ, ಇಂಧನ ಬಳಕೆಯ ಹೆಚ್ಚಳ ಕಾರಣ ನಿರಂತರವಾಗಿ ಏರುತ್ತಿದೆ. ಇಂಗಾಲದ ಡೈಆಕ್ಸೆಡ್ ಸಾಂದ್ರತೆ ಅಂದಾಜು ಶೇ.48ರಷ್ಟು ಹೆಚ್ಚಿದೆ. ಇದು ಹವಾಮಾನ


ಮಾನವನ ಹಸ್ತಕ್ಷೇಪ: ಇಂಗಾಲದ ಡೈ ಆಕ್ಸೆಡ್ ಜತೆಗೆ ಮಾನವರು ಕ್ಲೋರೋಫ್ಲೋರೋ ಕಾರ್ಬನ್‌ನಂಥ (ಸಿಎಫ್‌ಸಿ) ಮಾರಕ ರಾಸಾಯನಿಕಗಳನ್ನು ವ್ಯಾಪಕವಾಗಿ ವಾತಾವರಣಕ್ಕೆ ಸೇರಿಸುತ್ತಿದ್ದಾರೆ. ಹವಾನಿಯಂತ್ರಕಗಳು, ಫ್ರೀಜರ್‌ಗಳು, ರೆಫ್ರಿಜರೇಟರ್‌ಗಳಲ್ಲಿ ಶೀತಕವಾಗಿ ಇವುಗಳನ್ನು ಬಳಸಲಾಗುತ್ತದೆ. ಇಂಗಾಲದ ಡೈಆಕ್ಸೆಡ್‌ ಗಿಂತ ಹೆಚ್ಚು ಸಿಎಫ್‌ಸಿಗಳು ಓನ್ ಪದರವನ್ನು ಹಾನಿಗೊಳಿಸುತ್ತವೆ. ಕ್ಲೋರೋ ಫ್ಲೋರೋ ಕಾರ್ಬನ್ ಗಾಳಿಯಲ್ಲಿ 10 ಸಾವಿರ ಪಟ್ಟು ತಾಪಮಾನ ಹೆಚ್ಚಿಸುತ್ತವೆ ಎಂದು ವರದಿ ತಿಳಿಸಿದೆ.


ವಾತಾವರಣದಲ್ಲಿ ಹಸಿರು ಮನೆ ಅನಿಲಗಳ ಏರಿಕೆಯ ಪರಿಣಾಮ 2023ರಲ್ಲಿ ತಾಪಮಾನ ಏರಿಕೆ ಗರಿಷ್ಠ ಮಟ್ಟ ತಲುಪಿದೆ ಎಂದು ಕೋಪರ್ನಿಕಸ್ ಅಟ್ಟಾಸ್ಪಿಯರ್ ಮಾನಿಟರಿಂಗ್ ಸರ್ವೀಸ್ (CAMS)ವರದಿ ಹೇಳಿದೆ

ಫೈಲ್ ಭಾಷೆ: ಕನ್ನಡ/ಇಂಗ್ಲಿಷ್

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ರಾಜ್ಯ: ಕರ್ನಾಟಕ

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ತಾಪಮಾನ ಏರಿಕೆ v/s ಮಾನವನ ಹಸ್ತಕ್ಷೇಪ PSI,KAS Essays 2024

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts