Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Saturday, February 5, 2022

HAL Recruitment 2022 : ಎಚ್‌ಎಎಲ್ ಶಾಲೆಯಲ್ಲಿ ಕೆಲಸ ಬೆಂಗಳೂರಿನಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಶಿಕ್ಷಕರ ನಿಯುಕ್ತಿ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Saturday, February 5, 2022

Title : HAL Recruitment 2022 : ಎಚ್‌ಎಎಲ್ ಶಾಲೆಯಲ್ಲಿ ಕೆಲಸ ಬೆಂಗಳೂರಿನಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಶಿಕ್ಷಕರ ನಿಯುಕ್ತಿ.

(Educational & Informational Purpose Only)



ಬೆಂಗಳೂರಿನ ವಿಮಾನಪುರದಲ್ಲಿರುವ ಎಚ್‌ಎಎಲ್‌ ಶಾಲೆಯಲ್ಲಿ ಶಿಕ್ಷಕರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಪಠ್ಯಕ್ರಮ ಬೋಧನೆಯ ಟ್ರೇನ್ ಗಾಜುಯೇಟ್ ಟೀಚರ್ (ಟಿಜಿಟಿ) ಪ್ರೈಮರಿ ಟೀಚರ್ (ಪಿಆರ್‌ಟಿ) ಹಾಗೂ ನರ್ಸರಿ ಶಾಲಾ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. 


2022-23ನೇ ಶೈಕ್ಷಣಿಕ ಸಾಲಿನಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಐದು ವರ್ಷಗಳ ಅವಧಿ ಇರಲಿದೆ, ಸಮರ್ಪಕ ಕಾರ್ಯನಿರ್ವಹಣೆ, ಆಡಳಿತ ಮಂಡಳಿ ಅನುಮತಿ ಮೇರೆಗೆ ಅವಧಿಯನ್ನು ವಿಸ್ತರಿಸಲು ಅವಕಾಶವಿದೆ. ಹೈಸ್ಕೂಲ್‌ನಲ್ಲಿ ಬೋಧನಾನುಭವ ಇರುವವರಿಗೆ ಆದ್ಯತೆ ಇರಲಿದೆ.




State : Karnataka


*ವಿದ್ಯಾರ್ಹತೆ: 

ಆಯಾ ವಿಷಯಗಳಲ್ಲಿ ಪದವಿ ಪಡೆದಿದ್ದು, ಪದವಿಯ ಮೂರು ವರ್ಷಗಳಲ್ಲಿ ವಿಷಯವನ್ನು ಅಧ್ಯಯನ ಮಾಡಿರತಕ್ಕದ್ದು. ಅದೇ ವಿಷಯವನ್ನು ಬೋಧನಾ ವಿಷಯವನ್ನಾಗಿಸಿಕೊಂಡು ಬಿ.ಇಡಿ ಪದವಿ ಪಡೆದಿರಬೇಕು. ಸಮಾಜವಿಜ್ಞಾನ ಶಿಕ್ಷಕರು ಪದವಿಯಲ್ಲಿ ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ ಓದಿರಬೇಕು ಅಥವಾ ಈ ವಿಷಯಗಳಲ್ಲಿ ಆನರ್ಸ್ ಪದವಿ 


Daily Quiz Telegram Group - @kpsc2019


ಪಡೆದವರು ಅರ್ಹರಾಗಿದ್ದಾರೆ. ಕಂಪ್ಯೂಟರ್ ಸೈನ್ಸ್ ವಿಷಯಕ್ಕೆ ಬಿಇ ಬಿ.ಟೆಕ್, ಎಂಎಸ್‌ಸಿ ಇನ್ ಕಂಪ್ಯೂಟರ್ ಸೈನ್ಸ್, ಎಂಸಿಎ ಅಥವಾ ಬಿಸಿಎ ಪದವಿ ಪಡೆದಿರಬೇಕು, ಜತೆಗೆ, ಆಯಾ ಬೋಧನಾ ವಿಷಯಗಳಲ್ಲಿ ಶೇ.50 ಅಂಕಗಳನ್ನು ಪಡೆದಿರಬೇಕು.


ಒಟ್ಟು ಹುದ್ದೆ

21


Number of Pages : link


Scanned Copy : Yes


ಹುದ್ದೆಗಳ ವಿವರ

ಕನ್ನಡ: ಟಿಜಿಟಿ-2, ಪಿಆರ್‌ಟಿ-3 ಹಿಂದಿ: ಟಿಜಿಟಿ-1 ಇಂಗ್ಲಿಷ್: ಟಿಜಿಟಿ-3, ಪಿಆರ್‌ಟಿ-1

ಗಣಿತ: ಟಿಜಿಟಿ-1, ಪಿಆರ್‌ಟಿ-1

ವಿಜ್ಞಾನ(ಭೌತಶಾಸ್ತ್ರ, ರಸಾಯನಶಾಸ್ತ್ರ): ಟಿಜಿಟಿ-1

ಸಮಾಜ ವಿಜ್ಞಾನ: ಪಿಆರ್‌ಟಿ-1 ಭೂಗೋಶಶಾಸ್ತ: ಟಿಜಿಟಿ-1

ಕಂಪ್ಯೂಟರ್ ಸೈನ್ಸ್: ಪಿಆರ್‌ಟಿ-1 ದೈಹಿಕ ಶಿಕ್ಷಣ ಶಿಕ್ಷಕಿ: ಪಿಆರ್‌ಟಿ-1

ಸಂಗೀತ ಶಿಕ್ಷಕರು: ಪಿಆರ್‌ಟಿ-1


ನರ್ಸರಿ ಶಿಕ್ಷಕರು: 3


Image Available : Yes


ಆಯ್ಕೆ ಪ್ರಕ್ರಿಯೆ ಹೇಗೆ?


ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಪ್ರಾತ್ಯಕ್ಷಿಕೆ ಹಾಗೂ ಸಂದರ್ಶನ ಇರಲಿದೆ. ಆಯ್ತ ಅಭ್ಯರ್ಥಿಗಳಿಗೆ ಈ ಮಾಹಿತಿ ನೀಡಲಾಗುತ್ತದೆ.ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸತಕ್ಕದ್ದು. 250 ರೂ. ಶುಲ್ಕ ಪಾವತಿಸಬೇಕು.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರವರಿ 20


ಇತರ ಅರ್ಹತೆಗಳೇನು?
• ಟಿಜಿಟಿ ಹುದ್ದೆಗಳಿಗೆ ಕನಿಷ್ಠ 5 ವರ್ಷಗಳ ಬೋಧನಾ ಅನುಭವವನ್ನು ಕೋರಲಾಗಿದೆ. ಈ ಹುದ್ದೆಗಳಿಗೆ ಸಂಚಿತ ವೇತನವಾಗಿ 61 ಸಾವಿರ ರೂ. ಪೊಬೇಷನರಿ ಅವಧಿ ಮುಗಿದ ಬಳಿಕ 76 ಸಾವಿರ ರೂ. ನಿಗದಿಪಡಿಸಲಾಗಿದೆ.

• ಪಿಆರ್‌ಟಿ ಹುದ್ದೆಗಳಿಗೆ 2 ವರ್ಷದ ಅನುಭವ ಕೋರಲಾಗಿದ್ದು, ಆರಂಭದಲ್ಲಿ 51 ಸಾವಿರ ರೂ. ಹಾಗೂ ಪ್ರೊಬೇಷನ್ ಅವಧಿ ಬಳಿಕ 61 ಸಾವಿರ ರೂ.

ಸಂಬಳ ನೀಡಲಾಗುತ್ತದೆ. ಎರಡೂ ಹುದ್ದೆಗಳಿಗೆ 2022ರ ಜೂನ್ 1ಕ್ಕೆ ಅನ್ವಯವಾಗುವಂತೆ ಗರಿಷ್ಠ 45 ವರ್ಷ ವಯೋಮಿತಿ ವಿಧಿಸಲಾಗಿದೆ.


• ನರ್ಸರಿ ಶಿಕ್ಷಕರಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಿದ್ದು, 5 ವರ್ಷಗಳ ಬೋಧನಾನುಭವ ಅಪೇಕ್ಷಿಸಲಾಗಿದೆ. ಆರಂಭಿಕವಾಗಿ 33,500 ರೂ. ನಂತರದಲ್ಲೂ ಇದೇ ವೇತನ ನೀಡಲಾಗುತ್ತದೆ.



ಅರ್ಜಿ ಸಲ್ಲಿಕೆ ಲಿಂಕ್


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading HAL Recruitment 2022 : ಎಚ್‌ಎಎಲ್ ಶಾಲೆಯಲ್ಲಿ ಕೆಲಸ ಬೆಂಗಳೂರಿನಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಶಿಕ್ಷಕರ ನಿಯುಕ್ತಿ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts